Home Remedy
(Search results - 62)HealthDec 21, 2020, 6:49 PM IST
ಸುಕ್ಕುಗಳು, ಮೊಡವೆ ನಿವಾರಣೆಗೆ ಸೀಬೆ ಎಲೆಯೇ ಬೆಸ್ಟ್
ಮುಖದ ಮೇಲಿನ ಸುಕ್ಕುಗಳು, ಮೊಡವೆಗಳು, ಕಲೆಗಳು, ಅಲರ್ಜಿಗಳು ಅಥವಾ ಕಪ್ಪು ಕಲೆಗಳ ಬಗ್ಗೆ ಚಿಂತೆಯೇ? ಅವುಗಳನ್ನು ತೊಡೆದುಹಾಕಲು ಯಾವುದೇ ರಾಸಾಯನಿಕ ಚಿಕಿತ್ಸೆಯನ್ನು ಪಡೆಯುವ ಅಗತ್ಯವಿಲ್ಲ. ಇದಕ್ಕೆ ಸುಲಭ ಮತ್ತು ನೈಸರ್ಗಿಕ ಪರಿಹಾರವೆಂದರೆ ಸೀಬೆ ಎಲೆಗಳು. ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಈ ಅದ್ಭುತ ಎಲೆಯಿಂದ ಏನಲ್ಲಾ ಪ್ರಯೋಜನಗಳಿವೆ ನೋಡೋಣ...
HealthDec 10, 2020, 3:55 PM IST
ಅಬ್ಬಬ್ಬಾ ಲವಂಗ ಎಣ್ಣೆಯಿಂದ ಇಷ್ಟೆಲ್ಲಾ ಲಾಭಗಳುಂಟಾ?
ಒಳ್ಳೆಯದು ಸಣ್ಣ ಪ್ಯಾಕೇಜ್ ಗಳಲ್ಲಿ ಬರುತ್ತದೆ. ಲವಂಗದ ವಿಷಯಕ್ಕೆ ಬಂದಾಗ ಇದು ಖಂಡಿತವಾಗಿ ನಿಜ. ಈ ಆರೋಗ್ಯಕರ ಘಟಕಾಂಶವು ಆಯುರ್ವೇದ ಮತ್ತು ಸಾಂಪ್ರದಾಯಿಕ ಚೀನೀ ಔಷಧದ ಒಂದು ಭಾಗ. ಭಕ್ಷ್ಯಗಳ ಸ್ವಾದ, ಸುಹಾಸನೆ ಹೆಚ್ಚಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ, ಆದರೆ ಈ ಸಣ್ಣ ವಸ್ತುವಿಗೆ ಅಗಾಧವಾದ ಆರೋಗ್ಯಕರ ಲಾಭವಿದೆ. ಏಕೆಂದರೆ ಇದು ಆಂಟಿಮೈಕ್ರೊಬಿಯಲ್, ಆಂಟಿಫಂಗಲ್, ನಂಜುನಿರೋಧಕ, ಆಂಟಿವೈರಲ್ ಗುಣಗಳನ್ನು ಹೊಂದಿದ್ದು ಅದು ಅನೇಕ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
FoodNov 9, 2020, 4:13 PM IST
ಅನ್ನ, ಬೇಳೆ ಸಾರು ಜೊತೆ ಒಂದಿಷ್ಟು ತುಪ್ಪ ಸವಿದರೆ?
ಭಾರತೀಯ ಪಾಕ ಪದ್ಧತಿಯು ವಿವಿಧ ರೀತಿಯ ಪ್ರಾದೇಶಿಕ ಮತ್ತು ಸಾಂಪ್ರದಾಯಿಕ ಪಾಕಪದ್ಧತಿಗಳನ್ನು ಒಳಗೊಂಡಿದೆ. ಒಂದೆಡೆ, ಇದು ವಿಲಕ್ಷಣ, ಮಸಾಲೆಯುಕ್ತ ಮತ್ತು ಸುವಾಸನೆಯಾಗಿದೆ ಮತ್ತು ಇನ್ನೊಂದೆಡೆ-ಸರಳ, ಹಳ್ಳಿಗಾಡಿನ ಮತ್ತು ಸಾಧಾರಣ ಆಹಾರವಾಗಿದೆ. ತಂದೂರಿ ಚಿಕನ್, ದಾಲ್ ಮಖ್ನಿ ಮತ್ತು ಬೆಣ್ಣೆ ಪನೀರ್ ನಂತಹ ಮೌತ್ ವಾಟರಿಂಗ್ ಆಹಾರಗಳಿಂದ ಹಿಡಿದು ಖಿಚ್ಡಿ, ದಾಲ್-ಚವಾಲ್, ಮತ್ತು ಸಬ್ಜಿ-ರೊಟಿಯಂತಹ ಮನೆಯ ಆಹಾರಗಳವರೆಗೆ ದೇಶವು ಎಲ್ಲವನ್ನೂ ಹೊಂದಿದೆ.
