ಅತಿಯಾದ ಗ್ಯಾಸ್, ವಾಸನೆ, ಶಬ್ದ ಆರೋಗ್ಯ ಸಮಸ್ಯೆ ಸೂಚಿಸಬಹುದು. ದಿನಕ್ಕೆ 14 ಬಾರಿ ಗ್ಯಾಸ್ ಸಾಮಾನ್ಯ. ಆಹಾರ ಚೆನ್ನಾಗಿ ಅಗೆದು ತಿನ್ನಿ, ಓಂಕಾಳು ನೀರು ಕುಡಿಯಿರಿ, ಪುದೀನಾ ಚಹಾ ಸೇವಿಸಿ, ವಾಕಿಂಗ್ ಮಾಡಿ, ಅನಿಲಕಾರಿ ಆಹಾರ ಕಡಿಮೆ ಮಾಡಿ, ತ್ರಿಫಲ ಚೂರ್ಣ ಸೇವಿಸಿ. ಆಹಾರ ಅಸಹಿಷ್ಣುತೆ, SIBO ಸಮಸ್ಯೆಗಳಿದ್ದರೆ ಚಿಕಿತ್ಸೆ ಪಡೆಯಿರಿ.

ಟುರ್, ಪುರ್ ಅಂತ ಕೆಲವರಿಗೆ ಗ್ಯಾಸ್ (Gas) ಹೊರ ಬರ್ತಾನೆ ಇರುತ್ತೆ. ನಾಲ್ಕೈದು ಜನ ಒಟ್ಟಿಗಿರುವಾಗ ಈ ಶಬ್ಧ ಬಂದ್ರೆ ಮುಜುಗರವಾಗುತ್ತೆ. ದಿನದಲ್ಲಿ ಹತ್ತಾರು ಬಾರಿ ಗ್ಯಾಸ್ ಹೊರಗೆ ಹಾಕೋರಿದ್ದಾರೆ. ಗ್ಯಾಸ್ ನಮ್ಮ ದೇಹದಿಂದ ಹೊರಗೆ ಹೋಗೋದು ಸಾಮಾನ್ಯ ಸಂಗತಿ. ದೇಹಕ್ಕೆ ಇದು ಅವಶ್ಯಕವೂ ಹೌದು. ಆಹಾರ ಜೀರ್ಣ (digestion) ವಾಗುವ ಸಮಯದಲ್ಲಿ ಹೊಟ್ಟೆಯಲ್ಲಿರುವ ಗ್ಯಾಸ್ ದೇಹದಿಂದ ಹೊರಗೆ ಹೋಗುತ್ತದೆ. ಆದ್ರೆ ಅತಿಯಾಗಿ ಗ್ಯಾಸ್ ಹೊರಗೆ ಹೋಗೋದು, ಕೆಟ್ಟ ವಾಸನೆ, ದೊಡ್ಡ ಶಬ್ಧ, ಮುಜುಗರಕ್ಕೆ ಕಾರಣವಾಗೋದು ಮಾತ್ರವಲ್ಲ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆಯುರ್ವೇದ ತಜ್ಞರು, ದೇಹದಿಂದ ಗ್ಯಾಸ್ ಹೊರಗೆ ಹೋಗುವಾಗ ವಾಸನೆ ಹಾಗೂ ದೊಡ್ಡ ಶಬ್ಧ ಬರಲು ಕಾರಣ ಏನು ಎಂಬುದನ್ನು ವಿವರಿಸಿದ್ದಾರೆ. ತಜ್ಞರ ಪ್ರಕಾರ, ಒಬ್ಬ ವ್ಯಕ್ತಿ ಒಂದು ದಿನಕ್ಕೆ 14 ಬಾರಿ ಗ್ಯಾಸ್ ಹೊರಗೆ ಹಾಕ್ತಾನೆ. ಆದ್ರೆ ಇದು ವಾಸನೆ ಮತ್ತು ಶಬ್ಧದಿಂದ ಕೂಡಿದ್ರೆ ಅವರು ಹೆಚ್ಚು ಎಚ್ಚರಿಕೆ ವಹಿಸಬೇಕು. ತಿನ್ನುವ ಆಹಾರ ಸೇರಿದಂತೆ ಜೀವನ ಶೈಲಿ (lifestyle)ಯಲ್ಲಿ ಕೆಲವೊಂದು ಬದಲಾವಣೆ ಮಾಡ್ಕೊಳ್ಳಬೇಕು. 

