Asianet Suvarna News Asianet Suvarna News

Uncombable Hair Syndrome: ತಲೆ ತುಂಬಾ ಕೆದರಿದ ಕೂದಲು, ಪುಟ್ಟ ಮಗುವನ್ನು ಕಾಡುತ್ತಿದೆ ವಿಚಿತ್ರ ರೋಗ

ಇದು ಒಂಥರಾ ವಿಚಿತ್ರ ಕಾಯಿಲೆ (Disease).ತೆಳುವಾದ ಸಿಲ್ವರ್ ಅಥವಾ ಹೊಂಬಣ್ಣದ ಕೂದಲು (Hair) ತಲೆಯ ತುಂಬಾ ಹರಡಿಕೊಂಡಿರುತ್ತದೆ. ಇದನ್ನು ಸರಿ ಮಾಡಲಾಗುವುದಿಲ್ಲ, ಬಾಚಲೂ ಆಗುವುದಿಲ್ಲ. ಇದೆಂಥಾ ಸಮಸ್ಯೆ (Problem)? ಇದಕ್ಕೇನು ಪರಿಹಾರ. 

US Baby Diagnosed With Uncombable Hair Syndrome
Author
Bengaluru, First Published Mar 3, 2022, 9:20 PM IST

ಅನ್ ಕೂಂಬೇಬಲ್ ಹೇರ್ ಸಿಂಡ್ರೋಮ್ (Uncombable Hair Syndrome). ಇದೊಂದು ಅಪರೂಪದ ಅನುವಂಶಿಕ ಕಾಯಿಲೆ (Genetic Disease). ಈ ಕೂದಲು ಕೆದರಿದ ಸ್ಥಿತಿಯಲ್ಲೇ ಇರುತ್ತದೆ. ಇಂಥಾ ಕೂದಲನ್ನು ಬಾಚಲು ಸಾಧ್ಯವಾಗುವುದಿಲ್ಲ. ಜಗತ್ತಿನಲ್ಲಿ ಸುಮಾರು 100 ಮಂದಿಯಲ್ಲಿ ಒಬ್ಬರಿಗೆ ಮಾತ್ರ ಇಂಥಾ ಸಮಸ್ಯೆ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ.

ಜಾರ್ಜಿಯಾದ ತಾಯಿಯೊಬ್ಬರು ತಮ್ಮ ಒಂದು ವರ್ಷದ ಮಗನ ಅಪರೂಪದ ಅನುವಂಶಿಕ ಸ್ಥಿತಿಯ ಅನ್‌ಕೊಂಬಬಲ್ ಹೇರ್ ಸಿಂಡ್ರೋಮ್ (ಯುಹೆಚ್‌ಎಸ್) ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಈ ಸ್ಥಿತಿಯ ಪರಿಣಾಮವಾಗಿ, ಅವನ ಕೂದಲು (Hair) ಎಲ್ಲಾ ದಿಕ್ಕುಗಳಲ್ಲಿಯೂ ಬೆಳೆಯುತ್ತಿದೆ. ಈ ಕೂದಲೆಲ್ಲವೂ ತುಂಬಾ ದುರ್ಬಲವಾಗಿದೆ, ಬಾಚಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ವಾರಕ್ಕೊಮ್ಮೆ ಎಲ್ಲಾ ನೈಸರ್ಗಿಕ ಉತ್ಪನ್ನಗಳನ್ನು ಬಳಸಿ  ಮಗನ ಕೂದಲನ್ನು ತೊಳೆಯುತ್ತಿರುವುದಾಗಿ ಮಹಿಳೆ ಹೇಳುತ್ತಾರೆ. ಇನ್ಸ್ಟಾಗ್ರಾಂನ uncombable_lock ಎಂವ ಖಾತೆಯ ಮೂಲಕ ಈ ಅನುವಂಶಿಕ ಸ್ಥಿತಿಯ ಬಗ್ಗೆ ಮಹಿಳೆ ಜಾಗೃತಿ (Awarness) ಮೂಡಿಸುತ್ತಿದ್ದಾರೆ. 

