ಹ್ಯಾಪಿ ಹಾರ್ಮೋನ್ಸ್ ಹೆಚ್ಚಿಸಿಕೊಳ್ಳಿ, ಖುಷ್ ಖುಷಿಯಾಗಿರಿ...

ನಾವು ಸಂತೋಷವಾಗಿರಬೇಕೆಂದರೆ ದೇಹದಲ್ಲಿ ಕೆಮಿಕಲ್‌ಗಳು ಅದಕ್ಕೆ ಸರಿಯಾಗಿ ಕೆಲಸ ಮಾಡಬೇಕು. ಹ್ಯಾಪಿ ಹಾರ್ಮೋನ್‌ಗಳು ಹೆಚ್ಚು ಹೆಚ್ಚಾಗಿ ಉತ್ಪತ್ತಿಯಾಗಬೇಕು. ಹಾಗೆ ಹ್ಯಾಪಿ ಹಾರ್ಮೋನ್‌ಗಳ ಉತ್ಪತ್ತಿ ಹೆಚ್ಚಿಸಲು ಏನು ಮಾಡಬೇಕು?

Boost your happy hormone to be happy always

ನಮಗೆ ಹಸಿವಾಗುವಂತೆ, ಹೊಟ್ಟೆ ತುಂಬಿದಂತೆನಿಸುವುದು, ಕೆಲಸ ಮಾಡುವ ಉತ್ಸಾಹ, ನಿರುತ್ಸಾಹ, ನಿದ್ರೆ, ಕಿರಿಕಿರಿ ಸೇರಿದಂತೆ ಬಹುತೇಕ ಮೂಡ್‌ಗಳು, ಕನಸುಗಳು, ನೆನಪುಗಳು, ಗುರಿಯೆಡೆ ಗಮನ, ಕಡೆಗೆ ಸಂತೋಷವನ್ನು ಕೂಡಾ ನಿಯಂತ್ರಿಸುವುದು ಕೆಮಿಕಲ್ಹಾ ಮೆಸೆಂಜರ್ಗಳಾದ ಹಾರ್ಮೋನ್‌ಗಳು. ಸಂತೋಷದ ವಿಷಯವೆಂದರೆ ನಮ್ಮ ದೇಹದಲ್ಲಿ ಸಂತೋಷ ಉಕ್ಕಿಸುವ ಹಾರ್ಮೋನ್‌ಗಳು ಒಂದಲ್ಲಾ, ಎರಡಲ್ಲಾ- ನಾಲ್ಕು ರೀತಿಯವು ಇವೆ. ನ್ಯೂರೋಟ್ರಾನ್ಸ್‌ಮಿಟರ್‌ಗಳ ಈ ಬ್ಯಾಂಡ್‌ಗಳನ್ನು ಮೆದುಳು ಉತ್ಪಾದಿಸುತ್ತದೆ. ಇಂಥ ನಾಲ್ಕು ಹ್ಯಾಪಿ ಹಾರ್ಮೋನ್‍‌ಗಳು ಯಾವುವು, ಅವುಗಳನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳೇನು ತಿಳಿದರೆ ಖಂಡಿತಾ ಖುಷಿಯಾಗಿರುವಂತೆ ಬದುಕನ್ನು ರೂಪಿಸಿಕೊಳ್ಳಬಹುದಲ್ಲವೇ?

