Asianet Suvarna News Asianet Suvarna News

Health Care : ನೈಟ್ ಶಿಫ್ಟ್ ಮಾಡಿದ್ರೂ ಹೆಲ್ತ್ ಹಾಳಾಗ್ಬಾರ್ದಾ?

ರಾತ್ರಿ ಪಾಳಿ (Night Shift) ಅಂದ್ರೆ ಮೂಗು ಮುರಿಯೋರೆ ಹೆಚ್ಚು. ಯಾಕೆಂದ್ರೆ ನಿರಂತರವಾಗಿ ನೈಟ್ ಶಿಫ್ಟ್ ಮಾಡಿದೋರಿಗೆ ಅದ್ರ ಸಮಸ್ಯೆ ಗೊತ್ತಿರುತ್ತದೆ. ಆರಂಭದಲ್ಲಿ ಹಿತವೆನ್ನಿಸಿದ್ರೂ ದಿನ ಕಳೆದಂತೆ ಅದ್ರ ಇಫೆಕ್ಟ್ (Effect) ಕಾಣಿಸಿಕೊಳ್ಳುತ್ತೆ. ನೈಟ್ ಶಿಫ್ಟ್ ಮಾಡಿಯೂ ಆರೋಗ್ಯ (Health) ಸರಿಯಾಗಿರ್ಬೇಕೆಂದ್ರೆ ಕಟ್ಟುನಿಟ್ಟಿನ ನಿಯಮ ಪಾಲಿಸ್ಬೇಕು. 
 

What Not To Do While Working In Night for better health
Author
Bangalore, First Published Apr 2, 2022, 4:21 PM IST

ಹಗಲಿನಲ್ಲಿ ಕೆಲಸ (Work) ಹಾಗೂ ರಾತ್ರಿ (Night) ವಿಶ್ರಾಂತಿ ಇದು ಅಲಿಖಿತ ನಿಯಮ. ಆದ್ರೆ ಕೆಲವು ಕೆಲಸಗಳಿಗೆ ಪಾಳಿಯಿರುತ್ತದೆ. ಪಾಳಿಯಂತೆ ಜನರು ಕೆಲಸ ಮಾಡ್ತಾರೆ. ಜನರು ಬೆಳಗಿನ ಜಾವ, ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಪೂರ್ತಿ ಕೆಲಸ ಮಾಡ್ಬೇಕಾಗುತ್ತದೆ. ವೈದ್ಯರು, ನರ್ಸ್‌ಗಳು, ಅಗ್ನಿಶಾಮಕ ದಳದವರು, ಚಾಲಕರು, ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ಮತ್ತು ಇತರ ಕೆಲವು ಅಗತ್ಯ ಕಾರ್ಯಗಳನ್ನು ಮಾಡುವ ಜನರು ರಾತ್ರಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ಪಾಳಿಯನ್ನು (Night Shift) ತಪ್ಪಿಸಲು ಸಾಧ್ಯವಿಲ್ಲ. ಆದ್ರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರಿಕೆ ವಹಿಸಬೇಕು. ನಿರಂತರವಾಗಿ ರಾತ್ರಿ ಪಾಳಿಯಲ್ಲಿ  ಕೆಲಸ ಮಾಡುವ ಜನರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಗಲಿನಲ್ಲಿ ಕೆಲಸ ಮಾಡುವವರಿಗಿಂತ ರಾತ್ರಿಯಲ್ಲಿ ಕೆಲಸ ಮಾಡುವವರಿಗೆ ರೋಗದ ಅಪಾಯವೂ ಹೆಚ್ಚು ಎಂದು ಅಧ್ಯಯನಗಳಿಂದ ದೃಢಪಟ್ಟಿದೆ. ರಾತ್ರಿ ಪಾಳಿ ಅನಿವಾರ್ಯ ಎನ್ನುವವರು ಆರೋಗ್ಯ ಕಾಪಾಡಿಕೊಳ್ಳಲು ಏನೆಲ್ಲ ಮಾಡ್ಬೇಕು ಎಂಬುದನ್ನು ನಾವಿಂದು ಹೇಳ್ತೇವೆ.

ರಾತ್ರಿ ಪಾಳಿಯವರನ್ನು ಕಾಡುತ್ತೆ ಈ ಎಲ್ಲ ಸಮಸ್ಯೆ : ನ್ಯಾಶನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ದೀರ್ಘಾವಧಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ವಿವಿಧ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ. ಇವುಗಳಲ್ಲಿ ಚಯಾಪಚಯ ಸಮಸ್ಯೆಗಳು, ಹೃದ್ರೋಗ, ಜೀರ್ಣಕಾರಿ ತೊಂದರೆಗಳು, ಸ್ಥೂಲಕಾಯ ಮತ್ತು ಕೆಲವು ಕ್ಯಾನ್ಸರ್‌ಗಳ ಅಪಾಯ ಹೆಚ್ಚಾಗುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರಿಗೆ ಸರಿಯಾಗಿ ನಿದ್ರೆಯಾಗುವುದಿಲ್ಲ. ನಿದ್ರಾಹೀನತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ. ಯಾವ ಎಚ್ಚರಿಕೆ ತೆಗೆದುಕೊಳ್ಳುವ ಮೂಲಕ ಈ ಎಲ್ಲ ಸಮಸ್ಯೆಯಿಂದ ದೂರವಿರಬಹುದು ಎಂಬುದನ್ನು ಹೇಳ್ತೇವೆ. 

