ಕೊರೊನಾವೈರಸ್ ಜ್ವರದಿಂದ ಲೋಕ ತಬ್ಬಿಬ್ಬಾಗಿದೆ. ಈ ಹಿಂದೆ ಇದೇ ಚೀನಾದ ವುಹಾನ್‌ನಲ್ಲಿ ಹುಟ್ಟಿಕೊಂಡು ಹಬ್ಬಿದ ಸಾರ್ಸ್‌ಗೆ ಲೋಕ ತಲ್ಲಣಿಸಿತ್ತು. ಕೊರೊನಾದ ಮೊದಲ ಭಾರತೀಯ ರೋಗಿ ಕೇರಳದಲ್ಲಿ ಪತ್ತೆಯಾಗಿದ್ದಾರೆ. ಈ ರೋಗ  ಗಾಳಿಯಲ್ಲಿ, ಉಸಿರಿನಲ್ಲಿ ಹರಡುತ್ತದೆ. ಹೀಗಾಗಿ ನಾವು ಜಾಗ್ರತೆ ಮಾಡುವುದು ಅಗತ್ಯ. ಅದಿರಲಿ. ಕೊರೊನಾ ಜ್ವರಕ್ಕೆ ಅಲೋಪತಿಯಲ್ಲಿ ಇದುವರೆಗೆ ಯಾವುದೇ ನೇರ ಔಷಧ ಸೃಷ್ಟಿ ಆಗಿಲ್ಲ. ಜ್ವರ, ಗಂಟಲು ನೋವು, ಉಸಿರಾಟದ ಸಮಸ್ಯೆಗಳಿಗೆ ಕೊಡುವ ಮದ್ದನ್ನೇ ಇದಕ್ಕೂ ಕೊಡಲಾಗುತ್ತಿದೆ. ಆದರೆ ಅದಕ್ಕೆ ನಮ್ಮಲ್ಲಿ ಮದ್ದು ಇದೆ ಎಂದು ಆಯುಷ್ ಇಲಾಖೆ ಹೇಳಿದೆ. ಕೊರೊನಾ ಜ್ವರದ ಸಂದರ್ಭದಲ್ಲಿ ಬಳಸಬಹುದಾದ ಹಲವು ಔಷಧಗಳ ಪಟ್ಟಿಯನ್ನು ಕೊಟ್ಟಿದೆ.

ಕೋರೋನಾವೈಸರ್‌ನಿಂದ ಪಾರಾಗಲು ಇಲ್ಲಿದೆ ಉಪಾಯ

ಮುಖ್ಯವಾಗಿಮ ಕೊರೊನಾ ಜ್ವರ ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಅದು ಹೀಗೆ.

- ಕೊರೊನಾ ಅಥವಾ ಯಾವುದೇ ಜ್ವರ ಹೊಂದಿರುವ ವ್ಯಕ್ತಿಯ ನಿಕಟ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಿ. ಒಂದು ವೇಳೆ ಹತ್ತಿರದಲ್ಲಿ ಇರಲೇಬೇಕಿದ್ದರೆ, ಆಗಾಗ ನಿಮ್ಮ ಮೈಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಿ.

- ಸೀನು, ಆಕಳಿಕೆ, ಕೆಮ್ಮುವ ಸಂದರ್ಭದಲ್ಲಿ ಬಾಯಿಗೆ ಅಡ್ಡವಾಗಿ ಕರವಸ್ತ್ರ ಬಳಸಿ,

- ಹೊರಗೆ ಹೋಗಿ ಬಂದಾಗ ಕೈ ಕಾಲು ಸ್ವಚ್ಛವಾಗಿ ತೊಳೆದುಕೊಳ್ಳಿ.

- ಮಾಂಸ ಸೇವನೆ ತಪ್ಪಿಸಿ. ಸೇವಿಸಬೇಕಿದ್ದರೆ ಚೆನ್ನಾಗಿ ಬೇಯಿಸಿಕೊಳ್ಳಿ.

- ಕುದಿಸಿ ಆರಿಸಿದ ನೀರನ್ನು ಮಾತ್ರ ಕುಡಿಯಿರಿ.

- ಯಾವುದೇ ಅಸಹಜ ಜ್ವರ, ಕೆಮ್ಮು, ಏದುಬ್ಬಸ- ಇತ್ಯಾದಿಗಳ ಬಗ್ಗೆ ಅನುಮಾನವಿದ್ದರೆ ವೈದ್ಯರನ್ನು ಸಂಪರ್ಕಿಸಿ.

ಜನಜಂಗುಳಿಯಲ್ಲಿ ಓಡಾಡುವಾಗ ಮಾಸ್ಕ್‌ ಧರಿಸಿ.