ಶಬ್ಧ ಬರದೆ ಗ್ಯಾಸ್ ದೇಹದಿಂದ ಹೊರಗೆ ಬರ್ಬೇಕು ಅಂದ್ರೆ ಏನು ಮಾಡ್ಬೇಕು? : ಆಯುರ್ವೇದ ತಜ್ಞರ ಪ್ರಕಾರ, ನಿಮ್ಮ ದೇಹದಿಂದ ಗ್ಯಾಸ್ ಹೊರಗೆ ಬರುವಾಗ ದೊಡ್ಡ ಶಬ್ಧ ಬರ್ತಾ ಇದೆ ಎಂದಾದ್ರೆ ಆಹಾರದ ಬಗ್ಗೆ ಗಮನ ಹರಿಸಿ. ಆಹಾರವನ್ನು ಅಗೆದು ತಿನ್ನಿ. ಬಾಯಿ ತುಟಿಗಳನ್ನು ಮುಚ್ಚಿಕೊಂಡು ನೀವು ಆಹಾರವನ್ನು ಸೇವನೆ ಮಾಡ್ಬೇಕು. ವಾಸನೆ ಇಲ್ಲದೆ ಹಾಗೆ ಶಬ್ಧವಿಲ್ಲದೆ ಗ್ಯಾಸ್ ಹೊರಗೆ ಬರೋದು ಸಾಮಾನ್ಯ. ಒಂದ್ವೇಳೆ ಕೆಟ್ಟ ವಾಸನೆ ಹೊರಗೆ ಬರ್ತಿದ್ದರೆ ನೀವು ಅನಿಲ ಉತ್ಪಾದನೆ ಮಾಡುವ ಸಲ್ಫರ್ ಆಹಾರದಿಂದ ದೂರವಿರ್ಬೇಕು. ನಿಮ್ಮ ದೇಹದಿಂದ ಆಗಾಗ ಅನಿಲ ಹೊರಗೆ ಹೋಗ್ತಾ ಇದೆ ಅಂದ್ರೆ ನಿಮಗೆ ಅಸಹಿಷ್ಣುತೆ ಅಥವಾ SIBO ಇರುವ ಸಾಧ್ಯತೆ ಹೆಚ್ಚಿದೆ. ‌

ಈ ಆಹಾರ, ವಸ್ತು ನಿಮ್ಮ ಮನೇಲಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ; ಎಚ್ಚರ!

ಈ ಎಲ್ಲ ರೂಲ್ಸ್ ಫಾಲೋ ಮಾಡಿ : ಶಬ್ಧ ಹಾಗೂ ವಾಸನೆ ಗ್ಯಾಸ್ ಹೊರಗೆ ಬರ್ತಾ ಇದೆ ಎಂದಾದ್ರೆ ಆಹಾರವನ್ನು ಚೆನ್ನಾಗಿ ಅಗೆದು ತಿನ್ನಿ. ಓಂಕಾಳಿನ ನೀರನ್ನು ಕುಡಿಯಿರಿ. ಪುದೀನಾ ಚಹಾ ಸೇವನೆ ಒಳ್ಳೆಯದು. ಊಟದ ಅಥವಾ ಆಹಾರ ಸೇವನೆ ಮಾಡಿದ ನಂತ್ರ ವಾಕಿಂಗ್ ಮಾಡಬೇಕು. ಅನಿಲವನ್ನು ಹೆಚ್ಚಿಸುವ ಆಹಾರವನ್ನು ನೀವು ಕಡಿಮೆ ಸೇವನೆ ಮಾಡಿ. ಇಷ್ಟೇ ಅಲ್ಲ ಕೆಲವು ದಿನಗಳವರೆಗೆ ತ್ರಿಫಲ ಚೂರ್ಣ ಸೇವನೆ ಮಾಡುವುದರಿಂದ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಆಗುತ್ತದೆ. 

ಕಣ್ಣಿನ ಕೆಳಗಿನ ಕಪ್ಪು ಕಲೆಗೆ ಮನೆಮದ್ದು

ಆಹಾರ ಅಸಹಿಷ್ಣುತೆ ಎಂದರೇನು? : ಯಾವುದೇ ವ್ಯಕ್ತಿ ಆಹಾರ ಅಸಹಿಷ್ಣುತೆಯಿಂದ ಬಳಲುತ್ತಿದ್ದರೆ ಕೆಲ ಆಹಾರ ಜೀರ್ಣವಾಗುವುದಿಲ್ಲ. ಇದ್ರಿಂದ ಹೊಟ್ಟೆ ಸಮಸ್ಯೆ ಕಾಡಲು ಶುರುವಾಗುತ್ತದೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಹೊಟ್ಟೆ ಭಾರ ಸೇರಿದಂತೆ ಹೊಟ್ಟೆಗೆ ಸಂಬಂಧಿಸಿದ ಕೆಲ ಸಮಸ್ಯೆ ಕಾಡುತ್ತದೆ.

SIBO ಅಂದ್ರೇನು? : SIBO ಸಣ್ಣ ಕರುಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಸಣ್ಣ ಕರುಳಿನಲ್ಲಿ ಅತಿಯಾದ ಬ್ಯಾಕ್ಟೀರಿಯಾ ಉತ್ಪತ್ತಿಯಾಗೋದನ್ನು SIBO ಎಂದು ಕರೆಯಲಾಗುತ್ತದೆ.