ಬೆಂಗಳೂರು(ಜ. 30) ಚೀನಾದಲ್ಲಿ ಕಾಣಿಸಿಕೊಂಡ ಕೊರೋನಾ ವೈರಸ್ ಜೀವಗಳ ಬಲಿಪಡೆಯುತ್ತ ಮರಣ ಮೃದಂಗ ಬಾರಿಸುತ್ತ ನಡೆಯುತ್ತಿದೆ.  ಕಾರಣ-ಪರಿಹಾರ ಎಲ್ಲ  ಹುಡುಕುವ ಕೆಲಸಗಳು ಒಂದೇ ಸಮನಾಗಿ ನಡೆಯುತ್ತಲೇ ಇವೆ. 

ಕೇರಳದ ವಿದ್ಯಾರ್ಥಿಯೊಬ್ಬರಿಗೂ ಕಾಣಿಸಿಕೊಂಡಿದೆ ಎನ್ನುವುದು ಮತ್ತಷ್ಟು ಆತಂಕ ತಂದಿರುವ ಇಂದಿನ ಸುದ್ದಿ.  ಚೀನಾ ಪ್ರವಾಸ ಮಾಡಲೇಬಾರದು ಈ ಸಂದರ್ಭದಲ್ಲಿ ಎನ್ನುವುದು ಮೊದಲ ಎಚ್ಚರಿಕೆ. ಅದಕ್ಕೂ ಮೀರಿ ಅನಿವಾರ್ಯವಾಗಿ ಚೀನಾಕ್ಕೆ ತೆರಳಲೇಬೇಕಾದ ಸಂದರ್ಭ ಬಂದರೆ ಏನು ಮಾಡಬೇಕು? ನಾವು ಒಂದಿಷ್ಟು ಸಲಹೆ ನೀಡುತ್ತಿದ್ದೇವೆ  ಕೇಳಿಕೊಂಡು ಬನ್ನಿ...

ಜಗತ್ತಿನ ನಿದ್ದೆ ಕೆಡಿಸಿರುವ ಕರೋನಾ ವೈರಸ್,  ರೋಗ ಲಕ್ಷಣ? ಹೇಗೆ ಹರಡುತ್ತೆ?

ವೈರಸ್ ಕಾಡಿದರೆ  ಲಕ್ಷಣ:  ಜ್ವರ, ಕಾಡುವ ಕೆಮ್ಮು ಉಸಿರಾಟದ ಸಮಸ್ಯೆ ಈ ವೈರಸ್ ನಿಂದ ಕಾಣಿಸಿಕೊಳ್ಳುವ ಆರಂಭಿಕ ಲಕ್ಷಣ. ಇದೊಂದು ಪ್ರಾಣಿಗಳಿಂದ ಮಾನವರಿಗೆ ಹರಡುವ ಕಾಯಿಲೆ.

ಚೀನಾಗೆ ತೆರಳುತ್ತಿರುವ ಯಾತ್ರಿಕರು ಈ ಕೆಳಗಿನ ಸರಳ ಆರೋಗ್ಯ ಸಲಹೆಗಳನ್ನು ಪಾಲಿಸಿ

* ವೈಯಕ್ತಿಕ ನೈರ್ಮಲ್ಯ ಕಾಪಾಡಿಕೊಳ್ಳಿ
* ಸಾಬೂನು ಬಳಸಿಕೊಂಡು ಕೈಗಳನ್ನು ತೊಳೆಯುತ್ತಿರಿ. 
* ಕೆಮ್ಮುವಾಗ ಹಾಗೂ ಸೀನುವಾಗ ನಿಮ್ಮ ಬಾಯನ್ನು ಮುಚ್ಚಿಕೊಳ್ಳಿ.
* ಅನಾರೋಗ್ಯ ಇದ್ದವರಿಂದ ದೂರವಿರಿ. ಶೀತ, ನೆಗಡಿ ಇರುವವರಿಂದ ಬಲು ದೂರವಿದ್ದರೊಳಿತು.
* ಪ್ರಾಣಿಗಳ ಜೊತೆ ಒಡನಾಟ ಬೇಡ. ಹಸಿ ಮಾಂಸ, ಅರ್ಧ ಬೆಂದ ಮಾಂಸಾಹಾರ ವರ್ಜಿಸಿ. 
* ತೋಟಕ್ಕೆ, ಪ್ರಾಣಿ ಸಂತೆಗೆ, ಮಾಂಸ ಮಾರುವ ಸ್ಥಳಕ್ಕೆ ಹೋಗಲೇ ಬೇಡಿ.
* ಶೀತ, ನೆಗಡಿ, ಕೆಮ್ಮು ಇದ್ದರೆ ಮಾಸ್ಕ್ ಧರಿಸಿಕೊಳ್ಳಿ
* ನೆರವಾಗಲು  (+91-11-23978046)-24*7 ಕೇಂದ್ರ ಆರೋಗ್ಯ ಸಚಿವಾಲಯವನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು