ಇದು ಬ್ರಿಟನ್‌ನ ಮಾಲ್ಕಂ ಮ್ಯಾಕ್ಡೊನಾಲ್ಡ್ ಎಂಬಾತನ ಕತೆ.  ಈತ ಮೆಕ್ಯಾನಿಕ್. ೨೦೧೪ರಲ್ಲಿ ಈತನಿಗೆ ಪೆರೀನಿಯಂ ಇನ್‌ಫೆಕ್ಷನ್ ಶುರುವಾಯಿತು. ಕಾಲು ಮತ್ತು ಮೈ ಬೆರಳುಗಳು, ಮತ್ತು ಶಿಶ್ನ ಕಪ್ಪಗಾಗಲು ಆರಂಭವಾಯಿತು. ನಂತರ ಇವುಗಳಲ್ಲಿ ಸೋಂಕಿನಿಂಧ ಕೀವು ತುಂಬಿಕೊಂಡಿತು. ನಂತರ ಇದು ಗಂಭೀರವಾಯಿತು. ಶಿಶ್ನವನ್ನು ಕತ್ತರಿಸಿ ತೆಗೆಯದೇ ಇದ್ದರೆ ಆತ ಬದುಕುಳಿಯುವುದೇ ಅನುಮಾನ ಎಂಬ ಪರಿಸ್ಥಿತಿ ಬಂತು. ಆದರೂ ಆತ ಅದನ್ನು ಇಟ್ಟುಕೊಂಡೇ ಓಡಾಡುತ್ತಿದ್ದ.

#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ!

ಇದು ಆತನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸಂಕಷ್ಟದ ಸನ್ನಿವೇಶವನ್ನೇ ತಂದಿಟ್ಟಿತು. ಸರಿಯಾಗಿ ಮೂತ್ರ ಮಾಡಲಾಗುತ್ತಿರಲಿಲ್ಲ. ಸಂಭೋಗದ ಪ್ರಶ್ನೆಯಂತೂ ಇಲ್ಲವೇ ಇಲ್ಲ ಬಿಡಿ! ಪುರುಷತ್ವವನ್ನೇ ಕಳೆದುಕೊಂಡ ಕೊರಗಿನಲ್ಲಿ ಹುಚ್ಚನಂತಾದ ಈತ ಸಿಕ್ಕಾಪಟ್ಟೆ ಮದ್ಯವ್ಯಸನಿಯಾದ. ಎರಡು ವರ್ಷ ಕಾಲ ಬರೀ ನೆರಳಿನಂತೆ ತಿರುಗಾಡಿಕೊಂಡಿದ್ದ. ನಂತರ ಒಂದು ದಿನ ಅದು ಅವನ ತೊಡೆಸಂದಿಯಿಂದ ಕಳಚಿ ಬಿದ್ದೇ ಬಿಟ್ಟಿತು! ಅಷ್ಟು ಹೊತ್ತಿಗೆ ಆತ ಅದಕ್ಕೆ ತಯಾರಾಗಿಬಿಟ್ಟಿದ್ದ. ನಿರ್ಲಿಪ್ತನಾಗಿ ಅದನ್ನು ಪೇಪರ್‌ನಲ್ಲಿ ಸುತ್ತಿ ಡಸ್ಟ್‌ಬಿನ್‌ಗೆ ಎಸೆದು ಮುಂದುವರಿದ. ಇದರಿಂದ ಉಂಟಾದ ಕೀಳರಿಮೆಯಿಂದಾಗಿ ಸಾಮಾಜಿಕ ಬದುಕಿನಿಂದ, ಬಂಧುಮಿತ್ರರಿಂದ ದೂರವಾಗಿಯೇ ಉಳಿದ. ಒಂಟಿತನ ಕಿತ್ತು ತಿನ್ನತೊಡಗಿತು.

