ಹೃದ್ರೋಗಿಗಳಿಗೆ ಕಳಪೆ ಪೇಸ್‌ಮೇಕರ್ ಅಳವಡಿಕೆ : 200 ರೋಗಿಗಳ ಸಾವು ಶಂಕೆ: ವೈದ್ಯನ ಬಂಧನ
2017ರಿಂದ 2021ರವರೆಗೆ ಸುಮಾರು 600 ಜನರಿಗೆ ಕಳಪೆ ಗುಣಮಟ್ಟದ ಪೇಸ್ ಮೇಕರ್‌ಗಳನ್ನು ಅಳವಡಿಸಿದ್ದ ಹೃದ್ರೋಗ ತಜ್ಞನನ್ನು ಉತ್ತರ ಪ್ರದೇಶದ ಇಟಾವ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಲಖನೌ: 2017ರಿಂದ 2021ರವರೆಗೆ ಸುಮಾರು 600 ಜನರಿಗೆ ಕಳಪೆ ಗುಣಮಟ್ಟದ ಪೇಸ್ ಮೇಕರ್‌ಗಳನ್ನು ಅಳವಡಿಸಿದ್ದ ಹೃದ್ರೋಗ ತಜ್ಞನನ್ನು ಉತ್ತರ ಪ್ರದೇಶದ ಇಟಾವ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಈತ ಅಳವಡಿಸಿರುವ ಪೇಸ್‌ಮೇಕರ್‌ನಿಂದಾಗಿ 200ಕ್ಕೂ ಹೆಚ್ಚು ಜನರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸೈಫೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಸಮೀರ್ ಸರಾಫ್ ಬಂಧಿತ ಆರೋಪಿ. ಈತನ ವಿರುದ್ಧ ಕಳಪೆ ಗುಣಮಟ್ಟದ ಪೇಸ್‌ಮೇಕರ್ ಅಳವಡಿಕೆ, ಹಣಕಾಸಿನ ಅವ್ಯವಹಾರ ಮತ್ತು ಇತರ ಪ್ರಕರಣಗಳನ್ನು ದಾಖಲಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರಾಫ್ ಬಂಧನ ಬಳಿಕ ಹಲವರು ಆಕ್ರೋಶ ವ್ಯಕ್ತಪಡಿಸಿದ್ದು, ಈತನಿಂದಾಗಿ ತಮ್ಮ ಕುಟುಂಬದವರನ್ನು ಕಳೆದುಕೊಂಡದ್ದಾಗಿ ಆರೋಪಿಸಿದ್ದಾರೆ.
2 ವರ್ಷದಿಂದ ಬಳಕೆಯಲ್ಲಿಲ್ಲದ Gmail ಖಾತೆ ಡಿಲೀಟ್: ಒಮ್ಮೆ ಲಾಗಿನ್ ಆಗಿ ಖಾತೆ ಉಳಿಸಿಕೊಳ್ಳಿ
ವಕೀಲರೊಬ್ಬರು ಮಾತನಾಡಿ, ‘ನನ್ನ ಪತ್ನಿಯನ್ನು ಆಸ್ಪತ್ರೆಗೆ ಸೇರಿಸಿದ ಬಳಿಕ ಸರಾಫ್ ನಮ್ಮ ಅನುಮತಿ ಇಲ್ಲದೇ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅಲ್ಲದೇ ಇದಕ್ಕಾಗಿ 1.8 ಲಕ್ಷ ರು. ವಸೂಲಿ ಮಾಡಿದ್ದಾರೆ. ಶಸ್ತ್ರಚಿಕಿತ್ಸೆಯ ಬಳಿಕ ನನ್ನ ಪತ್ನಿ 20 ವರ್ಷ ಬದುಕುವುದಾಗಿ ಅವರು ಹೇಳಿದ್ದರು, ಆದರೆ 2 ತಿಂಗಳಿಗೆ ಆಕೆ ಮೃತಪಟ್ಟಳು’ ಎಂದಿದ್ದಾರೆ.
ಏನಿದು ಪೇಸ್‌ಮೇಕರ್?:
ಇದೊಂದು ಚಿಕ್ಕ ಎಲೆಕ್ಟ್ರಿಕ್ ಉಪಕರಣವಾಗಿದ್ದು, ಇದನ್ನು ಹೊಟ್ಟೆ ಅಥವಾ ಎದೆಯಲ್ಲಿ ಅಳವಡಿಸಲಾಗಿರುತ್ತದೆ. ಎದೆಬಡಿತ ಸರಿಯಾಗಿಲ್ಲದ ಸಮಯದಲ್ಲಿ ಅದನ್ನು ನಿಯಂತ್ರಿಸಲು ಇದನ್ನು ಬಳಕೆ ಮಾಡಲಾಗುತ್ತದೆ.
ಖುಲಾಯಿಸಿದ ಅದೃಷ್ಟ: ರಾತ್ರೋರಾತ್ರಿ ಲಕ್ಷಾಧಿಪತಿಯಾದ ಪಾಕಿಸ್ತಾನದ ಮೀನುಗಾರ