Asianet Suvarna News Asianet Suvarna News

ಎರಡೆರಡು ಗರ್ಭಕೋಶ ಇರೋ ಮಹಿಳೆಗೆ ಎರಡರಲ್ಲೂ ಕುಡಿಯೊಡಿಯುತ್ತಿದೆ ಕಂದಮ್ಮ!

ಈಗಿನ ಸ್ಥಿತಿಯಲ್ಲಿ ಇರುವ ಒಂದು ಗರ್ಭವನ್ನು ಉಳಿಸಿಕೊಳ್ಳುವುದಕ್ಕಾಗಿ ಅನೇಕರು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಇಲ್ಲೊಬ್ಬರು ಮಹಿಳೆ ಎರಡೆರಡು ಗರ್ಭಕೋಶವನ್ನು ಹೊಂದಿದ್ದು ಇದರ ಜೊತೆಗೆ ಎರಡರಲ್ಲೂ ಮಗುವನ್ನು ಹೊಂದುವ ಮೂಲಕ ಸ್ವತಃ ಅವರೇ ಅಚ್ಚರಿಗೆ ಕಾರಣರಾಗಿದ್ದಾರೆ. 

US woman have 2 Uteruses and become Pregnant In Both she already have 3 children akb
Author
First Published Nov 14, 2023, 4:08 PM IST

ನ್ಯೂಯಾರ್ಕ್‌: ಅಮೆರಿಕಾದ ಅಲ್ಬಾಮಾದ ಮಹಿಳೆಯೊಬ್ಬರೂ ಎರಡು ಗರ್ಭಕೋಶಗಳನ್ನು ಹೊಂದಿದ್ದು, ಎರಡರಲ್ಲೂ ಕಂದನನ್ನು ಹೊಂದಿದ್ದು, ವೈದ್ಯಕೀಯ ಅಚ್ಚರಿಗೆ ಕಾರಣರಾಗಿದ್ದಾರೆ. ಈಗಿನ ಕಾಲದಲ್ಲಿ ಗರ್ಭಕೋಶ ಸುಸ್ಥಿರವಾಗಿರುವುದೇ ಕಷ್ಟದ ವಿಚಾರ ಪ್ರಪಂಚದಾದ್ಯಂತ ಲಕ್ಷಾಂತರ ಹೆಣ್ಣು ಮಕ್ಕಳು ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಇರುವ ಒಂದು ಗರ್ಭವನ್ನು ಉಳಿಸಿಕೊಳ್ಳುವುದಕ್ಕಾಗಿ ಅನೇಕರು ಕಷ್ಟಪಡುತ್ತಿದ್ದಾರೆ. ಹೀಗಿರುವಾಗ ಇಲ್ಲೊಬ್ಬರು ಮಹಿಳೆ ಎರಡೆರಡು ಗರ್ಭಕೋಶವನ್ನು ಹೊಂದಿದ್ದು ಇದರ ಜೊತೆಗೆ ಎರಡರಲ್ಲೂ ಮಗುವನ್ನು ಹೊಂದುವ ಮೂಲಕ ಸ್ವತಃ ಅವರೇ ಅಚ್ಚರಿಗೆ ಕಾರಣರಾಗಿದ್ದಾರೆ. 

ಈಗ ಎರಡು ಮಕ್ಕಳಿಗೆ ಗರ್ಭವತಿಯಾಗಿರುವ ಮಹಿಳೆಗೆ ಈಗಾಗಲೇ 7 , 4 ಹಾಗೂ 2 ವರ್ಷ ಪ್ರಾಯದ ಮೂರು ಮಕ್ಕಳಿದ್ದು, ವೈದ್ಯರ ಬಾಯಿಯಿಂದ ಬಂದ ಈ ಎರಡು ಗರ್ಭಕೋಶದ ಮಾತು ಕೇಳಿ ಅಚ್ಚರಿಯ ಜೊತೆ ನಂಬಲಾಗದಂತಹ ಸ್ಥಿತಿಯಲ್ಲಿದ್ದಾರೆ. 32 ವರ್ಷದ ಕೆಲ್ಸಿ ಹ್ಯಾಚರ್‌ ಎಂಬುವವರೇ ಈ ರೀತಿ ವಿರಳವಾದ ಎರಡು ಗರ್ಭಕೋಶಗಳನ್ನು ಹೊಂದಿರುವ ಮಹಿಳೆ.

