ಮಧ್ಯರಾತ್ರಿ ಸ್ನ್ಯಾಕ್ಸ್ ತಿನ್ನೋ ಕ್ರೇವಿಂಗ್ ಹಲವರಿಗೆ, ಹಸಿವು ಅಂತ ತಿಂದ್ರೆ ತೂಕ ಹೆಚ್ಚೋದು ಗ್ಯಾರಂಟಿ!
ತಡರಾತ್ರಿಯವರೆಗೂ ಎಚ್ಚರವಾಗಿರೋದು ಈಗ ಮಾಮೂಲಿ. ಗಂಟೆ ಹನ್ನೆರಡಾದ್ರೂ ಅನೇಕರು ಟಿವಿ ನೋಡ್ತಿರುತ್ತಾರೆ. ಈ ಸಮಯದಲ್ಲಿ ಹಸಿವಿನ ಅನುಭವವಾಗುತ್ತೆ. ಪ್ರತಿ ದಿನ ಡಬ್ಬದಲ್ಲಿರುವ ಸ್ನ್ಯಾಕ್ಸ್ ಖಾಲಿ ಆಗುತ್ತೆ. ಇದ್ರಿಂದ ಕೊನೆಯಲ್ಲಿ ಏನಾಗುತ್ತೆ ಗೊತ್ತಾ?
ರಾತ್ರಿ ಊಟ ಮುಗಿದು ಇನ್ನೇನು ಮಲಗಲು ಹೋಗ್ಬೇಕು ಎನ್ನುವ ಸಮಯದಲ್ಲಿ ಅನೇಕರಿಗೆ ಹಸಿವು ಶುರುವಾಗುತ್ತದೆ. ಮತ್ತೆ ಅನ್ನ, ರೊಟ್ಟಿ ತಿನ್ನುವ ಹಸಿವು ಇದಲ್ಲ. ಟಿವಿ ನೋಡ್ತಾ ಇಲ್ಲದೆ ಮೊಬೈಲ್ ನೋಡ್ತಾ ಟೈಂ ಪಾಸಿಗೆ ತಿನ್ನಬಹುದಾದ ಕುರುಕಲು ತಿಂಡಿಗಳು ಅವರಿಗೆ ಬೇಕು ಎನ್ನಿಸುತ್ತದೆ. ರಾತ್ರಿ ಲಘು ಆಹಾರವನ್ನು ಇಷ್ಟಪಡುವ ಅನೇಕರಿದ್ದಾರೆ. ಚಿಪ್ಸ್, ಐಸ್ ಕ್ರೀಂ, ಇನ್ ಸ್ಟಂಟ್ ನೂಡಲ್ಸ್ ಸೇರಿದಂತೆ ಲಘು ಆಹಾರ ತಿನ್ನುತ್ತಾರೆ. ಇನ್ನು ಕೆಲವರು ಮಧ್ಯರಾತ್ರಿ ಎಚ್ಚರವಾದಾಗ ಬಂದು ಅಡುಗೆ ಮನೆ ತಡಕಾಡಿ, ಅಲ್ಪಸ್ವಲ್ಪ ತಿಂದು ಹೋಗೋರಿದ್ದಾರೆ. ತಡರಾತ್ರಿ ಸೇವನೆ ಮಾಡುವ ಲಘು ಆಹಾರ ನಿಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
2021 ರಲ್ಲಿ ಇಂಟರ್ನ್ಯಾಷನಲ್ ಫುಡ್ ಇನ್ಫರ್ಮೇಷನ್ ಕೌನ್ಸಿಲ್ ಈ ಬಗ್ಗೆ ಸಮೀಕ್ಷೆ ಕೂಡ ನಡೆಸಿತ್ತು. ಈ ಸಮೀಕ್ಷೆ ಪ್ರಕಾರ ಶೇಕಡಾ 60ರಷ್ಟು ಅಮೇರಿಕನ್ ವಯಸ್ಕರು ರಾತ್ರಿ 8 ಗಂಟೆಯ ನಂತರ ಲಘು (Light) ತಿಂಡಿ ತಿನ್ನುವುದನ್ನು ಇಷ್ಟಪಡೋದಾಗಿ ಹೇಳಿದ್ದಾರೆ.
ಮೂಲಂಗಿ ತಿಂದ ಬಳಿಕ ಈ 4 ಆಹಾರ ಸೇವಿಸಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ!
ರಾತ್ರಿ (Night) ಊಟದ ನಂತರ ಅಥವಾ ಮಲಗುವ ಮುನ್ನ ನೀವು ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದನ್ನು ಲೇಟ್ ನೈಟ್ ಸ್ನ್ಯಾಕಿಂಗ್ (Snacking) ಎಂದು ಕರೆಯಲಾಗುತ್ತದೆ. ಈ ಕಡುಬಯಕೆಗಳನ್ನು ನಿಗ್ರಹಿಸುವುದು ಕಷ್ಟ. ಹಸಿವು, ಅಭ್ಯಾಸ, ಬೇಸರ, ಒತ್ತಡ ಅಥವಾ ಮಲಗುವ ಮುನ್ನ ವಿಶ್ರಾಂತಿ ಪಡೆಯುವುದು ಸೇರಿದಂತೆ ಹಲವು ಕಾರಣಗಳಿಂದ ನಿಮಗೆ ಈ ಹವ್ಯಾಸ ರೂಢಿಯಾಗಿರುತ್ತದೆ. ಈ ರಾತ್ರಿ ಸೇವನೆ ಮಾಡುವ ಲಘು ಆಹಾರ ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಗುಣಮಟ್ಟ, ಪ್ರಮಾಣ ಮತ್ತು ಸಮಯದ ಮೇಲೆ ನಿರ್ಧರಿಸಬಹುದು.
