ವದನದ ಕಲೆಗೆ ಆಲೂ ರಸವೆಂಬ ಸೌಂದರ್ಯ ವರ್ಧಕ!
ಮುಖದ ಮೇಲೆ ಮೂಡುವ ಕಪ್ಪು ಕಲೆ ಮುಖದ ಅಂದವನ್ನು ಹಾಳು ಮಾಡುತ್ತದೆ. ಈ ಕಪ್ಪು ಕಲೆಯನ್ನು ನಿವಾರಿಸಿ ಸುಂದರ ತ್ವಚೆಗಾಗಿ ಇಲ್ಲಿವೆ ಟಿಪ್ಸ್...
ಹುಡುಗಿಯರು ಯಾವಾಗಲೂ ತಾವು ಚೆನ್ನಾಗಿ ಕಾಣಬೇಕು, ತ್ವಚೆ ಚೆನ್ನಾಗಿರಬೇಕೆಂದು ಬಯಸುತ್ತಾರೆ. ಆದರೆ ಮುಖದಲ್ಲಿ ಮೂಡಿ ಬರುವ ಕಪ್ಪು ಕಲೆಗಳು ಅಂದವನ್ನೇ ಕೆಡಿಸುತ್ತದೆ. ಇಂಥ ಸಮಸ್ಯೆ ನಿಮ್ಮನ್ನೂ ಕಾಡಿದರೆ ಯಾವುದೋ ಕ್ರೀಮ್ ಹಾಕಿ ಮುಖ ಹಾಳು ಮಾಡಿಕೊಳ್ಳಬೇಡಿ. ಬದಲಾಗಿ ಒಂದಿಷ್ಟು ಸಿಂಪಲ್ ಟಿಪ್ಸ್ ಪಾಲಿಸಿ, ಕಪ್ಪು ಕಲೆ ಸಂಪೂರ್ಣವಾಗಿ ಮಾಯವಾಗುವಂತೆ ಮಾಡಿ..
- ನಿಂಬೆ ರಸಕ್ಕೆ ಒಂದು ಟೀ ಚಮಚ ಜೇನು ತುಪ್ಪ ಬೆರೆಸಿ ಕಲೆ ಇರುವಲ್ಲಿ ಲೇಪಿಸಿ. 20 ನಿಮಿಷದ ಬಳಿಕ ನೀರಿನಿಂದ ತೊಳೆಯಿರಿ. ಇದು ಚರ್ಮದ ಮೇಲಿನ ಕಪ್ಪು ಚುಕ್ಕೆಯನ್ನು ಮಾಯ ಮಾಡುತ್ತವೆ.
ಸ್ಕಿನ್ ಡ್ಯಾಮೇಜ್ ಮಾಡೋ ರಾತ್ರಿ ತಪ್ಪುಗಳು!
- ಓಟ್ಸ್ ಪುಡಿಗೆ ಲಿಂಬೆರಸ ಮತ್ತು ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ಮುಖಕ್ಕೆ ಹಚ್ಚಿ ಸ್ವಲ್ಪ ಮಸಾಜ್ ಮಾಡಿ ಹಾಗೆ ಬಿಡಿ, ಸ್ವಲ್ಪ ಸಮಯದ ಬಳಿಕ ವಾಶ್ ಮಾಡಿ.
- ಟೊಮ್ಯಾಟೊ ರಸಕ್ಕೆ 4 ಸ್ಪೂನ್ ಮಜ್ಜಿಗೆ ಮಿಕ್ಸ್ ಮಾಡಿ ಹಚ್ಚಿಕೊಳ್ಳಿ. ಟೊಮ್ಯಾಟೊದಲ್ಲಿರುವ ಲೈಕೋಪೀನ್ ಅಂಶ ಚಮರ್ದಲ್ಲಿನ ಕಲೆ ನಿವಾರಿಸುತ್ತದೆ.
- ಹಸಿ ಹಾಲನ್ನು ಹತ್ತಿಯಲ್ಲಿ ಅದ್ದಿ ಕಲೆಗಳ ಮೇಲೆ ಇಟ್ಟು ಸುಮಾರು ಹದಿನೈದು ನಿಮಿಷದ ನಂತರ ತೆಗೆಯಿರಿ. ಹಾಲಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಕಲೆಗಳನ್ನು ನಿವಾರಿಸುತ್ತದೆ.
ಸೌಂದಯ ವರ್ಧಕ ಬಸವನ ಹುಳು...ಇದು ಸತ್ಯ ರೀ!
- ಒಂದು ಚಮಚ ಕಿತ್ತಳೆ ರಸದೊಂದಿಗೆ 2 ಹನಿನಿಂಬೆ ರಸ, ರೋಸ್ ವಾಟರ್ ಮಿಕ್ಸ್ ಮಾಡಿ ಕಲೆಗಳಿರುವ ಜಾಗಕ್ಕೆ ಹಚ್ಚಿ. ಇದರಲ್ಲಿರುವ ಸಿಟ್ರಿಕ್ ಆ್ಯಸಿಡ್ ಕಲೆಗೆ ಹೇಳುತ್ತೆ ಗುಡ್ ಬೈ.
- ಆಲೂಗಡ್ಡೆ ರಸವನ್ನು ಹತ್ತಿ ಉಂಡೆ ಸಹಾಯದಿಂದ ಕಲೆಗಳಿರುವ ಜಾಗಕ್ಕೆ ಲೇಪಿಸಿ.
- ಈರುಳ್ಳಿ ರಸವನ್ನು ನಿಮ್ಮ ಮುಖಕ್ಕೆ ಹಚ್ಚಿ, ಕೆಲವು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದರಿಂದಲೂ ಮುಖದ ಕಲೆ ಹೋಗುತ್ತದೆ.