ಹೃದ್ರೋಗಿಗಳಿಗೆ ಕಳಪೆ ಪೇಸ್‌ಮೇಕರ್‌ ಅಳವಡಿಕೆ : 200 ರೋಗಿಗಳ ಸಾವು ಶಂಕೆ: ವೈದ್ಯನ ಬಂಧನ

ಈ ಸ್ಥಿತಿಯನ್ನು ಯುಟೆರಿನ್‌ ಡಿಡೆಲ್ಫಿಸ್ ಎಂದು ಕರೆಯಲಾಗುತ್ತದೆ. ಈ ಸ್ಥಿತಿಯಲ್ಲಿರುವ ಕೆಲ್ಸಿ ಅವರು ಇಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದು, ಅವರ ಒಂದೊಂದು ಗರ್ಭದಲ್ಲಿದ್ದು, ಒಂದೊಂದು ಮಗುವಿದೆ. ಈ ಅಚ್ಚರಿಯ ಪ್ರಕರಣವೂ ಇವರಿಗೆ 8ನೇ ವಾರದ ಅಲ್ಟ್ರಸೌಂಡ್ ಸ್ಕ್ಯಾನಿಂಗ್ ವೇಳೆ ಕಂಡು ಬಂದಿದ್ದು, ಇದು ಕೆಲ್ಸಿ ಹಾಗೂ ಆಕೆಯ ಪತಿ ಕ್ಯಾಲೆಬ್ ಇಬ್ಬರನ್ನು ಶಾಕ್‌ಗೊಳಗಾಗುವಂತೆ ಮಾಡಿತ್ತು. ಈಗಾಗಲೇ ಮೂರು ಮಕ್ಕಳ ಪೋಷಕರಾಗಿರುವ ಈ ದಂಪತಿ ವೈದ್ಯರ ಈ ಹೇಳಿಕೆಯನ್ನು ನಂಬಲು ಕಷ್ಟಪಡುತ್ತಿದ್ದರು. ಕೆಲ್ಸಿ ಅವರು ಕ್ರಿಸ್‌ಮಸ್ ದಿನ ಇಬ್ಬರು ಮಕ್ಕಳಿಗೆ ಜನ್ಮ ನೀಡಲಿದ್ದಾರೆ. 

ಗರ್ಭಾಶಯದ ಡಿಡೆಲ್ಫಿಸ್  (Uterine didelphys) ಎಂದರೆ ಮಹಿಳೆಯು ಎರಡು ಗರ್ಭಾಶಯ ಮತ್ತು ಎರಡು ಗರ್ಭಕಂಠಗಳೊಂದಿಗೆ ಜನಿಸುವ ಸ್ಥಿತಿಯಾಗಿದೆ. ಇದು ಅತ್ಯಂತ ಅಪರೂಪದ ಪ್ರಕರಣವಾಗಿದೆ. ಸ್ವತಃ ಬರ್ಮಿಂಗ್ಹ್ಯಾಮ್‌ನ ಅಲಬಾಮಾ (Alabama VV) ವಿಶ್ವವಿದ್ಯಾನಿಲಯದ ತಜ್ಞರು ಹೇಳುವ ಪ್ರಕಾರ, ಮಹಿಳೆಯು ಎರಡು ಗರ್ಭಾಶಯ ಮತ್ತು ಎರಡು ಗರ್ಭಕಂಠಗಳೊಂದಿಗೆ ಜನಿಸುವ ಸ್ಥಿತಿಯು ಸ್ವತಃ ಅಪರೂಪವಾಗಿದೆ. ಬರ್ಮಿಂಗ್‌ ಹ್ಯಾಮ್‌ನ ಮಹಿಳಾ ಮತ್ತು ಶಿಶುಗಳ ಕೇಂದ್ರದಲ್ಲಿರುವ ಅಲಬಾಮಾ ವಿಶ್ವವಿದ್ಯಾನಿಲಯವಿದ್ದು, ಇಲ್ಲಿಯೇ ಕೆಲ್ಸಿ ತಪಾಸನೆ ಮಾಡಿಸಿಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳಲ್ಲಿ ಏಕಕಾಲಕ್ಕೆ ಎರಡು ಗರ್ಭದಲ್ಲಿ ಗರ್ಭಿಣಿಯಾಗುವವರ ಸಂಖ್ಯೆ ಮಿಲಿಯನ್‌ಗೆ ಒಬ್ಬರು ಎಂದು ಅಲಬಾಮಾ ವಿವಿಯ ತಜ್ಞರು ಹೇಳಿದ್ದಾರೆ. 

