Health Tips : ಬಹಳ ಆರೋಗ್ಯಕಾರಿ ಎಂದುಕೊಂಡ ಕ್ಯಾರೆಟ್‌ನಲ್ಲೂ ಇದೆ ಕೆಟ್ಟ ಗುಣ
ಆರೋಗ್ಯಕರ ಆಹಾರ ಸೇವನೆಗೆ ಎಲ್ಲರೂ ಮಹತ್ವ ನೀಡ್ತಾರೆ. ಇತ್ತೀಚಿನ ದಿನಗಳಲ್ಲಿ ಆಹಾರದ ಮೇಲೆ ಹೆಚ್ಚಿನ ಗಮನ ನೀಡಲಾಗ್ತಿದೆ. ಆದ್ರೆ ಆರೋಗ್ಯಕರ ಆಹಾರದಲ್ಲೂ ಅನಾರೋಗ್ಯ ಕಾಡುವ ಗುಣವಿರುತ್ತದೆ. ಹಾಗಾಗಿ ಆಹಾರ ಸೇವನೆ ಮೊದಲು ಎಚ್ಚರ ವಹಿಸಬೇಕು.
ಚಳಿಗಾಲ (Winter)ದಲ್ಲಿ ಕ್ಯಾರೆಟನ್ನು ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ಆಹಾರ (Food)ದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಕ್ಯಾರೆಟ್ (Carrot) ಅನೇಕ ಪೋಷಕ ತತ್ವವನ್ನು ಹೊಂದಿದೆ. ಅರ್ಧ ಕಪ್ ಕ್ಯಾರೆಟ್ ನಲ್ಲಿ 25 ಕ್ಯಾಲೋರಿ, 6 ಗ್ರಾಂ ಕಾರ್ಬೋಹೈಡ್ರೇಡ್, 2 ಗ್ರಾಂ ಫೈಬರ್, 3 ಗ್ರಾಂ ಶುಗರ್,0.5 ಗ್ರಾಮ್ ಪ್ರೋಟೀನ್ ಇದೆ. ಕ್ಯಾರೆಟ್ ನಲ್ಲಿ ಎ,ಕೆ,ಸಿ ಪೊಟ್ಯಾಶಿಯಂ, ಫೈಬರ್, ಕ್ಯಾಲ್ಸಿಯಂ ಇದೆ. ಇದು ಆಂಟಿ ಆಕ್ಸಿಡೆಂಟ್ ರೂಪದಲ್ಲಿಯೂ ಕೆಲಸ ಮಾಡುತ್ತದೆ. ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಜೀರ್ಣಕ್ರಿಯೆಗೆ ಸಹಾಯಕಾರಿ.
ಇಷ್ಟೆಲ್ಲ ಆರೋಗ್ಯ ಗುಣವನ್ನು ಹೊಂದಿರುವ ಕ್ಯಾರೆಟನ್ನು ಅನೇಕರು ಪ್ರತಿ ದಿನ ಬಳಕೆ ಮಾಡ್ತಾರೆ. ಬೇರೆ ಬೇರೆ ಆಹಾರ ರೂಪದಲ್ಲಿ ಕ್ಯಾರೆಟ್ ದೇಹ ಸೇರುವಂತೆ ಮಾಡ್ತಾರೆ. ಆದ್ರೆ ಕ್ಯಾರೆಟ್ ಕೆಲವೊಂದು ಅಡ್ಡಪರಿಣಾಮಗಳನ್ನು ಹೊಂದಿದೆ. ಯಸ್,ಅಚ್ಚರಿಯಾದ್ರೂ ಅದು ಸತ್ಯ. ಕೆಲವು ಜನರು ಕ್ಯಾರೆಟ್ ತಿನ್ನಬಾರದು. ಅದರಿಂದ ಪ್ರಯೋಜನ ಪಡೆಯುವ ಬದಲು ಅವರ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾದರೆ ಕ್ಯಾರೆಟ್ ಯಾರು ಮತ್ತು ಯಾಕೆ ತಿನ್ನಬಾರದು ಎಂಬುದನ್ನು ನಾವಿಂದು ಹೇಳ್ತೆವೆ.
