Asianet Suvarna News Asianet Suvarna News

Spider Bites: ರಾತ್ರಿ ಸರಿಯಿದ್ದ ಖಾಸಗಿ ಅಂಗ ಬೆಳಗಾಗೋದ್ರಲ್ಲಿ ದೊಡ್ಡದಾಗಿತ್ತು..!

ರಾತ್ರಿ ಮಲಗಿದಾಗ ಸರಿಯಾಗಿದ್ದ ದೇಹದ ಯಾವುದೋ ಅಂಗ ಬೆಳಗ್ಗೆ ಎದ್ದಾಗ ದೊಡ್ಡದಾದ್ರೆ ಭಯ ಆಗೋದು ಸಾಮಾನ್ಯ. ಅದರಲ್ಲೂ ಖಾಸಗಿ ಅಂಗ(Private part),ಇದ್ದಕ್ಕಿದ್ದ ಹಾಗೆ ಊದಿಕೊಂಡರೆ ಏನಾಗಬೇಡ ಹೇಳಿ? ಪಾಪ, ಯುಕೆ ವ್ಯಕ್ತಿ ಸ್ಥಿತಿ ಏನು ಅನ್ನೋದನ್ನ ನೀವೆ ಓದಿ.

What happens if Spider bites private part
Author
Bangalore, First Published Dec 13, 2021, 1:29 PM IST

ಪ್ರತಿಯೊಬ್ಬರ ಮನೆಯಲ್ಲೂ ಜೇಡ (spider)ದ ಬಲೆ ಕಟ್ಟುವುದು ಸಾಮಾನ್ಯ. ಅರೆ ಕ್ಷಣದಲ್ಲಿ ಬಲೆ ಕಟ್ಟುವ ಜೇಡವನ್ನು ಓಡಿಸುವುದು ಸುಲಭವಲ್ಲ. ಜೇಡದ ಬಲೆ ಜೊತೆ ಜೇಡವನ್ನು ನಿರ್ಲಕ್ಷ್ಯಿ(ignore )ಸುವುದು ಒಳ್ಳೆಯದಲ್ಲ. ಜೇಡ ಕಚ್ಚುವುದು ಅಪರೂಪ. ಜೇಡ ಕೆಣಕಿದರೆ ಮಾತ್ರ ಉಗ್ರವಾಗುತ್ತದೆ. ತಾನಾಗಿಯೇ ಕಚ್ಚುವುದು ಬಹಳ ಕಡಿಮೆ.  ಜೇಡ ಕಚ್ಚಿ(bites)ದರೆ ಹೆಚ್ಚು ಅಪಾಯಕಾರಿಯಲ್ಲ. ಕೆಲವೊಂದು ಜೇಡಗಳು ಕಚ್ಚಿದರೆ ಮಾತ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸೂಕ್ತ ಚಿಕಿತ್ಸೆಯನ್ನು ಸರಿಯಾದ ಸಮಯದಲ್ಲಿ ಪಡೆಯದೇ ಹೋದಲ್ಲಿ ಸಮಸ್ಯೆ ಉಲ್ಬಣವಾಗುವ ಸಾಧ್ಯತೆಗಳಿವೆ. ಯುಕೆ(uk)ಯಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬನಿಗೂ ಜೇಡ ದುಸ್ವಪ್ನವಾಗಿದೆ.

ಭಾರತದಲ್ಲಿ ಮಾತ್ರವಲ್ಲ ಯುಕೆಯಲ್ಲಿ ಜೇಡ ಕಚ್ಚುವುದು ಅಪರೂಪವೇ. ಆದರೆ ಕೆಲವು ಸ್ಥಳೀಯ ಜೇಡಗಳು ಕಚ್ಚಿದರೆ ಸಹಿಸಲಾಗದಷ್ಟು ನೋವಾಗುತ್ತದೆ. ಸ್ಪೈಡರ್ ಕಡಿತದ ನಂತರ ಚರ್ಮ(Skin)ದ ಮೇಲೆ ಸಣ್ಣ ಪಂಕ್ಚರ್ ಗುರುತುಗಳನ್ನು ಬಿಡುತ್ತದೆ.ಇದು ನೋವುಂಟು ಮಾಡುತ್ತದೆ. ಕಚ್ಚಿದ ಜಾಗ ಕೆಂಪಾಗುತ್ತದೆ. ಊತವನ್ನುಂಟು ಮಾಡುತ್ತದೆ. ಕೆಲವರಿಗೆ ತಲೆಸುತ್ತು ಕಾಣಿಸಿಕೊಳ್ಳುತ್ತದೆ.

