Copper bottles: ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯೋದರಿಂದ ಏನು ಲಾಭ ಗೊತ್ತೆ?
ನಮ್ಮ ಹಿಂದಿನವರು ತಾಮ್ರದ ತಂಬಿಗೆಯಲ್ಲಿ ನೀರು ಕುಡಿಯುತ್ತಿದ್ದುದನ್ನು ನೀವು ಗಮನಿಸಿರಬಹುದು? ಅದರಿಂದ ಇರೋ ಆರೋಗ್ಯ ಲಾಭವನ್ನು ತಿಳಿದುಕೊಳ್ಳೋಣ ಬನ್ನಿ.
ಇತ್ತೀಚೆಗೆ ತಾಮ್ರದ (Copper) ಬಾಟಲಿಯಲ್ಲಿ ನೀರು (water) ತುಂಬಿಟ್ಟುಕೊಳ್ಳುವುದು ಟ್ರೆಂಡ್ ಆಗಿದೆ. ಟ್ರೆಂಡ್ ಎಂಬ ಕಾರಣದಿಂದಲೇ ತುಂಬಾ ಜನ ಅದರಲ್ಲಿ ನೀರು ಕುಡಿಯುತ್ತಿದ್ದಾರೆ ಹೊರತು ಅದರ ಆರೋಗ್ಯಕರ ಗುಣಗಳನ್ನು ನಿಜವಾಗಿಯೂ ತಿಳಿದಿರುವುದಿಲ್ಲ. ಕೆಲವೊಮ್ಮೆ ಮಾರುಕಟ್ಟೆಯಲ್ಲಿ ತಾಮ್ರ ಎಂದು ಯಾಮಾರಿಸಿ ಕೋಟೆಡ್ ಪಾತ್ರೆಗಳನ್ನು ಕೊಟ್ಟುಬಿಡುತ್ತಾರೆ. ಅದರಲ್ಲಿ ನೀರು ಕುಡಿಯುವುದರಿಂದ ಆರೋಗ್ಯಲಾಭಕ್ಕಿಂತ ಹಾಣಿಯೇ ಅಧಿಕ. ಹಾಗಿದ್ದರೆ ನೀವು ಏನು ಮಾಡಬೇಕು? ಒಳ್ಳೆಯ ಬ್ರಾಂಡ್‌ನ ತಾಮ್ರದ ತಂಬಿಗೆಗಳನ್ನೇ ಖರೀದಿಸಿ. ಸಾಮಾನ್ಯವಾಗಿ ರಾತ್ರಿ ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿಸಿಟ್ಟು ಬೆಳಗ್ಗೆ ಕುಡಿಯುವುದು ತುಂಬಾ ಪ್ರಯೋಜನಕಾರಿ.
ಮಾನವನ ಉಗಮದಿಂದ ಅವನು ಬಳಸಿದ ಅನೇಕ ಸಾಮಗ್ರಿಗಳಲ್ಲಿ ತಾಮ್ರ ಕೂಡಾ ಒಂದು. ಶಿಲಾಯುಧಗಳನ್ನು ಬಳಸುತ್ತಿದ್ದ ಮಾನವ ನಂತರ ತಾಮ್ರವನ್ನು ಬಳಸಲು ಪ್ರಾರಂಭಿಸಿದ. ಆಯುರ್ವೇದದ ಅನೇಕ ಗ್ರಂಥಗಳು ಕೂಡಾ ತಾಮ್ರದ ಪಾತ್ರೆಗಳಲ್ಲಿ ನೀರನ್ನು ಶೇಖರಿಸಿಟ್ಟು ಸೇವಿಸುವ ಕುರಿತು ಉಲ್ಲೇಖಿಸಿದೆ. ಆಯುರ್ವೇದ (Ayurveda) ಪದ್ಧತಿ ಹಾಗೂ ಭಾರತೀಯ ವೈದ್ಯಕೀಯ ವ್ಯವಸ್ಥೆಯು ಪ್ರಚಲಿತಕ್ಕೆ ಬರುತ್ತಿದ್ದಂತೇ ಮನೆಗಳಲ್ಲಿ ತಾಮ್ರದಿಂದ ಮಾಡಿದ ಕಪ್, ಪಾತ್ರೆಗಳನ್ನು ಹೆಚ್ಚೆಚ್ಚು ಉಪಯೋಗಿಸತೊಡಗಿದರು. ಎಂಟು ಅಥವಾ ಹೆಚ್ಚು ಗಂಟೆಗಳ ಕಾಲ ತಾಮ್ರದ ಪಾತ್ರೆಗಳಲ್ಲಿ ಶೇಖರಿಸಿಟ್ಟ ನೀರು ಕುಡಿಯುವುದು ದೇಹಕ್ಕೆ ಅತ್ಯುತ್ತಮ. ತಾಮ್ರದಲ್ಲಿ ಆಂಟಿಆಕ್ಸಿಡೆಂಟ್ ಗುಣಗಳಿದೆ. ಅಮೇರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ತಾಮ್ರವು ಕ್ಯಾನ್ಸರ್ (Cancer) ಆಕ್ರಮಣವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳನ್ನು ಒಳಗೊಂಡಿದೆ. ವ್ಯಕ್ತಿಯ ಕಣ್ಣು (eye) ಹಾಗೂ ಚರ್ಮದ ಬಣ್ಣಕ್ಕೆ ಕಾರಣವಾಗುವ ಮೆಲನಿನ್ (Melanin) ಅಂಶಗಳ ಹೆಚ್ಚುವಿಕೆಗೆ ಆಗುತ್ತದೆ ಹಾಗೂ ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ.
Sex as exercise: ಸೆಕ್ಸ್ ಮಾಡಿದ್ರೆ ಬೇರೆ ವ್ಯಾಯಾಮ ಬೇಕಿಲ್ವಾ? ಏನು ಹೇಳ್ತಾರೆ ಎಕ್ಸ್‌ಪರ್ಟ್ಸ್?
ಯಾವ ವ್ಯಕ್ತಿಗಳಲ್ಲಿ ತಾಮ್ರದ ಅಂಶದ ಕೊರತೆ ಕಂಡುಬರುತ್ತದೆಯೋ ಅವರಲ್ಲಿ ಅತಿಯಾಗಿ ರಕ್ತದೊತ್ತಡವನ್ನು (Blood preasure) ಕಾಣಬಹುದು. ಹಾಗಾಗಿ ದೇಹದಲ್ಲಿನ ರಕ್ತದೊತ್ತಡವನ್ನು ಸುಸ್ಥಿಯಲ್ಲಿಡಲು ಒಂದಷ್ಟು ಪ್ರಮಾಣದ ಕಾಪರ್ ಮುಖ್ಯ. ಹಾಗಾಗಿ ಬಾಲ್ಯದಿಂದಲೇ ಇಂತಹ ಅಂಶಗಳನ್ನು ದೇಹಕ್ಕೆ ಸೇರಿಸಿದರೆ ಖಾಯಿಲೆಗಳಿಂದ ದೂರವಿರಬಹುದು.
ತಜ್ಞರ ಪ್ರಕಾರ ಥೈರಾಯ್ಡ್ (Thyroid) ಸಮಸ್ಯೆ ಕಂಡುಬರುವ ಅನೇಕರಲ್ಲಿ ತಾಮ್ರದ ಅಭಾವ ಕಂಡುಬರುತ್ತದೆ. ಹಾಗಾಗಿ ತಾಮ್ರದ ಬಳಕೆಯು ಇದರ ಸೂಕ್ತ ಕಾರ್ಯಕ್ಕೆ ಸಹಕಾರಿ. ಆದರೆ ಅತಿಯಾದ ಬಳಕೆಯೂ ಇಲ್ಲಿ ಮುಳುವಾಗಬಹುದು. ಹಾಗಾಗಿ ಸೂಕ್ತ ಪ್ರಮಾಣದ ಬಳಕೆ ಉತ್ತಮ. ರಕ್ತಹೀನತೆಯ ಸಮಸ್ಯೆಯಲ್ಲಿ, ಈ ಪಾತ್ರೆಯಲ್ಲಿ ಇಟ್ಟಿರುವ ಕುಡಿಯುವ ನೀರು ಪ್ರಯೋಜನಕಾರಿಯಾಗಿದೆ. ಕಬ್ಬಿಣ(Iron)ವನ್ನು ಹೀರಿಕೊಳ್ಳಲು ಸಹಾಯ ಮಾಡುವುದರಿಂದ ರಕ್ತಹೀನತೆಯನ್ನು (Anemia) ಎದುರಿಸಲು ಸಹಾಯ ಮಾಡುತ್ತದೆ.