ತಡರಾತ್ರಿ ಲಘು ಆಹಾರ ಸೇವನೆಯಿಂದ ಆಗುವ ಲಾಭ : ನೀವು ಹಗಲಿನಲ್ಲಿ ಆಹಾರ ಸೇವನೆಯನ್ನು ತಪ್ಪಿಸಿಕೊಂಡಿದ್ದರೆ ತಡರಾತ್ರಿಯ ತಿಂಡಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಹಸಿವನ್ನು ನೀಗಿಸಲು ಮತ್ತು ನಿಮ್ಮ ದೇಹವನ್ನು ಜೀವಸತ್ವಗಳು ಮತ್ತು ಖನಿಜಗಳಿಂದ ಪೋಷಿಸಲು ಇವು ಸಹಾಯ ಮಾಡುತ್ತವೆ. ಆದ್ರೆ ನೀವು ಚಿಪ್ಸ್, ಫಾಸ್ಟ್ ಫುಡ್, ಸಂಸ್ಕರಿಸಿದ ಆಹಾರದ ಬದಲು ಹಣ್ಣು, ಧಾನ್ಯ,ಡ್ರೈ ಫ್ರೂಟ್ಸ್ ಸೇರಿದಂತೆ ಪೌಷ್ಠಿಕತೆ ಇರುವ ಆಹಾರ ಸೇವನೆ ಮಾಡಿದಾಗ ಮಾತ್ರ ಇದ್ರ ಲಾಭ ಸಿಗುತ್ತದೆ. ಮಲಗುವ ಮುನ್ನ ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ತಿನ್ನುವುದು ವಿಶ್ರಾಂತಿ ಮತ್ತು ಚೇತರಿಕೆಗೆ ಸಹಾಯ ಮಾಡುತ್ತದೆ. ಮಲಗುವ ಮುನ್ನ ಲಘುವಾದ ಆಹಾರ ಹಸಿವಿನಿಂದ ರಾತ್ರಿಯಲ್ಲಿ ಎಚ್ಚರಗೊಳ್ಳುವುದನ್ನು ತಡೆಯುವ ಮೂಲಕ ಉತ್ತಮ ನಿದ್ರೆಯನ್ನು ಉತ್ತೇಜಿಸುತ್ತದೆ. ತಡರಾತ್ರಿಯಲ್ಲಿ ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ತಿನ್ನುವುದು ರಾತ್ರಿಯಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಮಧುಮೇಹ ಅಥವಾ ರಕ್ತದಲ್ಲಿನ ಸಕ್ಕರೆ ಮಟ್ಟಗಳ ಬಗ್ಗೆ ಕಾಳಜಿವಹಿಸುವ ಜನರಿಗೆ ಇದು ಒಳ್ಳೆಯದು.
ಬಾಯಲ್ಲೇ ಉಸಿರಾಡಿದರೆ ಕಾಡೋ ಅನಾರೋಗ್ಯ ಒಂದೆರಡಲ್ಲ, ಪರಿಹಾರವೇನು ಈ ಸಮಸ್ಯೆಗೆ?
ತಡರಾತ್ರಿ ಲಘು ಆಹಾರ ಸೇವನೆಯಿಂದಾಗುವ ನಷ್ಟ : ತಡರಾತ್ರಿಯ ಲಘು ಆಹಾರವು ನಿದ್ರೆಯ ಸಮಯದಲ್ಲಿ ಜಠರಗರುಳಿನ ಅಸ್ವಸ್ಥತೆಗೆ ಕಾರಣವಾಗಬಹುದು, ಉದಾಹರಣೆಗೆ ಅಜೀರ್ಣ, ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ನಿಮ್ಮನ್ನು ಕಾಡಬಹುದು. ಮಲಗುವ ಮೊದಲು ದೊಡ್ಡ ಅಥವಾ ಸಕ್ಕರೆಯ ತಿಂಡಿಗಳನ್ನು ಸೇವಿಸುವುದರಿಂದ ನಿಮ್ಮ ನಿದ್ರೆಗೆ ತೊಂದರೆ ಆಗ್ಬಹುದು. ತಡವಾದ ತಿಂಡಿಯು ತೂಕ ಹೆಚ್ಚಾಗಲು ಕಾರಣವಾಗಬಹುದು. ಬೇಸರ ಕಳೆಯಲು ಆಹಾರ ಸೇವನೆ ಮಾಡುವವರಿಗೆ ಇಷ್ಟು ಆಹಾರ ಸೇವನೆ ಮಾಡುತ್ತಿದ್ದೇವೆ ಎಂಬ ಪರಿವೆ ಇರೋದಿಲ್ಲ. ರಾತ್ರಿ ಲಘು ಆಹಾರ ಸೇವನೆ ಮಾಡುವವರು ಆಹಾರದ ಆಯ್ಕೆ ವೇಳೆ ಎಚ್ಚರಿಕೆವಹಿಸಬೇಕು. ಹಾಗೆಯೇ ಆಹಾರ ಸೇವನೆಗೆ ಮಿತಿ ಹೊಂದಿರಬೇಕು.