Asianet Suvarna News Asianet Suvarna News

ಕೋವಿಡ್ ಬೆನ್ನಲ್ಲೇ ಹಳದಿ ಜ್ವರದ ಭೀತಿ, ಲಸಿಕೆ ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ

ಕೋವಿಡ್‌ ಕಾಟನೇ ಮುಗ್ದಿಲ್ಲ. ಅದಕ್ಕಿಂತಲೂ ಮೊದ್ಲೇ ಹೊಸ ಹೊಸ ಜ್ವರ, ವೈರಸ್‌ಗಳು ವಕ್ಕರಿಸಿಕೊಳ್ಳುತ್ತಿವೆ. ಸದ್ಯ ಯೆಲ್ಲೋ ಫೀವರ್ ಎಲ್ಲರಲ್ಲಿ ಭೀತಿ ಹುಟ್ಟಿಸುತ್ತಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಹಳದಿ ಜ್ವರದ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

What is Yellow Fever, symptoms and treatment, Central govt makes vaccine compulsory Vin
Author
First Published Apr 11, 2023, 10:47 AM IST

ನವದೆಹಲಿ: ಜಗತ್ತಿನಾದ್ಯಂತ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗ್ತಿದೆ. ಭಾರತದಲ್ಲಿ ಹೆಚ್ಚಾಗುತ್ತಿರುವ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು, ಮೂಲಸೌಕರ್ಯಗಳನ್ನು ಪರೀಕ್ಷಿಸಲು ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಎರಡು ದಿನಗಳ ಅಣಕು ಕಾರ್ಯಾಚರಣೆ ನಡೆಯುತ್ತಿದೆ. ಈ ಮಧ್ಯೆ ಮತ್ತೊಂದು ಹೊಸ ಜ್ವರದ ಭೀತಿ ಎದುರಾಗಿದೆ. ಕೋವಿಡ್ ನಿಂದ ಬಳಲಿದ್ದ ಜನರಿಗೆ ಹಳದಿ ಜ್ವರ ಕಾಟ ಕೊಡ್ತಿದೆ. ಈ ಯಲ್ಲೋ ಫೀವರ್ ಸದ್ಯ ವಿದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ಹಳದಿ ಜ್ವರದ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ವಿದೇಶಕ್ಕೆ ಹೋಗ್ಬೇಕಂದ್ರೆ ಹಳದಿ ಜ್ವರದ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ. 

ಸೌತ್ ಆಫ್ರಿಕಾ, ಕೀನ್ಯಾ, ನೈಜೀರಿಯಾ, ಉಗಾಂಡ, ರಿಪಬ್ಲಿಕ್ ಆಫ್ ಕಾಂಗೋ, ದಕ್ಷಿಣ ಅಮೆರಿಕಾದ ಕೆಲ ಭಾಗದಲ್ಲಿ ಹಳದಿ ಜ್ವರ (Yellow fever) ಹೆಚ್ಚಾಗಿದೆ. ಹೀಗಾಗಿ ಹೊರದೇಶದಿಂದ ಬರುವವರು ಹಾಗೂ ಹೊರ ದೇಶಕ್ಕೆ ತೆರಳುವವರಿಗೆ ಲಸಿಕೆ (Vaccine) ಕಡ್ಡಾಯವಾಗಿದೆ. ಹಳದಿ ವೈರಸ್‌ನಿಂದ  ಕಂಡು ಬರ್ತಿರುವ ಡೇಂಜರಸ್ ಎಲ್ಲೋ‌ ಫೀವರ್‌ನ ಬಗ್ಗೆ ಎಲ್ಲರೂ ಭಯಭೀತರಾಗಿದ್ದಾರೆ. 

Health Tips: ಸಸ್ಯಗಳಿಂದ ಮನುಷ್ಯನಿಗೆ ಬರುವ ಈ ರೋಗ ಯಾವುದು ಗೊತ್ತಾ?

ಹಳದಿ ಜ್ವರ ಎಂದರೇನು?
ಹಳದಿ ಜ್ವರವು ಗಂಭೀರವಾದ ಮತ್ತು ಮಾರಣಾಂತಿಕ ವೈರಸ್ ರೋಗವಾಗಿದ್ದು, ಇದು ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾದ ಕೆಲವು ಭಾಗಗಳಲ್ಲಿ ಹೆಚ್ಚು ಕಂಡು ಬರುತ್ತದೆ. ಸೋಂಕು ಸೌಮ್ಯದಿಂದ ತೀವ್ರವಾಗಿ ಮಾರಣಾಂತಿಕವಾಗಿರಬಹುದು. ಸೋಂಕು ತಗುಲಿದ ಹೆಚ್ಚಿನ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ. ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಹಳದಿ ಜ್ವರ ಲಸಿಕೆಯ ಸೀಮಿತ ಪೂರೈಕೆ ಇರುವುದರಿಂದ ಲಸಿಕೆಯನ್ನು ಪಡೆಯಲು ಸುಧಾರಿತ ಯೋಜನೆ ಅಗತ್ಯವಿದೆ.