FoodNov 7, 2020, 4:51 PM IST
ಅನೇಕ ರೋಗಕ್ಕೆ ರಾಮಬಾಣ ಸೋಂಪು, ಪ್ರಯೋಜನ ತಿಳಿದ್ರೆ ಆಶ್ಚರ್ಯವಾಗ್ತೀರಿ!
ಸೋಂಪನ್ನು ಸಾಮಾನ್ಯವಾಗಿ ದೇಶಾದ್ಯಂತ ಬಳಸಲಾಗುತ್ತದೆ. ಎಲ್ಲೋ ಒಂದು ಮಸಾಲೆ ಆಗಿ, ಕೆಲವೊಮ್ಮೆ ಮೌತ್ ಫ್ರೆಶ್ನರ್ ಆಗಿ, ಕೆಲವೊಮ್ಮೆ ಹೋಮ್ ಮೆಡಿಸಿನ್ ಆಗಿ ಬಳಕೆ ಮಾಡಲಾಗುತ್ತದೆ. ಏಕೆಂದರೆ ಫೆನ್ನೆಲ್/ ಸೋಂಪು ಅಂತಹ ಅನೇಕ ಗುಣಗಳನ್ನು ಹೊಂದಿದೆ, ಇದು ದೇಹಕ್ಕೆ ಬಹಳ ಪ್ರಯೋಜನಕಾರಿ. ಇದರಿಂದ ಏನೆಲ್ಲಾ ಉಪಯೋಗ ಇದೆ ಅನ್ನೋದನ್ನು ನೀವು ತಿಳಿದುಕೊಂಡು ಪ್ರತಿದಿನ ಒಂದು ಚಮಚ ಸೋಂಪು ಕಾಳನ್ನು ತಪ್ಪದೆ ಸೇವಿಸಿ...
LifestyleOct 19, 2020, 3:57 PM IST
ಹಾಲಿಲ್ಲದೇ ಮಾಡಿದ ಅರಿಶಿನದ ಹಾಲಿನಲ್ಲಿದೆ ಮ್ಯಾಜಿಕಲ್ ಪವರ್
ಈಗ ಎಲ್ಲೆಡೆ ಕರೋನ ಭಯ ಆವರಿಸಿದೆ. ಸಣ್ಣ ಪುಟ್ಟ ಶೀತ-ಕೆಮ್ಮು ಬಂದರೂ ಎಲ್ಲಿ ಕರೋನ ಬಂತೆಂಬ ಆತಂಕ. ಈ ಸಮಯದಲ್ಲಿ ಗಂಟಲು ನೋವು ಸಾಮಾನ್ಯ, ಆಗ ಬೆಸ್ಟ್ ಮನೆಮದ್ದು ಅರಿಶಿನ ಹಾಲು. ಆದರೆ ಹಲವರಿಗೆ ಹಾಲಿನ ಅಲರ್ಜಿ ಇರುತ್ತದೆ. ಅಂತಹವರಿಗೆ ಇಲ್ಲಿದೆ ಹಾಲು ಬಳಸದೆ ಅರಿಶಿನ ಹಾಲು ತಯಾರಿಸುವ ಹೊಸ ವಿಧಾನ, ಇದು ಶೀತ-ಕೆಮ್ಮಿನಿಂದ ನಮ್ಮನ್ನು ದೂರವಿಡುವುದಲ್ಲದೆ ಮುಖಕ್ಕೆ ಒಳ್ಳೆಯ ಹೊಳಪು ಸಹ ಕೊಡುತ್ತದೆ.
