Weight Loss Tips: ಫಿಗರ್ ಚಿಂತೆ ಇರೋ ಹುಡುಗಿರು ರಾತ್ರಿ 8 ಗಂಟೆ ನಂತ್ರ ಇದನ್ನ ತಿನ್ನಿ
ತೂಕ ನಿಯಂತ್ರಣದಲ್ಲಿಡಬೇಕೆಂದು ಎಲ್ಲರೂ ಅಂದುಕೊಳ್ತಾರೆ. ಆದ್ರೆ ಒಂದಾದ್ಮೇಲೆ ಒಂದು ಆಹಾರ ಬಾಯಿಗೆ ಹೋಗ್ತಿರುತ್ತದೆ. ಅದೂ ರಾತ್ರಿಯಾಗ್ತಿದ್ದಂತೆ ಕೆಲವರು ಯರ್ರಾಬಿರ್ರಿ ತಿನ್ನುತ್ತಾರೆ. ಹಸಿವಾಗ್ತಿದೆ ಎನ್ನುವವರು ರಾತ್ರಿ ಊಟದಲ್ಲಿ ಆರೋಗ್ಯಕ ಆಹಾರ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುವ ಚಿಂತೆ ಇರೋದಿಲ್ಲ.
ಫಿಗರ್ ಕಾಪಾಡಿಕೊಳ್ಳೋಕೆ ಹೆಚ್ಚು ಆದ್ಯತೆ ನೀಡೋದು ಹುಡುಗಿಯರು. ಹಾಗಾಗಿ ಫಿಗರ್ ಎಂದಾಗ ನೆನಪಾಗೋದು ಹುಡುಗಿಯರು. ಸದಾ ಫಿಟ್ನೆಸ್ ಬಗ್ಗೆ ತಲೆ ಕೆಡಿಸಿಕೊಳ್ಳುವ ಹುಡುಗಿಯರು ಸಣ್ಣವಾಗಲು ಇನ್ನಿಲ್ಲದ ಕಸರತ್ತು ಮಾಡ್ತಾರೆ. ಎಷ್ಟೇ ಮಾಡಿದ್ರೂ ತೆಳ್ಳಗಾಗೋದು ಕೆಲವರಿಗೆ ಕಷ್ಟ. ಇದಕ್ಕೆ ಆಹಾರ ಮುಖ್ಯ ಪಾತ್ರವಹಿಸುತ್ತದೆ. ಅದರಲ್ಲೂ ರಾತ್ರಿ ಆಹಾರದ ಬಗ್ಗೆ ಹುಡುಗಿಯರು ಹೆಚ್ಚು ಗಮನ ಹರಿಸಬೇಕು. ಬೆಳಿಗ್ಗೆ ಉಪಹಾರವನ್ನು ರಾಜನಂತೆ, ಮಧ್ಯಾಹ್ನ ಮಂತ್ರಿಯಂತೆ ಹಾಗೂ ರಾತ್ರಿ ಭಿಕ್ಷುಕನಂತೆ ಸೇವನೆ ಮಾಡ್ಬೇಕೆಂದು ಹೇಳಲಾಗುತ್ತದೆ. ಇದೇ ಕಾರಣಕ್ಕೆ ಕೆಲ ಮಹಿಳೆಯರು ರಾತ್ರಿ ಊಟ ಮಾಡೋದಿಲ್ಲ. ಮತ್ತೆ ಕೆಲವರು ಕಡಿಮೆ ತಿನ್ನುತ್ತಾರಾದ್ರೂ ತೂಕ ಹೆಚ್ಚಾಗುವ ಆಹಾರ ಸೇವನೆ ಮಾಡ್ತಾರೆ. ರಾತ್ರಿ 7 ಗಂಟೆಯೊಳಗೆ ರಾತ್ರಿ ಊಟ ಮುಗಿಸಬೇಕೆಂದು ಬಹುತೇಕರು ಸಲಹೆ ನೀಡ್ತಾರೆ. ಆದ್ರೆ ಕೆಲಸದ ಒತ್ತಡದಲ್ಲಿ 7 ಗಂಟೆಗೆ ಊಟ ಮುಗಿಸಲು ಬಹುತೇಕರಿಗೆ ಸಾಧ್ಯವಿಲ್ಲ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ. ರಾತ್ರಿ 8 ಗಂಟೆ ನಂತ್ರ ನೀವು ತಿನ್ನುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡ್ರೆ ಸಾಕು. ನೀವು ಕೆಲ ಆಹಾರವನ್ನು ರಾತ್ರಿ 8 ಗಂಟೆ ನಂತ್ರ ಸೇವನೆ ಮಾಡಿದ್ರೂ ನಿಮ್ಮ ಫಿಗರ್ ಹಾಳಾಗೋದಿಲ್ಲ. ಅದು ಯಾವ ಆಹಾರ ಅಂತ ನಾವು ಹೇಳ್ತೇವೆ.
