Asianet Suvarna News Asianet Suvarna News

Gynophobia: ಪುರುಷ ಪುರುಷತ್ವ ಕಳೆದುಕೊಳ್ಳುವ ರೋಗ ಇದು!

ಜನರಲ್ಲಿ ನಾನಾ ರೀತಿಯ ಮಾನಸಿಕ ಸಮಸ್ಯೆ ಕಾಡುತ್ತದೆ. ಅನೇಕ ಬಾರಿ ಇದು ಸಮಸ್ಯೆ ಅನ್ನೋದೆ ನಮಗೆ ತಿಳಿಯೋದಿಲ್ಲ. ಮಹಿಳೆಯನ್ನು ಕಾಣ್ತಿದ್ದಂತೆ ನೀವೂ ಬೆವರಲು ಶುರು ಮಾಡಿದ್ರೆ ಈ ಸುದ್ದಿ ಓದಿ.

What Is Gynophobia And Its Symptoms roo
Author
First Published Dec 30, 2023, 4:14 PM IST

ಪುರುಷರು ಮತ್ತು ಮಹಿಳೆಯರನ್ನು ಕಾಡುವ ಅನೇಕ ಸಮಸ್ಯೆಗಳಿವೆ. ಕೆಲವೊಂದು ಮಾನಸಿಕ ಸಮಸ್ಯೆ ಒಬ್ಬೊಬ್ಬರಲ್ಲಿ ಒಂದೊಂದು ರೀತಿ ಇರುತ್ತದೆ. ಅದ್ರಲ್ಲಿ ಗೈನೋಫೋಬಿಯಾ ಕೂಡ ಒಂದು. ಇದು  ಪುರುಷರನ್ನು ಕಾಡುವ ತೊಂದರೆ. ಮಹಿಳೆಯರ ಬಗ್ಗೆ ಪುರುಷರಲ್ಲಿ ಇರುವ ವಿಶೇಷ ರೀತಿಯ ಫೋಬಿಯಾ ಇದಾಗಿದೆ. ನಾವಿಂದು ಗೈನೋಫೋಬಿಯಾ ಎಂದರೇನು ಮತ್ತು ಅದರಿಂದ ಆಗುವ ಸಮಸ್ಯೆಗಳೇನು ಎಂಬುದನ್ನು ನಿಮಗೆ ಹೇಳ್ತೇವೆ.

ಗೈನೋಫೋಬಿಯಾ (Gynophobia) ಎಂದರೇನು? : ಈ ಸಮಸ್ಯೆ ಇರುವ ಪುರುಷರಿಗೆ ಮಹಿಳೆಯನ್ನು ಕಂಡರೆ ಆಗೋದಿಲ್ಲ. ಮಹಿಳೆಯನ್ನು ಕಂಡ ಕೂಡಲೇ ಬೆವರಲು ಶುರು ಮಾಡ್ತಾರೆ.  ಕಾಲುಗಳು ನಡುಗಲು ಶುರುವಾಗುತ್ತದೆ. ಮಾತನಾಡುವಾಗ ತೊದಲುತ್ತಾರೆ. ಕೆಲವರು ತುಂಬಾ ಉದ್ವಿಗ್ನತೆ (Anxiety) ಗೆ ಒಳಗಾಗ್ತಾರೆ. ಸರಿಯಾಗಿ ಹಾಗೂ ಸರಾಗವಾಗಿ ಉಸಿರಾಡಲು ಸಾಧ್ಯವಾಗೋದಿಲ್ಲ.

ಹೆಂಡ್ತಿಗೆ ಸೆಕ್ಸ್‌ನಲ್ಲಿ ಆಸಕ್ತೀನೆ ಇಲ್ಲ, ಬೆಡ್‌ರೂಮ್‌ನಲ್ಲಿ ಆಕೆ ಡಲ್‌ ಆಗಿರೋಕೆ ಕಾರಣವೇನು?

