ಮಳೆಗಾಲದಲ್ಲಿ ಈ ಗಿಡಗಳಿದ್ರೆ ಮನೆಯಲ್ಲಿ ಇರಲ್ಲ ಸೊಳ್ಳೆಗಳು: ಡೆಂಗ್ಯೂ ಭಯಾನೂ ಇರಲ್ಲ!
ಈ ಗಿಡಗಳಿಂದ ಬರುವ ಪರಿಮಳ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಮಾಡುತ್ತವೆ. ಸಂಜೆಯ ನಂತರ ಬರೋ ಸೊಳ್ಳೆಗಳು ಈ ಗಿಡಗಳ ಸುವಾಸನೆಯಿಂದ ಮನೆಯ ಹತ್ತಿರ ಸುಳಿಯಲ್ಲ. ಪಾಟ್‌ಗಳಲ್ಲಿ ಈ ಗಿಡಗಳನ್ನು ಬೆಳೆಸಬಹುದಾಗಿದೆ.
ಮಳೆಗಾಲ ಹೆಚ್ಚಾಗುತ್ತಿದ್ದಂತೆ ಸೊಳ್ಳೆಗಳ ಸಂಖ್ಯೆಯೂ ಏರಿಕೆಯಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ಸೊಳ್ಳೆಗಳ ನಿವಾರಣೆಗಾಗಿ ಅನೇಕ ಉತ್ಪನ್ನಗಳು ಸಿಗುತ್ತವೆ. ಕಳೆದ ಎರಡ್ಮೂರು ವಾರಗಳಿಂದ ರಾಜ್ಯದಲ್ಲಿಉತ್ತಮ ಮಳೆಯಾಗುತ್ತಿದ್ದು, ಸಾಂಕ್ರಾಮಿಕ ರೋಗಗಳ ಹರಡುವ ಆತಂಕವೂ ಎದುರಾಗಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿಯೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಮನೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವಂತೆ ಸಲಹೆ ನೀಡಲಾಗುತ್ತಿದೆ. ಹಾಗಾಗಿ ಜನರು ಸೊಳ್ಳೆ ನಿವಾರಕಗಳನ್ನು ಬಳಸಲು ಮುಂದಾಗಿದ್ದಾರೆ.
ಸೊಳ್ಳೆ ನಿವಾರಕ ಉತ್ಪನ್ನಗಳು ಮಾರುಕಟ್ಟೆಗೆ ಬರುವ ಮುನ್ನ ಮೊದಲಿಗೆ ಜನರು ನೈಸರ್ಗಿಕ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದರು. ಕೆಂಡದ ಮೇಲೆ ಬೇವಿನ ಎಲೆಗಳನ್ನು ಹಾಕುತ್ತಿದ್ದರು. ಬೇವಿನ ಎಲೆ ಸುಟ್ಟ ವಾಸನೆಗೆ ಸೊಳ್ಳೆಗಳು ಸಾಯುತ್ತಿದ್ದವು. ಇದೇ ರೀತಿ ಹಲವು ವಿಧಾನಗಳ ಮೂಲಕ ಸೊಳ್ಳೆಗಳಿಂದ ಮುಕ್ತಿ ಪಡೆಯುತ್ತಿದ್ದರು. ಮನೆಯಲ್ಲಿ ಈ ಗಿಡ ಗಳಿದ್ರೆ ಸೊಳ್ಳೆಗಳು ಬರಲ್ಲ. ಈ ಗಿಡಗಳಿಂದ ಬರುವ ಪರಿಮಳ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಮಾಡುತ್ತವೆ. ಸಂಜೆಯ ನಂತರ ಬರೋ ಸೊಳ್ಳೆಗಳು ಈ ಗಿಡಗಳ ಸುವಾಸನೆಯಿಂದ ಮನೆಯ ಹತ್ತಿರ ಸುಳಿಯಲ್ಲ. ಪಾಟ್‌ಗಳಲ್ಲಿ ಈ ಗಿಡಗಳನ್ನು ಬೆಳೆಸಬಹುದಾಗಿದೆ.
1.ತುಳಸಿ: ಆಗಾಧ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವೇ ತುಳಸಿ. ಹಿಂದೂ ಸಂಪ್ರದಾಯದಲ್ಲಿ ತುಳಸಿಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಪ್ರತಿನಿತ್ಯ ಇದರ ಪೂಜೆ ಸಲ್ಲಿಸಿದ್ರೆ ಮನೆಯಲ್ಲಿರುವ ಜನರ ಆರ್ಥಿಕ ಸ್ಥಿತಿ ಸುಧಾರಿಸುತ್ತೆ ಎಂದು ಹೇಳಲಾಗುತ್ತದೆ. ತುಳಸಿ ಎಲೆಗಳಲ್ಲಿರುವ ಪರಿಮಳ ಸಣ್ಣ ಕೀಟ ಹಾಗೂ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಮಾಡುತ್ತದೆ. ಹಾಗಾಗಿ ಮನೆಯಂಗಳದಲ್ಲಿ ತುಳಸಿ ಬೆಳೆಸಬಹುದು. ತುಳಸಿ ಎಲೆಯ ನಿಯಮಿತ ಸೇವನೆಯಿಂದ ಒಣಕೆಮ್ಮು, ಶೀತ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮೀನು ತಿಂದ ನಂತ್ರ ಹಾಲು ಕುಡಿದ್ರೆ ಏನಾಗುತ್ತೆ?