ರಾತ್ರಿ (Night) 8 ಗಂಟೆ ನಂತ್ರ ತಿನ್ನಿ ಈ ಆಹಾರ (Food) :
ರಾತ್ರಿ ಸೇವಿಸಿ ಗ್ರೀಕ್ ಮೊಸರು (Greek Yogurt) : ಮೊಸರು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯವನ್ನು ಪದೇ ಪದೇ ಹೇಳ್ಬೇಕಾಗಿಲ್ಲ. ಆದ್ರೆ ರಾತ್ರಿ ಮೊಸರು ಸೇವನೆ ಮಾಡಿದ್ರೆ ಆರೋಗ್ಯ (Health) ಹಾಳಾಗುತ್ತದೆ ಎನ್ನುವ ಭಯ ಅನೇಕರಿಗಿದೆ. ನೀವು ಗ್ರೀಕ್ ಮೊಸರನ್ನು ರಾತ್ರಿ ತಿನ್ನಬಹುದು. ರಾತ್ರಿ 8 ಗಂಟೆ ನಂತ್ರ ಸೇವನೆ ಮಾಡಿದ್ರೆ ತೂಕ ಹೆಚ್ಚಾಗುವ ಭಯವಿಲ್ಲ. ಹಾಗೆಯೇ ಆರೋಗ್ಯವನ್ನು ಇದು ವೃದ್ಧಿಸುತ್ತದೆ.
ರಾತ್ರಿ ಡಯಟ್ ನಲ್ಲಿ ಇರಲಿ ತರಕಾರಿ (Vegetable) : ತೂಕ (Weight) ನಿಯಂತ್ರಣದಲ್ಲಿರಬೇಕು, ಹೊಟ್ಟೆ ತುಂಬಬೇಕು ಎನ್ನುವವರು ರಾತ್ರಿ ಊಟದಲ್ಲಿ ತರಕಾರಿ ಸೇವನೆ ಮಾಡಿ. ಹಸಿರು ತರಕಾರಿಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುತ್ತದೆ. ಹಸಿರು ತರಕಾರಿಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿರುತ್ತದೆ. ಸಲಾಡ್, ಸೂಪ್ ರೂಪದಲ್ಲಿ ನೀವು ತರಕಾರಿಯನ್ನು ರಾತ್ರಿ 8 ಗಂಟೆ ನಂತ್ರವೂ ಯಾವುದೇ ಭಯವಿಲ್ಲದೆ ಸೇವನೆ ಮಾಡಬಹುದು.
Healthy Diet: ಅಬ್ಬಾ.. ರಾಗಿಯಿಂದ ನಮಗೆ ಸಿಗುತ್ತಾ ಈ ಅಚ್ಚರಿಯ ಲಾಭಗಳು
ಆವಕಾಡೊ ಸೇವನೆ ಮಾಡಿ : ರಾತ್ರಿ 8 ಗಂಟೆ ನಂತ್ರ ಆಹಾರ ಸೇವನೆ ಮಾಡ್ಬೇಕು ಎನ್ನುವವರು ಆವಕಾಡೊವನ್ನು ಡಯಟ್ ನಲ್ಲಿ ಸೇವನೆ ಮಾಡಬಹುದು. ಇದನ್ನು ಸೇವಿಸುವುದರಿಂದ ಹಸಿವು ನೀಗುವುದಲ್ಲದೆ ತೂಕ ಹೆಚ್ಚಾಗುವುದಿಲ್ಲ. ಆವಕಾಡೊದಲ್ಲಿರುವ ಪೋಷಕಾಂಶಗಳು ಅಸಿಡಿಟಿ, ಹೊಟ್ಟೆ ನೋವು, ಅಲ್ಸರ್, ಕೊಲೈಟಿಸ್, ಕರುಳಿನ ಉರಿಯೂತ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುವ ಕೆಲಸ ಮಾಡುತ್ತದೆ.
ಫಿಟ್ ಆಗಿರ್ಬೇಕಾ? ಕಸರತ್ತು ಮಾಡೋದೇನೂ ಬೇಡ, ಬೆಳಗ್ಗೆ ಎದ್ದು ಇಷ್ಟು ಮಾಡಿ ಸಾಕು!
ರಾತ್ರಿ ಊಟದ ನಂತ್ರ ಈ ಕೆಲಸ ಮಾಡಲು ಮರೆಯಬೇಡಿ : ರಾತ್ರಿ 8 ಗಂಟೆ ನಂತ್ರ ಊಟ ಮಾಡಿದ್ರೆ ತಕ್ಷಣ ಹಾಸಿಗೆಗೆ ಹೋಗ್ಬೇಡಿ. ಸುಮಾರು 30 ನಿಮಿಷಗಳ ಕಾಲ ವಾಕ್ ಮಾಡಿ. ಇದು ಕೊಬ್ಬು ಹೆಚ್ಚಾಗಲು ಬಿಡುವುದಿಲ್ಲ. ಊಟದ ನಂತ್ರ ಮಲಗಿದ್ರೆ ಬೊಜ್ಜು ನಿಮ್ಮನ್ನು ಕಾಡುತ್ತದೆ. ಹಾಗೆಯೇ ರಾತ್ರಿ ಆಹಾರದಲ್ಲಿ ಕಡಿಮೆ ಎಣ್ಣೆ ಮತ್ತು ಕಡಿಮೆ ಮಸಾಲೆ ಬಳಸಿ. ರಾತ್ರಿ ಬೇಗ ಜೀರ್ಣವಾಗುವ ಆಹಾರವನ್ನು ನೀವು ಸೇವನೆ ಮಾಡ್ಬೇಕು. ಬೇಗ ಜೀರ್ಣವಾಗ್ಬೇಕೆಂದ್ರೆ ನೀವು ಕಡಿಮೆ ಕಾರ್ಬ್ ಆಹಾರವನ್ನು ಸೇವನೆ ಮಾಡಿ. ಜೀರ್ಣಕ್ರಿಯೆ ಸರಿಯಾದ್ರೆ ಆರೋಗ್ಯದಲ್ಲಿ ಯಾವುದೇ ಏರುಪೇರಾಗುವುದಿಲ್ಲ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಕಾಡುವುದಿಲ್ಲ.