ಆತಂಕದಲ್ಲಿ ನಾನಾ ವಿಧಗಳಿವೆ. ನಿಮಗೆ ಕಾಡ್ತಿರೋದು ಮಾನಸಿಕ ಖಾಯಿಲೆ ಅಲ್ಲ ಅಂದ್ಕೊಂಡು ನಿರ್ಲಕ್ಷ ಮಾಡಿದ್ರೆ ಮುಂದೆ ದೊಡ್ಡ ಸಂಕಷ್ಟ ಎದುರಿಸಬೇಕಾಗುತ್ತೆ. ಮೊದಲು ಆತಂಕದ ವಿಧಾನ ತಿಳಿದು ಕೊನೆಗೆ ಚಿಕಿತ್ಸೆ ಪಡೆದುಕೊಳ್ಳ. 

ಜೀವನದಲ್ಲಿ ಆತಂಕ (anxiety) ಸಾಮಾನ್ಯ. ಪ್ರತಿಯೊಬ್ಬರೂ ಒಂದಲ್ಲ ಒಂದು ಕಾರಣಕ್ಕೆ ಅಥವಾ ವಯಸ್ಸಿಗೆ ಒತ್ತಡ ಅಥವಾ ಆತಂಕವನ್ನು ಎದುರಿಸ್ತಾರೆ. ಆರೋಗ್ಯ, ವೃತ್ತಿ, ಆರ್ಥಿಕ ಸ್ಥಿತಿ, ಕುಟುಂಬ ಮತ್ತು ಸಂಬಂಧದ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಜನರು ಚಿಂತೆಗೊಳಗಾಗ್ತಾರೆ. ಈ ಚಿಂತೆ ಸೀಮಿತ ಅವಧಿಯನ್ನು ಹೊಂದಿರುತ್ತದೆ. ಸಮಸ್ಯೆ ಬಗೆಹರಿಯತ್ತಿದ್ದಂತೆ ಇಲ್ಲ ಸ್ವಲ್ಪ ಸಮಯದ ನಂತ್ರ ಜನರು ಈ ಆತಂಕದಿಂದ ಹೊರಗೆ ಬರ್ತಾರೆ. ಹಾಗಾಗಿ ಈ ಆತಂಕದಿಂದ ಯಾವುದೇ ಭಯವಿಲ್ಲ. ಆದ್ರೆ ಎಲ್ಲ ಆತಂಕ ಮತ್ತು ಎಲ್ಲರೂ ಹೀಗಿರೋಕೆಸ ಸಾಧ್ಯವಿಲ್ಲ. ಕೆಲವರ ಆತಂಕ, ಒತ್ತರ ದೀರ್ಘಕಾಲ ಕಾಡುತ್ತದೆ. ಆತಂಕದಿಂದ ಜನರು ದುರ್ಬಲಗೊಳ್ತಾರೆ. ಇಲ್ಲಿ ಸಮಸ್ಯೆಗಳು ಮನಸ್ಸಿನಿಂದ ಮರೆಯಾಗುವ ಬದಲು,ಸಮಯ ಕಳೆದಂತೆ ಪರಿಸ್ಥಿತಿ ಹದೆಡಲು ಶುರುವಾಗುತ್ತದೆ. ದೈನಂದಿನ ಕೆಲಸ ಮಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಕೆಲಸ, ಸಂಬಂಧ, ಕಾರ್ಯಕ್ಷಮತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಈ ಆತಂಕದಲ್ಲಿ ಸಾಕಷ್ಟು ವಿಧಾನವಿದೆ. ಸಾಮಾನ್ಯ ಆತಂಕ ಅಸ್ವಸ್ಥತೆ (GAD), ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) ಮತ್ತು ವಿವಿಧ ಫೋಬಿಯಾಗಳು ಸೇರಿದಂತೆ ಹಲವಾರು ರೀತಿಯ ಆತಂಕವನ್ನು ನಾವು ನೋಡ್ಬಹುದು.

ಸಾಮಾನ್ಯ ಆತಂಕದ ಅಸ್ವಸ್ಥತೆ GAD : ದೈನಂದಿನ ಜೀವನದ ಬಗ್ಗೆ ದೀರ್ಘಕಾಲ, ಉತ್ಪ್ರೇಕ್ಷಿತ ಚಿಂತೆಯಲ್ಲಿ ಜನರು ಇರ್ತಾರೆ. ನಿರಂತರ ಭಯ ಅವರನ್ನು ಕಾಡುತ್ತದೆ. ಈ ಚಿಂತೆಯು ಪ್ರತಿದಿನ ಕಾಡುವಂತಹದ್ದು. ಸಣ್ಣಪುಟ್ಟ ಮನೆ ಕೆಲಸವೂ ಅವರನ್ನು ಒತ್ತಡಕ್ಕೀಡು ಮಾಡುತ್ತದೆ. ವ್ಯಕ್ತಿಯ ಈ ಚಿಂತೆ ಆರು ತಿಂಗಳಿಗಿಂತ ಹೆಚ್ಚು ಕಾಡುತ್ತದೆ. ಇದ್ರಿಂದ ತಲೆನೋವು, ಉದ್ವೇಗ ಅಥವಾ ವಾಕರಿಕೆಯ ಅನುಭವವಾಗುತ್ತದೆ. ನಿರಂತರವಾಗಿ ಚಡಪಡಿಕೆ ಭಾವನೆ ಇರುತ್ತೆ. ಶಕ್ತಿ ಕಡಿಮೆಯಾಗುತ್ತದೆ., ಯಾವುದೇ ಕೆಲಸದಲ್ಲಿ ನಿಮ್ಮ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. ಜನರು ಕಿರಿಕಿರಿ ಅನುಭವಿಸುತ್ತಾರೆ. ನಿದ್ರಾಹೀನತೆಯಿಂದ ಬಳಲುತ್ತಾರೆ. ಸಮಸ್ಯೆ ಜಾಸ್ತಿಯಾಗಿದೆ, ಇದ್ರಿಂದ ನಿಮ್ಮ ದಿನಚರಿಯಲ್ಲಿ ಏರುಪೇರಾಗ್ತಿದೆ ಎಂಬುದು ನಮ್ಮ ಗಮನಕ್ಕೆ ಬಂದ ತಕ್ಷಣ ವೈದ್ಯರನ್ನು ಭೇಟಿಯಾಗಿ.

ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD) : ಒತ್ತಡದ ಇನ್ನೊಂದು ವಿಧಾನ ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ (OCD). ಇದೊಂದು ವಿಶಿಷ್ಟ ಅಸ್ವಸ್ಥತೆ. ಇದು ಹೆಚ್ಚಾಗಿ ಆತಂಕದ ಹಿಸ್ಟ್ರಿ ಅಥವಾ ಲಕ್ಷಣದ ಜೊತೆ ಸಂಬಂಧ ಹೊಂದಿದೆ. OCD ಯಿರುವ ಜನರು ತಮ್ಮ ಆಲೋಚನೆಗಳು ಮತ್ತು ನಡವಳಿಕೆಗೆ ಯಾವುದೇ ಅರ್ಥವಿಲ್ಲ ಎಂದು ತಿಳಿದಿದ್ರೂ ಅವನ್ನು ತಡೆಯಲು ಸಾಧ್ಯವಾಗೋದಿಲ್ಲ. ಇದು ಸಾಮಾನ್ಯವಾಗಿ ಬಾಲ್ಯ, ಹದಿಹರೆಯದಲ್ಲಿ ಶುರುವಾಗುತ್ತದೆ. ಮಹಿಳೆಗಿಂತ ಹೆಚ್ಚು ಪುರುಷರಿಗೆ ಇದು ಕಾಡುತ್ತದೆ. ಅತಿಯಾದ ಶುಚಿತ್ವ, ಪದೇ ಪದೇ ಕೈ ತೊಳೆಯುವುದು ಸೇರಿದಂತೆ ಮಾಲಿನ್ಯದ ಭಯ, ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಜೋಡಿಸಬೇಕೆಂಬ ನಿಯಮ, ಆಗಾಗ ವಸ್ತುಗಳನ್ನು ಪರಿಶೀಲಿಸುವುದು, ಕೀ ಪರಿಶೀಲನೆ ಸೇರಿದಂತೆ ಅನೇಕ ಲಕ್ಷಣವನ್ನು ಇದು ಹೊಂದಿದೆ. ಇದು ಕೂಡ ದೈನಂದಿನ ಜೀವನವನ್ನು ಹಾಳು ಮಾಡುತ್ತದೆ. ಇತರರ ಜೊತೆ ಬೆರೆತು ಕೆಲಸ ಮಾಡುವುದನ್ನು ತಡೆಯುತ್ತದೆ. ಇದಕ್ಕೆ ಚಿಕಿತ್ಸೆ ಬಹಳ ಮುಖ್ಯ. ಸ್ವಯಂ ಆರೈಕೆ, ಬೆಂಬಲ, ಔಷಧಿ ಹಾಘೂ ನೈತಿಕ ಮತ್ತು ಭಾವನಾತ್ಮಕ ಬೆಂಬಲ ಇಲ್ಲಿ ಅಗತ್ಯವಾಗುತ್ತದೆ.

ಫೋಬಿಯಾ : ಫೋಬಿಯಾಗಳು ಮತ್ತೊಂದು ಸಾಮಾನ್ಯ ರೀತಿಯ ಆತಂಕದ ಅಸ್ವಸ್ಥತೆಯಾಗಿದೆ. ವ್ಯಕ್ತಿಗಳು ಯಾವುದೋ ನಿರ್ದಿಷ್ಟ ವಸ್ತು, ಸ್ಥಳದ ಬಗ್ಗೆ ಆತಂಕ ಹೊಂದಿರುತ್ತಾರೆ. ಕೆಲವರಿಗೆ ಮೇಲೆ ಹಾರುವ ಭಯ ಇರುತ್ತದೆ. ಎತ್ತರದಲ್ಲಿ ನಿಲ್ಲಲು ಕೆಲವರು ಇಷ್ಟಪಡುವುದಿಲ್ಲ. ರಕ್ತ ಕಂಡ್ರೆ ಕೆಲವರು ಹೆದರುತ್ತಾರೆ ಮತ್ತೆ ಕೆಲವರಿಗೆ ಲಿಫ್ಟ್ ಆತಂಕಕ್ಕೆ ಕಾರಣವಾಗುತ್ತದೆ.