Asianet Suvarna News Asianet Suvarna News

Health Tips : ನೀರಲ್ಲಿ ಮಲ ತೇಲೋದೂ ಕ್ಯಾನ್ಸರ್ ಲಕ್ಷಣವೇ?

ಕೆಲವೊಂದು ವಿಷ್ಯಗಳ ಬಗ್ಗೆ ನಾವು ಗಮನ ನೀಡುವುದಿಲ್ಲ. ಅದ್ರಲ್ಲಿ ಮಲ ಕೂಡ ಒಂದು. ಬಂದಾಗ ಹೋಗಿ ಬರ್ತೇವೆ ಬಿಟ್ಟರೆ ಅದ್ರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಮಲವೂ ನಿಮ್ಮ ಆರೋಗ್ಯದ ಏರುಪೇರನ್ನು ಹೇಳುತ್ತೆ. 
 

What Causes Your Poop To Float How To Preventing It When To Call Doctor
Author
Bangalore, First Published Feb 11, 2022, 4:55 PM IST

ನಮ್ಮ ದೇಹ (Body) ದಲ್ಲಾಗುವ ಅನೇಕ ಬದಲಾವಣೆಗಳು ನಮಗೆ ಅನಾರೋಗ್ಯ (Illness)ದ ಮುನ್ಸೂಚನೆ ನೀಡುತ್ತವೆ. ಅದ್ರಲ್ಲಿ ಮಲ (poop ) ಕೂಡ ಒಂದು. ಯಸ್. ನೀವು ನಂಬಲೇಬೇಕು. ನಿಮ್ಮ ಮಲ ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ. ಮಲ ಸಾಮಾನ್ಯವಾಗಿ ನೀರಿನಲ್ಲಿ ಮುಳುಗುತ್ತದೆ. ಆದರೆ ನಿಮ್ಮ ಆಹಾರ ಮತ್ತು ಇತರ ಕಾರಣಗಳಿಂದ ಮಲದ ರಚನೆಯಲ್ಲಿ ಬದಲಾವಣೆಯಾಗುತ್ತದೆ. ಇದರಿಂದಾಗಿ ಮಲವು ಮುಳುಗುವ ಬದಲು ತೇಲುತ್ತದೆ. ಇದ್ರ ಬಗ್ಗೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಗ್ಯಾಸ್, ಆಹಾರದಲ್ಲಿನ ಬದಲಾವಣೆಗಳು ಮತ್ತು ಸಣ್ಣ ಸೋಂಕುಗಳು ಇದಕ್ಕೆ ಕಾರಣವಾಗುತ್ತದೆ. ಅಪರೂಪಕ್ಕೆ ಕೆಲ ರೋಗದ ಲಕ್ಷಣಗಳಲ್ಲಿ ಇದೂ ಒಂದು ಎನ್ನಬಹುದು. ವಿಶೇಷವಾಗಿ ನಿಮ್ಮ ಜೀವನಶೈಲಿ ಮತ್ತು ಆಹಾರದಲ್ಲಿ ಬದಲಾವಣೆ ಮಾಡಿದ್ರೆ ಇದ್ರಿಂದ ಹೊರ ಬರಬಹುದು. ಆಗ ಯಾವುದೇ ಚಿಕಿತ್ಸೆ ಅಗತ್ಯವಿರುವುದಿಲ್ಲ.  ಹಾಗಾದರೆ ತೇಲುವ ಮಲಕ್ಕೆ ಕಾರಣವೇನು, ಅದರ ಚಿಕಿತ್ಸೆ ಮತ್ತು ಅದನ್ನು ತಡೆಯುವುದು ಹೇಗೆ ಎಂಬುದನ್ನು ಹೇಳ್ತೆವೆ. ತೇಲುವ ಮಲಕ್ಕೆ ಕಾರಣ : ಇದಕ್ಕೆ ಎರಡು ಕಾರಣಗಳಿವೆ. 

ಲ್ಯಾಕ್ಟೋಸ್ ಇನ್ಟಾಲರನ್ಸ್ : ಡೈರಿ ಉತ್ಪನ್ನಗಳನ್ನು ತಿನ್ನುವಾಗ ಅಥವಾ ಕುಡಿಯುವಾಗ ಲ್ಯಾಕ್ಟೋಸ್ ಇನ್ಟಾಲರನ್ಸ್ ಹೊಂದಿರುವ ಜನರಲ್ಲಿ ಮಲ ತೇಲುವ ಸಾಧ್ಯತೆಯಿರುತ್ತದೆ. 

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ : ತೇಲುವ ಮಲವು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು ಎಂದು ಅಮೇರಿಕನ್ ಕ್ಯಾನ್ಸರ್ ಸೊಸೈಟಿ ಹೇಳುತ್ತದೆ. 

ಗ್ಯಾಸ್ : ಕೆಲವು ಆಹಾರಗಳು ನಿಮ್ಮ ಮಲದಲ್ಲಿ ಗ್ಯಾಸ್ ಉಂಟುಮಾಡಬಹುದು. ಸಾಮಾನ್ಯವಾಗಿ ಗ್ಯಾಸ್ ಉಂಟುಮಾಡುವ ಆಹಾರಗಳು ಹೆಚ್ಚಿನ ಪ್ರಮಾಣದ ಸಕ್ಕರೆ, ಲ್ಯಾಕ್ಟೋಸ್, ಪಿಷ್ಟ ಅಥವಾ ಫೈಬರ್  ಹೊಂದಿರುತ್ತವೆ. ಈ ಆಹಾರಗಳಲ್ಲಿ ಹಾಲು, ದ್ವಿದಳ ಧಾನ್ಯಗಳು, ಎಲೆಕೋಸು, ಸೇಬು  ಇತ್ಯಾದಿ ಸೇರಿವೆ.

