ಉರಿಯೂತದ ಬಗ್ಗೆ ನಿರ್ಲಕ್ಷ್ಯ ಬೇಡ, ಗಂಭೀರ ಕಾಯಿಲೆನೂ ಆಗಿರ್ಬೋದು !

ದೇಹದ ವಿವಿಧ ಭಾಗಗಳಲ್ಲಿ ಸಂಭವಿಸುವ ಕಾಯಿಲೆಯು ಕೆಲವೊಮ್ಮೆ ಉರಿಯೂತಕ್ಕೆ ಕಾರಣವಾಗುತ್ತದೆ. ಈ ಬಗ್ಗೆ ಗಮನ ಕೊಡದಿದ್ದರೆ  ಇದು ಗಂಭೀರ ಆರೋಗ್ಯ ಸಮಸ್ಯೆಗೂ ಕಾರಣವಾಗಬಹುದು. ಹೀಗಾಗಿ ಉರಿಯೂತಕ್ಕೆ ಕಾರಣವಾಗೋದೇನು ತಿಳ್ಕೊಳ್ಳೋಣ. 

Type Of Inflammation Causes Disease In Different Parts Of The Body Vin

ಅತಿಯಾಗಿ ಖಾರ ತಿಂದರೆ ಹೊಟ್ಟೆ ಉರಿಯೋದು ಗ್ಯಾರಂಟಿ. ಅತಿಯಾದ ಉಷ್ಣದಿಂದಾಗಿಯೂ ದೇಹದಲ್ಲಿ ಅಲ್ಲಲ್ಲಿ ಉರಿ ಕಾಣಿಸಿಕೊಳ್ಳುತ್ತದೆ. ಒಮ್ಮೊಮ್ಮೆ ಕಾಲಲ್ಲಿ ವಿಪರೀತ ಬಾವು ಕಾಣಿಸಿಕೊಳ್ಳುತ್ತದೆ. ಉರಿಯೂತ ದೇಹದ ಕೆಲವು ರೋಗಗಳು ಮತ್ತು ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಸಂಭವಿಸುವ ಕಾಯಿಲೆ ಆಗಿದೆ. ಕೆಲವೊಮ್ಮೆ ಉರಿಯೂತ ಉಂಟಾದಾಗ ಆಂತರಿಕ ಗಾಯ, ಔಷಧದ ಅಡ್ಡ ಪರಿಣಾಮ ಅಥವಾ ಸೋಂಕಿನ ಸ್ಥಿತಿಯು ಕೂಡಾ ಉರಿಯೂತ ಉಂಟು ಮಾಡುವ ಸಂಭವ ಕೂಡಾ ಹೆಚ್ಚಿದೆ. ಕೆಲವೊಮ್ಮೆ ಉರಿಯೂತ ಶೀಘ್ರವಾಗಿ ಕಡಿಮೆಯಾಗುತ್ತದೆಯಾದರೂ ಇನ್ನು ಕೆಲವೊಮ್ಮೆ ಉರಿಯೂತದ ಕೆಲವು ಚಿಹ್ನೆಗಳನ್ನು ಗಂಭೀರವಾಗಿ ಪರಿಗಣಿಸುವ ಅನಿವಾರ್ಯತೆ ಇದೆ. ಏಕೆಂದರೆ ಕೆಲವು ವೇಳೆ ಇದು ದೊಡ್ಡ ಆರೋಗ್ಯ ಸಮಸ್ಯೆಯ ಸೂಚನೆಯೂ ಆಗಿರಬಹುದು.