Boost your happy hormone to be happy always

ಡೋಪಮೈನ್
ಇದು ಫೀಲ್ ಗುಡ್ ಹಾರ್ಮೋನ್. ಕಲಿಯುವಿಕೆ, ನೆನಪುಗಳು, ಮೋಟಾರ್ ಚಟುವಟಿಕೆಗಳಲ್ಲೆಲ್ಲ ಸಂತೋಷ ಸಿಗಲು ಈ ಹಾರ್ಮೋನ್ ಬಿಡುಗಡೆಯೇ ಕಾರಣ. ಹಲವಾರು ಗುರಿಗಳನ್ನು ಹೊಂದುವುದು, ಅವನ್ನು ಸಾಧಿಸುತ್ತಾ ಹೋಗುವುದರರಿಂದ ಡಿಲಿಶಿಯಸ್ ಡೋಪಮಿನ್ ಬಿಡುಗಡೆ ಹೆಚ್ಚುತ್ತದೆ. ಇದನ್ನು ಹೆಚ್ಚಿಸಲು
- ಸೂರ್ಯನ ಬೆಳಕಿನಲ್ಲಿ ಹೆಚ್ಚು ಸಮಯ  ಕಳೆಯಿರಿ.
- ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಕೆಲಸಗಳಲ್ಲಿ ತೊಡಗಿಕೊಳ್ಳಿ.
- ಪ್ರಾಣಾಯಾಮ ಅಭ್ಯಾಸ ಮಾಡಿ.
- ಚೆನ್ನಾಗಿ ನಿದ್ರಿಸಿ. 
- ಪನೀರ್, ನಟ್ಸ್, ಬೀನ್ಸ್ ಹೆಚ್ಚಾಗಿ ಸೇವಿಸಿ. 

ಕಧ: ರೋಗ ನಿರೋಧಕ ಶಕ್ತಿ ಹೆಚ್ಚಿಸೋ ಕಷಾಯ

ಸೆರಟೋನಿನ್
ಸೆರಟೋನಿನ್ ಕಡಿಮೆಯಾದಾಗಲೇ ನಾವು ಖಿನ್ನತೆಯತ್ತ ಜಾರುವುದು. ಹಾಗಾಗಿ ಆ್ಯಂಟಿ ಡಿಪ್ರೆಸೆಂಟ್ ಮಾತ್ರೆಗಳಲ್ಲಿ ಸೆರಟೋನಿನ್ ಬಳಸಲಾಗುತ್ತದೆ. ಇದು ನಮ್ಮ ಮೂಡ್, ನಿದ್ದೆ, ಹಸಿವು, ಜೀರ್ಣಕ್ರಿಯೆ, ಕಲಿವ ಸಾಮರ್ಥ್ಯ, ನೆನಪಿನ ಶಕ್ತಿಯನ್ನು ನಿಯಂತ್ರಿಸಬಲ್ಲದು. ಇದರ ಉತ್ಪಾದನೆ ಹೆಚ್ಚಿಸಲು
- ಚೆನ್ನಾಗಿ ವರ್ಕೌಟ್ ಮಾಡಿ ಇಲ್ಲವೇ ಕ್ರೀಡೆಗಳಲ್ಲಿ ಪಾಲ್ಗೊಳ್ಳಿ. 
- ಟ್ರಿಪ್ಟೋಫಾನ್ ಹೆಚ್ಚಿರುವ ಆಹಾರಗಳಾದ ಹಾಲನ್ನು ಹೆಚ್ಚಾಗಿ ಸೇವಿಸಿ. ಅದರಲ್ಲೂ ಮಲಗುವ ಮುನ್ನ ಸೇವಿಸುವುದೊಳಿತು. 
- ಒಮೆಗಾ 3 ಹೆಚ್ಚಿರುವ ಆಹಾರಗಳಾದ ತುಪ್ಪ, ನಟ್ಸ್, ಬೇಳೆಕಾಳುಗಳನ್ನು ಹೆಚ್ಚು ಸೇವಿಸಿ. 
- ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸುವುದನ್ನು ನಿಲ್ಲಿಸಬೇಡಿ. 

