ಲಂಡನ್ (ನ.  22)   ಇ-ಕಾಮರ್ಸ್ ಕಂಪನಿಗಳು  ವಸ್ತುಗಳನ್ನು  ಮನೆಗೆ ಡಿಲೆವರಿ ಮಾಡುವುದರೊಂದಿಗೆ ಅಚ್ಚರಿಗಳನ್ನು ನೀಡುತ್ತವೆ. ಇಲ್ಲಿಯೂ ಅಂಥದ್ದೆ ಒಂದು ಘಟನೆ ಆಗಿದೆ.

ಮನೆಗೆ ಬಂದ  ಪಾರ್ಸಲ್ ತೆರೆದು ನೋಡಿದ ದಂಪತಿಗೆ ದೊಡ್ಡ ಶಾಕ್ ಕಾದಿತ್ತು. ತೆರೆದು ನೋಡಿದಾಗ ದೊಡ್ಡದೊಂದು ಜೇಡ ಹೊರಗೆ ಬಂತು! ಮಾರ್ಕ್ ಮತ್ತು ಗೆಮ್ಮಾ ಸ್ಮಿತ್ ಜೇಡನ ಕಂಡು ಹೌಹಾರಿದ್ದಾರೆ.  ಅವರು ಅಮೆಜಾನ್ ನಲ್ಲಿ  32.99  ಡಾಲರ್ ಮೌಲ್ಯದ ಕ್ರಿಸ್ ಮಸ್ ಲೈಟ್ ಆರ್ಡರ್ ಮಾಡಿದ್ದರು. ಆದರೆ ಜೇಡ ಬಂದಿದೆ!

ಹೆಡ್ ಪೋನ್ ಒಳಗೆ ಅಡಗಿ ಕುಳಿತಿದ್ದ ಜೇಡರಾಜ

ಅಸಲಿ ಕತೆ ಏನಂದ್ರೆ ಅವರು ಆರ್ಡರ್ ಮಾಡಿದ ಸ್ವಲ್ಪ ದಿನದಲ್ಲಿಯೇ ಪಾರ್ಸಲ್ ಬಂದಿದೆ. ದಂಪತಿ ಬ್ಯುಸಿ ಇದ್ದ ಕಾರಣ ಅದನ್ನು ತೆರೆದು  ನೋಡಿಲ್ಲ. ಮೂರು ದಿನ ಆದ ಮೇಲೆ ತೆರೆದು ನೋಡಿದಾಗ  ಜೇಡ ಹೊರಗೆ ಬಂದಿತ್ತು.  ಇನ್ನು ಜೇಡಗಳು ಒಳಗೆ ಇವೆಯೇನೋ ಎಂಬ ಭಯ ಕಾಡುತ್ತಿತ್ತು ಎಂದು ಸ್ಮಿತ್ ಹೇಳುತ್ತಾರೆ.

ಸಾಮಾನ್ಯವಾಗಿ ಈ ಜೇಡಗಳು ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಸೌತ್ ಅಮೆರಿಕಾದಲ್ಲಿ ಕಂಡುಬರುತ್ತವೆ. ಆದರೆ ಇಂಗ್ಲೆಂಡಿನಲ್ಲಿ ಕಂಡುಬಂದಿದ್ದು ಅಚ್ಚರಿ.