Asianet Suvarna News Asianet Suvarna News

ಮುಂಜಾನೆ ಎದ್ದು ಹೀಗೆ ಮಾಡಿದ್ರೆ ದಿನವಿಡೀ ಫ್ರೆಶ್ ಇರುತ್ತೆ ಮನಸ್ಸು‌!

ಬೆಳಗ್ಗೆ ಏಳುವಾಗ ಫ್ರೆಶ್ ಮೂಡ್‌ನಲ್ಲಿ ಇದ್ದರೆ ಆ ದಿನವಿಡೀ ಸೊಗಸಾಗಿರುತ್ತದೆ. ಇಲ್ಲವಾದರೆ ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ಈ ಕಿರಿಕಿರಿಯಿಂದ ಪಾರಾಗಿ ಇಡೀ ದಿನ ಫ್ರೆಶ್‌ ಆಗಿರೋಕೆ ಏನು ಮಾಡೋಣ? ಕೆಲವು ಟಿಪ್ಸ್‌ ಇಲ್ಲಿವೆ.

 

What to do feel fresh and energetic in morning
Author
Bengaluru, First Published Aug 31, 2020, 1:27 PM IST

ರಾತ್ರಿ ಲೇಟಾಗಿ ಮಲಗಿರುತ್ತೀರಿ. ಬೆಳಗ್ಗೆ ಆರು ಗಂಟೆಗೆ ಅಲಾರಂ ಚಿಟಾರ್ ಅಂತ ಚೀರುತ್ತದೆ. ಎದ್ದು ಗಡಿಬಿಡಿಯಲ್ಲಿ ಓಡಾಡಿ ಹಲ್ಲುಜ್ಜಿ ಮುಖ ತೊಳೆದು, ಗಡಿಬಿಡಿಯಲ್ಲಿ ತಿಂಡಿ ಮಾಡಿಕೊಂಡು, ಆಫೀಸಿಗೆ ಓಡುತ್ತೀರಿ. ತಿಂಡಿಗೆ ಉಪ್ಪಿಲ್ಲ ಖಾರವಿಲ್ಲ. ಲೇಟಾಗ್ತಾ ಇದೆ ಎಂದು ಹೆಂಡತಿ/ ಗಂಡನ ಮೇಲೆ ಸಿಡಿಮಿಡಿ ಮಾಡಿಕೊಳ್ಳುತ್ತೀರಿ. ಆ ದಿನವಿಡೀ ಕಿರಿಕಿರಿ. ರಾತ್ರಿ ಮಲಗುವಾಗಲೂ ಮತ್ತದೇ ರೋದನೆ. 
ಇದನ್ನು ಹೆಚ್ಚಿನವರೆಲ್ಲ ಅನುಭವಿಸಿದವರೇ. ಬೆಳಗ್ಗೆ ಏಳುವಾಗ ಫ್ರೆಶ್ ಮೂಡ್‌ನಲ್ಲಿ ಇದ್ದರೆ ಆ ದಿನವಿಡೀ ಸೊಗಸಾಗಿರುತ್ತದೆ. ಇಲ್ಲವಾದರೆ ಇಡೀ ದಿನ ಕಿರಿಕಿರಿ ತಪ್ಪಿದ್ದಲ್ಲ. ಈ ಕಿರಿಕಿರಿಯಿಂದ ಪಾರಾಗಿ ಇಡೀ ದಿನ ಫ್ರೆಶ್‌ ಆಗಿರೋಕೆ ಏನು ಮಾಡೋಣ? ಕೆಲವು ಟಿಪ್ಸ್‌ ಇಲ್ಲಿವೆ.

ನೆಗಟಿವ್ ಕಮೆಂಟ್ಸ್ ಕೇಳಿಸಿಕೊಳ್ಳಿ, ಆದರೆ ತಲೆಯೊಳಗೆ ಬಿಟ್ಕೋಬೇಡಿ

ಅಲಾರಂ ಬದಲು ಮೆಲೊಡಿ
ಜಪಾನಿನ ಒಂದು ಸಂಶೋಧನೆ ಪ್ರಕಾರ ಅಲಾರಂನ ಕೆಟ್ಟ ಸೌಂಡಿಗೂ ಹೃದಯಾಘಾತಗಳಿಗೆ ಸಂಬಂಧವಿದೆ. ಅಲಾರಂನ ಕರ್ಕಶ ಧ್ವನಿಯೇ ನಮ್ಮ ಮೂಡನ್ನು ಹಾಳು ಮಾಡುತ್ತದೆ. ಅದರ ಬದಲು, ನಿಮಗೆ ಅತ್ಯಂತ ಇಷ್ಟವಾದ ಒಂದು ಹಾಡನ್ನೋ, ರಾಗವನ್ನೋ ಅಲಾರಂ ಧ್ವನಿಯ ಜಾಗದಲ್ಲಿ ಪ್ರೋಗ್ರಾಂ ಮಾಡಿಟ್ಟುಕೊಳ್ಳಿ. ಆಗ ಮನಸ್ಸು ಪ್ರಫುಲ್ಲವಾಗಿರುತ್ತದೆ. ಅದು ನಿಮ್ಮ ಬೆಳಗಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

