ಮೂಲಂಗಿ ತಿಂದ ಬಳಿಕ ಈ 4 ಆಹಾರ ಸೇವಿಸಿದ್ರೆ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ!
ಮೂಲಂಗಿ ಒಂದು ಅತ್ಯುತ್ತಮ ಆಹಾರ, ಅದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಮೂಲಂಗಿ ಜೊತೆ ಕೆಲ ಆಹಾರಗಳು ಹೊಟ್ಟೆ ಸೇರಿದರೆ ಅದರಿಂದ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ.
ಚಳಿಗಾಲ ಬಂತೆಂದರೆ ನಮಗೆ ಹೇರಳವಾಗಿ ಸಿಗುವ ಒಂದು ತರಕಾರಿ ಎಂದರೆ ಬಿಳಿ ಮೂಲಂಗಿ. ಮೂಲಂಗಿಯು ವಿಟಮಿನ್ ಎ, ಬಿ ಮತ್ತು ಸಿ, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಹಲವಾರು ಖನಿಜಗಳಿಂದ ಸಮೃದ್ಧವಾಗಿದೆ. ಜೀರ್ಣಕ್ರಿಯೆಗೆ ಉತ್ತಮ ತರಕಾರಿ ಎಂಬ ಕಾರಣಕ್ಕಾಗಿ ಅನೇಕ ಜನರು ಇದನ್ನು ಚಳಿಗಾಲದಲ್ಲಿ ಸೇವಿಸಲು ಇಷ್ಟಪಡುತ್ತಾರೆ.
ಅದರಲ್ಲೂ ಕಿಡ್ನಿಯಲ್ಲಿ ಕಲ್ಲಿರುವವರಿಗೆ ಮೂಲಂಗಿ ಸೇವನೆ ಉತ್ತಮವಾಗಿ ಕೆಲಸ ಮಾಡುತ್ತದೆ. ಮೂಲಂಗಿಯಲ್ಲಿ ಫಂಗಲ್ ಸೋಂಕು, ಮಧುಮೇಹವನ್ನು ತಡೆಯುವ ಪೋಷಕಾಂಶಗಳಿವೆ. ಅಧಿಕ ಬಿಪಿ, ಹೃದ್ರೋಗ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಮೂಲಂಗಿ ನಿಮ್ಮ ಕೊಬ್ಬನ್ನು ಕಡಿಮೆ ಮಾಡುತ್ತದೆ. ನಿಮಗೆ ಅಸಿಡಿಟಿ ಮತ್ತು ಹೊಟ್ಟೆ ಉಬ್ಬರಿಸುವಿಕೆಯ ಸಮಸ್ಯೆ ಇದ್ದರೆ ನೀವು ಖಾಲಿ ಹೊಟ್ಟೆಯಲ್ಲಿ ಮೂಲಂಗಿಯನ್ನು ತಿನ್ನಬೇಕು.
ಮೂಲಂಗಿ ಸಾಸಿವೆ, ಸಲಾಡ್, ಪಲ್ಯ, ಸಾಂಬಾರ್, ಕಡೆಗೆ ಉಪ್ಪಿನಕಾಯಿಯಾಗಿಯೂ ತನ್ನ ವಿಶೇಷ ರುಚಿಯನ್ನು ಉಳಿಸಿಕೊಂಡು ಬರುತ್ತದೆ. ಇದು ಬಹಳ ಪೌಷ್ಟಿಕ ಆಹಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ತರಕಾರಿಯನ್ನು ಸೇವಿಸುವಾಗ ಕೆಲವು ಆಹಾರ ಮತ್ತು ಪಾನೀಯಗಳನ್ನು ತಪ್ಪಿಸಬೇಕು, ಏಕೆಂದರೆ ಅವುಗಳ ಜೋಡಣೆಯು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
Milk
ಮೂಲಂಗಿಯೊಂದಿಗೆ ತಪ್ಪಿಸಬೇಕಾದ ಆಹಾರಗಳು
ಹಾಲು
ಮೂಲಂಗಿ ತಿಂದ ನಂತರ ಹಾಲು ಕುಡಿಯಬಾರದು. ಏಕೆಂದರೆ ಇವೆರಡೂ ವಿಭಿನ್ನ ಸ್ವಭಾವದವು. ಇದು ಆಸಿಡ್ ರಿಫ್ಲಕ್ಸ್‌ನಿಂದ ನಿಮ್ಮ ಹೊಟ್ಟೆಯಲ್ಲಿ ಅತಿಯಾದ ಆಮ್ಲೀಯತೆಯನ್ನು ಉಂಟು ಮಾಡಬಹುದು. ಮೂಲಂಗಿಯು ದೇಹದಲ್ಲಿ ಉಷ್ಣತೆಯನ್ನು ಉಂಟು ಮಾಡುತ್ತದೆ ಮತ್ತು ಅದನ್ನು ಹಾಲಿನೊಂದಿಗೆ ಸಂಯೋಜಿಸುವುದರಿಂದ ಎದೆಯುರಿ, ಆಸಿಡ್ ರಿಫ್ಲಕ್ಸ್ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಲು ಮತ್ತು ಮೂಲಂಗಿಯನ್ನು ಸೇವಿಸುವ ನಡುವೆ ಕನಿಷ್ಠ ಎರಡು ಗಂಟೆಗಳ ಕಾಲ ಕಾಯಲು ಸೂಚಿಸಲಾಗುತ್ತದೆ. ಅಂದ ಮೇಲೆ, ಮೂಲಂಗಿ ತಿಂದ ಬಳಿಕ ಕಾಫಿ, ಟೀ ಸೇವನೆ ಕೂಡಾ ಬೇಡ.