Hair Loss : ತಲೆ ಬೋಳಾಗ್ಬಾರದಂದ್ರೆ ಇದರ ಸೇವನೆ ಕಡಿಮೆ ಮಾಡಿ

ಆದರೆ, ಮಗು ಹದಿಹರೆಯಕ್ಕೆ ಅಥವಾ ಪ್ರೌಢಾವಸ್ಥೆಗೆ ಬಂದಾಗ ಈ ಸಮಸ್ಯೆ ಸಾಮಾನ್ಯವಾಗಿ ತಾನಾಗಿಯೇ ಹೋಗುತ್ತದೆ ಎಂದು ಚರ್ಮರೋಗ ತಜ್ಞ ಡಾ.ರಿಂಕಿ ಕಪೂರ್ ಹೇಳಿದ್ದಾರೆ. ಅನ್ ಕೂಂಬೇಬಲ್ ಹೇರ್ ಸಿಂಡ್ರೋಮ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲ ವಿಚಾರಗಳು ಇಲ್ಲಿವೆ.

ಅನ್ ಕೂಂಬೇಬಲ್ ಹೇರ್ ಸಿಂಡ್ರೋಮ್ ಕಾರಣಗಳು
ಅನ್ ಕೂಂಬೇಬಲ್ ಹೇರ್ ಸಿಂಡ್ರೋಮ್, ಅಪರೂಪದ ಅನುವಂಶಿಕ ಸ್ಥಿತಿಯಾಗಿದ್ದು, ಇದು ಮೂರು ತಿಂಗಳಿಂದ 12 ವರ್ಷ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕನ್ಸಲ್ಟೆಂಟ್ ಡರ್ಮಟಾಲಜಿಸ್ಟ್, ಕಾಸ್ಮೆಟಿಕ್ ಡರ್ಮಟಾಲಜಿಸ್ಟ್ ಮತ್ತು ಡರ್ಮಟೊ-ಸರ್ಜನ್, ದಿ ಎಸ್ತೆಟಿಕ್ ಕ್ಲಿನಿಕ್‌ನ ಡಾ.ರಿಂಕಿ ಕಪೂರ್ ಹೇಳಿದ್ದಾರೆ.

ಕೂದಲಿನ ಪ್ರೊಟೀನ್ ಒದಗಿಸುವ ಜವಾಬ್ದಾರಿ ಹೊಂದಿರುವ PAD13, TGM3, TCHH ಎಂಬ ಮೂರು ವಂಶವಾಹಿಗಳ ರೂಪಾಂತರದಿಂದಾಗಿ ಜನ್ಮಜಾತ ಮತ್ತು ಆನುವಂಶಿಕ ಕಾಯಿಲೆ ಎಂದು ವರ್ಗೀಕರಿಸಲಾಗಿದೆ. ಈ ಸ್ಥಿತಿಯು ನೆತ್ತಿಯ ಕೂದಲಿನ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಕೆಲವು ಬೋಳು ತಲೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ .

ಇದು ಕೂದಲಿನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ?
ಅನ್‌ಕೊಂಬಬಲ್ ಹೇರ್ ಸಿಂಡ್ರೋಮ್ (ಯುಹೆಚ್‌ಎಸ್) ಕೂದಲಿನ ಬಣ್ಣವನ್ನು ಸಿಲ್ವರ್ ಬಣ್ಣ ಅಥವಾ ಹೊಂಬಣ್ಣಕ್ಕೆ ಬದಲಾಯಿಸುತ್ತದೆ. ಕೂದಲು ಸುರುಳಿ ಸುರುಳಿಯಾಗಿ ತಲೆಯ ಎಲ್ಲಾ ಭಾಗದಲ್ಲೂ ಚಾಚಿಕೊಂಡಿರುತ್ತದೆ. ಇದನ್ನು ಸಾಮಾನ್ಯವಾಗಿ ಸ್ಪನ್ ಗ್ಲಾಸ್ ಕೂದಲು, ಪಿಲಿ ಟ್ರಯಾಂಗುಲಿ ಎಟ್ ಕ್ಯಾನಾಲಿಕುಲಿ, ಮತ್ತು ಚೆವೆಕ್ಸ್ ಇನ್‌ಕೋಯಿಫಬಲ್ಸ್ ಎಂದು ಕರೆಯಲಾಗುತ್ತದೆ ಎಂದು ಡಾ.ಕಪೂರ್ ತಿಳಿಸಿದರು.