What to do feel fresh and energetic in morning

ಆರಂಭಕ್ಕೊಂಧು ಸ್ವಂತ ಗಳಿಗೆ
ಎದ್ದ ಕೂಡಲೇ ಗಡಿಬಿಡಿಯಲ್ಲಿ ಮನೆಕೆಲಸ, ಅಡುಗೆ ಕೆಲಸ ಎಂದು ಓಡಾಡುವದು ಬೇಡ. ಸ್ವಲ್ಪ ನಿಧಾನಿಸಿ. ಮುಂಜಾನೆಯ ಮಧುರ ವಾತಾವರಣವನ್ನು, ಮೌನವನ್ನು ಆಸ್ವಾದಿಸಿ. ಹಕ್ಕಿಪಕ್ಷಿಗಳ ಧ್ವಳಿ. ನಿಮಗಾಗಿ ಒಂದರ್ಧ ಗಂಟೆ ತೆಗೆದಿಡಿ. ಅಲ್ಲಿ ನೀವಲ್ಲದೆ ಇನ್ಯಾರೂ ಇರದಿರಲಿ. ಅದನ್ನು ಯೋಗ, ವ್ಯಾಯಾಮ, ಧ್ಯಾನ- ಹೀಗೆ ಯಾವುದಕ್ಕಾದರೂ ವಿನಿಯೋಗಿಸಿ. ಅಥವಾ ನಿಮ್ಮ ಯೋಚನೆಗಳನ್ನು ಒಂದೆರಡು ಪುಟ ಬರೆದಿಡಲು ತೆಗೆದಿಡಿ. ಆಗ ಮನಸ್ಸು ದಿನದ ಮುಂದಿನ ಕೆಲಸಗಳಿಗೆ ಶಕ್ತಿ ತುಂಬಿಕೊಳ್ಳುತ್ತದೆ.

What to do feel fresh and energetic in morning

ಕೃತಜ್ಞತೆಯ ಕ್ಷಣಗಳು
ಹಿಂಧಿನವರು ಎದ್ದ ಕೂಡಲೇ ದೇವರ ಧ್ಯಾನ ಮಾಡುತ್ತಿದ್ದರು. ಅದರಲ್ಲೂ ಒಂದು ಲಾಜಿಕ್‌ ಇತ್ತು. ನೀವು ಆಸ್ತಿಕರೋ, ನಾಸ್ತಿಕರೋ, ಅದು ಬೇರೆ ಮಾತು. ಆದರೆ ನಿಮಗೆ ಇನ್ನೊಂದು ದಿನವನ್ನು ಬದುಕಲು ಕೊಟ್ಟ ಆ ವಿಧಿ ಅಥವಾ ಪ್ರಕೃತಿಗೆ ನೀವು ಕೃತಜ್ಞತೆ ಸಲ್ಲಿಸಲು ಮರೆಯಬೇಡಿ. ದಿನದಲ್ಲಿ ಐದು ಪಾಸಿಟಿವ್‌ ಚಿಂತನೆಗಳನ್ನು ಮಾಡಿ, ನಿಮಗೆ ದೊರೆತ ಸಕಾರಾತ್ಮಕ ವಿಷಯಗಳನ್ನು ಚಿಂತಿಸಿ ಅಥವಾ ಬರೆದಿಡಿ. ಅದು ನಿಮ್ಮ ಮನಸ್ಸನ್ನು ಹಗುರಗೊಳಿಸುತ್ತದೆ.

What to do feel fresh and energetic in morning

ಹುಡುಗರಲ್ಲಿ ಹುಡುಗೀಯರು ಬಯಸೋ ಗುಣಗಳಿವು

ಎಲ್ಲ ತಂತುಗಳಿಂದ ದೂರ
ಮುಂಜಾನೆ ಎದ್ದ ಕೂಡಲೇ ಮೊಬೈಲ್‌ನ ಕಡೆಗೆ ಕೈ ಹೋಗುತ್ತದೆ. ಟಿವಿ ಸ್ವಿಚ್‌ ಹಾಕಲು ಯತ್ನಿಸುತ್ತೀರಿ. ಮೇಲ್‌ ನೋಡೋಣ, ವಾಟ್ಸ್ಯಾಪ್‌ ಚೆಕ್‌ ಮಾಡೋಣ, ಫೇಸ್‌ಬುಕ್‌ ತೆರೆಯೋಣ ಎನ್ನುತ್ತದೆ ಮನಸ್ಸು. ಅದಕ್ಕೆ ಕಾರಣ, ನಾನು ಅಪ್‌ಡೇಟ್‌ ಆಗಬೇಕು ಎಂಬ ಒತ್ತಡ. ಇದೆಲ್ಲ ನಿಮ್ಮ ಮನಸ್ಸನ್ನು ಖುಷಿಯಾಗಿಡಲು ಸಹಕರಿಸುವುದಿಲ್ಲ. ಬದಲು ಆತಂಕವನ್ನು ಹೆಚ್ಚಿಸುತ್ತದೆ. ಮುಂಜಾನೆ ಸಾಧ್ಯವಾದಷ್ಟು ಹೊತ್ತೂ ಮೊಬೈಲ್‌ನಿಂದ ದೂರವಿರಿ.
What to do feel fresh and energetic in morning

