Asianet Suvarna News Asianet Suvarna News

Anupama Gowda hair care : ಸುಲಭವಾಗಿ ಕೂದಲು ಕರ್ಲ್ ಮಾಡಲು ಟ್ರಿಕ್ ಹೇಳಿದ ನಿರೂಪಕಿ!

ಕೂದಲು ತೆಳ್ಳಗಿದ್ದರೇನು? ಸಿಂಪಲ್ ಆಗಿ ಸ್ಟೈಲ್ ಮಾಡಿದ್ದರೂ volume ಹೆಚ್ಚಿಸಿದಂತೆ ಕಾಣಬಹುದು ಎಂದು ತೋರಿಸಿಕೊಟ್ಟಿದ್ದಾರೆ ಅನುಪಮಾ..... 

Kannada anchor Anupama Gowda shares hair care tips vcs
Author
Bangalore, First Published Feb 17, 2022, 12:24 PM IST

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಟಿ ಕಮ್ ನಿರೂಪಕಿ ಅನುಪಮಾ ಗೌಡ (Anupama Gowda) ಇದೀಗ ಯುಟ್ಯೂಬ್ ಲೋಕದಲ್ಲಿ (Youtube Channel) ಹೆಸರು ಮಾಡುತ್ತಿರುವ ಸೆಲೆಬ್ರಿಟಿ. ಸ್ಕಿನ್ ಕೇರ್ (Skin care), ಹೇರ್ ಕೇರ್ (Hair care), ಮೇಕಪ್ ಬ್ಯಾಗ್, ಮನೆ ಅಲಂಕಾರ (Home decor) ಮಾಡುವ ವಸ್ತುಗಳು... ಹೀಗೆ ಬ್ಯಾಕ್ ಟು ಬ್ಯಾಕ್ ವಿಡಿಯೋಗಳನ್ನು ಹಂಚಿಕೊಂಡು ಲಕ್ಷ ಲಕ್ಷ ವೀಕ್ಷಣೆ ಪಡೆದುಕೊಂಡು, 1 ಲಕ್ಷ 20 ಸಾವಿರ ಫಾಲೋವರ್ಸ್‌ನ ಪಡೆದಿರುವ ಚೆಲುವೆ ಇದೀಗ ಸಣ್ಣ ಕಾಣುವ ಕೂದಲನ್ನು ಹೇಗೆ ದಪ್ಪ ಮಾಡಬೇಕು ಎಂದು ತೋರಿಸಿಕೊಟ್ಟಿದ್ದಾರೆ. 

ಅನುಪಮಾ ಮಾತು:
'ಕೂದಲು ಹೆಣ್ಣು ಮಕ್ಕಳಿಗಾಗಲಿ, ಗಂಡು ಮಕ್ಕಳಿಗಾಗಲಿ ತುಂಬಾನೇ ಮುಖ್ಯ. ಹೇರ್ ಫಾಲ್ (Hair fall) ಆಗುತ್ತಿದ್ದರೆ ನಮ್ಮ ಪ್ರಾಣನೇ ಹೋಗುವಂತೆ ಎನಿಸುತ್ತದೆ. ಒಂದೂವರೆ ವರ್ಷಗಳ ಹಿಂದೆಯೂ ನನಗೂ ಇದೇ ರೀತಿ ಆಗಿತ್ತು. ಮೇಜರ್ ಹೇರ್ ಫಾಲ್ ಎಷ್ಟು ಅಂದ್ರೆ ಒಂದು ಹಿಡಿಯಷ್ಟು ಕೂದಲು ಕೈಗೆ ಬರ್ತಾ ಇತ್ತು. ನನ್ನ ಸ್ನೇಹಿತರೊಬ್ಬರು ಹೇಳಿದ್ದರು ರಕ್ತ ಪರೀಕ್ಷೆ (Blood test) ಮಾಡಿಸಲು. ಆಗ ನಾನು ಚೆಕ್ ಮಾಡಿಸಿದಾಗ ಐರನ್ (Iron), ವಿಟಮಿನ್ ಬಿ12 (Vitamin B12) ತುಂಬಾನೇ ಕಡಿಮೆ ಇತ್ತು. ಆದಷ್ಟು ಬೇಗ ವೈದ್ಯರು ವಿಟಮಿನ್ ಮಾತ್ರೆಗಳನ್ನು ಕೊಟ್ಟು, ಚಿಕಿತ್ಸೆ ಶುರು ಮಾಡಿದ್ದರು,' ಎಂದು ಅನುಪಮಾ ಮಾತು ಶುರು ಮಾಡಿದ್ದಾರೆ. 

ಕೊರೋನಾ ಸೋಂಕು ತಗುಲಿದ್ದು ಹೇಗೆಂದು ಹೇಳಿದ Anupama Gowda!