ಹೊಟ್ಟೆಯ ಸೋಂಕು : ಮಲ ತೇಲಲು ಸಾಮಾನ್ಯ ಕಾರಣವೆಂದರೆ ಜೀರ್ಣಾಂಗವ್ಯೂಹದ ಸೋಂಕು. ಸಾಮಾನ್ಯವಾಗಿ ಈ ಸೋಂಕು ಯಾವುದೇ ಚಿಕಿತ್ಸೆಯಿಲ್ಲದೆ ಹೋಗುತ್ತದೆ.

ಕೊಬ್ಬಿನ ಆಹಾರ : ಮಲವು ತುಂಬಾ ಕೊಬ್ಬಾದಾಗ  ಅದು ತೇಲುತ್ತದೆ. ನಿಮ್ಮ ದೇಹವು ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳದಿದ್ದರೆ ಈ ಸಮಸ್ಯೆ ಕಾಡುತ್ತದೆ.  ದೇಹವು ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗದಿದ್ದರೆ, ಮಲವು ವಾಸನೆ ಬರಲು ಶುರುವಾಗುತ್ತದೆ.

Chest Pain and Gastric: ಎದೆಯುರಿ ಉಪಶಮನಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ

ತೇಲುವ ಮಲಕ್ಕೆ ಮದ್ದು : 
ಇದನ್ನು ತಡೆಗಟ್ಟಲು ಉತ್ತಮ ಮಾರ್ಗವೆಂದರೆ ನೀವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡುವುದು. ಇತ್ತೀಚೆಗೆ ಯಾವ ಆಹಾರವನ್ನು ಸೇವಿಸಿದ್ದೀರಿ ಎಂದು ಮೊದಲು ತಿಳಿಯಿರಿ. ನಿಮ್ಮ ತೇಲುವ ಮಲಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ಇದು ನಿಮಗೆ ಸಹಾಯ ಮಾಡುತ್ತದೆ. ಒಮ್ಮೆ ನೀವು ಇವುಗಳನ್ನು ಪತ್ತೆ ಮಾಡಿದ್ರಿ ಅಂದ್ರೆ ಮತ್ತೆ ಅದನ್ನು ತಿನ್ನಲು ಹೋಗಬೇಡಿ.
ತೇಲುವ ಮಲವು ಆಹಾರ ಅಥವಾ ಜೀವನಶೈಲಿಯ ಬದಲಾವಣೆಗಳಿಂದ ಉಂಟಾಗಬಹುದು. ಹೊಟ್ಟೆಯ ಸೋಂಕು, ಉದರದ ಕಾಯಿಲೆಯಂತಹ ಪರಿಸ್ಥಿತಿಗಳಲ್ಲೂ ಇದು ಸಂಭವಿಸುತ್ತದೆ. ಇದ್ರ ಜೊತೆ ಮಲದಲ್ಲಿ ರಕ್ತ ಇದ್ದರೆ, ತಲೆತಿರುಗುವಿಕೆ, ತೂಕ ನಷ್ಟ,ಮೂತ್ರದ ಬಣ್ಣದಲ್ಲಿ ಬದಲಾವಣೆಯಾಗುತ್ತದೆ. ಅಂಥ ಸಂದರ್ಭದಲ್ಲಿ ನೀವು ವೈದ್ಯರನ್ನು ಭೇಟಿಯಾಗುವುದು ಒಳ್ಳೆಯದು.

Eye Health Care: ಕಣ್ಣಿಗೆ ಮೆಚ್ಚುವಂಥ ಆಹಾರ ತಿನ್ನಿ, ದೃಷ್ಟಿದೋಷಕ್ಕೆ ಬೈ ಹೇಳಿ

ತೇಲುವ ಮಲಕ್ಕೆ ಚಿಕಿತ್ಸೆ : ತೇಲುವ ಮಲದ ಕಾರಣವನ್ನು ಕಂಡುಹಿಡಿಯಲು, ನೀವು ಎಷ್ಟು ಸಮಯದವರೆಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂಬುದನ್ನು ವೈದ್ಯರಿಗೆ ಹೇಳಬೇಕು. ಅವರು ನಿಮ್ಮ ಆಹಾರ, ವೈದ್ಯಕೀಯ ಇತಿಹಾಸವನ್ನು ಕೇಳುತ್ತಾರೆ. ಅದರ ಆಧಾರದ ಮೇಲೆ  ವೈದ್ಯಕೀಯ ತೇಲುವ ಮಲದ ಕಾರಣವನ್ನು ಪತ್ತೆಹಚ್ಚುತ್ತಾರೆ. ವೈದ್ಯರು ಮಲ ಪರೀಕ್ಷೆಯನ್ನು ಶಿಫಾರಸು ಮಾಡಬಹುದು. ಅವರು ಬ್ಯಾಕ್ಟೀರಿಯಾದ ಸೋಂಕಿಗೆ ನಿಮಗೆ ಔಷಧಿ ನೀಡಬಹುದು. ಆಹಾರ ಬದಲಾವಣೆಗೂ ನಿಮಗೆ ಸೂಚನೆ ನೀಡಬಹುದು. 

Follow Us:
Download App:
  • android
  • ios