Health Tips: ದೇಹಕ್ಕೆ ಒಳ್ಳೆದು ಅಂತಾ ಅರಿಶಿನ ಸಪ್ಲಿಮೆಂಟ್ ಸಹವಾಸಕ್ಕೆ ಹೋಗ್ಬೇಡಿ!

ನಮ್ಮ ದೇಹದಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸೇರಿದಂತೆ ಪೋಷಕಾಂಶ ಕಡಿಮೆ ಆದಾಗ ನಾವು ಸಪ್ಲಿಮೆಂಟ್ ಸೇವನೆ ಮಾಡ್ತೇವೆ. ಆದ್ರೆ ಎಲ್ಲ ಸಪ್ಲಿಮೆಂಟ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಪ್ಲಿಮೆಂಟ್ ಸೇವನೆ ಮಾಡೋಕೂ ಸೂಕ್ತ ವಿಧಾನವಿದೆ. ಅರಿಶಿನದ ಸಪ್ಲಿಮೆಂಟ್ ತೆಗೆದುಕೊಳ್ಳುವ ಮುನ್ನ ನೀವೂ ಇದನ್ನು ತಿಳಿದ್ಕೊಳ್ಳಿ.
 

Turmeric Supplements Side Effects On Liver roo

ದೇಸಿ ಅಡುಗೆ ಮನೆಗಳಲ್ಲಿ ಅರಿಶಿನ ಸಾಮಾನ್ಯ ಮಸಾಲೆ ಪದಾರ್ಥವಾಗಿದೆ.  ಇದು ಉರಿಯೂತದ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ಆಹಾರಕ್ಕೆ ಹಳದಿ ಬಣ್ಣ ನೀಡುವ ಕೆಲಸವನ್ನು ಕೂಡ  ಮಾಡುತ್ತದೆ. ನಾವು ಅರಿಶಿನ ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ಕಾರಣಕ್ಕೆ ಅದನ್ನು ಎಲ್ಲ ಮಸಾಲೆ ಆಹಾರದಲ್ಲಿ ಬೆರೆಸ್ತೇವೆ. ಅರಿಶಿನದ ಹಾಲನ್ನು ಪ್ರತಿ ದಿನ ಸೇವನೆ ಮಾಡುವವರಿದ್ದಾರೆ. ಅನೇಕರು ಅರಿಶಿನವನ್ನು ಸಪ್ಲಿಮೆಂಟ್ ರೂಪದಲ್ಲಿ ಬಳಕೆ ಮಾಡ್ತಾರೆ. ಆದರೆ ಆಸ್ಟ್ರೇಲಿಯಾ ಸರ್ಕಾರದ ಹೆಲ್ತ್ ಆಂಡ್ ಎಜೆಟ್ ಕೇರ್ ಆಂಡ್  ಥೆರಪಿಟಿಕ್ ಗೂಡ್ಸ್ ಅಡ್ಮಿನಿಸ್ಟ್ರೇಷನ್  ಇತ್ತೀಚೆಗೆ ಅರಿಶಿನ ಪೂರಕಗಳ ಕುರಿತು ಜಂಟಿ ಸಲಹೆಯನ್ನು ನೀಡಿದೆ.   ಅರಿಶಿನವನ್ನು ಹೆಚ್ಚಿನ ರೂಪದಲ್ಲಿ ಬಳಕೆ ಮಾಡಿದ್ರೆ ಅದು  ಯಕೃತ್ತಿನ ಹಾನಿಗೆ ಕಾರಣವಾಗಬಹುದು ಎಂದಿದೆ.

ಯಕೃತ್ತಿ (Liver) ನ ಗಾಯ ಮತ್ತು ಅರಿಶಿನ (Turmeric) ಪೂರಕಗಳ ನಡುವೆ  ಸಂಬಂಧವಿದೆ ಎಂಬುದನ್ನು ಕಂಡು ಹಿಡಿಯಲಾಗಿದೆ. ಯುಎಸ್ (US) ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ 2021 ರ ಅಧ್ಯಯನದ ಪ್ರಕಾರ, ಅರಿಶಿನ ಉತ್ಪನ್ನಗಳ ಬಳಕೆಯಿಂದ ಯಕೃತ್ತು ಹಾನಿಗೊಳಗಾಗಿರುವ ಒಂದು ಡಜನ್‌ಗಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

Sleep Disorder: ಪುರುಷರಿಗೆ ಹೋಲಿಸಿದ್ರೆ ತಡರಾತ್ರಿಯಾದ್ರೂ ಮಹಿಳೆಗೆ ನಿದ್ರೆ ಬರೋದಿಲ್ಲ ಯಾಕೆ?