ರಾತ್ರೋರಾತ್ರಿ ಊದಿಕೊಂಡ ಖಾಸಗಿ ಅಂಗ :

ಜೇಡವೊಂದು ಯುಕೆ ವ್ಯಕ್ತಿಗೆ ದೊಡ್ಡ ಸಂಕಷ್ಟ ತಂದಿದೆ. ಜೇಡ ವ್ಯಕ್ತಿಯ ಖಾಸಗಿ ಭಾಗ (Private Part) ವನ್ನು ಕಚ್ಚಿದೆ. ಇದರಿಂದಾಗಿ ಖಾಸಗಿ ಅಂಗ ಊದಿಕೊಂಡು ಯಮ ನೋವಾಗಿದೆ. ಬೆಳಗ್ಗೆ ಎದ್ದಾಗ ತನ್ನ ಖಾಸಗಿ ಅಂಗವು ಸಾಮಾನ್ಯಕ್ಕಿಂತ ದೊಡ್ಡದಾಗಿತ್ತು ಎಂದು ವ್ಯಕ್ತಿ ಹೇಳಿದ್ದಾನೆ.  32 ವರ್ಷದ ಡೇನಿಯಲ್ ಬ್ಯಾರಿ((Carpenter Daniel Barry), ಯುಕೆ ಲೀಸೆಸ್ಟರ್‌( Leicester )ನಲ್ಲಿ ವಾಸಿಸುತ್ತಿದ್ದಾರೆ. ಕಾರ್ಪೆಂಟರ್‌ ಆಗಿ ಕೆಲಸ ಮಾಡುತ್ತಾನೆ. ರಾತ್ರಿ ಮಲಗಿದ್ದವನಿಗೆ ಬೆಳಿಗ್ಗೆ ಎಚ್ಚರವಾದಾಗ, ಅವನ ಖಾಸಗಿ ಭಾಗವು ಸಾಮಾನ್ಯಕ್ಕಿಂತ ದೊಡ್ಡದಾಗಿ ಕಾಣಿಸಿದೆ. ಆ ಸಮಯದಲ್ಲಿ ಅವನಿಗೆ ಏನೂ ಅರ್ಥವಾಗಲಿಲ್ಲ. ಆದರೆ ಕ್ರಮೇಣ ಅವನಲ್ಲಿ ಭಯಾನಕ ನೋವು ಪ್ರಾರಂಭವಾಗಿದೆ. 

ಗೂಗಲ್ ಸರ್ಚ್ ನಿಂದ ಮತ್ತಷ್ಟು ಯಡವಟ್ಟು :

ಡೇನಿಯಲ್ ಈ ಸಂದರ್ಭದಲ್ಲಿ ಎಲ್ಲರು ಮಾಡುವ ಸಾಮಾನ್ಯ ತಪ್ಪನ್ನು ಮಾಡಿದ್ದಾನೆ. ತಕ್ಷಣ ಗೂಗಲ್ (Google)ಸರ್ಚ್ ಹುಡುಕಾಡಿದ್ದಾನೆ. ಗೂಗಲ್ ನಲ್ಲಿ ಜೇಡ ಕಚ್ಚಿದ್ದಕ್ಕೆ ಸಾಕಷ್ಟು ಔಷಧಿ(Medicine)ಗಳನ್ನು ನಾವು ನೋಡಬಹುದು. ಡೇನಿಯಲ್ ಹುಡುಕಿದಾಗ,ಅದು ಒಂದು ವಾರದಲ್ಲಿ ಸರಿಹೋಗುತ್ತದೆ ಎಂಬ ಮಾಹಿತಿ ಸಿಕ್ಕಿದೆಯಂತೆ. ಗೂಗಲ್ ಸಂಪೂರ್ಣ ನಂಬಿದ ಡೇನಿಯಲ್,ನೋವಿನಲ್ಲಿಯೇ ಎರಡು ದಿನ ಕಳೆದಿದ್ದಾನೆ.

