ಮೂಡಿಲ್ಲ ಅಂತ ಕಾಫಿ ಕುಡಿಯೋದು ಕಾಮನ್, ಖಿನ್ನತೆ ಇದ್ದರೆ ಹಾಗೆ ಮಾಡದಿದ್ದರೊಳಿತು!

ಕಾಫಿ ಸೇವನೆ ಮಾಡುವವರ ಸಂಖ್ಯೆ ಭಾರತದಲ್ಲಿ ಸಾಕಷ್ಟಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಯಾವಾಗ ಕೊಟ್ರೂ ಕಾಫಿ ಕುಡಿತೇನೆ ಎನ್ನುವವರು ನೀವಾಗಿದ್ದರೆ ಕಾಫಿ ಸೇವನೆ ಯಾವಾಗ ಮಾಡ್ಬಾರದು ಹಾಗೆ ಯಾರು ಮಾಡ್ಬಾರದು ಎಂಬುದನ್ನು ತಿಳಿದಿರಿ.
 

The Side Effects Of Having Excess Of Coffee

ಕಾಫಿ ಇಲ್ಲದೆ ಲೈಫ್ ಇಲ್ಲ ಎನ್ನುವವರಿದ್ದಾರೆ. ಪ್ರತಿ ದಿನ ನಾಲ್ಕೈದು ಕಪ್ ಕಾಫಿ ಕುಡಿಯೋರು ಒಂದು ಕಡೆಯಾದ್ರೆ ಬೆಳಿಗ್ಗೆ ಎದ್ದ ತಕ್ಷಣ ಕಾಫಿ ಬೇಕು ಎನ್ನುವವರು ಮತ್ತೊಂದಿಷ್ಟು ಮಂದಿ. ಕೆಲವರು ಕಚೇರಿಗೆ ಹೋದ್ಮೇಲೆ ಫ್ರೆಶ್ ಆಗೋಕೆ ಕಾಫಿ ಹೀರಿದ್ರೆ ಮತ್ತೆ ಕೆಲವರು ಉಪಹಾರದ ಸಮಯದಲ್ಲಿ ಕಾಫಿ ಕುಡಿತಾರೆ. ಇನ್ನು ಕೆಲವರು ಜಿಮ್ ಗೆ ಹೋಗುವ ಮುನ್ನ ಬ್ಲಾಕ್ ಕಾಫಿ ಸೇವನೆ ಮಾಡಿ ಹೋಗ್ತಾರೆ. ಕಾಫಿ ಕುಡಿಯೋದ್ರಿಂದ ನಿಮ್ಮ ಮೂಡ್ ಫ್ರೆಶ್ ಆಗುತ್ತದೆ. ಕೆಲಸ ಮಾಡಲು ಉತ್ಸಾಹ ಬರುತ್ತದೆ. ನಿದ್ರೆಯಿಂದ ನಮ್ಮನ್ನು ದೂರವಿಟ್ಟು, ಕೆಲಸ ಮಾಡಲು ಶಕ್ತಿ ನೀಡುತ್ತದೆ. ಕಾಫಿ ಮಿತವಾಗಿದ್ದರೆ ಒಳ್ಳೆಯದೇ. ಅತಿಯಾಗಿ ಸೇವನೆ ಮಾಡಿದ್ರೆ ಅದ್ರಲ್ಲಿರುವ ಕೆಫೀನ್ ನಮ್ಮ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ ಕೆಲ ವ್ಯಕ್ತಿಗಳು ಅಪ್ಪಿತಪ್ಪಿಯೂ ಕಾಫಿ ಸೇವನೆ ಮಾಡಬಾರದು. ನಾವಿಂದು ಯಾರು ಕಾಫಿಯಿಂದ ದೂರವಿರಬೇಕು ಎನ್ನುವ ಬಗ್ಗೆ ನಿಮಗೆ ತಿಳಿಸ್ತೇವೆ. 

ಕಾಫಿ (Coffee) ಸೇವನೆ ಮಾಡಬಾರದು ಈ ವ್ಯಕ್ತಿಗಳು :
ಖಿನ್ನತೆ (Depression) ಗೆ ಮಾರಕ ಕಾಫಿ :
 ಕಾಫಿ ಸೇವನೆಯಿಂದ ಮೂಡ್ ತಾಜಾಗೊಳ್ಳುತ್ತದೆ ನಿಜ. ಆದ್ರೆ ಖಿನ್ನತೆ ಸಮಸ್ಯೆ ಇರುವವರು ಕಾಫಿ ಕುಡಿಯಬಾರದು. ಇದು ಅವರ ಮನಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು.ಖಿನ್ನತೆ ಕಾಡುವ ವ್ಯಕ್ತಿಗಳ ಜೊತೆಗೆ  ಸ್ಕಿಜೋಫ್ರೇನಿಯಾ (Schizophrenia) ರೋಗಿಗಳಿಗೆ ಕಾಫಿಯನ್ನು ಮಾರಕವೆಂದು ಪರಿಗಣಿಸಲಾಗುತ್ತದೆ. 

ಉಳಿದ ಸಕ್ಕರೆ ಪಾಕವೇನು ಮಾಡೋದು ಅಂತ ಯೋಚಿಸ್ಬೇಡಿ, ಮತ್ತೊಂದು ಸ್ಟೀಟ್ ಮಾಡಿ!

ಬಿಪಿ (BP) ಹೆಚ್ಚಿರುವ ವ್ಯಕ್ತಿಗಳು ಕಾಫಿ ಸೇವನೆ ಮಾಡ್ಬೇಡಿ : ಬಿಪಿ ಹೆಚ್ಚಿರುವ ವ್ಯಕ್ತಿಗಳು ಕಾಫಿ ಸೇವನೆ ಮಾಡಬಾರದು ಎನ್ನುತ್ತಾರೆ ತಜ್ಞರು. ನಾಡಿ ಮಿಡಿತ ಹೆಚ್ಚಿರುವ ವ್ಯಕ್ತಿಗಳು ಕೂಡ ಕಾಫಿ ಸೇವನೆ ಮಾಡಿದ್ರೆ ