Asianet Suvarna News Asianet Suvarna News

Weight Loss : ಬೇಗ ಸಣ್ಣಗಾಗ್ಬೇಕೆಂದ್ರೆ ಈ ಸಿಂಪಲ್ ರೂಲ್ಸ್ ಫಾಲೋ ಮಾಡಿ

ತೂಕ ಇಳಿಬೇಕು, ಸ್ಲಿಮ್ ಆಗ್ಬೇಕು ಅಂತಾ ಏನೇನೋ ತಿಂದು ಯಡವಟ್ಟು ಮಾಡಿಕೊಳ್ಳೋರೇ ಹೆಚ್ಚು. ಬೊಜ್ಜು ಕರಗಬೇಕೆಂದ್ರೆ ಪ್ರತಿದಿನ ಕೆಲ ನಿಯಮ ಪಾಲನೆ ಮಾಡ್ಬೇಕು. ಜೀವನಶೈಲಿಯಲ್ಲಿ ಬದಲಾವಣೆ ಮಾಡ್ತಿದ್ದಂತೆ ನಿಮ್ಮ ತೂಕ ಕಡಿಮೆಯಾಗಲು ಶುರುವಾಗುತ್ತದೆ. ಬೇಕಾದ್ರೆ ಇದನ್ನು ಟ್ರೈ ಮಾಡಿ.
 

Try These 5 Basic Rule For Reduce Extra Fat
Author
First Published Oct 21, 2022, 3:35 PM IST

ನಾಲ್ಕು ತಿಂಗಳಲ್ಲಿ ಅವರ ತೂಕ ಇಳಿದಿದೆ, ನಾನು ಅದೇ ಟ್ರಿಕ್ಸ್ ಫಾಲೋ ಮಾಡ್ತೇನೆ ಅಂದ್ರೆ ಅದು ಅಸಾಧ್ಯ. ಯಾಕೆಂದ್ರೆ ನೀವು ಬೇರೆ, ಅವರು ಬೇರೆ. ಅವರ ದೇಹ ಸ್ಪಂದಿಸಿದಂತೆ ನಿಮ್ಮ ದೇಹ ಆ ಜೀವನ ಶೈಲಿಗೆ ಒಗ್ಗಿಕೊಳ್ಳದೆ ಹೋಗಬಹುದು. ನಿಮ್ಮ ತೂಕ ಕಡಿಮೆಯಾಗದೆ ಇರಬಹುದು. ಇತ್ತೀಚಿನ ದಿನಗಳಲ್ಲಿ ಜನರಿಗೆ ಆತುರ ಹೆಚ್ಚು. ಜನರ ಈ ಮನಸ್ಥಿತಿ ನೋಡಿ ಅನೇಕ ಕಂಪನಿಗಳು ಫೀಲ್ಡಿಗಿಳಿದಿವೆ. ಕಡಿಮೆ ಸಮಯದಲ್ಲಿ ಹೆಚ್ಚು ತೂಕ ಇಳಿಸುವ ಭರವಸೆ ನೀಡ್ತವೆ. ಅವು ಹೇಳಿದಂತೆ ತೂಕವೇನೋ ಇಳಿಯುತ್ತದೆ. ಆದ್ರೆ ಒಳಗಿನ ದೇಹ ಅನಾರೋಗ್ಯಕ್ಕೀಡಾಗಿರುತ್ತದೆ. ಹಾಗಾಗಿ ನಿಮ್ಮ ದೇಹ, ಆರೋಗ್ಯವನ್ನು ಗಮನಿಸಿಕೊಂಡು ನೀವು ತೂಕ ಇಳಿಸುವ ಮಾರ್ಗ ಆಯ್ದುಕೊಳ್ಳಬೇಕು. ತೂಕ ಕಡಿಮೆಯಾಗ್ಬೇಕೆಂದ್ರೆ ಮುಖ್ಯವಾಗಿ ನಮ್ಮ ಜೀವನ ಶೈಲಿ ಬದಲಾಗಬೇಕು. ಕೆಲವೊಂದು ಆರೋಗ್ಯಕರ ಬದಲಾವಣೆಯನ್ನು ನೀವು ನಿಮ್ಮ ಜೀವನದಲ್ಲಿ ಮಾಡಬೇಕು. ಇದ್ರಿಂದ ನಿಮ್ಮ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವಿಲ್ಲ. ಹಾಗೆ ಈ ಅಭ್ಯಾಸಗಳು ನಿಮ್ಮ ತೂಕ ಇಳಿಕೆಗೆ ನೆರವಾಗುತ್ತವೆ. ನಾವಿಂದು ಬೆಳಿಗ್ಗೆ ಎದ್ದಾಗಿಂದ ರಾತ್ರಿ ಮಲಗುವವರೆಗೆ ನೀವು ಮಾಡಬೇಕಾದ ಕೆಲ ಸಂಗತಿಯನ್ನು ಹೇಳ್ತೇವೆ. ತೂಕ ಇಳಿಬೇಕು ಎನ್ನುವವರು ಇದನ್ನು ಫಾಲೋ ಮಾಡಿ.