ದೇಹದಲ್ಲಿ ಹಾರ್ಮೋನ್ ಸಮತೋಲನ ತಪ್ಪಿದ ಸೂಚನೆಗಳಿವು

ಆಕ್ಸಿಟೋಸಿನ್
ಲವ್ ಹಾರ್ಮೋನ್ ಎಂಬ ಹೆಗ್ಗಳಿಕೆ ಪಡೆದಿರುವ ಆಕ್ಸಿಟೋಸಿನ್ ಮಗುವಿಗೆ ಜನ್ಮ ಕೊಡಲು, ಎದೆಹಾಲು ಕೊಡಲು, ಗಟ್ಟಿಯಾದ ಪೇರೆಂಟ್- ಚೈಲ್ಡ್ ಬಾಂಡಿಂಗ್ ಬೆಳೆಯಲು ಬೇಕಾಗುತ್ತದೆ. ನಂಬಿಕೆ, ಸಹಾನುಭೂತಿ, ಸಂಬಂಧಗಳ ಬಾಂಡಿಂಗ್ ಎಲ್ಲದರಲ್ಲೂ ಈ ಹಾರ್ಮೋನ್‌ಗಳ ಪಾತ್ರವಿರುತ್ತದೆ. ಅಂದರೆ, ಸಂಬಂಧಗಳನ್ನು ಬೆಸೆವಲ್ಲಿ ಆಕ್ಸಿಟೋಸಿನ್ ಎತ್ತಿದ ಕೈ. ಮುದ್ದಾಡುವುದು, ಮುತ್ತು ಕೊಡುವುದು, ಸೆಕ್ಸ್ ಸೇರಿದಂತೆ ದೈಹಿಕವಾಗಿ ಪ್ರೀತಿ ತೋರಿದಂತೆಲ್ಲಆಕ್ಸಿಟೋಸಿನ್ ಮಟ್ಟ ಹೆಚ್ಚುತ್ತದೆ. ಇದನ್ನು ಮತ್ತಷ್ಟು ಹೆಚ್ಚಿಸಲು 
- ಯೋಗ ಮತ್ತು ರಿಲ್ಯಾಕ್ಸೇಶನ್ ಅಭ್ಯಾಸ ಮಾಡಿ. 
- ಪ್ರೀತಿಪಾತ್ರರೊಂದಿಗೆ ಕುಳಿತು ಆಹಾರ ಸೇವಿಸಿ.
- ವಾರಕ್ಕೊಮ್ಮೆಯಾದರೂ ಮಸಾಜ್ ಮಾಡಿಸಿಕೊಳ್ಳಿ. 
- ನಿಮ್ಮ ಹವ್ಯಾಸಗಳಿಗೆ ಸಮಯ ಕೊಡಿ. 

ದಾಂಪತ್ಯಕ್ಕೆ ಧಮ್ ನೀಡೋ ಅಭ್ಯಾಸಗಳು ಯಾವುವು ಗೊತ್ತಾ?

ಎಂಡೋರ್ಫಿನ್
ಇವು ದೇಹದ ನೈಸರ್ಗಿಕ ಪೇನ್ ಕಿಲ್ಲರ್ ಇದ್ದಂತೆ. ಒತ್ತಡ ಅಥವಾ ಕಿರಿಕಿರಿಯಾದಾಗ ಇವು ಬಿಡುಗಡೆಯಾಗಿ ಸಮಾಧಾನ ಮಾಡುತ್ತವೆ. ತಿನ್ನುವುದು, ವರ್ಕೌಟ್, ಸೆಕ್ಸ್ ಸಮಯದಲ್ಲೂ ಇವುಗಳ ಉತ್ಪತ್ತಿ ಹೆಚ್ಚುತ್ತದೆ. ಇವನ್ನು ಹೆಚ್ಚಿಸಿಕೊಳ್ಳಲು,
- ಖಾರಖಾರವಾದ ಆಹಾರ ಸೇವಿಸಿ.
- ಪ್ರತಿದಿನ ವರ್ಕೌಟ್ ಮಾಡಿ. 

ಇವಿಷ್ಟೇ ಅಲ್ಲದೆ, ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟೆರೋನ್ ಹಾರ್ಮೋನ್‌ಗಳು ಕೂಡಾ ನಮ್ಮ ಸಂತೋಷದ ಮಟ್ಟದೊಂದಿಗೆ ಥಳುಕು ಹಾಕಿಕೊಂಡಿವೆ. ಬಿಸಿನೀರಿನ ಸ್ನಾನ, ಯೋಗ, ಪ್ರಾಣಾಯಾಮ, ಜಂಕ್ ಫುಡ್ ತಿನ್ನದಿರುವುದು, ಚಟಮುಕ್ತರಾಗಿರುವುದು, ವ್ಯಾಯಾಮಗಳ ಮೂಲಕ ಇವುಗಳ ಉತ್ಪತ್ತಿ ಹೆಚ್ಚಿಸಿಕೊಳ್ಳಬಹುದು. 

Latest Videos
Follow Us:
Download App:
  • android
  • ios