ಮನೆಯಿಂದ ಹೊರಗೊಂದು ವಾಕ್
ಮನುಷ್ಯನಿಗೆ ವಾಕ್ ಸ್ವಾತಂತ್ರ್ಯ ಇದ್ದ ಹಾಗೆ ವಾಕಿಂಗ್‌ ಸ್ವಾತಂತ್ರ್ಯವೂ ಇದೆಯಲ್ಲವೇ. ಅದನ್ನು ಚೆನ್ನಾಗಿ ಬಳಸಿಕೊಳ್ಳಿ. ಮುಂಜಾನೆ ಮನೆಯಿಂದ ಹೊರಬಿದ್ದು ಒಂದಿಷ್ಟು ದೂರವಾದರೂ ನಡೆಯಿರಿ. ಇದು ಖುಷಿಯನ್ನುಂಟುಮಾಡುವ ಎಂಡಾರ್ಫಿನ್‌ ಸ್ರಾವವನ್ನು ನಿಮ್ಮಲ್ಲಿ ಅಧಿಕಗೊಳಿಸುತ್ತದೆ. ಹಾಗೇ ಒತ್ತಡವನ್ನು ಉಂಟುಮಾಡುವ ಕಾರ್ಟಿಸಾಲ್‌ಗಳ ಸ್ರಾವವನ್ನು ಕಡಿಮೆ ಮಾಡುತ್ತದೆ. ಜಾಗಿಂಗ್‌, ಓಟ ಕೂಡ ಓಕೆ. ಸುಮ್ಮನೇ ಟೆರ್ರೇಸ್‌ ಗಾರ್ಡನ್‌ನಲ್ಲಿ ಐದು ನಿಮಿಷ ನಿಲ್ಲುವುದೂ ಹಿತ.

What to do feel fresh and energetic in morning

ನಿಮ್ಮಿಂದ ಎಲ್ಲರೂ ದೂರವಾಗುವುದು ಈ ಕಾರಣಕ್ಕಿರಬಹುದು
ನೀರು ಜೀವನಾಧಾರ

ಮುಖ ತೊಳೆದ ಬಳಿಕ, ಬೇರೆಲ್ಲದಕ್ಕಿಂತ ಮೊದಲು ಒಂದು ದೊಡ್ಡ ಲೋಟದ ತುಂಬ ನಸುಬಿಸಿಯಾದ ನೀರನ್ನು ಕುಡಿಯಿರಿ. ಇದಕ್ಕೆ ಒಂದೆರಡು ತುಳಸಿ ಎಲೆ, ಅರ್ಧ ಸ್ಪೂನ್ ಜೇನು ಮತ್ತು ಒಂದೆರಡು ಕಾಳು ಜೀರಿಗೆ ಹಾಕಿಕೊಂಡರೆ ಇನ್ನಷ್ಟು ಹಿತ. ಇದು ನಿಮ್ಮ ದೇಹದ ಪಚನಕ್ರಿಯೆಯನ್ನು ಸರಿಯಾಗಿಡುತ್ತದೆ, ವಿಸರ್ಜನೆ ಸರಿಯಾಗುವಂತೆ ಮಾಡುತ್ತದೆ, ಬ್ರೇಕ್‌ಫಾಸ್ಟ್‌ಗೆ ಜಠರವನ್ನು ಸಜ್ಜು ಮಾಡುತ್ತದೆ. 

What to do feel fresh and energetic in morning

ಧನಾತ್ಮಕ ಪ್ರಶ್ನೆಗಳು
ಎದ್ದ ಕೂಡಲೇ '"ಅಯ್ಯೋ, ಎಷ್ಟೊಂದು ಕೆಲಸಗಳಿವೆ, ಯಾವುದನ್ನು ಮಾಡಲಿ?'' ಎಂದು ಗೋಳಾಡಬೇಡಿ. ಬದಲಾಗಿ, "ಇಂದು ನನ್ನ ದಿನವನ್ನು ನಾನು ಹೇಗೆ ಹ್ಯಾಪಿಯಾಗಿಡಬಹುದು?'' ಎಂಬಂಥ ಧನಾತ್ಮಕ, ಪಾಸಿಟಿವ್ ಪ್ರಶ್ನೆಗಳನ್ನು ಕೇಳಿಕೊಳ್ಳಿ.

What to do feel fresh and energetic in morning

ಅಹಂಕಾರದ ಕೊಳವೆ ಬಾವಿ ಏರಲು 7 ದಾರಿಗಳು

Follow Us:
Download App:
  • android
  • ios