ಕ್ಯಾರೆಟ್ ಸೇವನೆಯಿಂದಾಗುವ ನಷ್ಟ
ಕ್ಯಾರೆಟ್ ತಿಂದರೆ ಕಾಡಬಹುದು ಅಲರ್ಜಿ : ಒಬ್ಬೊಬ್ಬರಿಗೆ ಒಂದೊಂದು ಆಹಾರ ಆಗಿಬರುವುದಿಲ್ಲ. ಕೆಲವರಿಗೆ ಕ್ಯಾರೆಟ್ ತಿಂದರೆ ಅಲರ್ಜಿಯುಂಟಾಗುತ್ತದೆ. ಕ್ಯಾರೆಟ್ ಸೇವನೆ ಮಾಡಿದ ನಂತ್ರ ಚರ್ಮದಲ್ಲಿ ದದ್ದುಗಳು ಕಾಣಿಸಿಕೊಳ್ಳುತ್ತವೆ. ಇನ್ನು ಕೆಲವರಿಗೆ ಅತಿಸಾರದ ಸಮಸ್ಯೆಯಾಗುತ್ತದೆ. ಕ್ಯಾರೆಟ್ ನಲ್ಲಿರುವ ಅಲರ್ಜಿನ್ ಅಜೀರ್ಣಕ್ಕೆ ಕಾರಣವಾಗುತ್ತದೆ. ಹಸಿ ಕ್ಯಾರೆಟ್ ಸೇವನೆ ಮಾಡಿದ ನಂತ್ರ ಕೆಲವರ ಬಾಯಿ ತುರಿಸುತ್ತದೆ. ತುಟಿ, ನಾಲಿಗೆ, ಗಂಟಲು ಊತ ಕಾಣಿಸಿಕೊಳ್ಳುವುದಿದೆ. ಕ್ಯಾರೆಟ್ ತಿಂದ ತಕ್ಷಣ ನಿಮಗೂ ಈ ಸಮಸ್ಯೆಯಾಗ್ತಿದ್ದರೆ ಕ್ಯಾರೆಟ್ ನಿಂದ ದೂರವಿರುವುದು ಒಳ್ಳೆಯದು.
ಮಧುಮೇಹಿಗಳು ಹೆಚ್ಚು ಕ್ಯಾರೆಟ್ ತಿನ್ನಬಾರದು : ಮಧುಮೇಹಿಗಳು ಸಕ್ಕರೆ ತಿನ್ನಬಾರದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸಕ್ಕರೆಯಿಂದ ದೂರವಿರುವ ಕೆಲ ಮಧುಮೇಹಿಗಳು ನೈಸರ್ಗಿಕ ಆಹಾರದ ಮೊರೆ ಹೋಗ್ತಾರೆ. ಹಣ್ಣು, ತರಕಾರಿ ಸೇವನೆ ಹೆಚ್ಚು ಮಾಡ್ತಾರೆ. ಆದ್ರೆ ಕೆಲ ನೈಸರ್ಗಿಕ ಆಹಾರದಲ್ಲೂ ಸಕ್ಕರೆ ಪ್ರಮಾಣ ಹೆಚ್ಚಿರುತ್ತದೆ. ಕ್ಯಾರೆಟ್ ನಲ್ಲಿ ಕೂಡ ನೈಸರ್ಗಿಕ ಸಕ್ಕರೆ ಪ್ರಮಾಣ ಅಧಿಕವಾಗಿದೆ. ಮಧುಮೇಹ ಇರುವವರು ಕ್ಯಾರೆಟ್ ಅನ್ನು ಹೆಚ್ಚು ಸೇವಿಸಬಾರದು. ಏಕೆಂದರೆ ಇದರಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ. ಕ್ಯಾರೆಟ್‌ನಲ್ಲಿರುವ ಸಕ್ಕರೆಯು ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಇದರಿಂದಾಗಿ ದೇಹದ ಸಕ್ಕರೆಯ ಮಟ್ಟವು ವೇಗವಾಗಿ ಹೆಚ್ಚಾಗುತ್ತದೆ.
