ಯಾವಾಗ್ಲೂ ಆಕ್ಟಿವ್ ಆಗಿರಲು ದೇಹಕ್ಕೆ ಈ 7 ಬಗೆಯ ವಿಶ್ರಾಂತಿ ಸಿಗಲೇಬೇಕು
ಸುಸ್ತಾಗುತ್ತಿದೆ ಎಂದಾದಾಗ ಹೆಚ್ಚಿನವರು ಸರಿಯಾಗಿ ನಿದ್ದೆ (Sleep)ಯಾಗಿಲ್ಲ ಎಂದು ಅಂದುಕೊಂಡು ಗಂಟೆಗಟ್ಟಲೆ ನಿದ್ದೆ ಮಾಡುತ್ತಾರೆ. ಆದರೆ ದೇಹಕ್ಕೆ (Body) ಅಗತ್ಯವಿರುವುದು ಕೇವಲ ನಿದ್ದೆಯೆಂಬ ರೆಸ್ಟ್ ಅಲ್ಲ. ಪ್ರತಿಯೊಬ್ಬ ವ್ಯಕ್ತಿಗೆ 7 ರೀತಿಯ ವಿಶ್ರಾಂತಿ (Rest) ಅಗತ್ಯವಿದೆ. ಅವು ಯಾವುವೆಲ್ಲಾ ?
ಸಾಕಷ್ಟು ನಿದ್ರೆ (Sleep) ಮಾಡಿದರೆ ಸಾಕು ಚೆನ್ನಾಗಿ ವಿಶ್ರಾಂತಿ (Rest) ಪಡೆದೆವು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಈ ಮೂಲಕ ದೇಹಕ್ಕೆ ಅಗತ್ಯವಿರುವ ಇತರ ರೀತಿಯ ವಿಶ್ರಾಂತಿಯನ್ನು ಕಳೆದುಕೊಳ್ಳುತ್ತೇವೆ. ದೇಹ (Body)ಕ್ಕೆ ಅಗತ್ಯವಾದ ರೀತಿಯಲ್ಲಿ ಸರಿಯಾದ ರೀತಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳದಿದ್ದಾಗ ವಿಪರೀತ ಸುಸ್ತಾದಂತೆ, ತಲೆನೋವಾದಂತೆ, ತುಂಬಾ ರೆಸ್ಟ್‌ಲೆಸ್ ಅನಿಸಲು ಶುರುವಾಗುತ್ತದೆ. ವಿಶ್ರಾಂತಿಯ ನಿಜವಾದ ಶಕ್ತಿಯನ್ನು ನಾವು ಅರ್ಥಮಾಡಿಕೊಳ್ಳದ ಕಾರಣ ನಾವು ವಿಶ್ರಾಂತಿ ಕೊರತೆಯಿಂದ ಬಳಲುತ್ತೇವೆ. ಹೀಗಾಗಿ ಮೊದಲಿಗೆ ದೇಹಕ್ಕೆ ಯಾವ ರೀತಿಯ ವಿಶ್ರಾಂತಿ ಅಗತ್ಯ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬ ವ್ಯಕ್ತಿಗೆ 7 ರೀತಿಯ ವಿಶ್ರಾಂತಿ ಅಗತ್ಯವಿದೆ. ಅವು ಯಾವುವೆಲ್ಲಾ ತಿಳಿದುಕೊಳ್ಳೋಣ.