ಅರಿಶಿನದ ಪೂರಕ (Supplements) ವನ್ನು ನೀವು ಬಳಸುವ ವೇಳೆ ಈ ವಿಷ್ಯವನ್ನು ಗಮನಿಸಿದ :     

ವೈಯಕ್ತಿಕ ವ್ಯತ್ಯಾಸ : ಅರಿಶಿನ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಎಲ್ಲರೂ ಹೆಚ್ಚಿನ ಪ್ರಮಾಣದಲ್ಲಿ ಅರಿಶಿನ ಸೇವನೆ ಮಾಡೋದು ಒಳ್ಳೆಯದಲ್ಲ. ಅರಿಶಿನ ಪ್ರತಿ ವ್ಯಕ್ತಿಯ ದೇಹದ ಮೇಲೆ ಭಿನ್ನ ಪರಿಣಾಮ ಬಿರುತ್ತದೆ. ಕೆಲವರ ಯಕೃತ್ತನ್ನು ಇದು ಹಾಳು ಮಾಡುವ ಅಪಾಯವಿರುತ್ತದೆ. ಹಾಗಾಗಿ ನಿಮ್ಮ ದೇಹ ಪ್ರಕೃತಿಗೆ ಅರಿಶಿನ ಹೊಂದಿಕೆಯಾಗುತ್ತದೆ ಎಂಬುದನ್ನು ಪರೀಕ್ಷಿಸಿ ಬಳಸಿ. ಅರಿಶಿನದ ಪೂರಕಗಳನ್ನು ನೀವು ಸೇವನೆ ಮಾಡುವಾಗ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು. 

ಡೋಸೇಜ್ ಮತ್ತು ಗುಣಮಟ್ಟದ ಬಗ್ಗೆ ಗಮನವಿರಲಿ : ಎಲ್ಲ ಅರಿಶಿನ ಪೂರಕಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲ ಪೂರಕದಲ್ಲಿ  ಮಾಲಿನ್ಯಕಾರಕವನ್ನು ಬಳಸಲಾಗುತ್ತದೆ. ಇದು ನಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನೀವು ಯಾವ ಪೂರಕ ಬಳಕೆ ಮಾಡುತ್ತೀರಿ, ಅದರ ಗುಣಮಟ್ಟವೇನು, ಬಳಸುವ ಡೋಸೇಜ್ ಎಷ್ಟು ಎಂಬುದನ್ನು ಸರಿಯಾಗಿ ತಿಳಿದಿರಬೇಕು.  ಎಲ್ಲರಿಗೂ ಸಾರ್ವತ್ರಿಕವಾಗಿ ಡೋಸೇಜ್ ಶಿಫಾರಸು ಮಾಡಲು ಸಾಧ್ಯವಿಲ್ಲ. ಕರ್ಕ್ಯುಮಿನ್ ಪೂರಕಗಳ ವಿಶಿಷ್ಟ ಡೋಸೇಜ್ ದಿನಕ್ಕೆ 500 ರಿಂದ 2,000 ಮಿಲಿಗ್ರಾಂಗಳವರೆಗೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಹೆಚ್ಚಿನ ಡೋಸೇಜ್ ಉತ್ತಮ ಫಲಿತಾಂಶ ನೀಡುತ್ತದೆ ಎಂಬುದು ಸುಳ್ಳು. 

Health Tips: ಈ ಐದು ಸಂದರ್ಭಗಳಲ್ಲಿ ತೂಕ ನೋಡ್ಬೇಡಿ!

ಅನಾರೋಗ್ಯ ಸ್ಥಿತಿ : ನಿಮಗೆ ಈಗಾಗಲೇ ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆ ಇದ್ದಲ್ಲಿ ನೀವು ಅರಿಶಿನ ಪೂರಕಗಳನ್ನು ಬಳಕೆ ಮಾಡಬೇಡಿ. ಇದು ನಿಮ್ಮ ಯಕೃತ್ತನ್ನು ಮತ್ತಷ್ಟು ಹಾಳು ಮಾಡುತ್ತದೆ.

ಈ ಔಷಧಿ ತೆಗೆದುಕೊಳ್ತಿರೋರು ಜಾಗೃತವಾಗಿರಿ : ರಕ್ತ ತೆಳುವಾಗಿಸುವ ಔಷಧಿ, ಮಧುಮೇಹದ ಔಷಧಿ ಮತ್ತು ಆಂಟಾಸಿಡ್‌ ಔಷಧಿಯನ್ನು ನೀವು ಸೇವನೆ ಮಾಡ್ತಿದ್ದರೆ ಅದ್ರ ಜೊತೆ ಅರಿಶಿನ ಪೂರಕವನ್ನು ಸೇವನೆ ಮಾಡಬೇಡಿ. ಇದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ.

ತಜ್ಞರನ್ನು ಸಂಪರ್ಕಿಸಿ : ಅನೇಕ ಬಾರಿ ಸ್ನೇಹಿತರು, ಸಂಬಂಧಿಕರಿಂದ ಸಲಹೆ ಪಡೆದು ನಾವು ಇಂಥ ಪೂರಕಗಳನ್ನು ತೆಗೆದುಕೊಳ್ತೇವೆ. ಆದ್ರೆ ಇವು ನಮ್ಮ ದೇಹದ ಮೇಲೆ ಅಡ್ಡಪರಿಣಾಮ ಬೀರಬಹುದು. ಹಾಗಾಗಿ ಈ ಪೂರಕ ಸೇವನೆ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ, ನಿಮ್ಮ ದೇಹ ಪ್ರಕೃತಿಯನ್ನು ವಿವರಿಸಿ ನಂತರ ಸೇವನೆ ಮಾಡಿ. 

Latest Videos
Follow Us:
Download App:
  • android
  • ios