ಗೈನೋಫೋಬಿಯಾ ಲಕ್ಷಣಗಳು : 

ಎದೆ ನೋವು ಅಥವಾ ಹೃದಯಾಘಾತ : ಮಹಿಳೆಯರನ್ನು ನೋಡುತ್ತಿದ್ದಂತೆ  ಪ್ಯಾನಿಕ್ ಅಟ್ಯಾಕ್, ಎದೆಯ ಬಿಗಿತ, ಅತಿಯಾದ ಬೆವರುವಿಕೆ, ತ್ವರಿತ ಹೃದಯ ಬಡಿತ, ತಲೆತಿರುಗುವಿಕೆ, ಆಯಾಸ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಗೈನೋಫೋಬಿಯಾದಿಂದ ವ್ಯಕ್ತಿ ಓದಲು ತೊಂದರೆ ಅನುಭವಿಸುತ್ತಾನೆ. ಸರಿಯಾಗಿ ಬರೆಯಲು ಸಾಧ್ಯವಾಗೋದಿಲ್ಲ. ನಿತ್ಯದ ಕೆಲಸ ಮಾಡುವಾಗ್ಲೂ ಅವರು ತೊಂದರೆಯನ್ನು ಅನುಭವಿಸುತ್ತಾರೆ.

ತಮ್ಮನ್ನು ತಾವು ನಕಾರಾತ್ಮಕವಾಗಿ ನೋಡ್ತಾರೆ ಜನ : ಗೈನೋಫೋಬಿಯಾ ಎಂದರೆ ಮಹಿಳೆಯರಿಂದ ಕಾಡುವ ಭಯವಲ್ಲ.  ತನ್ನೊಳಗೆ ತಾನೇ ಅನುಭವಿಸುವ ಭಯ. ಈ ವ್ಯಕ್ತಿಗಳು ಮಹಿಳೆ ಬಳಿ ಹೋಗಲು ಹೆದರುತ್ತಾರೆ. ತಮ್ಮನ್ನು ತಾವು ನಕಾರಾತ್ಮಕವಾಗಿ ನೋಡ್ತಾರೆ. ಮಹಿಳೆ ಹತ್ತಿರ ಬಂದ್ರೆ ಅಥವಾ ಮಹಿಳೆ ಹತ್ತಿರಕ್ಕೆ ಬರಬಹುದು ಎಂಬ ಕಲ್ಪನೆಯಲ್ಲೇ ಆತ ಭಯಕ್ಕೆ ಒಳಗಾಗ್ತಾನೆ. 

ಬರೋಬ್ಬರಿ 4 ತಿಂಗಳು ಕಷ್ಟಪಟ್ಟು ಹೀಗೆ ಬಾಡಿ ಬಿಲ್ಡ್ ಮಾಡಿದ್ರು ಬಾಬಿ ಡಿಯೋಲ್

ಸಾಮಾನ್ಯವಾಗಿ ಗೈನೋಫೋಬಿಯಾ ಯುವಕರಲ್ಲಿ ಕಾಡುತ್ತದೆ ಎಂದು ಹಿಂದಿನ ಅಧ್ಯಯನಗಳು ಹೇಳಿದ್ದವು. ಆದ್ರೀಗ ಹೊಸ ಸಮೀಕ್ಷೆ ಇದಕ್ಕೆ ಭಿನ್ನವಾಗಿದೆ. ಗೈನೋಫೋಬಿಯಾ ವಿವಾಹಿತ ಪುರುಷರಿಗೂ ಹೆಚ್ಚು ಕಾಡುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.  ಪ್ರಪಂಚದಲ್ಲಿ ಇಷ್ಟು ಜನರನ್ನು ಕಾಡ್ತಿದೆ ಗೈನೋಫೋಬಿಯಾ : ಪ್ರಪಂಚದ ಸುಮಾರು ಶೇಕಡಾ 30 ರಿಂದ 40 ರಷ್ಟು ಜನರು ಪ್ರಸ್ತುತ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.  ಅಂತಹವರು ಮದುವೆಯಾಗಲು ಬಯಸುತ್ತಾರೆ.  ಆದರೆ ಮಹಿಳೆಯರ ಮೇಲೆ ಅವರಿಗಿರುವ ಭಯ ಅವರನ್ನು ಮದುವೆಯಾಗದಂತೆ ತಡೆಯುತ್ತದೆ. 

