ಕೆಲವೊಮ್ಮೆ ಕಿವಿಯಲ್ಲಿ ನೀರು ಸೇರಿ ಪಡಬಾರದ ಪಾಡು ಪಡಬೇಕು, ಹೀಗ್ ಮಾಡಿದ್ರೆ ಬೆಸ್ಟ್!
ನಮ್ಮ ದೇಹದ ಅಗತ್ಯ ಅಂಗಗಳಲ್ಲಿ ಕಿವಿ ಕೂಡ ಒಂದು. ಕಿವಿಯ ಆರೋಗ್ಯಕ್ಕೆ ಪ್ರತಿಯೊಬ್ಬರೂ ಗಮನ ನೀಡಬೇಕು. ಕಿವಿಯಲ್ಲಿ ನೀರು ಹೋದಾಗ ಕಂಡ ಕಂಡ ವಸ್ತುಗಳನ್ನು ಕಿವಿಯೊಳಗೆ ಹಾಕದೆ ಈ ಸರಳ ವಿಧಾನ ಅನುಸರಿಸಿ.
ನಮ್ಮ ದೇಹದ ಸೂಕ್ಷ್ಮ ಭಾಗಗಳಲ್ಲಿ ಕಿವಿಯೂ ಒಂದು. ಕಿವಿಗೆ ಸ್ವಲ್ಪ ಹಾನಿಯಾದರೆ ಅಥವಾ ಕಿವಿಯ ಒಳಗಡೆ ಏನಾದರೂ ಸೇರಿಕೊಂಡರೆ ನಮಗೆ ಕಿರಿಯಾಗುತ್ತದೆ. ಶಬ್ದವೂ ಸರಿಯಾಗಿ ಕೇಳಿಸುವುದಿಲ್ಲ. ಹೀಗೆ ಕೇಳಿಸದೇ ಇದ್ದಾಗ ಅನೇಕ ರೀತಿಯ ತೊಂದರೆ ಎದುರಿಸಬೇಕಾಗುತ್ತದೆ.
ಕೆಲವೊಮ್ಮೆ ಸ್ನಾನ (Bathing) ಮಾಡುವಾಗ ಅಥವಾ ಈಜುವ ಸಮಯದಲ್ಲಿ ಕಿವಿಯ ಒಳಗಡೆ ನೀರು (Water) ಸೇರಿಕೊಳ್ಳುತ್ತದೆ. ತಲೆ ಸ್ನಾನ ಮಾಡುವಾಗ ಕೂಡ ಕಿವಿಯ ಒಳಗಡೆ ನೀರು ಸೇರಿಕೊಳ್ಳುವುದು ಹೆಚ್ಚು. ಕಿವಿ (ear) ಯಲ್ಲಿ ನೀರು ಇರುವುದರಿಂದ ಒಂದು ರೀತಿಯ ಶಬ್ದ ಕೂಡ ಬರಲು ಪ್ರಾರಂಭವಾಗುತ್ತದೆ. ಆ ನೀರನ್ನು ಹೊರತೆಗೆಯುವುದು ಬಹಳ ಕಷ್ಟ. ಕೆಲವೊಮ್ಮೆ ಸತತವಾಗಿ ಉಜ್ಜಿದರೂ ಕಿವಿಯಿಂದ ನೀರು ಹೊರ ಬರುವುದಿಲ್ಲ. ಕಿವಿ ಸ್ವತಃ ತನ್ನನ್ನು ತಾನು ಸ್ವಚ್ಛಗೊಳಿಸುವಂತಹ ಮತ್ತು ರಕ್ಷಣೆ ಮಾಡಿಕೊಳ್ಳುವಂತಹ ರಚನೆಯನ್ನು ಹೊಂದಿದೆ. ಆದರೂ ಕೆಲವು ಸಂದರ್ಭದಲ್ಲಿ ಕಿವಿಗೆ ನೀರು ಸೇರಿಕೊಂಡು ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ. ಕೆಲವು ಸುಲಭ ಹಾಗೂ ಸುರಕ್ಷಿತ ವಿಧಾನದಿಂದ ಕಿವಿಯ ನೀರನ್ನು ಹೊರತೆಗೆಯಬಹುದು ಎಂದು ತಜ್ಞರು ಹೇಳ್ತಾರೆ.