2.ಪುದಿನಾ: ಅಡುಗೆ ಪರಿಮಳ ಮತ್ತು ರುಚಿಯನ್ನು ಹೆಚ್ಚಿಸುವ ಹಸಿರು ಸೊಪ್ಪು ಪುದಿನಾ. ಪುದಿನಾ ಪರಿಮಳ ಗಾಢವಾಗಿದ್ದು, ಒಮ್ಮೆ ಕೈಯಲ್ಲಿ ಹಿಡಿದುಕೊಂಡಿದ್ದರೆ ಇಡೀ ದಿನ ಇದರ ಪರಿಮಳ ನಿಮ್ಮ ಜೊತೆಯಲ್ಲಿರುತ್ತದೆ. ಪುದಿನಾ ಎಲೆಗಳ ಆಗಾಧ ಪರಿಮಳ ಕೀಟ ಅಥವಾ ಸೊಳ್ಳೆಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತವೆ. ಪುದಿನಾವನ್ನು ಕುಂಡದಲ್ಲಿ ಬೆಳೆಸಬಹುದು. ತೇವಾಂಶವುಳ್ಳ ಪ್ರದೇಶದಲ್ಲಿ ಪುದಿನಾ ಶೀಘ್ರವಾಗಿ ಬೆಳೆ ಯುತ್ತದೆ. ಪುದಿನಾ ಔಷಧೀಯ ಗುಣಗಳನ್ನು ಹೊಂದಿದ್ದು, ಮದ್ದು ತಯಾರಿಕೆಯಲ್ಲಿಯೂ ಬಳಕೆ ಮಾಡಲಾಗುತ್ತದೆ.
3.ಚೆಂಡು ಹೂ: ಚೆಂಡು ಹೂಗಳನ್ನು ಮನೆ ಹಾಗೂ ದೇವಸ್ಥಾನಗಳ ಅಲಂಕಾರದಲ್ಲಿ ಅಧಿಕವಾಗಿ ಬಳಕೆ ಮಾಡಲಾಗುತ್ತದೆ. ಪೂಜೆಗೂ ಚೆಂಡು ಹೂ ಸಲ್ಲಿಕೆಯಾಗುತ್ತದೆ. ಚೆಂಡು ಹೂವಿನ ಪರಿಮಳವೂ ಸೊಳ್ಳೆಗಳನ್ನು ಓಡಿಸುವ ಕೆಲಸ ಮಾಡುತ್ತದೆ. ಈ ಹೂ ಇರೋ ಕಡೆ ಸೊಳ್ಳೆಗಳು ಬರಲ್ಲ. ಕುಂಡದಲ್ಲಿ ಚೆಂಡು ಹೂ ಬೆಳಸಬಹುದು.
4.ಲ್ಯಾವೆಂಡರ್: ಸೊಳ್ಳೆ ಹಿಮ್ಮೆಟ್ಟಿಸುವ ಉತ್ಪನ್ನಗಳಲ್ಲಿ ಲ್ಯಾವೆಂಡರ್ ಎಣ್ಣೆ ಬಳಕೆ ಮಾಡಲಾಗುತ್ತದೆ. ಲ್ಯಾವೆಂಡರ್ ಎಣ್ಣೆಯ ಪರಿಮಳಕ್ಕೆ ಸೊಳ್ಳೆಗಳು ಓಡಿ ಹೋಗುತ್ತವೆ. ಮನೆಯತ್ತ ಸೊಳ್ಳೆ ಸುಳಿಯದಂತಿರಲು ಮಾಡದರಿಸಲು ಮನೆ ಆವರಣದಲ್ಲಿ ಲ್ಯಾವೆಂಡರ್ ಹೂಗಳನ್ನು ಬೆಳೆಸಬಹುದು. ಲ್ಯಾವೆಂಡರ್ ಹೂಗಳ ಪರಿಮಳದ ಸುತ್ತಮುತ್ತ ಸೊಳ್ಳೆಗಳು ಇರಲ್ಲ. ಈ ಮೂಲಕವೂ ಸೊಳ್ಳೆಗಳನ್ನು ಓಡಿಸಬಹುದು.
ಬೆಂಗ್ಳೂರಲ್ಲಿ ಡೆಂಘೀ ಅಬ್ಬರ ಹೆಚ್ಚಳ: 8 ದಿನದಲ್ಲೇ 697 ಕೇಸ್
5.ನಿಂಬೆ ಹುಲ್ಲು: ನಿಂಬೆ ಹಣ್ಣಿನ ಗಿಡಗಳಿರೋ ಪ್ರದೇಶದಲ್ಲಿಯೂ ಸೊಳ್ಳೆಗಳು ಇರಲ್ಲ. ನಿಂಬೆ ಹಣ್ಣಿನ ಗಿಡಿ ಬೆಳೆಸಲು ಜಾಗದ ಕೊರತೆ ಇದ್ರೆ, ಕುಂಡದಲ್ಲಿ ನಿಂಬೆ ಹಣ್ಣಿನ ಹುಲ್ಲು ಬೆಳೆಸಬಹುದು. ಮಳೆಗಾಲದಲ್ಲಿ ಈ ಹುಲ್ಲು ಮನೆಯಲ್ಲಿದ್ದರೆ ಸೊಳ್ಳೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ. ಈ ಹುಲ್ಲು ಸೊಳ್ಳೆ ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.