ಎರಡು ದಿನ ಕಳೆದರೂ ಜೇಡ ಕಚ್ಚಿದ ನೋವು ಸ್ವಲ್ಪವೂ ಕಡಿಮೆಯಾಗಲಿಲ್ಲ. ಖಾಸಗಿ ಅಂಗ ಊದಿಕೊಂಡಿದ್ದು ಇಳಿಯಲಿಲ್ಲ. ಇದರ ಜೊತೆಗೆ ಖಾಸಗಿ ಅಂಗದಲ್ಲಿ ಕೀವು ಕಾಣಿಸಿಕೊಂಡಿದೆ. ಡೇನಿಯಲ್ ತನ್ನ ಗೆಳತಿ ತಾಶ್ ಸಿಂಗ್ (Tash Singh) ಗೆ ವಿಷಯ ತಿಳಿಸಿದ್ದಾನೆ. ಆತನ ಸ್ಥಿತಿ ನೋಡಿದ ತಾಶ್, ವೈದ್ಯ(Doctor) ರ ಬಳಿಗೆ ಹೋಗಲು ಸಲಹೆ ನೀಡಿದ್ದಾಳೆ. ರಾತ್ರಿ ಮಲಗಿದ್ದಾಗ ಜೇಡವೊಂದು,ಡೇನಿಯಲ್ ಖಾಸಗಿ ಭಾಗಕ್ಕೆ ಕಚ್ಚಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯಕ್ಕೆ ವೈದ್ಯರು ಆ್ಯಂಟಿಬಯೋಟಿಕ್ ( Antibiotics) ನೀಡಿದ್ದಾರೆ. ಒಂದು ವಾರದ ಬಳಿಕವಷ್ಟೇ ಸಂಪೂರ್ಣ ಚಿತ್ರಣ ತಿಳಿಯಲಿದೆ ಎಂದು ಬ್ಯಾರಿ ಹೇಳಿದ್ದಾನೆ.

ಆನ್‌ಲೈನ್ ಪಾರ್ಸಲ್ ತೆಗೆದು ನೋಡಿದ ದಂಪತಿ ಹೌಹಾರಿದ್ದರು!

ಮೊದಲೇ ವೈದ್ಯರ ಬಳಿ ಹೋಗಿದ್ದರೆ… : 
ಬೆಳಿಗ್ಗೆ ಎದ್ದಾಗ ವಿಚಿತ್ರ ಅನುಭವವಾಗಿದೆ. ನನ್ನ ಖಾಸಗಿ ಅಂಗ ಇದ್ದಕ್ಕಿದ್ದಂತೆ ಊದಿಕೊಂಡಿದ್ದನ್ನು ನೋಡಿ ನಾನು ಮೊದಲು ಗೂಗಲ್ ಮಾಡಿದೆ.ಏಳು ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಬಂದ ಮಾಹಿತಿ ನೋಡಿ ಸುಮ್ಮನಾದೆ. ಆದರೆ ಎರಡು ದಿನಗಳ ನಂತರ ಪರಿಸ್ಥಿತಿ ಹದಗೆಟ್ಟಾಗ ನಾನು ವೈದ್ಯರ ಬಳಿಗೆ ಹೋದೆ. ಮೊದಲೇ ಹೊರಟಿದ್ದರೆ ಇಷ್ಟೊಂದು ಸಂಕಟ,ನೋವು ಆಗುತ್ತಿರಲಿಲ್ಲವೆಂದು ಡೇನಿಯಲ್ ಹೇಳಿದ್ದಾನೆ.

ಕಿವಿಯಲ್ಲಿ ಕಚಗುಳಿ: ಹೆಡ್‌ಫೋನ್ ಒಳಗಿತ್ತು ಡೆಡ್ಲಿ ಸ್ಪೈಡರ್..!

ನರವೈಫಲ್ಯಕ್ಕೆ ಕಾರಣವಾಯ್ತು ಜೇಡ :
ಹಿಂದೆ ಹೇಳಿದಂತೆ ಜೇಡರ ಹುಳ ಕಚ್ಚುತ್ತಿದ್ದಂತೆ ನಿರ್ಲಕ್ಷ್ಯ ಮಾಡಬಾರದು. 2014ರಲ್ಲಿ ಕಂದು ಬಣ್ಣದ ಜೇಡ ಕಚ್ಚಿ,ನರವೈಫಲ್ಯ ಕಾಣಿಸಿಕೊಂಡ ವರದಿಯಾಗಿತ್ತು.

Follow Us:
Download App:
  • android
  • ios