 

ಕೊರೋನಾ ವೈರಸ್: ಜಗತ್ತಿಗೆ ಆದ ನಷ್ಟ ಎಷ್ಟು

 

ಆಯುರ್ವೇದ ಮದ್ದುಗಳು

- ನಿಮ್ಮ ದೇಹದ ರೋಗನಿರೋಧ ಶಕ್ತಿ ಬಲಗೊಳ್ಳಬೇಕಾದರೆ ೫ ಗ್ರಾಂನಷ್ಟು ಅಗಸ್ತ್ಯ ಹರಿತ್ಯಕಿಯನ್ನು ಪ್ರತಿದಿನ ಬೆಚ್ಚಗಿನ ನೀರಿನೊಂದಿಗೆ ಸೇವಿಸಿ.

- ಸಂಶಮಣಿ ವಟಿಯನ್ನು ದಿನಕ್ಕೆರಡು ಬಾರಿ ೫೦೦ ಮಿಲಿಗ್ರಾಂನಷ್ಟು ಸೇವಿಸಿ.

- 5 ಗ್ರಾಂನಷ್ಟು ತ್ರಿಕಟು ಚೂರ್ಣವನ್ನು ಮೂರು ನಾಲ್ಕು ತುಳಸಿ ಎಲೆಗಳೊಂದಿಗೆ ಒಂದು ಲೀಟರ್‌ ನೀರಿನಲ್ಲಿ ಹಾಕಿ ಕುದಿಸಿ ಅರ್ಧಕ್ಕೆ ಬತ್ತಿಸಿ ಆಗಾಗ ಗುಟುಕು ಗುಟುಕಾಗಿ ಕುಡಿಯುತ್ತಿರಿ. ತ್ರಿಕಟು ಎಂದರೆ ಪಿಪ್ಪಲಿ, ಮಾರೀಚ ಮತ್ತು ಶುಂಠಿ.

- ಪ್ರತಿಮರ್ಸ ನಶ್ಯವನ್ನು ಅನು ತೈಲದಲ್ಲಿ ಮೂಗಿನ ಎರಡು ಹೊಳ್ಳೆಗಳಿಗೂ ಎರಡು ಬಿಂದುಗಳಂತೆ ಪ್ರತಿ ದಿನ ಬಿಡಿ.

 

ಡೆಡ್ಲಿ ಕೊರೋನಾ: ಒಂಬತ್ತೇ ಗಂಟೆಯಲ್ಲಿ ರೈಲ್ವೇ ಸ್ಟೇಷನ್, ಹತ್ತೇ ದಿನದಲ್ಲಿ ಆಸ್ಪತ್ರೆ ನಿರ್ಮಾಣ.

 

ಹೋಮಿಯೋಪತಿ ಮದ್ದುಗಳು

-ಸಾಮಾನ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು

- ಕೊರೊನಾ ಜ್ವರದ ಲಕ್ಷಣಗಳು ಕಂಡುಬಂದರೆ ಆರ್ಸೇನಿಕಮ್‌ ಆಲ್ಬಮ್‌ ೩೦ ಎನ್ನುವ ಔಷಧವನ್ನು ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಮೂರು ದಿನ ಸೇವಿಸಬೇಕು.

 

ಯುನಾನಿ ಮದ್ದುಗಳು

- ಶರ್ಬತ್‌ ಉನ್ನಾಬ್‌ 10-20 ಮಿಲಿಲೀಟರ್‌ ದಿನಕ್ಕೆರಡು ಬಾರಿ

- ತಿರ್ಯಕ್‌ ಅರ್ಭ 5 ಗ್ರಾಂ ದಿನಕ್ಕೆರಡು ಬಾರಿ

- ಖಮೀರಾ ಮರ್ವಾ ರೀಡ್‌ 3-5 ಗ್ರಾಂ ದಿನಕ್ಕೊಂದು ಬಾರಿ

- ಎದೆ ಹಾಗೂ ಕಪೋಲಕ್ಕೆ ರೋಘನ್‌ಬಬೂನಾ ಅಥವಾ ರೋಘನ್‌ಮಾಮ್‌ದ ಮಸಾಜ್‌. ಮೂಗಿನ ಹೊಳ್ಳೆಗಳಿಗೆ ರೋಘನ್‌ ಬನಾಫ್ಸಾದ ಲೇಪನ

- ಜ್ವರವಿದ್ದರೆ ಹಬ್‌ ಇ ಇಕ್ಸೀರ್‌ಬುಕರ್‌ ಬೆಚ್ಚಗಿನ ನೀರಿನಲ್ಲಿ ದಿನಕ್ಕೆರಡು ಗುಳಿಗೆ ಸೇವಿಸಿ.

- ಅರ್ಖಾಜೀಬ್‌ ಶುದ್ಧ ನೀರಿನಲ್ಲಿ ೪-೮ ಬಿಂದುಗಳನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸಿ.

10 ಎಂಎಲ್‌ ಶರ್ಬತ್‌ ನಾಜ್ಲಾವನ್ನು ೧೦೦ ಮಿಲಿಲೀಟರ್‌ ಬೆಚ್ಚಗಿನ ನೀರಿನಲ್ಲಿ ಸೇವಿಸಿ.

ಖುಸ್‌F ಇ ಸುವಾಲ್‌ ಗುಳಿಗೆಯನ್ನು ದಿನಕ್ಕೆರಡು ಸೇವಿಸಿ.