ಭೌತಿಕ ವಿಶ್ರಾಂತಿ
ದೇಹ ಸಂಪೂರ್ಣ ಚಟುವಟಿಕೆಯಿಂದಿರಲು ಮುಖ್ಯವಾಗಿ ಅಗತ್ಯವಾಗಿರುವ ಮೊದಲ ವಿಧದ ವಿಶ್ರಾಂತಿ, ಭೌತಿಕ ವಿಶ್ರಾಂತಿಯಾಗಿದೆ. ಇದು ನಿಷ್ಕ್ರಿಯ ಅಥವಾ ಸಕ್ರಿಯವಾಗಿರಬಹುದು. ನಿಷ್ಕ್ರಿಯ ದೈಹಿಕ ವಿಶ್ರಾಂತಿಯು ಮುಖ್ಯವಾಗಿ ನಿದ್ದೆಯನ್ನು ಒಳಗೊಂಡಿರುತ್ತದೆ. ಆದರೆ ಸಕ್ರಿಯ ದೈಹಿಕ ವಿಶ್ರಾಂತಿ ಎಂದರೆ ಯೋಗ, ಸ್ಟ್ರೆಚಿಂಗ್ ಮತ್ತು ಮಸಾಜ್ ಥೆರಪಿಯಂತಹಾ ಚೈತನ್ಯಕಾರಿ ಚಟುವಟಿಕೆಗಳು ದೇಹದ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.
World Sleep Day: ನಿದ್ದೆ ಕಡಿಮೆಯಾದ್ರೆ ಎಂಥಾ ಗಂಭೀರ ಕಾಯಿಲೆ ಬರುತ್ತೆ ನೋಡಿ !
ಮಾನಸಿಕ ವಿಶ್ರಾಂತಿ
ಎರಡನೆಯ ವಿಧದ ವಿಶ್ರಾಂತಿ, ಮಾನಸಿಕ ವಿಶ್ರಾಂತಿ. ಪ್ರತಿದಿನ ಒಂದು ಕಪ್ ಕಾಫಿ ಕುಡಿದು ಕೆಲಸವನ್ನು ಪ್ರಾರಂಭಿಸುವವರನ್ನು ನೀವು ನೋಡಿದ್ದೀರಾ. ಯಾಕೆಂದರೆ ಅವರಿಗೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಕಷ್ಟಕರವಾಗುತ್ತಿರುತ್ತದೆ. ಅಂಥವರು ರಾತ್ರಿ ಮಲಗಿದಾಗಲೂ, ಮೆದುಳಿಗೆ ವಿಶ್ರಾಂತಿ ನೀಡಲು ಹೆಣಗಾಡುತ್ತಾರೆ. ಇಡೀ ದಿನದ ಸಂಭಾಷಣೆಗಳು ಅವರ ಆಲೋಚನೆಗಳಲ್ಲಿ ತುಂಬಿರುತ್ತದೆ. ಮತ್ತು ಏಳರಿಂದ ಎಂಟು ಗಂಟೆಗಳ ಕಾಲ ಮಲಗಿದ್ದರೂ, ಅವನು ಮನಸ್ಸಿಗೆ ರೆಸ್ಟ್ ನೀಡಿರುವುದಿಲ್ಲ. ಹೀಗಾಗಿ ಇಂಥವರಿಗೆ ಅತಿ ಹೆಚ್ಚು ಮಾನಸಿಕ ವಿಶ್ರಾಂತಿಯ ಅಗತ್ಯವಿದೆ.
ಮಾನಸಿಕ ವಿಶ್ರಾಂತಿ ಸರಿಪಡಿಸಲು ನೀವು ನಿಮ್ಮ ಕೆಲಸವನ್ನು ಬಿಡಬೇಕಾಗಿಲ್ಲ ಅಥವಾ ರಜೆಯ ಮೇಲೆ ಹೋಗಬೇಕಾಗಿಲ್ಲ. ನಿಮ್ಮ ಕೆಲಸದ ಮಧ್ಯೆ ಪ್ರತಿ ಎರಡು ಗಂಟೆಗಳಿಗೊಮ್ಮೆ ಸಣ್ಣ ವಿರಾಮವನ್ನು ತೆಗೆದುಕೊಳ್ಳಲು ಸಮಯ ನಿಗದಿಪಡಿಸಿ. ಈ ವಿರಾಮಗಳು ನಿಮ್ಮ ಮನಸ್ಸಿಗೆ ಹೆಚ್ಚು ನೆಮ್ಮದಿ ನೀಡುತ್ತಿದೆ.