ಚರ್ಮದ ಬಣ್ಣ ಬದಲಾವಣೆ : ಕ್ಯಾರೆಟ್‌ನಲ್ಲಿ ಬೀಟಾ ಕ್ಯಾರೋಟಿನ್ ಅಧಿಕವಾಗಿರುತ್ತದೆ. ಕ್ಯಾರೋಟಿನ್ ದೇಹದಲ್ಲಿ ವಿಟಮಿನ್ ಎ ಆಗಿ ಪರಿವರ್ತನೆಯಾಗುತ್ತದೆ. ಕ್ಯಾರೆಟ್ ಅನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ನಿಮ್ಮ ರಕ್ತದಲ್ಲಿ ಹೆಚ್ಚಿನ ಪ್ರಮಾಣದ ಕ್ಯಾರೋಟಿನ್ ಉತ್ಪತ್ತಿಯಾಗುತ್ತದೆ. ಇದು ಚರ್ಮದ ಹಳದಿ ಬಣ್ಣಕ್ಕೆ ಕಾರಣವಾಗುವ ಕ್ಯಾರೊಟಿನೆಮಿಯಾವನ್ನು ಉಂಟುಮಾಡುತ್ತದೆ.
Frozen Shoulders: ಆರಂಭದಲ್ಲೇ ಎಚ್ಚರಿಕೆ ತೆಗೆದುಕೊಳ್ಳಿ
ಹಾಲುಣಿಸುವ ಮಹಿಳೆಗೆ ಅಪಾಯ : ಹಾಲುಣಿಸುವ ಮಹಿಳೆಯರು ಕ್ಯಾರೆಟನ್ನು ತುಂಬಾ ಎಚ್ಚರಿಕೆಯಿಂದ ತಿನ್ನಬೇಕು. ನೀವು ಸೇವನೆ ಮಾಡಿದ ಆಹಾರ, ಹಾಲಿನ ಮೂಲಕ ಮಗುವಿನ ದೇಹ ಸೇರುತ್ತದೆ. ತಾಯಂದಿರು ಹೆಚ್ಚಿನ ಪ್ರಮಾಣದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಎದೆ ಹಾಲಿನ ರುಚಿ ಬದಲಾಗುತ್ತದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
FITNESS MYTH: ಫಿಟ್ನೆಸ್ ವಿಷಯದಲ್ಲಿ ನೀವು ಕೇಳಿದ್ದೆಲ್ಲ ನಿಜವಲ್ಲ..
ಚಿಕ್ಕ ಮಕ್ಕಳಿಗೆ ಅತಿಯಾಗ್ಬಾರದು ಕ್ಯಾರೆಟ್ : ಸಾಮಾನ್ಯವಾಗಿ ಕ್ಯಾರೆಟ್ ಒಳ್ಳೆಯದು ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಹಾಗಾಗಿ ಕ್ಯಾರೆಟ್ ಹೆಚ್ಚು ಬಳಕೆ ಮಾಡ್ತಾರೆ. ಚಿಕ್ಕ ಮಕ್ಕಳಿಗೆ ಕೂಡ ಕ್ಯಾರೆಟ್ ಜ್ಯೂಸ್ ಅಥವಾ ಬೇಯಿಸಿದ ಕ್ಯಾರೆಟ್ ಹೀಗೆ ಅನೇಕ ವಿಧಗಳಲ್ಲಿ ಕ್ಯಾರೆಟ್ ನೀಡ್ತಾರೆ. ಆದ್ರೆ ಚಿಕ್ಕ ಮಕ್ಕಳಿಗೆ ಕ್ಯಾರೆಟ್ ಒಳ್ಳೆಯದಲ್ಲ. ದೊಡ್ಡ ಮಕ್ಕಳಿಗೆ ಕ್ಯಾರೆಟ್ ನೀಡಬಹುದು. ಚಿಕ್ಕ ಮಕ್ಕಳಿಗೆ ಅಪರೂಪಕ್ಕೆ ಕ್ಯಾರೆಟ್ ನೀಡುವುದು ಒಳ್ಳೆಯದು.