'ನಮ್ಮ ಕೂದಲಿಗೆ ಹಾರ್ಡ್‌ ವಾಟರ್‌ಗೆ (Hard water) ಹೊಂದಿಕೊಳ್ಳುವುದಿಲ್ಲ. ಶವರ್ (Showe) ಮಾಡುವಾಗ ಅದಕ್ಕೆ softner ಬಳಸುವುದರ ಬಗ್ಗೆ ತಿಳಿದುಕೊಂಡೆ. 6 ತಿಂಗಳಿಗೊಮ್ಮೆ ಬದಲಾಯಿಸುತ್ತೇನೆ. ಅದರಿಂದ ಕೂದಲು ಉದುರುವುದು ಕಡಿಮೆ ಆಗಿದೆ. ಇದಾದ ನಂತರ ನಾನು ಕೂದಲನ್ನು ಗಟ್ಟಿಯಾಗಿ ಕಟ್ಟುವುದನ್ನು ನಿಲ್ಲಿಸಿದೆ. ನಾನು ಜಿಮ್‌ಗೆ (Gym) ಹೋಗುವಾಗ ಮಾತ್ರ ಸ್ವಲ್ಪ ಗಟ್ಟಿಯಾಗಿ ಕಟ್ಟಿಕೊಳ್ಳುತ್ತೇನೆ. ಟೈಟ್ ಆಗಿ ಕಟ್ಟುವುದರಿಂದ ಕೂದಲು ಡ್ಯಾಮೇಜ್ (Damage) ಆಗುತ್ತದೆ, ಮಲಗುವಾಗ ಜಡೆ (Hair braid) ಕಟ್ಟುವುದು ಅಭ್ಯಾಸ ಮಾಡಿಕೊಳ್ಳಿ. ನಾನು ಹಾಗೇ ಮಾಡುವುದು, ಕೆಲವರು ಈ ರೀತಿ ಮಾಡಿದರೆ ಕೂದಲು ಬೆಳೆಯುತ್ತದೆ ಎಂದು ಹೇಳುತ್ತಾರೆ. ಅದರ ರಬ್ಬರ್‌ ಬ್ಯಾಂಡ್‌ (Rubber Band) ಕೂಡ ಬದಲಾಯಿಸಬೇಕು. ಆದಷ್ಟು ಸಿಲ್ಕ್‌ (Silk) ಅಥವಾ ಕಾಟನ್ ರಬರ್‌ ಬ್ಯಾಂಡ್ ಬಳಸಿ. ಮಲಗುವ ದಿಂಬಿಗೆ ಸಿಲ್ಕ್‌ ಕವರ್ (Silk Pillow cover) ಹಾಕಿ. ಇದೆಲ್ಲಾ ಬಿಟ್ಟು ಸೊಪ್ಪು, ಹಣ್ಣು ಮತ್ತು ತರಕಾರಿ (Vegetables) ತಪ್ಪದೇ ಸೇವಿಸಿ.ದಿನಕ್ಕೆ 3-4 ಲೀಟರ್ ನೀರು ಕುಡಿದರೆ, ದೇಹ ಆರೋಗ್ಯವಾಗಿರುತ್ತದೆ. ವಾರಕ್ಕೆ ಒಂದು ದಿನವಾದರೂ ಎಣ್ಣೆ ಬಳಸಿ,' ಎಂದು ಹೇಗೆ ಹೇರ್ ಕೇರ್ (Hair Care) ಮಾಡುವುದು ಎಂದು ತೋರಿಸಿಕೊಟ್ಟಿದ್ದಾರೆ. 

Anupama Periods Hack: ಪೀರಿಯಡ್ಸ್‌ ನೋವು ಕಡಿಮೆ ಮಾಡಿಕೊಳ್ಳಲು ನಟಿ ಕೊಟ್ಟ ಸಲಹೆ ಇದು!

ಐಕಾನಿಕ್ (Iconic) ಬ್ರ್ಯಾಂಡ್‌ ಹೇರ್‌ straightner ಮತ್ತು curlerನ ಅನುಪಮಾ ಬಳಸುತ್ತಾರೆ. ಕೂದಲು ಸ್ಟೈಲ್ ಮಾಡುವ ಮುನ್ನ ತಪ್ಪದೆ ಹೀಟ್‌ ಪ್ರೊಟೆಕ್ಟರ್ ಸ್ಪ್ರೇ (Heat Protection Spray) ಬಳಸುವುದಕ್ಕೆ ತೋರಿಸಿಕೊಟ್ಟಿದ್ದಾರೆ. ಮೊದಲು ಕೂದಲನ್ನು ಸಿಂಪಲ್ ಆಗಿ ಸ್ಟ್ರೈಟ್ ಮಾಡಿಕೊಂಡು, ಆನಂತರ ಮೂರ್ನಾಲ್ಕು ಭಾಗ ಮಾಡಿಕೊಂಡು ಕೂದಲು ಕರ್ಲ್‌ ಮಾಡಿದ್ದಾರೆ. ಇಡೀ ಕೂದಲನ್ನು ಕರ್ಲ್‌ ಮಾಡಿದ ನಂತರ ತಲೆ ಬಗ್ಗಿಸಿಕೊಂಡು ಕೂದಲನ್ನು ಕೈಯಲ್ಲಿ ಬಾಚಿಕೊಂಡಿದ್ದಾರೆ. ಹೀಗೆ ಮಾಡುವುದರಿಂದ ಕೂದಲು ದಪ್ಪ ಕಾಣಿಸುತ್ತದೆ ಎಂದು ತೋರಿಸಿಕೊಟ್ಟಿದ್ದಾರೆ. ಯಾವುದೇ ಹೇರ್‌ ಡೈ (Hair Dye) ಬಳಸಬೇಡಿ. ಬಿಸಿಲು ಅಥವಾ ಗಾಳಿಯಲ್ಲಿ ನಿಂತುಕೊಂಡು ಒಣಗಿಸಿಕೊಂಡರೆ ಕೂದಲು ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ ಅನುಪಮಾ.
 

Follow Us:
Download App:
  • android
  • ios