ಆಗ ಯಾರೋ ಈತನಿಗೆ "ಪೆನಿಸ್‌ ಮಾಸ್ಟರ್‌' ಬಗ್ಗೆ ಹೇಳಿದರು. ಲಂಡನ್‌ನ ಯೂನಿವರ್ಸಿಟಿ ಕಾಲೇಜ್‌ ಹಾಸ್ಪಿಟಲ್‌ನ ಪ್ರೊ.ಡೇವಿಡ್‌ ರಾಲ್ಪ್‌ ಎಂಬ ತಜ್ಞರು ಶಿಶ್ನ ತಜ್ಞರೆಂದೇ ಹೆಸರಾದವರು. ಇವರು ಶಿಶ್ನವೇ ಇಲ್ಲದೆ ಜನಿಸಿದ ಒಬ್ಬ ವ್ಯಕ್ತಿಗೆ ಜೈವಿಕ ಶಿಶ್ನವೊಂದನ್ನು ಸಿದ್ಧಪಡಿಸಿ ಅಂಟಿಸಿ ಸರ್ಜರಿ ಮಾಡಿ ಆ ಮೂಲಕ ಹೆಸರಾದವರು. ಮಾಲ್ಕಂ ಆತನನ್ನು ಭೇಟಿಯಾದ. ಡೇವಿಡ್‌ ರಾಲ್ಫ್‌ ಆತನಿಗೊಂದು ಜೈವಿಕ ಶಿಶ್ನ ಸಿದ್ಧಪಡಿಸಿಕೊಡಲು ಒಪ್ಪಿದರು. 
ಆದರೆ ಹೀಗೆ ಜೈವಿಕ ಶಿಶ್ನವನ್ನು ಅದನ್ನು ಯಾರ ದೇಹಕ್ಕೆ ಅಂಟಿಸುತ್ತಾರೋ ಆತನ ದೇಹದ ಜೀವಕೋಶಗಳಿಂದಲೇ, ಆತನ ದೇಹಕ್ಕೆ ಅಂಟಿಕೊಂಡಂತೆಯೇ ಸಿದ್ಧಪಡಿಸಬೇಕು. ಇದಕ್ಕೆ ಎರಡು ವರ್ಷ ತಗಲುತ್ತದೆ. ಮಾಲ್ಕಂ ಇದಕ್ಕೆ ಒಪ್ಪಿದ. ಹಾಗೆ ರಾಲ್ಫ್ ಆತನ ತೋಳಿನಲ್ಲಿ ಶಿಶ್ನವನ್ನು ಬೆಳೆಸಿಕೊಡಲು ಮುಂದಾದರು. ಹೀಗೆ ೪೫ ವರ್ಷದ ಮಾಲ್ಕಂನ ಭಾಗ್ಯದ ಬಾಗಿಲು ತೆರೆಯಿತು. ಆದರೆ ಶಿಶ್ನದ ಸರ್ಜರಿಗೆ ೪೪ ಲಕ್ಷ ರೂಪಾಯಿ ವೆಚ್ಚವಾಯಿತು. ಅದು ಮೂತ್ರ ಮಾಡಲು ಸಾಧ್ಯವಾಗಲು ಕೊಳವೆ ಜೋಡಣೆ, ಅಗತ್ಯವಾದಾಗ ನಿಗುರಲು ಬೇಕಾದ ನರಕೋಶಗಳ ವ್ಯವಸ್ಥಿತ ಅಳವಡಿಕೆ ಎಲ್ಲವೂ ಆಗಿದೆ. 

#Feelfree: ಹೆಂಡ್ತಿ ಹಾದರ ನೋಡೋ ಗತಿ ವೈರಿಗೂ ಬರಬಾರ್ದು!

ಆದರೆ ಅದು ಮಾಲ್ಕಂನ ತೊಡೆಸಂದಿಯಲ್ಲಿ, ಅದು ಎಲ್ಲಿರಬೇಕೋ ಅಲ್ಲಿ, ಜೋಡಿಸಲು ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ. ಕೊರೊನಾ ಸೋಂಕಿನ ಪರಿಣಾಮ ಶಿಶ್ನ ಜೋಡಣೆಯ ಸರ್ಜರಿ ಮುಂದೆ ಹೋಗುತ್ತಲೇ ಇದೆ. ಈ ವರ್ಷದ ಕೊನೆಯಲ್ಲಾದರೂ ತಾನು ಸರಿಯಾದ ಪುರುಷ ಅನ್ನಿಸಿಕೊಳ್ಳಬಹುದು ಎಂಬ ಆತನ ಕನಸು ನನಸಾಗಲು ಕಾಯುತ್ತಲೇ ಇದೆ. 

ಮೊದಲ ಬಾರಿಗೆ ತನ್ನ ಬಲಗೈಯಲ್ಲಿ ಮೂಡಿದ ತನ್ನ ಶಿಶ್ನವನ್ನು ನೋಡಿ ಆತನಿಗೆ ಅಯೋಮಯ ಅನಿಸಿತಂತೆ. ನಂತರ ಅದು ಬೆಳೆಯುತ್ತ ಬಂದಂತೆ, ಅದು ತನ್ನದು ಎಂಬ ಹೆಮ್ಮೆಯೂ ಮೂಡಿತು ಎನ್ನಿ. ಆದರೆ ಇದರಿಂದಾಗಿ ಆತ ಸಾಕಷ್ಟು ಫಜೀತಿಯನ್ನೂ ಅನುಭವಿಸಿದ್ದಾನೆ. ಈತ ಯಾವಾಗಲೂ ತುಂಬುತೋಳಿನ ಶರಟನ್ನೇ ಹಾಕುತ್ತಾನೆ. ಯಾಕೆಂದರೆ ಶಿಶ್ನ ಇತರರಿಗೆ ಕಾಣಿಸಬಾರದಲ್ಲ. ಹಾಗೇ ಸೆಕ್ಯುರಿಟಿ ತಪಾಸಣೆಗಳಿದ್ದಲ್ಲಿ ಆತ ಹೋಗುವುದೇ ಇಲ್ಲ. ಅವರು ಈ ತೋಳಿನಲ್ಲಿ ಕಾಣಿಸುವ ಗಂಟಿನ ಬಗ್ಗೆ ಅನುಮಾನ ಮೂಡಿ ಎಲ್ಲರೆದುರು ಬಟ್ಟೆ ಬಿಚ್ಚಿಸಿ ನೋಡುತ್ತಾರೆ. ತೋಳಿನಲ್ಲಿ ಶಿಶ್ನವಿದೆ ಎಂದು ಹೇಳಿದರೂ ನಂಬುವುದಿಲ್ಲ ಎಂಬುದು ಮಾಲ್ಕಂನ ಪೇಚಾಟ. 
ಶಿಶ್ನ ಜೋಡಣೆಯ ಬಳಿಕ ಸೆಕ್ಸ್‌ ಜೀವನವನ್ನು ಮರಳಿ ಆರಂಭಿಸಲು ಆತ ಉತ್ಸುಕನಾಗಿದ್ದಾನಂತೆ.