ಮಧುಮೇಹ ಇರೋರು ನೇರಳೆ ಹಣ್ಣು ಯಾಕೆ ತಿನ್ಬೇಕು ?

ಉತ್ತಮ ನಿದ್ರೆ ಬಹಳ ಮುಖ್ಯ : ರಾತ್ರಿ ನಿದ್ರೆಯಾಗುವುದಿಲ್ಲ. ಬೆಳಿಗ್ಗೆ ಎಷ್ಟೇ ಮಲಗಿದ್ರೂ ರಾತ್ರಿಯಷ್ಟು ಸುಖವಾದ ನಿದ್ರೆ ಬರಲು ಸಾಧ್ಯವಿಲ್ಲ. ನಿದ್ರೆಯ ಕೊರತೆಯಿಂದ ಆಯಾಸ ಮತ್ತು ಕಿರಿಕಿರಿ ಸಮಸ್ಯೆ ಹೆಚ್ಚಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ರಾತ್ರಿಯಲ್ಲಿ ಏಳುವುದು ಸಿರ್ಕಾಡಿಯನ್ ರಿದಮ್ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಮಾನಸಿಕ ವ್ಯವಹಾರ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಕೆಲಸಕ್ಕಿಂತ ಮೊದಲು ಸಾಕಷ್ಟು ನಿದ್ರೆ ಮಾಡಬೇಕು. ಹಗಲಿನಲ್ಲಿಯೂ ಸರಿಯಾದ ನಿದ್ರೆ ಮಾಡಬೇಕು. ಕತ್ತಲ ಕೋಣೆಯಲ್ಲಿ ಹಾಗೂ ಶಾಂತವಾದ ಕೋಣೆಯಲ್ಲಿ ಮಲಗಿ ಸರಿಯಾಗಿ ನಿದ್ರೆ ಮಾಡಿದಲ್ಲಿ ಮಾತ್ರ ಆರೋಗ್ಯ ಸರಿಯಾಗಿಲು ಸಾಧ್ಯ. 

ಸೂರ್ಯನ ಬೆಳಕಿನಲ್ಲಿಟ್ಟ ನೀರು ಕುಡಿದ್ರೆ ದುಪ್ಪಟ್ಟಾಗುತ್ತೆ ಆರೋಗ್ಯ

ಪೌಷ್ಟಿಕ ಆಹಾರ : ರಾತ್ರಿ ಪಾಳಿಯಲ್ಲಿ ನಿದ್ರೆ ಮಾಡಲು ಸಾಧ್ಯವಿಲ್ಲ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಮೆಟಾಬಾಲಿಕ್ ಸಿಂಡ್ರೋಮ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ರಾತ್ರಿ ನಿದ್ರೆ ಹೋಗಲಾಡಿಸಲು ಫಾಸ್ಟ್ ಫುಡ್, ಟೀ, ಕಾಫಿ ಸೇವನೆಯನ್ನು ಜನರು ಹೆಚ್ಚು ಮಾಡ್ತಾರೆ. ಹಾಗೆಯೇ ಹಗಲಿನಲ್ಲಿ ಮಲಗಿರುವ ಕಾರಣ ಸರಿಯಾದ ಆಹಾರ ಸೇವನೆ ಮಾಡುವುದಿಲ್ಲ. ಅನೇಕರು ಅಪೌಷ್ಟಿಕ ಆಹಾರ ಸೇವನೆ ಮಾಡ್ತಾರೆ. ಕಳಪೆ ಆಹಾರ ಮತ್ತು ನಿದ್ರೆಯ ಕೊರತೆ ಸ್ಥೂಲಕಾಯದ ಅಪಾಯ ಶೇಕಡಾ 23 ರಷ್ಟು ಹೆಚ್ಚಾಗುತ್ತದೆ. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಜನರು ಆಹಾರದ ಬಗ್ಗೆ ವಿಶೇಷ ಗಮನ ನೀಡಬೇಕು. ಆರೋಗ್ಯಕರ ಮತ್ತು ಪೌಷ್ಟಿಕ ಪದಾರ್ಥಗಳನ್ನು ಸೇವಿಸಬೇಕು. ಜಂಕ್ ಹಾಗೂ ಸಂಸ್ಕರಿಸಿದ ಆಹಾರಗಳನ್ನು ಸೇವನೆ ಮಾಡಬಾರದು. ರಾತ್ರಿ ಕೆಫೀನ್ ನಿಂದ ದೂರವಿರಬೇಕು.  

Follow Us:
Download App:
  • android
  • ios