Anupama Gowda hair care : ಸುಲಭವಾಗಿ ಕೂದಲು ಕರ್ಲ್ ಮಾಡಲು ಟ್ರಿಕ್ ಹೇಳಿದ ನಿರೂಪಕಿ!

ಅನ್ ಕೂಂಬೇಬಲ್ ಹೇರ್ ಸಿಂಡ್ರೋಮ್‌ಗೆ ಚಿಕಿತ್ಸೆಯೇನು ?
ಅನುವಂಶಿಕ ಅನ್ ಕೂಂಬೇಬಲ್ ಹೇರ್ ಸಿಂಡ್ರೋಮ್‌ಗೆ ಚಿಕಿತ್ಸೆ ಲಭ್ಯವಾಗುವಂತೆ ಮಾಡುವ ಕೆಲಸ ನಡೆಯುತ್ತಿದೆ. ಆದರೆ ಇಲ್ಲಿಯವರೆಗೂ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಖುಷಿಪಡುವ ವಿಚಾರವೆಂದರೆ ಮಗು ಹದಿಹರೆಯಕ್ಕೆ ಅಥವಾ ಪ್ರೌಢಾವಸ್ಥೆಯನ್ನು ತಲುಪಿದಾಗ ಈ ಕೂದಲು ತನ್ನಿಂದ ತಾನೇ ಹೋಗುತ್ತದೆ ಎಂಬುದಾಗಿದೆ. ಚಿಕಿತ್ಸೆ ಮಾಡಲು ಸಾಧ್ಯವಾಗದಿದ್ದರೂ ಇಂಥಾ ಕೂದಲಿದ್ದಾಗ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಕೂದಲನ್ನು ತೊಡೆದುಹಾಕಲು ಮೃದುವಾದ ಬ್ರಷ್‌ಗಳನ್ನು ಬಳಸಬೇಕು. ಕೂದಲನ್ನು ಗಟ್ಟಿಯಾಗಿ ಬಾಚಲು ಪ್ರಯತ್ನಿಸಬಾರದು. ಹೇರ್ ಕಲರಿಂಗ್, ಹೇರ್ ಪ್ಯಾಕ್ ಇದ್ಯಾವುದನ್ನೂ ಪ್ರಯತ್ನಿಸಲೇಬಾರದು.

ಅನ್ ಕೂಂಬೇಬಲ್ ಹೇರ್ ಸಿಂಡ್ರೋಮ್ ಇದ್ದ ಮಕ್ಕಳಿಗೆ ಆರೋಗ್ಯಕರ ಬೀಜಗಳು, ದ್ವಿದಳ ಧಾನ್ಯಗಳು ಮತ್ತು ಹಸಿರು ಎಲೆಗಳ ತರಕಾರಿಗಳನ್ನು ಒಳಗೊಂಡಂತೆ ಪೌಷ್ಠಿಕಾಂಶದ ಆಹಾರವನ್ನು ಕೊಡುವುದು ಒಳ್ಳೆಯದು. ಕೂದಲಿನ ಚಿಕಿತ್ಸೆಗಾಗಿ ಯಾವುದೇ ಔಷಧಿಗಳನ್ನು ಅಥವಾ ಪೂರಕಗಳನ್ನು ತೆಗೆದುಕೊಳ್ಳುವ ಮೊದಲು  ವೈದ್ಯರೊಂದಿಗೆ ಮಾತನಾಡಿ.

Follow Us:
Download App:
  • android
  • ios