ಇಂದ್ರಿಯ ವಿಶ್ರಾಂತಿ.
ನಮಗೆ ಬೇಕಾದ ಮೂರನೇ ವಿಧದ ವಿಶ್ರಾಂತಿ ಇಂದ್ರಿಯ ವಿಶ್ರಾಂತಿ. ಪ್ರಕಾಶಮಾನವಾದ ದೀಪಗಳು, ಕಂಪ್ಯೂಟರ್ ಸ್ಕ್ರೀನ್, ಹಿನ್ನೆಲೆ ಶಬ್ದ ಮತ್ತು ಸಂಭಾಷಣೆಗಳು ಇಂದ್ರಿಯಗಳು ಯಾವಾಗಲೂ ಸಂಪೂರ್ಣವಾಗಿ ಸಕ್ರಿಯವಾಗಿರುವಂತೆ ಮಾಡುತ್ತದೆ. ಅವು ಕಛೇರಿಯಲ್ಲಿರಲಿ ಅಥವಾ ಜೂಮ್ ಕರೆಗಳಲ್ಲಿರಲಿ ಎ.ಲ್ಲಿಯೇ ಆದರೂ ಇದು ನಮ್ಮ ಇಂದ್ರಿಯಗಳಿಗೆ ಅತಿಯಾದ ಕಿರಿಕಿರಿಯನ್ನು ಉಂಟುಮಾಡಬಹುದು. ದಿನದ ಮಧ್ಯದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಕಣ್ಣುಮುಚ್ಚಿ ಇಂದ್ರಿಯಗಳಿಗೆ ವಿಶ್ರಾಂತಿ ಕೊಡಿ. ಪ್ರತಿದಿನದ ಕೊನೆಯಲ್ಲಿ ಎಲೆಕ್ಟ್ರಾನಿಕ್ಸ್ ಐಟಂಗಳಿಂದ ಉದ್ದೇಶಪೂರ್ವಕವಾಗಿಯೇ ದೂರವಿರಿ.
Feeling Exhausted: ದೇಹ, ಮನಸ್ಸಿಗೆ ಈ ರೀತಿಯ ವಿಶ್ರಾಂತಿ ಬೇಕು
ಸೃಜನಶೀಲ ವಿಶ್ರಾಂತಿ
ನಾಲ್ಕನೇ ವಿಧದ ವಿಶ್ರಾಂತಿ ಸೃಜನಶೀಲ ವಿಶ್ರಾಂತಿಯಾಗಿದೆ. ಸಮಸ್ಯೆಗಳನ್ನು ಪರಿಹರಿಸುವ ಅಥವಾ ಹೊಸ ಆಲೋಚನೆಗಳನ್ನು ಬುದ್ದಿಮತ್ತೆ ಮಾಡುವ ಯಾರಿಗಾದರೂ ಈ ರೀತಿಯ ವಿಶ್ರಾಂತಿ ಮುಖ್ಯವಾಗಿದೆ. ಸೃಜನಾತ್ಮಕ ವಿಶ್ರಾಂತಿಯು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಯೋಚನೆಯನ್ನು ಪುನರುಜ್ಜೀವನಗೊಳಿಸುತ್ತದೆ. ಸಮುದ್ರ, ಜಲಪಾತ, ಹೊರಾಂಗಣ, ಉದ್ಯಾನವನಕ್ಕೆ ತೆರಳಿ ನೀವು ಸೃಜನಶೀಲ ವಿಶ್ರಾಂತಿಯನ್ನು ಪಡೆಯಬಹುದು. ಆದರೆ ಸೃಜನಾತ್ಮಕ ವಿಶ್ರಾಂತಿಯು ಕೇವಲ ಪ್ರಕೃತಿಯನ್ನು ಮೆಚ್ಚುವುದಲ್ಲ. ಇದು ಕಲೆಗಳನ್ನು ಆನಂದಿಸುವುದನ್ನು ಸಹ ಒಳಗೊಂಡಿದೆ. ನೀವು ಇಷ್ಟಪಡುವ ಸ್ಥಳಗಳ ಚಿತ್ರಗಳನ್ನು, ಕಲಾಕೃತಿಗಳನ್ನು ನೋಡುವ ಮೂಲಕ ನಿಮ್ಮ ಕಾರ್ಯಕ್ಷೇತ್ರವನ್ನು ಸ್ಫೂರ್ತಿಯ ಸ್ಥಳವಾಗಿ ಪರಿವರ್ತಿಸಿ.
