ತಮಿಳು ಚಿತ್ರರಂಗದ ಹಿರಿಯ ನಟ ವಿಜಯಕಾಂತ್ ಇನ್ನಿಲ್ಲ: ಕೋವಿಡ್‌ಗೆ ಬಲಿ

ತಮಿಳು ಚಿತ್ರರಂಗದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ಅವರು ಅಸೌಖ್ಯದಿಂದ ನಿಧನರಾಗಿದ್ದಾರೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.   ಕೋವಿಡ್ ನಂತರ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 
 

Veteran Tamil film actor DMDK founder Vijayakanth is no more a victim of Covid akb

ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ಅವರು ಅಸೌಖ್ಯದಿಂದ ನಿಧನರಾಗಿದ್ದಾರೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು  ಚೆನ್ನೈನ ಮಿಯೋಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.  ಕೋವಿಡ್ ನಂತರ ಅವರಿಗೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರಿಗೆ 71 ವರ್ಷ ವಯಸ್ಸಾಗಿತ್ತು.  150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ವಿಜಯಕಾಂತ್ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.

1952ರಲ್ಲಿ ಆಗಸ್ಟ್ 25 ರಂದು ಜನಿಸಿದ ವಿಜಯಕಾಂತ್ ಮೂಲ ಹೆಸರು ನಾರಾಯಣ ವಿಜಯರಾಜ ಅಲಗರಸ್ವಾಮಿ, ಮುಂದೆ ವಿಜಯಕಾಂತ್‌ ಹೆಸರಿನಿಂದಲೇ ಫೇಮಸ್ ಆಗಿದ್ದರು. 2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬರೀ ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ಕೆಲಸ ಮಾಡಿದ್ದರು.1979ರಲ್ಲಿ ತೆರೆಕಂಡ ಇನಿಕ್ಕುಂ ಇಳಮೈ ಸಿನಿಮಾದಲ್ಲಿ ಕಳನಾಯಕನ ಪಾತ್ರ ಮಾಡುವ ಮೂಲಕ ತಮಿಳು ಸಿನಿಮಾರಂಗಕ್ಕೆ ಕಾಲಿರಿಸಿದರು.

2005ರಲ್ಲಿ ದೇಸಿಯ ಮುರಪೊಕ್ಕು ದ್ರಾವಿಡ ಕಳಗಂ ಹೆಸರಿನ ತಮ್ಮದೇ ರಾಜಕೀಯ ಪಕ್ಷವನ್ನೂ ಸಹ ಸ್ಥಾಪಿಸಿ, ರಾಜಕೀಯಕ್ಕೆ ಧುಮುಕಿದ ವಿಜಯ್​ಕಾತ್ 2011ರಿಂದ 2016 ರ ವರೆಗೆ ತಮಿಳುನಾಡು ವಿಧಾನಸಭೆ ವಿರೋಧ ಪಕ್ಷ ನಾಯಕನಾಗಿಯೂ ಕೆಲಸ ಮಾಡಿದ್ದಾರೆ.

ಕೋವಿಡ್‌ ಸೋಂಕಿಗೆ ತುತ್ತಾದ ಹದಿಹರೆಯದವರಲ್ಲಿ ವಿಚಿತ್ರ ಪಾರ್ಶ್ವವಾಯುವಿನ ಅಪಾಯ!

ಕಳೆದ ಕೆಲ ವರ್ಷಗಳಿಂದಲೂ ಒಂದರ ಹಿಂದೊಂದು ಆರೋಗ್ಯ ಸಮಸ್ಯೆಗೆ ವಿಜಯ್​ಕಾಂತ್ ಗುರಿಯಾಗುತ್ತಲೇ ಇದ್ದರು. ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯೊಂದಕ್ಕೆ  ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದಾಗಿನಿಂದಲೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಜೊತೆಗೆ ಮಧುಮೇಹದಿಂದಲೂ ಬಳಲುತ್ತಿದ್ದರು. ಮಧುಮೇಹ ವಿಪರೀತವಾಗಿದ್ದರಿಂದ ಹಿಂದಿನ ವರ್ಷ ಅವರ ಮೂರು ಬೆರಳುಗಳನ್ನು ಕತ್ತರಿಸಲಾಗಿತ್ತು.

 

Latest Videos
Follow Us:
Download App:
  • android
  • ios