WomanOct 15, 2020, 2:06 PM IST
ಮಹಿಳೆಯರು ಹೇಳಿ ಕೊಳ್ಳದ ಸಾಮಾನ್ಯ ಸಮಸ್ಯೆಗಿಲ್ಲಿದೆ ಮನೆ ಮದ್ದು!
ಮಹಿಳೆಯರು ಎದುರಿಸುತ್ತಿರುವ, ಹೇಳಲು ಮುಜುಗರ ಎನಿಸುವ ಸೌಂದರ್ಯ ಸಮಸ್ಯೆಗಳೆಂದರೆ ಪ್ರೈವೇಟ್ ಜಾಗ ಕಪ್ಪಾಗಿರುವ ಬಗ್ಗೆ, ಈ ಇಂಟಿಮೇಟ್ ಪ್ರದೇಶಗಳು ಸಾಮಾನ್ಯವಾಗಿ ದಿನಕಳೆದಂತೆ ಡಾರ್ಕ್ ಆಗುತ್ತವೆ ಮತ್ತು ಬಣ್ಣ ವ್ಯತ್ಯಾಸವು ಸಾಕಷ್ಟು ಗೋಚರಿಸುತ್ತದೆ. ಫ್ರಿಕ್ಷನ್, rashes, ಬಿಗಿ ಬಟ್ಟೆಗಳು, ಬೆವರುವುದು ಮತ್ತು ಹಾರ್ಮೋನುಗಳ ಅಂಶಗಳಿಂದಲೂ ಇದು ಸಂಭವಿಸಬಹುದು. ಈ ಬಗ್ಗೆ ಮಹಿಳೆಯರು ಎಚ್ಚೆತ್ತುಕೊಂಡರೆ ಒಳಿತು.
HealthOct 12, 2020, 1:55 PM IST
ಶುಂಠಿ ಹಾಲಲ್ಲಿರುವ ಔಷಧೀಯ ಗುಣಗಳು ಇಲ್ಲಿವೆ ನೋಡಿ
ನೀವು ಶುಂಠಿ ಚಹಾವನ್ನು ಹಲವು ಬಾರಿ ಸೇವಿಸಿರಬಹುದು ಮತ್ತು ಅದು ಎಲ್ಲರಿಗೂ ಇಷ್ಟವಾಗುತ್ತದೆ ಆದರೆ ನೀವು ಹಾಲಿನೊಂದಿಗೆ ಬೆರೆಸಿದ ಶುಂಠಿಯನ್ನು ಕುಡಿದರೆ ಅದರ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
HealthOct 10, 2020, 4:45 PM IST
ವೈಟ್ ಡಿಸ್ಚಾರ್ಜ್ ಸಮಸ್ಯೆ ಇದೆಯೇ? ಯೋಚನೆ ಬಿಡಿ ಈ ಮನೆಮದ್ದು ಟ್ರೈ ಮಾಡಿ
ವೈಟ್ ಡಿಸ್ ಚಾರ್ಜ್, ಬಿಳಿ ಸೆರಗು ಅಥವಾ ಲ್ಯುಕೋರೊಹಿಯಾ ಮಹಿಳೆಯರಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಸ್ವಲ್ಪ ಬಿಳಿ ವಿಸರ್ಜನೆ ಒಂದು ಸಮಸ್ಯೆಯಲ್ಲ ಆದರೆ ಅದು ಹೆಚ್ಚಾದರೆ ಕಾಳಜಿಯ ವಿಷಯವಾಗಿದೆ. ವಿಸರ್ಜನೆ ತುಂಬಾ ಇದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು, ಆದರೆ ಸೌಮ್ಯ ವಿಸರ್ಜನೆಯ ಸಮಸ್ಯೆಯನ್ನು ಪರಿಹರಿಸುವ ಕೆಲವು ಮನೆಮದ್ದುಗಳು ಇಲ್ಲಿವೆ.