ಉರಿಯೂತ ಎಂದರೇನು ?
ಉರಿಯೂತವು ದೇಹದ ಬಿಳಿ ರಕ್ತ ಕಣಗಳು ಮತ್ತು ಅವು ತಯಾರಿಸುವ ವಸ್ತುಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಂತಹ ಹೊರಗಿನ ಆಕ್ರಮಣಕಾರರಿಂದ ನಿಮ್ಮನ್ನು ರಕ್ಷಿಸುವ ಪ್ರಕ್ರಿಯೆಯಾಗಿದೆ. ಆದರೆ ಸಂಧಿವಾತದಂತಹ ಕೆಲವು ರೋಗಗಳಲ್ಲಿ, ದೇಹದ ರಕ್ಷಣಾ ವ್ಯವಸ್ಥೆ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ವಿರುದ್ಧ ಹೋರಾಡಲು ಯಾವುದೇ ಪ್ರತಿರೋಧ ಇಲ್ಲದಿದ್ದಾಗ ಉರಿಯೂತವನ್ನು ಪ್ರಚೋದಿಸುತ್ತದೆ. ಈ ಸ್ವಯಂ ನಿರೋಧಕ ಕಾಯಿಲೆಗಳಲ್ಲಿ, ಪ್ರತಿರಕ್ಷಣಾ ವ್ಯವಸ್ಥೆಯು ಸಾಮಾನ್ಯ ಅಂಗಾಂಶಗಳು ಸೋಂಕಿಗೆ ಒಳಗಾದಂತೆ ಅಥವಾ ಹೇಗಾದರೂ ಅಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತದೆ, ಹಾನಿಯನ್ನುಂಟುಮಾಡುತ್ತದೆ.

ಸ್ತನಗಳ ಉರಿಯೂತಕ್ಕೇನು ಕಾರಣ? ಲಕ್ಷಣಗಳ ಬಗ್ಗೆ ಗಮನವಿರಲಿ

ದೇಹದ ವಿವಿಧ ಭಾಗಗಳಾದ ಮುಖ, ಹೊಟ್ಟೆ, ಚರ್ಮ, ಕಣ್ಣು ಮುಂತಾದ ಹಲವು ಅಂಗಗಳಲ್ಲಿ ಊತ ಉಂಟಾಗಬಹುದು. ಕೆಲವೊಮ್ಮೆ ಇದು ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಕಾಯಿಲೆಗಳ ಸೂಚನೆಯೂ ಆಗಿರಬಹುದು. ಯಾಕೆಂದರೆ ಇಂಥಾ ಕಾಯಿಲೆಗಳು ಊತ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತದೆ. ಅಂತಹ ವೇಳೆ ಯಾವಾಗಲೂ ಉರಿಯೂತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವುದು ಮುಂದೆ ಆಗುವ ಅನಾಹುತ ತಪ್ಪಿಸಲು ಸಹಕಾರಿ ಆಗುತ್ತದೆ.

ದೀರ್ಘಕಾಲದ ಉರಿಯೂತಕ್ಕೆ ಕಾರಣಗಳು 
ದೀರ್ಘಕಾಲದ ಉರಿಯೂತವು ಅನೇಕ ಆರೋಗ್ಯ ಸಮಸ್ಯೆಗಳು ಸೂಚನೆಯೂ ಆಗಿರಬಹುದು. ಆಲ್ಝೈಮರ್‌ ಕಾಯಿಲೆ, ಉಬ್ಬಸ, ಕ್ಯಾನ್ಸರ್, ಹೃದಯರೋಗ, ರುಮಟಾಯ್ಡ್ ಸಂಧಿವಾತ, ಟೈಪ್ 2 ಮಧುಮೇಹ ಮೊದಲಾದ ಕಾಯಿಲೆಗಳಲ್ಲಿ ಮೊದಲಿಗೆ ಉರಿಯೂತ ಕಂಡು ಬರುತ್ತದೆ ದೀರ್ಘಕಾಲದ ಉರಿಯೂತದ ಸಾಮಾನ್ಯ ಕಾರಣಗಳು ಹೀಗಿವೆ. ದೇಹವು ಆರೋಗ್ಯಕರ ಅಂಗಾಂಶವನ್ನು ಆಕ್ರಮಿಸುವ ಲೂಪಸ್ನಂತಹ ಆಟೋಇಮ್ಯೂನ್ ಅಸ್ವಸ್ಥತೆಗಳು, ಮಾಲಿನ್ಯ ಅಥವಾ ಕೈಗಾರಿಕಾ ರಾಸಾಯನಿಕಗಳಂತಹ ವಿಷಗಳಿಗೆ ಒಡ್ಡಿಕೊಳ್ಳುವುದು, ಸೋಂಕು ಅಥವಾ ಗಾಯದಿಂದ ಉಂಟಾದ ಉರಿಯೂತ. ಕೆಲವು ಜೀವನಶೈಲಿಯ ಅಂಶಗಳಿಂದ ಸಹ ನೀವು ದೀರ್ಘಕಾಲದ ಉರಿಯೂತವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯಿದೆ: ಅತಿಯಾಗಿ ಮದ್ಯಪಾನ ಮಾಡುವುದು, ಹೆಚ್ಚು ವ್ಯಾಯಾಮ ಮಾಡುವ ಅಭ್ಯಾಸ, ದೀರ್ಘಕಾಲದ ಒತ್ತಡವೂ ಉರಿಯೂತಕ್ಕೆ ಕಾರಣವಾಗಬಹುದು.