ಹಳದಿ ಜ್ವರದ ಲಕ್ಷಣಗಳು
ಹಳದಿ ಜ್ವರದ ಅತ್ಯಂತ ಗುರುತಿಸಬಹುದಾದ ಲಕ್ಷಣವೆಂದರೆ (Symptoms) ಚರ್ಮ ಮತ್ತು ಕಣ್ಣುಗಳು ಹಳದಿ (ಕಾಮಾಲೆ) ಬಣ್ಣಕ್ಕೆ ತಿರುಗುವುದು. ಮಾತ್ರವಲ್ಲ ಜ್ವರ ತರಹದ ಲಕ್ಷಣಗಳು ಸ್ನಾಯು ನೋವು, ತಲೆನೋವು (Headache), ವಾಕರಿಕೆ ಮತ್ತು ವಾಂತಿಯನ್ನು ಒಳಗೊಂಡಿರಬಹುದು. ಹಳದಿ ಜ್ವರವನ್ನು ಪಡೆಯುವ ಸುಮಾರು 15 ಪ್ರತಿಶತದಷ್ಟು ಜನರು ರಕ್ತಸ್ರಾವ, ಆಘಾತ, ಅಂಗಾಂಗ ವೈಫಲ್ಯ ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗುವ ಗಂಭೀರ ರೋಗಲಕ್ಷಣಗಳನ್ನು ಅಭಿವೃದ್ಧಿಪಡಿಸುತ್ತಾರೆ.

ಹಳದಿ ಜ್ವರ ಹೇಗೆ ಹರಡುತ್ತದೆ?
ಸೋಂಕಿತ ಸೊಳ್ಳೆಯ ಕಚ್ಚುವಿಕೆಯ ಮೂಲಕ ವೈರಸ್ ಹರಡುತ್ತದೆ, ಆದ್ದರಿಂದ ಹಳದಿ ಜ್ವರ ಬರದಂತಿರಲು, ಪ್ರಯಾಣಿಕರು ಸೊಳ್ಳೆಯಿಂದ (Mosquito) ಹರಡುವ ಕಾಯಿಲೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಲು ಸಾಧ್ಯವಿಲ್ಲ.

Health Tips : ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಜನರಿಗಿದೆ ಡಿಮೆನ್ಷಿಯಾ

ಹಳದಿ ಜ್ವರಕ್ಕೆ ಲಸಿಕೆ
ಹಳದಿ ಜ್ವರವನ್ನು ಗುಣಪಡಿಸಲಾಗುವುದಿಲ್ಲ ಆದರೆ ಲಸಿಕೆಯಿಂದ ಅದನ್ನು ತಡೆಗಟ್ಟಬಹುದು. ಇದು ವೈರಸ್‌ನ್ನು ದುರ್ಬಲಗೊಳಿಸುತ್ತದೆ. ಹಳದಿ ಜ್ವರದ  ಬೂಸ್ಟರ್‌ಗಳನ್ನು ಪ್ರತಿ 10 ವರ್ಷಗಳಿಗೊಮ್ಮೆ ಅಪಾಯದಲ್ಲಿ ಉಳಿಯುವ ಅಥವಾ ವ್ಯಾಪಕವಾಗಿ ಪ್ರಯಾಣಿಸುವವರಿಗೆ ಶಿಫಾರಸು ಮಾಡಬಹುದು. ಹಳದಿ ಜ್ವರ ಲಸಿಕೆ ಅತ್ಯಂತ ಸುರಕ್ಷಿತ (Safe) ಮತ್ತು ಪರಿಣಾಮಕಾರಿಯಾಗಿದೆ ಮತ್ತು ಹೆಚ್ಚಿನ ಅಪಾಯದ ಪ್ರದೇಶಗಳಿಗೆ ಪ್ರಯಾಣಿಸುವ 9 ತಿಂಗಳ ಮೇಲ್ಪಟ್ಟ ವಯಸ್ಕರು ಮತ್ತು ಮಕ್ಕಳಿಗೆ ಶಿಫಾರಸು ಮಾಡಲಾಗಿದೆ. ಕೆಲವು ದೇಶಗಳಿಗೆ ಪ್ರವೇಶಕ್ಕಾಗಿ ಹಳದಿ ಜ್ವರ ಇನಾಕ್ಯುಲೇಷನ್ ಪುರಾವೆ ಅಗತ್ಯವಿದೆ. ಪ್ರಯಾಣಿಕರು ಹೆಚ್ಚಿನ ಅಪಾಯದ ದೇಶದಿಂದ ಬರುತ್ತಿದ್ದರೆ ಇತರ ದೇಶಗಳಿಗೆ ವ್ಯಾಕ್ಸಿನೇಷನ್ ಪುರಾವೆ ಅಗತ್ಯವಾಗಬಹುದು. ಪ್ರಯಾಣಿಕರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಲಸಿಕೆಯನ್ನು ಹಾಕಿದರೆ ಸಾಕಾಗುತ್ತದೆ.

ವಿದೇಶಕ್ಕೆ ತೆರಳುವ ಪ್ರತಿಯೊಬ್ಬರು ಹಳದಿ ಜ್ವರಕ್ಕೆ ಲಸಿಕೆ ಹಾಕಿಸಿಕೊಳ್ಳೋದು ಕಡ್ಡಾಯವಾಗಿದೆ. ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ಹಳದಿ ಜ್ವರದ ಲಸಿಕೆ  ಲಭ್ಯವಿದೆ. ಸ್ಟಾ ಮರಿಲ್ ಎಂಬ ಹಳದಿ ಜ್ವರದ ಲಸಿಕೆ ಲೈಫ್ ಟೈಮ್ ರಕ್ಷಣೆ ನೀಡಲಿದೆ. ಯೆಲ್ಲೋ ಫೀವರ್ ಲಸಿಕೆಗೆ‌ ಕೇಂದ್ರ ಆರೋಗ್ಯ ಇಲಾಖೆ 300 ರೂ. ನಿಗದಿ ಮಾಡಿದೆ. 

Follow Us:
Download App:
  • android
  • ios