HealthAug 26, 2020, 2:40 PM IST
ಎಳನೀರೆಂದರೆ ಸುಮ್ನೆ ಅಲ್ಲ, ಅದು ಆರೋಗ್ಯದ ಆಗರ, ಅಮೃತಕ್ಕೆ ಸಮ...
ಎಳನೀರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದು ಮತ್ತು ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲ. ಇದು ನಿಮಗೆ ತಿಳಿದಿಲ್ಲದ ಅನೇಕ ಕಾಯಿಲೆಗಳಿಗೆ ಪರಿಹಾರವಾಗಿದೆ. ಎಳನೀರಿನ ಅನೇಕ ಲಾಭಗಳು ಇಲ್ಲಿವೆ.
FoodAug 26, 2020, 1:48 PM IST
ರೋಗನಿರೋಧಕ ಶಕ್ತಿ ಹೆಚ್ಚಿಸೋ ದೊಡ್ಡಪತ್ರೆ ಎಲೆಯ ಖಾದ್ಯಗಳು
ದೊಡ್ಡಪತ್ರೆ ಎಲೆ ಶೀತ, ಕೆಮ್ಮಿಗೆ ಅತ್ಯುತ್ತಮ ಮನೆಮದ್ದು. ಮಕ್ಕಳಿಗಂತೂ ಶೀತ ಪ್ರಾರಂಭವಾದ ತಕ್ಷಣ ಕೊಟ್ರೆ ಕೂಡಲೇ ಶಮನವಾಗಿಸೋವಂತಹ ತಾಕತ್ತು ದೊಡ್ಡಪತ್ರೆ ಎಲೆಗಿದೆ. ಇದ್ರಿಂದ ತಂಬುಳಿ, ಚಟ್ನೆ ಸೇರಿದಂತೆ ಕೆಲವು ಖಾದ್ಯಗಳನ್ನು ಕೂಡ ಸಿದ್ಧಪಡಿಸಬಹುದು.
HealthAug 25, 2020, 7:37 PM IST
ಶುಂಠಿ ಟೀ - ಶೀತ ಕೆಮ್ಮಿನಿಂದ ಹಿಡಿದು ಮುಟ್ಟಿನ ನೋವಿಗೂ ಬೆಸ್ಟ್ ಮನೆ ಮದ್ದು
ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಶುಂಠಿ ಟೀ ಒಂದು ಬೆಸ್ಟ್ #HomeRemedy. ಶೀತ ಮತ್ತು ಕೆಮ್ಮನ್ನು ಓಡಿಸಲು ಉತ್ತಮ ಮಾರ್ಗವೆಂದರೆ ಬಿಸಿ ಶುಂಠಿ ಚಹಾ. ವಿಟಮಿನ್ ಸಿ, ಮೆಗ್ನೀಷಿಯಮ್ ಮತ್ತು ಇತರ ಖನಿಜಗಳು ಸಮೃದ್ಧವಾಗಿರುವ ಶುಂಠಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಒಂದು ಕಪ್ ಜಿಂಜರ್ ಟೀಯ ಹೆಲ್ತ್ ಬೆನಿಫಿಟ್ ಇಲ್ಲಿದೆ.
HealthAug 17, 2020, 2:26 PM IST
ಪಾರಿಜಾತ ಪುರಾಣ; ಆರೋಗ್ಯಕ್ಕೆ ರಾಮಬಾಣ
ಸಾಮಾನ್ಯವಾಗಿ ಕೆಳಗೆ ಬಿದ್ದ ಹೂವುಗಳನ್ನು ದೇವರಿಗೇರಿಸುವುದಿಲ್ಲ. ಆದರೆ, ಸ್ವರ್ಗದ ವೃಕ್ಷಗಳಾದ ಕಾರಣ ಪಾರಿಜಾತ ಹಾಗೂ ಬಕುಳದ ಹೂವುಗಳು ನೆಲಕ್ಕೆ ಬಿದ್ದರೂ ದೇವರ ಮುಡಿಗೇರಲು ಅರ್ಹವಾಗಿವೆ ಎಂಬ ನಂಬಿಕೆ ಇದೆ.
Fact CheckJul 16, 2020, 4:03 PM IST
Fact Check| ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿದ ಮನೆಮದ್ದು!
ಪಾಂಡೀಚೇರಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ರಾಮು ಎಂಬವರು ಕೊರೋನಾ ಸೋಂಕು ಗುಣಪಡಿಸುವ ಮನೆಮದ್ದೊಂದನ್ನು ಕಂಡುಹಿಡಿದಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಮನೆಮದ್ದನ್ನು ಒಪ್ಪಿಕೊಂಡಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದು ನಿಜಾನಾ? ಇಲ್ಲಿದೆ ವಿವರ
HealthJun 19, 2020, 7:22 PM IST
ಪಚನ ಕ್ರಿಯೆ ಉತ್ತಮಗೊಳಿಸುವ ದ್ರಾಕ್ಷಿ, ಮಲಬದ್ಧತೆಗೆ ಮದ್ದು
ಒಣದ್ರಾಕ್ಷಿ ನೋಡಲು ಸಣ್ಣದಾದರೂ, ಉಪಯೋಗ ಅದ್ಭುತ. ಹಲವು ಉಪಯೋಗಗಳನ್ನು ಹೊಂದಿರುವ ಒಣದ್ರಾಕ್ಷಿ ಒಂದು ನ್ಯಾಚುರಲ್ ಫುಡ್. ಸಾಮಾನ್ಯವಾಗಿ ಒಣ ದ್ರಾಕ್ಷಿ ಸೇವಿಸಲು ಬೆಳಗ್ಗೆ ಸೂಕ್ತ ಸಮಯ. ಇದು ನಿಮ್ಮ ದೇಹಕ್ಕೆ ಆರೋಗ್ಯಕರ ಆರಂಭವನ್ನು ನೀಡುತ್ತದೆ. ಹಾಗೂ ಜಂಕ್ ಫುಡ್ ತಪ್ಪಿಸಲು ಊಟಗಳ ನಡುವೆ ಲಘು ಆಹಾರವಾಗಿಯೂ ಸೇವಿಸಬಹುದು. ಹಲವು ವಿಟಮಿನ್ಗಳು ಹಾಗೂ ಖನಿಜಾಂಶಗಳು ಹೊಂದಿರುವ ಇದು ಪ್ರತಿರೋಧಕ ಶಕ್ತಿ ಹೆಚ್ಚಿಸಿ ಜ್ವರ, ಆ್ಯಸಿಡಿಟಿಯನ್ನು ಹಾಗೂ ಇತರೆ ಹಲವು ಸಮಸ್ಯೆಗಳಿಂದ ರಕ್ಷಣೆ ನೀಡುವುದು.
HealthApr 15, 2020, 5:29 PM IST
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಕೊರೋನಾ ನಡೆಯಲಿ ಇಲ್ಲಿವೆ ಆಯುಷ್ ಟಿಪ್ಸ್
ಇಡೀ ಪ್ರಪಂಚವನ್ನೇ ನಡುಗಿಸಿರುವ ಕೊರೋನಾ ವೈರಸ್ಗೆ ಇಲ್ಲಿವರೆಗೆ ಯಾವುದೇ ಮದ್ದು ಇಲ್ಲ. ಆದರೆ ಇದರ ವಿರುದ್ಧ ಹೋರಾಡಲು ದೇಹವನ್ನು ರೆಡಿ ಮಾಡಿ ಕೊಳ್ಳುವುದು ನಮ್ಮ ಕೈಯಲ್ಲಿದೆ. ಅಂದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊರೋನಾ ಬಾರದಂತೆ ದೂರವಿಡಲಂತೂ ಸಾಧ್ಯವಿದೆ. ಅದು ಹೇಗೆ ಎಂದು ಆಯುಷ್ ಇಲಾಖೆ ಕೆಲವು ಟಿಪ್ಸ್ ನೀಡಿದೆ. ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ವೈದ್ಯರೂ ಇದನ್ನು ಶಿಫಾರಸ್ ಮಾಡಿದ್ದು, ಪ್ರಧಾನಿ ಮೋದಿ ಏಪ್ರಿಲ್ 14ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದಾಗ ಈ ಬಗ್ಗೆ ಉಲ್ಲೇಖಿಸಿದ್ದಾರೆ. ಏನವು ಮನೆಮದ್ದು?