Periods ರಕ್ತಸ್ರಾವದ ಹೊರತು ಪದೇ ಪದೇ ಸ್ಪಾಟಿಂಗ್ ಆಗೋದಿಕ್ಕೆ ಕಾರಣವೇನು?
ಈ ವಿಧಾನಗಳಿಂದ ಕಿವಿಯ ನೀರನ್ನು ಸುಲಭವಾಗಿ ಹೊರತೆಗೆಯಿರಿ :
ಗ್ರ್ಯಾವಿಟಿ ಟಿಲ್ಟ್ : ಗುರುತ್ವಾಕರ್ಷಣೆಯ ಟಿಲ್ಟ್ ವಿಧಾನದಿಂದ ಕಿವಿಯ ನೀರನ್ನು ಸುಲಭವಾಗಿ ಹೊರತೆಗೆಯಬಹುದು. ನೀರು ಸೇರಿಕೊಂಡ ಕಿವಿಯ ದಿಕ್ಕಿನಲ್ಲಿ ನಿಮ್ಮ ತಲೆಯನ್ನು ಓರೆಯಾಗಿಸಿ ನಂತರ ಒಂದು ಕಾಲಿನಿಂದ ಜಿಗಿಯಿರಿ. ಹೀಗೆ ಮಾಡುವುದರಿಂದ ನೀರನ್ನು ಹೊರಹಾಕುವುದು ಸುಲಭವಾಗುತ್ತದೆ. ತಲೆಯನ್ನು ಬಾಗಿಸಿ ಜಿಗಿಯುವುದರಿಂದ ಕಿವಿಯಿಂದ ನೀರು ಹೊರಬರಲು ಪ್ರಾರಂಭವಾಗುತ್ತದೆ.
ಸುಗಂಧ ದ್ರವ್ಯ ಅಲರ್ಜಿಯೆ? ಮನೆಯಲ್ಲೇ 'ಬಾಡಿ ಮಿಸ್ಟ್' ತಯಾರಿ ಹೇಳಿಕೊಟ್ಟಿದ್ದಾರೆ ನಟಿ ಅದಿತಿ ಪ್ರಭುದೇವ
ಆಕಳಿಸುವುದು ಮತ್ತು ಅಗಿಯುವುದು : ಕೆಲ ಗಂಟೆಗಳವರೆಗೆ ಆಕಳಿಸುವುದು ಮತ್ತು ಅಗಿಯುವುದರಿಂದ ಕಿವಿಯ ಯುಸ್ಟಾಚಿಯನ್ ಟ್ಯೂಬ್ ಗಳು ತೆರೆದುಕೊಳ್ಳುತ್ತವೆ. ಇದರಿಂದ ಕಿವಿಯ ಒಳಗಡೆ ಸೇರಿಕೊಂಡ ನೀರು ಹೊರಬರಲು ಸಹಾಯವಾಗುತ್ತದೆ.
ಶಾಖ ಮತ್ತು ಉಗಿ : ವಾರ್ಮ್ ಕಂಪ್ರೆಸ್ ಮತ್ತು ಹೇರ್ ಡ್ರಾಯರ್ ಬಳಕೆಯಿಂದ ಕಿವಿಯಲ್ಲಿ ಸಿಕ್ಕ ನೀರನ್ನು ಸುಲಭವಾಗಿ ಹೊರತೆಗೆಯಬಹುದು. ಶಾಖವು ಕಿವಿಯ ಕಾಲುವೆಯಲ್ಲಿನ ನೀರನ್ನು ಆವಿಯಾಗಿಸಲು ಅಥವಾ ಬರಿದಾಗಿಸಲು ಸಹಾಯ ಮಾಡುತ್ತದೆ. ಈ ವಿಧಾನ ಅನುಸರಿಸುವುದರಿಂದ ಕಿವಿಗೆ ಯಾವುದೇ ರೀತಿಯ ಹಾನಿಯಾಗುವುದಿಲ್ಲ.