ಸೌತೆಕಾಯಿ
ಜನರು ಸೌತೆಕಾಯಿ ಮತ್ತು ಮೂಲಂಗಿಯ ಅತ್ಯುತ್ತಮ ಸಂಯೋಜನೆಯನ್ನು ಎಂಜಾಯ್ ಮಾಡುತ್ತಾರೆ. ಆದರೆ ಸೌತೆಕಾಯಿ ಮತ್ತು ಮೂಲಂಗಿಯನ್ನು ಒಟ್ಟಿಗೆ ತಿನ್ನಬಾರದು ಎಂದು ನಿಮಗೆ ತಿಳಿದಿದೆಯೇ? ಏಕೆಂದರೆ ಸೌತೆಕಾಯಿಯಲ್ಲಿ ಆಸ್ಕೋರ್ಬೇಟ್ ಇದೆ, ಇದು ವಿಟಮಿನ್ ಸಿ ಅನ್ನು ಹೀರಿಕೊಳ್ಳುತ್ತದೆ. ಈ ಕಾರಣಕ್ಕಾಗಿ, ಸೌತೆಕಾಯಿ ಮತ್ತು ಮೂಲಂಗಿಯನ್ನು ಒಟ್ಟಿಗೆ ತಿನ್ನಬಾರದು.
ಕಿತ್ತಳೆ ಹಣ್ಣು
ಮೂಲಂಗಿಯನ್ನು ತಿಂದ ನಂತರ ಕಿತ್ತಳೆ ತಿನ್ನಬಾರದು. ಈ ಎರಡರ ಸಂಯೋಜನೆ ನಿಮಗೆ ವಿಷದಂತೆ ವರ್ತಿಸುತ್ತದೆ. ಇದು ನಿಮ್ಮನ್ನು ಹೊಟ್ಟೆಯ ಸಮಸ್ಯೆಗಳ ರೋಗಿಯನ್ನಾಗಿ ಮಾಡುವುದಲ್ಲದೆ ಹೆಚ್ಚಿನ ಕಾಯಿಲೆಗಳನ್ನು ತರುತ್ತದೆ. ಏಕೆಂದರೆ ಇದು ಹೊಟ್ಟೆಗೆ ತೀವ್ರ ಹಾನಿಯನ್ನುಂಟು ಮಾಡುತ್ತದೆ.
ಹಾಗಲ ಕಾಯಿ
ನೀವು ಯಾವುದೇ ರೀತಿಯಲ್ಲಿ ಮೂಲಂಗಿ ಮತ್ತು ಹಾಗಲಕಾಯಿಯನ್ನು ಒಟ್ಟಿಗೆ ಸೇವಿಸುತ್ತಿದ್ದರೆ ಎಚ್ಚರದಿಂದಿರಿ. ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ವಾಸ್ತವವಾಗಿ, ಈ ಎರಡರಲ್ಲೂ ಕಂಡುಬರುವ ನೈಸರ್ಗಿಕ ಅಂಶಗಳು ಪರಸ್ಪರ ವರ್ತಿಸುವ ಮೂಲಕ ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು. ಇದು ನಿಮಗೆ ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು. ಅಲ್ಲದೆ, ಇದು ಹೃದಯಕ್ಕೆ ಮಾರಕವಾಗಿದೆ.
ಮೂಲಂಗಿಯನ್ನು ಈ ರೀತಿ ತಿನ್ನಬೇಕು
ನೀವು ಮೂಲಂಗಿಯನ್ನು ತಿನ್ನುವಾಗ, ಕಪ್ಪು ಉಪ್ಪು ಮತ್ತು ನಿಂಬೆಯೊಂದಿಗೆ ತಿನ್ನಿರಿ. ಹೀಗೆ ಸೇರಿಸುವಾಗ ಮೂಲಂಗಿಗೆ ಕಪ್ಪು ಉಪ್ಪನ್ನು ಹಾಕಬೇಡಿ, ಬದಲಿಗೆ ಉಪ್ಪಿನಲ್ಲಿ ನಿಂಬೆಹಣ್ಣು ರಸ ಬೆರೆಸಿ ನಂತರ ಮೂಲಂಗಿಯೊಂದಿಗೆ ತಿನ್ನಿರಿ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಏಕೆಂದರೆ ಮೂರೂ ಒಂದೇ ಸ್ವಭಾವದವು.