ಗೈನೋಫೋಬಿಯಾಗೆ ಕಾರಣವಾಗುವ ಕೆಲ ವಿಷಯಗಳು : 
ಗೈನೋಫೋಬಿಯಾ ಕಾಡಲು ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಮಾನಸಿಕ ಅಥವಾ ದೈಹಿಕ ಕಿರುಕುಳ, ನಿರಾಕರಣೆ, ಲೈಂಗಿಕ ಕಿರುಕುಳ, ಅತ್ಯಾಚಾರ ಮತ್ತು ದೈಹಿಕ ಕಿರುಕುಳದಂತಹ ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ಹಿಂದಿನ ಕೆಟ್ಟ ಅನುಭವ ಇದಕ್ಕೆ ಕಾರಣವಾಗುತ್ತದೆ. ಇದು ಅನೇಕ ಬಾರಿ ದೊಡ್ಡವರಿಂದ ಮಕ್ಕಳಿಗೆ ಬರುತ್ತದೆ. ಕುಟುಂಬದ ಸದಸ್ಯರು ಫೋಬಿಯಾ ಅಥವಾ ಒತ್ತಡದಿಂದ ಬಳಲುತ್ತಿದ್ದರೆ ಅವರನ್ನು ನೋಡಿದಾಗ ಮಗುವಿನಲ್ಲೂ ಫೋಬಿಯಾ ಕಾಡುವ ಸಾಧ್ಯತೆ ಇದೆ.  ಫೋಬಿಯಾ ಹೆಚ್ಚು ಸಂವೇದನಾಶೀಲ ವ್ಯಕ್ತಿಯನ್ನು ಬೇಗ ಸೆಳೆಯುತ್ತದೆ.

ಈ ಹಿಂದೆ ಮಹಿಳೆಯಿಂದ ಅವಮಾನಕ್ಕೆ ಒಳಪಟ್ಟಿದ್ದ ವ್ಯಕ್ತಿಗೆ ಈ ಸಮಸ್ಯೆ ಕಾಡೋದು ಹೆಚ್ಚು. ಒಬ್ಬ ಪುರುಷ, ಮಹಿಳೆ ತನ್ನನ್ನು ದುರ್ಬಲನೆಂದು ತಿಳಿದ್ರೆ, ಆಕೆ ದೃಷ್ಟಿಯಲ್ಲಿ ನಾನು ದುರ್ಬಲನಾದ್ರೆ ಎಂಬ ಭಯಪಡುತ್ತಾನೆ. ಇದೇ ಕಾರಣಕ್ಕೆ ಮಹಿಳೆ ಹಿಂದೆ ಹೋಗಲು ಹೆದರುತ್ತಾನೆ. ಬಾಲ್ಯದಿಂದಲೇ ಮಕ್ಕಳಲ್ಲಿ ಈ ಗೈನೋಫೋಬಿಯಾ ಕಾಡುತ್ತದೆ. ತಾಯಿಯಾದವಳು ಮಕ್ಕಳನ್ನು ಸದಾ ಗದರುತ್ತಿದ್ದರೆ ಆಗ ಮಹಿಳೆ ಮೇಲೆ ಆತನಿಗೆ ಭಯ ಶುರುವಾಗುತ್ತದೆ. ಇದೇ ದೊಡ್ಡವರಾದಂತೆ ಹೆಚ್ಚಾಗುತ್ತದೆ. ಗೈನೋಫೋಬಿಯಾದಿಂದ ಬಳಲುವವರಿಗೆ ಕೆಲ ಥೆರಪಿ ಇದೆ. ಇದ್ರ ಜೊತೆ ಆಪ್ತರ ಪ್ರೀತಿಯ ಅಗತ್ಯವಿರುತ್ತದೆ. 

Latest Videos
Follow Us:
Download App:
  • android
  • ios