ಬಂಜೆತನಕ್ಕೆ ಸಂಬಂಧಿಸಿದ 4 ಮಿಥ್ಯೆಗಳು, ಹಿಂದಿನ ಸತ್ಯ ತಿಳ್ಕೊಂಡಿರಿ

ಎಬಿಸಿ ನ್ಯೂಸ್ ವರದಿಯಲ್ಲಿ, ತಾಯಿ ಮತ್ತು ಭ್ರೂಣದ ಔಷಧಿ ತಜ್ಞ ಡಾ. ರಿಚರ್ಡ್ ಡೇವಿಸ್ (Richard Devis) ಈ ಪರಿಸ್ಥಿತಿಯ ವಿಶಿಷ್ಟತೆಯ ಬಗ್ಗೆ ವಿವರಿಸಿದ್ದು, ಇದು ಅತ್ಯಂತ ಅಪರೂಪದ ಘಟನೆಯಾಗಿದೆ, ಬಹುಶಃ ಪ್ರತಿ 1,000 ಮಹಿಳೆಯರಲ್ಲಿ ಮೂವರು ಮಾತ್ರ ಹೀಗೆ ಎರಡು ಗರ್ಭಕಂಠ ಅಥವಾ ಡಬಲ್ ಯುಟರಸ್‌ ಅನ್ನು ಹೊಂದಿರುತ್ತಾರಂತೆ ಅದರಲ್ಲೂ ಪ್ರತಿ ಗರ್ಭಾಶಯದಲ್ಲಿ ಏಕಕಾಲದಲ್ಲಿ ಗರ್ಭಿಣಿಯಾಗುವ ಸಾಧ್ಯತೆಗಳು ಒಂದು ಮಿಲಿಯನ್‌ನಲ್ಲಿ ಒಬ್ಬರು ಮಾತ್ರ  ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ. 

ಕೆಲ್ಸಿ ( Kelsey Hatcher) ಅವರಿಗೆ ತಮ್ಮ 17ನೇ ವಯಸ್ಸಿನಲ್ಲಿಯೇ ಈ ಬಗ್ಗೆ ತಿಳಿದಿತ್ತು. ಆದರೆ ಈ ಹಿಂದಿನ 3 ಗರ್ಭಾವಸ್ಥೆಯಲ್ಲಿ ಅವರ ಒಂದು ಗರ್ಭದಲ್ಲಿ ಮಾತ್ರ ಗರ್ಭಧಾರಣೆಯಾಗಿತ್ತು. ಅಲ್ಲದೇ ಯಾವುದೇ ತೊಡಕುಗಳಿಲ್ಲದೇ ಪೂರ್ಣಾವಧಿ ತುಂಬಿ ಮಗು ಜನಿಸಿತ್ತು. ಆದರೆ ಈ ಸಮಯದಲ್ಲಿ ಎರಡು ಗರ್ಭಗಳು ಮಕ್ಕಳನ್ನು ಹೊಂದಿರುವ ಕಾರಣ ಆಶ್ಚರ್ಯದ ಜೊತೆ ಚಿಂತೆಗೆ ಕಾರಣವಾಗಿತ್ತು. ಇನ್ನು ಕೆಲ್ಸಿ ಅವರ ಆರೈಕೆಯಲ್ಲಿ ತೊಡಗಿರುವ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಶ್ವೇತಾ ಪಟೇಲ್ ಅವರ ಪ್ರಕಾರ, ಶಿಶುಗಳನ್ನು ಭ್ರಾತೃತ್ವದ ಅವಳಿಗಳೆಂದು ಪರಿಗಣಿಸಲಾಗುತ್ತದೆ, ಪ್ರತಿ ಗರ್ಭಾಶಯದಲ್ಲಿ ಪ್ರತ್ಯೇಕವಾದ ಅಂಡೋತ್ಪತ್ತಿ ಮತ್ತು ಫಲೀಕರಣದ ಫಲಿತಾಂಶವಾಗಿದೆ ಎಂದು ಅವರು ಹೇಳಿದ್ದಾರೆ. 

Follow Us:
Download App:
  • android
  • ios