ಮೀನು ತಿಂದ ನಂತ್ರ ಹಾಲು ಕುಡಿದ್ರೆ ಏನಾಗುತ್ತೆ?
ಮನೆಯಲ್ಲಿ ಮೀನು ತಿಂದ ನಂತರ ಹಾಲು ಕುಡಿಯಬಾರದು ಎಂದು ಹಲವರು ಹೇಳುತ್ತಿರುತ್ತಾರೆ. ನಿಜವಾಗಿಯೂ ಮೀನು ತಿಂದ ನಂತರ ಹಾಲು ಕುಡಿದ್ರೆ ಏನಾಗುತ್ತೆ ಗೊತ್ತಾ?
ಕೆಲವು ಆಹಾರಗಳ ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಒಂದಿಷ್ಟು ಸಂಯೋಜನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೀನು ಮತ್ತು ಹಾಲು ಸಂಯೋಜನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೀನು ತಿಂದ ನಂತರ ಹಾಲು ಕುಡಿದ್ರೆ ಕುಷ್ಠರೋಗ ಬರುತ್ತೆ ಎಂದು ಮನೆಯಲ್ಲಿ ಹಿರಿಯರು ಹೇಳುತ್ತಿರುತ್ತಾರೆ. ಈ ಬಗ್ಗೆ ಆರೋಗ್ಯ ತಜ್ಞರು ಹೇಳೋದೇನು?
ಮೀನು ಮತ್ತು ಹಾಲು ಸಂಯೋಜನೆ ಒಳ್ಳೆಯದಲ್ಲ ಅಂತಾರೆ ವೈದ್ಯರು. ಈ ಎರಡು ಆಹಾರದ ಗುಣಗಳು ತದ್ವಿರುದ್ಧವಾಗಿದೆ. ಒಂದೇ ಸಮಯದಲ್ಲಿ ಮೀನು-ಹಾಲು ಸಂಯೋಜನೆ ಹಾನಿಕಾರ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.
ಹಾಲು ತಂಪಾಗಿಸುವ ಮತ್ತು ಮೀನು ಉಷ್ಣದ ಗುಣವನ್ನು ಹೊಂದಿದೆ. ತಂಪು ಮತ್ತು ಉಷ್ಣದ ಆಹಾರ ಸಂಯೋಜನೆ ದೇಹದಲ್ಲಿ ಹಲವು ರಾಸಾಯನಿಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಇದು ದೇಹದ ಜೀರ್ಣಕ್ರಿಯೆಯ ಅಸಮತೋಲನಕ್ಕೆ ಕಾರಣವಾಗುತ್ತದೆ.
ಮೀನು ಮತ್ತು ಹಾಲು ಜೊತೆಯಾಗಿ ಸೇವನೆ ಮಾಡೋದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಮಾಡಿದ್ರೆ ಹೊಟ್ಟೆಗೆ ಸಂಬಂಧಿತ ರೋಗಗಳು ಕಾಣಿಸಿಕೊಳ್ಳುತ್ತವೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿದವರಲ್ಲಿ ಈ ಸಮಸ್ಯೆ ಶೀಘ್ರವಾಗಿ ಕಾಣಿಸಿಕೊಳ್ಳಲ ಆರಂಭಿಸುತ್ತದೆ.
ಆದ್ರೆ ಹಾಲು ಮತ್ತು ಮೀನು ಪ್ರತ್ಯೇಕವಾಗಿ ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಮೀನು ಮತ್ತು ಹಾಲು ಸಂಯೋಜನೆ ಆಹಾರ ಸೇವನೆಯಿಂದ ಕುಷ್ಠ ಬರುತ್ತೆ ಅನ್ನೋದು ಸುಳ್ಳು. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಕುಷ್ಠರೋಗ ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯು ಮೆಲನಿನ್ ವಿರುದ್ಧ ಪ್ರತಿಕಾಯಗಳನ್ನು ಸಿದ್ಧ ಮಾಡುತ್ತದೆ. ಈ ಪ್ರತಿಕಾಯಗಳು ಚರ್ಮಕ್ಕೆ ಬಣ್ಣ ನೀಡುವ ಜೀವಕೋಶಗಳನ್ನು ಹಾನಿ ಮಾಡುತ್ತವೆ. ಇದರಿಂದ ಬಿಳಿ ಕಲೆಗಳು ಕಾಣಿಸಿಕೊಳ್ಳುತ್ತವೆ.
ಹಾಲು-ಮೀನು, ಮೊಟ್ಟೆ-ಮೊಸರು ಹೀಗೆ ತದ್ವಿರುದ್ಧ ಗುಣಗಳನ್ನು ಹೊಂದಿರುವ ಆಹಾರ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.