Goat Milk : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸೋ ಮೇಕೆ ಹಾಲು
ದೇಹವು ನೋವು, ಸೆಳೆತ ಮತ್ತು ಊತದ ಸಮಸ್ಯೆಗಳಿಂದ ಬಳಲುತ್ತಿದ್ದಲ್ಲಿ ತಾಮ್ರವು ಅದರಿಂದ ದೂರವಿಡುತ್ತದೆ. ಸಂಧಿವಾತದ (Arthritis) ಸಮಸ್ಯೆಯನ್ನು ನಿಭಾಯಿಸುವಲ್ಲಿ ತಾಮ್ರದ ನೀರು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮೂಳೆಗಳ ಬಲವರ್ಧನೆಗೆ ಕೂಡಾ ಸಹಕಾರಿ. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಚರ್ಮದ ಗುಳ್ಳೆಗಳನ್ನು ಮತ್ತು ಇತರ ಚರ್ಮದ ಕಾಯಿಲೆಗಳನ್ನು ತಡೆಯಬಹುದು ಮತ್ತು ನಿಮ್ಮ ಚರ್ಮವು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ.
ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಬೆಳಿಗ್ಗೆ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದಲ್ಲದೆ, ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಇದು ಅತ್ಯಂತ ಸಹಾಯಕವಾಗಿದೆ. ಹೊಟ್ಟೆಹುಣ್ಣು, ಅಜೀರ್ಣ, ಸೋಂಕು, ಹೊಟ್ಟೆ ನೋವು, ಗ್ಯಾಸ್, ಆಸಿಡಿಟಿ (Acidity) ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ. ದೇಹದಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿದ್ದಲ್ಲಿ ಅದನ್ನು ಕರಗಿಸುವಲ್ಲಿ ತಾಮ್ರವು ಸಹಕಾರಿ. ನಿಯಮಿತವಾದ ಬಳಕೆ ಅಗತ್ಯ.
ಶುದ್ಧ ತಾಮ್ರದಿಂದ ಮಾಡಿದ ಪಾತ್ರೆ ಅಥವಾ ಬಾಟಲ್‌ಗಳನ್ನು ಮಾತ್ರ ಖರೀದಿಸಿ. ತಾಮ್ರದಲ್ಲಿ ಶೇಖರಿಸಿಟ್ಟ ನೀರನ್ನು ರೆಫ್ರಿಜರೇಟ್ ಮಾಡಬೇಡಿ. ಅತಿಯಾದರೆ ಅಮೃತವೂ ವಿಷ ಅನ್ನೋ ಮಾತಿನಂತೆ, ಅತಿಯಾದ ತಾಮ್ರದ ಅಂಶಗಳ ಒಳಸೇರುವಿಕೆ ದೇಹಕ್ಕೆ ಹಾನಿಯನ್ನೂ ಉಂಟುಮಾಡಬಹುದು. ದಿನಕ್ಕೆರಡು ಬಾರಿ ಮಾತ್ರ ತಾಮ್ರದ ಪಾತ್ರೆಯಲ್ಲಿ ಶೇಖರಿಸಿಟ್ಟ ನೀರನ್ನು ಸೇವಿಸಿದರೂ ದೇಹಕ್ಕೆ ಬೇಕಾದ ಅಂಶಗಳು ಧಾರಾಳವಾಗಿ ದೊರೆಯುತ್ತದೆ.
Skin Care: ಚಳಿಗಾಲದಲ್ಲಿ ಒಣ ಚರ್ಮದ ಕಿರಿಕಿರಿ ತಪ್ಪಿಸಲು ಇಲ್ಲಿವೆ ಟಿಪ್ಸ್