ಸಿಹಿ ಗೆಣಸಿಗಿಂತ ಉತ್ತಮ ಡಯಟ್ ಫುಡ್ ಬೇರಾವುದೂ ಇಲ್ಲ!
ವಿಟಮಿನ್ ಸಿ ತುಂಬಿರುವ ಸಿಹಿ ಗೆಣಸು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಫೈಬರ್ ಭರಿತ ಮತ್ತು ಕಡಿಮೆ ಕ್ಯಾಲೋರಿ ಇರುವ ಸಿಹಿ ಗೆಣಸು ತೂಕ ಇಳಿಸಲು ಸಹಕಾರಿ.
ಇತ್ತೀಚೆಗೆ ಎಲ್ಲ ಯುವಜನರಿಗೆ ಸ್ಥೂಲಕಾಯದ್ದೇ ಚಿಂತನೆಯಾಗಿದೆ. ಹೀಗಾಗಿ, ಜಿಮ್, ವ್ಯಾಯಾಮ, ಯೋಗ ಸೇರಿದಂತೆ ಹಲವು ದೈಹಿಕ ಕಸರತ್ತುಗಳ ಮೊರೆ ಹೋಗುತ್ತಾರೆ. ಇನ್ನು ನಾನು ಡಯಟ್ ಮಾಡಬೇಕು ಉತ್ತಮ ಆಹಾರ ಯಾವುದು ಎಂದು ಹುಡುಕುವವರ ಸಂಖ್ಯೆಯೂ ಸಾಕಷ್ಟಿದೆ. ಅಂಥವರಿಗೆ ಈ ಸಿಹಿ ಗೆಣಸು ಉತ್ತಮ ಡಯಟ್ ಫುಡ್ ಎಂದೇ ಹೇಳಬಹುದು. ಇದಕ್ಕೆ ಹಲವು ಅಂಶಗಳು ಸಾಕ್ಷಿಗಳಾಗುತ್ತವೆ ಇಲ್ಲಿ ನೋಡಿ..
ವಿಟಮಿನ್ ಎ, ಸಿ, ಬಿ6, ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಬರ್‌ನಂತಹ ಪೋಷಕಾಂಶಗಳ ಆಗರವೇ ಸಿಹಿಗೆಣಸು. ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಫೈಬರ್ ಭರಿತ ಮತ್ತು ಕಡಿಮೆ ಕ್ಯಾಲೋರಿ ಇರುವ ಸಿಹಿಗೆಣಸು ತೂಕ ಇಳಿಸಲು ಸಹಕಾರಿ. ನಾರಿನಂಶದಿಂದ ಸಮೃದ್ಧವಾಗಿರುವ ಸಿಹಿಗೆಣಸು ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮಲಬದ್ಧತೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಸಿಹಿ ಗೆಣಸು ನಿಯಮಿತ ಸೇವನೆ ಆರೋಗ್ಯಕ್ಕೆ ಒಳ್ಳೆಯದೆಂದೇ ಹೇಳಬಹುದು.
ವಿಟಮಿನ್ ಬಿ6, ಬೀಟಾ ಕ್ಯಾರೋಟಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಹೃದಯಾಘಾತದ ಅಪಾಯ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಸಿಹಿ ಗೆಣಸಿನಲ್ಲಿರುವ ಬೀಟಾ ಕ್ಯಾರೋಟಿನ್ ಚರ್ಮದ ಸುಕ್ಕುಗಳನ್ನು ತಡೆಯಲು ಮತ್ತು ಚರ್ಮದ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಹೂ ಕೋಸು / ಕಾಲಿಫ್ಲವರ್ ತಿನ್ನುವ ಮೊದಲು ಈ ವಿಚಾರ ಗಮನದಲ್ಲಿರಲಿ
ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಮತ್ತು ಹೆಚ್ಚಿನ ಫೈಬರ್ ಅಂಶವಿರುವ ಸಿಹಿಗೆಣಸು ಮಧುಮೇಹಿಗಳಿಗೂ ಸೂಕ್ತ. ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಯಿಂದ ಸಮೃದ್ಧವಾಗಿರುವ ಸಿಹಿಗೆಣಸು ಕಣ್ಣಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ವಿಟಮಿನ್‌ಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಮೆದುಳಿನ ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಸಿಹಿಗೆಣಸು ಕ್ಯಾನ್ಸರ್ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸಂಕ್ರಾಂತಿಗೆ ಗೆಣಸು ಸೇವನೆ: ಇನ್ನು ನಮ್ಮ ಹಿರಿಯರು ಪ್ರತಿ ವರ್ಷ ಸಂಕ್ರಾಂತಿ ಹಬ್ಬದಲ್ಲಿ ಸಿಹಿ ಗೆಣಸನ್ನು ಬೇಯಿಸಿ ತಿನ್ನುತ್ತಾರೆ. ಈ ಮೂಲಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವುದಕ್ಕೆ ಹಾಗೂ ಸಮತೋಲಿತ ಆಹಾರ ಸೇವನೆಗೆ ಆದ್ಯತೆ ನೀಡಿದ್ದಾರೆ. ಇನ್ನು ಸಂಕ್ರಾಂತಿ ಹಬ್ಬದಲ್ಲಿ ಸಿಹಿ ಗೆಣಸು ಮಾತ್ರವಲ್ಲದೇ ಹೈ ಪ್ರೋಟೀನ್ ಆಹಾರ ಅವರೆಕಾಯಿ, ಕಡಲೆಕಾಯಿ ಕೂಡ ಬೇಯಿಸಿ ತಿನ್ನುತ್ತಾರೆ. ಇದರೊಂದಿಗೆ ಎಳ್ಳು ಬೆಲ್ಲ, ಕಬ್ಬು ಸೇವನೆ ಮಾಡುತ್ತಾರೆ.
ಇದನ್ನೂ ಓದಿ: ಚಳಿಗಾಲದಲ್ಲಿ ಬಾದಾಮಿ ತಿನ್ನೋದ್ರ ಉಪಯೋಗಗಳೇನು? ನೀವು ನಿಜಕ್ಕೂ ಅಚ್ಚರಿ ಪಡುತ್ತೀರಿ!
ಗಮನಿಸಿ: ಆಹಾರಕ್ರಮದಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು ಆರೋಗ್ಯ ತಜ್ಞರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆಯಿರಿ. ಇನ್ನು ಈಗಾಗಲೇ ಕೆಲವು ಅನಾರೋಗ್ಯದಿಂದ ಬಳಲುತ್ತಿರುವವರು ವೈದ್ಯರನ್ನು ಸಂಪರ್ಕಿಸಿದ ನಂತರವೇ ಈ ಆಹಾರ ಸೇವನೆ ಮಾಡಬೇಕು.