ಬೆಳಿಗ್ಗೆ (Morning) ಒಂದು ಗ್ಲಾಸ್ ಬಿಸಿ ನೀರು (Water) :  ಬೆಳಿಗ್ಗೆ ಎದ್ದ ತಕ್ಷಣ ಮೊದಲು ನೀವು ಮಾಡಬೇಕಾದ ಕೆಲಸವೆಂದ್ರೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದು. ಇದು ಜೀರ್ಣಾಂಗ ವ್ಯವಸ್ಥೆಯನ್ನು ಶುದ್ಧೀಕರಿಸಲು ಮತ್ತು ಚಯಾಪಚಯವನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಆಯುರ್ವೇದ (Ayurveda) ದಲ್ಲೂ ಇದಕ್ಕೆ ಮಾನ್ಯತೆ ನೀಡಲಾಗಿದೆ. ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಬೆಚ್ಚಗಿನ ನೀರನ್ನು ಸೇವನೆ ಮಾಡಬೇಕೆಂದು ವೈದ್ಯರು ಸಲಹೆ ನೀಡ್ತಾರೆ. ಈ ಬೆಚ್ಚಗಿನ ನೀರು ದೇಹದಲ್ಲಿರುವ ವಿಷವನ್ನು ಹೊರ ಹಾಕಲು ನೆರವಾಗುತ್ತದೆ.

ಹೇರ್‌ ಸ್ಟ್ರೈಟ್‌ನರ್‌ ಬಳಸೋ ಹುಡುಗೀರೆ ಹುಷಾರ್ ! ಜೀವಕ್ಕೇ ತೊಂದ್ರೆಯಾಗ್ಬೋದು

ಬೆಳಿಗ್ಗೆ ಮಾಡಿ ಯೋಗ (Yoga) : ಯೋಗ ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಜನರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ತಿದ್ದಾರೆ. ಪ್ರತಿ ನಿತ್ಯ ಬೆಳಿಗ್ಗೆ ಅರ್ಧಗಂಟೆಯಾದ್ರೂ ಯೋಗ ಮಾಡ್ಬೇಕು. ಸೂರ್ಯ ನಮಸ್ಕಾರವೊಂದೇ ಸುಮಾರು 13.91 ಕ್ಯಾಲೊರಿಗಳನ್ನು ಸುಡುತ್ತದೆ. ಬೆಳಿಗ್ಗೆ 30 ನಿಮಿಷ ನೀವು ಸೂರ್ಯನಮಸ್ಕಾರ ಮಾಡಿದ್ರೆ ಸುಮಾರು 278ರಿಂದ 280 ಕ್ಯಾಲೋರಿಯನ್ನು ಸುಡಬಹುದು. ಒಂದ್ವೇಳೆ ನೀವು ಒಂದು ಗಂಟೆ ಯೋಗ ಮಾಡಿದ್ರೆ ಅದ್ರ ಲಾಭ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳ್ತಾರೆ.

ಉಪಹಾರದಲ್ಲಿರಲಿ ಪ್ರೋಟೀನ್ : ಬೆಳಿಗ್ಗೆ ಯಾವುದೇ ಕಾರಣಕ್ಕೂ ಉಪಹಾರ ಬಿಡಬಾರದು. ಹಾಗಂತ ಎಣ್ಣೆಯುಕ್ತ, ತೂಕ ಹೆಚ್ಚು ಮಾಡುವ ಆಹಾರವನ್ನೂ ಸೇವನೆ ಮಾಡಬಾರದು. ಬೆಳಗಿನ ಉಪಹಾರದಲ್ಲಿ ಪ್ರೋಟೀನ್ ಇರುವಂತೆ ನೀವು ನೋಡಿಕೊಳ್ಳಬೇಕು. ಪ್ರೋಟೀನ್ ಯುಕ್ತ ಆಹಾರ ನಿಮ್ಮ ಹಸಿವನ್ನು ಕಡಿಮೆ ಮಾಡುತ್ತದೆ. ಇದ್ರಿಂದಾಗಿ ನಿಮಗೆ ಪದೇ ಪದೇ ಆಹಾರ ಸೇವನೆ ಮಾಡಬೇಕಾಗುವುದಿಲ್ಲ. ನಿಮಗೆ ಆಗಾಗ ಹಸಿವಾದ್ರೆ ನೀವು ಹೊರಗಿನ ತಿಂಡಿ ತಿನ್ನಲು ಶುರು ಮಾಡ್ತೀರಿ. ಇದ್ರಿಂದ ತೂಕ ಹೆಚ್ಚಾಗುತ್ತದೆ. ನೀವು ಬೆಳಿಗ್ಗೆ ಮೊಳಕೆ ಕಾಳು, ಮೊಟ್ಟೆ, ಅವಲಕ್ಕಿ ಸೇವನೆ ಮಾಡಿದ್ರೆ ಒಳ್ಳೆಯದು.

ಸೂರ್ಯನ ಕಿರಣ ಮೈಗೆ ತಾಗುವಂತೆ ನೋಡಿಕೊಳ್ಳಿ : ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಬಂಧಿಯಾಗಿರುವ ಜನರು ಹೊರಗೆ ಬರುವುದೇ ಅಪರೂಪ. ಸೂರ್ಯನ ಕಿರಣಕ್ಕೆ ಅವರು ಮೈಯೊಡ್ಡುವುದಿಲ್ಲ. ಇದ್ರಿಂದ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸೂರ್ಯನ ಕಿರಣಗಳು ದೇಹ ಸ್ಪರ್ಶಿಸಿದ್ರೆ ರೋಗದಿಂದ ದೂರವಿರಬಹುದು. ಇದು ಮಾತ್ರವಲ್ಲ ತೂಕ ಇಳಿಕೆಗೆ ಕಾರಣವಾಗುತ್ತದೆ. ಸೂರ್ಯನ ಕಿರಣಗಳು ಕೊಬ್ಬನ್ನು ಒಡೆಯಲು ಸಹಾಯ ಮಾಡುತ್ತವೆ. ಹಾಗಾಗಿ ದಿನಕ್ಕೆ ಒಮ್ಮೆಯಾದ್ರೂ ಮನೆಯಿಂದ ಹೊರಗೆ ಬಂದು ಬಿಸಿಲಿನಲ್ಲಿ ನಿಲ್ಲಿ.

Ayurvedic Tips : ದೀಪಾವಳಿಯಲ್ಲಿ ಬೆಲ್ಲ ಯಾಕೆ ತಿನ್ಬೇಕು ಗೊತ್ತಾ?

ಬೇಗ ಮಲಗಿದ್ರೆ ಆರೋಗ್ಯ : ಒಳ್ಳೆ ಆಹಾರದ ಜೊತೆ ಒಳ್ಳೆ ನಿದ್ರೆ ಕೂಡ ತೂಕ ಇಳಿಸಲು ನೆರವಾಗುತ್ತದೆ. ಹಾಗಾಗಿ ದಿನಕ್ಕೆ 7 -8 ಗಂಟೆ ನಿದ್ರೆಮಾಡಿ.  ಬೇಗ ಮಲಗಿ ಬೇಗ ಏಳುವ ಅಭ್ಯಾಸವಿದ್ರೆ ನಿಮ್ಮ ತೂಕ ಬೇಗ ಕಡಿಮೆಯಾಗುತ್ತದೆ. 

Follow Us:
Download App:
  • android
  • ios