ಭಾವನಾತ್ಮಕ ವಿಶ್ರಾಂತಿ
ಯಾವುದೇ ಭಾವನೆಯನ್ನು ಯಾರ ಜೊತೆಗಾದರೂ ಸಂಪೂರ್ಣವಾಗಿ ಹಂಚಿಕೊಳ್ಳಲು ಸಾಧ್ಯವಾಗಬೇಕು. ನಿಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದು ಭಾವನಾತ್ಮಕ ವಿಶ್ರಾಂತಿಯೆಂದು ಕರೆಸಿಕೊಳ್ಳುತ್ತದೆ. ಭಾವನಾತ್ಮಕವಾಗಿ ವಿಶ್ರಾಂತಿ ಪಡೆದ ವ್ಯಕ್ತಿಯು ಹೇಗಿದ್ದಿರಿ ಎಂದು ಕೇಳಿದಾಗ ಚೆನ್ನಾಗಿದ್ದೇನೆ ಎಂದು ಧೈರ್ಯವಾಗಿ ಉತ್ತರಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದಾಗ ಯಾವುದೂ ಸರಿಯಿಲ್ಲ ಎಂಬ ಉತ್ತರ ನೀಡುವಂತಾಗುತ್ತದೆ.
ಸಾಮಾಜಿಕ ವಿಶ್ರಾಂತಿ
ನಿಮಗೆ ಭಾವನಾತ್ಮಕ ವಿಶ್ರಾಂತಿಯ ಅಗತ್ಯವಿದ್ದರೆ, ನೀವು ಬಹುಶಃ ಸಾಮಾಜಿಕ ವಿಶ್ರಾಂತಿ ಕೊರತೆಯನ್ನು ಹೊಂದಿರುತ್ತೀರಿ. ನಮ್ಮನ್ನು ಆಯಾಸಗೊಳಿಸುವ ಸಂಬಂಧಗಳಿಂದ ನಮ್ಮನ್ನು ಪುನರುಜ್ಜೀವನಗೊಳಿಸುವ ಸಂಬಂಧಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ನಾವು ವಿಫಲವಾದಾಗ ಇದು ಸಂಭವಿಸುತ್ತದೆ. ಹೆಚ್ಚು ಸಾಮಾಜಿಕ ವಿಶ್ರಾಂತಿಯನ್ನು ಅನುಭವಿಸಲು ಯಾವಾಗಲೂ, ಧನಾತ್ಮಕ ಮತ್ತು ಬೆಂಬಲಿತ ಜನರೊಂದಿಗಿರಿ.
ಆಧ್ಯಾತ್ಮಿಕ ವಿಶ್ರಾಂತಿ
ಅಂತಿಮ ವಿಧದ ವಿಶ್ರಾಂತಿ ಆಧ್ಯಾತ್ಮಿಕ ವಿಶ್ರಾಂತಿಯಾಗಿದೆ. ದೈಹಿಕ ಮತ್ತು ಮಾನಸಿಕವಾಗಿಯೂ ಇದು ನೆಮ್ಮದಿ ನೀಡುತ್ತದೆ. ನಿಮ್ಮ ದಿನಚರಿಯಲ್ಲಿ ಪ್ರಾರ್ಥನೆ, ಧ್ಯಾನ ಅಥವಾ ಸಮುದಾಯದ ಒಳಗೊಳ್ಳುವಿಕೆಯನ್ನು ಸೇರಿಸಿ..