ಆಲ್ಕೋಹಾಲ್ ಮತ್ತು ವಿನೆಗರ್ : ಆಲ್ಕೋಹಾಲ್ ಮತ್ತು ಬಿಳಿ ವಿನೆಗರ್ ಅನ್ನು ಸಮ ಪ್ರಮಾಣದಲ್ಲಿ ಸೇರಿಸಿ ಅದರ ಕೆಲವು ಹನಿಗಳನ್ನು ಕಿವಿಗೆ ಹಾಕಿ. ಈ ಮಿಶ್ರಣವು ಕಿವಿಯ ನೀರನ್ನು ಆವಿಯಾಗಿಸಲು ಮತ್ತು ಕಿವಿಗೆ ಹಾನಿಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ಸಹಕಾರಿಯಾಗಿದೆ. ಇದನ್ನು ಮಾಡುವ ಮೊದಲು ತಜ್ಞರನ್ನು ಭೇಟಿಯಾಗಿ. ಈಗಾಗಲೇ ಕಿವಿ ಸಮಸ್ಯೆ ಇರುವವರಿಗೆ ಇದ್ರಿಂದ ತೊಂದರೆ ಆಗುವ ಸಾಧ್ಯತೆ ಇರುತ್ತದೆ.
ಕಿವಿಗೆ ನೀರು ಸೇರಿಕೊಂಡಾಗ ಹೀಗೆ ಮಾಡಬೇಡಿ : ಕಿವಿಯಲ್ಲಿನ ನೀರನ್ನು ಹೊರತೆಗೆಯಲು ಸಿಕ್ಕ ಸಿಕ್ಕ ವಸ್ತುಗಳನ್ನು ಕಿವಿಗೆ ಹಾಕುವುದನ್ನು ತಪ್ಪಿಸಿ. ಹತ್ತಿ ಮುಂತಾದವುಗಳನ್ನು ಬಳಸುವಾಗಲೂ ಬಹಳ ಜಾಗರೂಕರಾಗಿರಿ. ಇವುಗಳಿಂದ ಕಿವಿ ಮುಚ್ಚಿಹೋಗಬಹುದು ಅಥವಾ ಹಾನಿಯಾಗಬಹುದು.
ಕಿವಿಗೆ ನೀರು ಸೇರದೇ ಇರಲು ಹೀಗೆ ಮಾಡಿ :
• ಈಜುವಾಗ ಈಯರ್ ಪ್ಲಗ್ ಅಥವಾ ಸ್ವಿಮ್ ಕ್ಯಾಪ್ ಬಳಸುವುದರಿಂದ ಕಿವಿಗೆ ನೀರು ಸೇರುವುದನ್ನು ತಪ್ಪಿಸಬಹುದು
• ಸ್ವಿಮಿಂಗ್ ಫೂಲ್ ನಿಂದ ಹೊರಗೆ ಬಂದ ತಕ್ಷಣವೇ ನಿಮ್ಮ ತಲೆಯನ್ನು ಬಾಗಿಸಿ ನೀರನ್ನು ಹೊರತೆಗೆದುಕೊಳ್ಳಿ
• ಈಜಿದ ತಕ್ಷಣ ಮತ್ತು ಸ್ನಾನದ ನಂತರ ಮೆತ್ತನೆಯ ಬಟ್ಟೆಯಿಂದ ನಿಮ್ಮ ಕಿವಿಯನ್ನು ಒರೆಸಿಕೊಳ್ಳಿ
• ಒಮ್ಮೆ ನೀವು ಈಜುಗಾರರಾಗಿದ್ದರೆ ಕಸ್ಟಮ್ ಫಿಟೆಡ್ ಈಯರ್ ಪ್ಲಗ್ ಗಳನ್ನು ಬಳಸಿ. ಇವು ನಿಮ್ಮ ಕಿವಿಗೆ ಹೆಚ್ಚು ಭದ್ರತೆಯನ್ನು ಒದಗಿಸುತ್ತದೆ.