ಉರಿಯೂತದಿಂದ ಆರೋಗ್ಯ ಸಮಸ್ಯೆಯ ಸೂಚನೆಗಳು

ಪಾದಗಳು ಊದಿಕೊಳ್ಳುವುದು: ಪಾದಗಳು ಊದಿಕೊಳ್ಳಲು ಅನೇಕ ಕಾರಣಗಳಿರಬಹುದು. ಕಾಲುಗಳು ಮತ್ತು ದೇಹದ ಇತರ ಅನೇಕ ಭಾಗಗಳಲ್ಲಿ ಊತವು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಸಂಭವಿಸುತ್ತದೆ. ದೀರ್ಘಕಾಲ ನಿಲ್ಲುವುದು, ಕಾಲುಗಳ ನರಗಳ ಸಮಸ್ಯೆ ಇದ್ದಾಗ ಕಾಣಿಸಿಕೊಳ್ಳುತ್ತದೆ.  ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಪಾದಗಳು ಊದಿಕೊಳ್ಳಲು ಪ್ರಮುಖ ಸಂಕೇತಗಳು ಆಗಿವೆ. ಈ ಪರಿಸ್ಥಿತಿಯನ್ನು ತಜ್ಞರು ಗಂಭೀರವಾಗಿ ಪರಿಗಣಿಸುತ್ತಾರೆ.  

ಉರಿಯೂತ ನಿಯಣತ್ರಣಕ್ಕೆ ಈ ಜ್ಯೂಸ್ ಟ್ರೆ ಮಾಡಿ!

ಮೂತ್ರಪಿಂಡದ ಕಾಯಿಲೆಯ ಅಪಾಯ: ಉರಿಯೂತದ ಸಮಸ್ಯೆ ಆಂತರಿಕವಾಗಿಯೂ ಸಂಭವಿಸುತ್ತದೆ. ಹೃದಯ, ಯಕೃತ್ತು ಮತ್ತು ಮೂತ್ರಪಿಂಡಗಳ ಕಾಯಿಲೆಗಳು ದೇಹದ ಇತರ ಭಾಗಗಳಲ್ಲಿ ಊತ ಉಂಟು ಮಾಡುತ್ತದೆ. ಈ ರೀತಿಯ ಉರಿಯೂತದ ಸ್ಥಿತಿಯಲ್ಲಿ, ತೀವ್ರವಾದ ಕೆಮ್ಮು, ಆಯಾಸ, ಉಸಿರಾಟದ ತೊಂದರೆ ಸೇರಿದಂತೆ ಹಲವು ರೋಗ ಲಕ್ಷಣಗಳು ಕಂಡು ಬರುತ್ತವೆ. ಈ ವೇಳೆ ತ್ವರಿತ ವೈದ್ಯಕೀಯ ಸಹಾಯದ ಅಗತ್ಯವೂ ಇರುತ್ತದೆ.

ಮುಖ ಮತ್ತು ಕಣ್ಣುಗಳ ಊತ: ಮುಖದ ಊತಕ್ಕೆ ಸಾಮಾನ್ಯವಾಗಿ ದದ್ದು ಅಥವಾ ಚರ್ಮದ ಸೋಂಕು, ಮತ್ತು ಕಣ್ಣಿನ ಉರಿಯೂತಕ್ಕೆ ಅಲರ್ಜಿ ಕಾರಣ ಆಗಿರಬಹುದು. ನಿರ್ಜಲೀಕರಣ, ಹಾರ್ಮೋನ್ ಅಸಮತೋಲನ ಅಥವಾ ಮುಖಕ್ಕೆ ಗಾಯವಾದಾಗ ಮುಖದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದರಿಂದ ಕಣ್ಣಿನ ಸೋಂಕಿನ ಸಮಸ್ಯೆಯೂ ಕಾಣಿಸಿಕೊಳ್ಳಬಹುದು. 

Latest Videos
Follow Us:
Download App:
  • android
  • ios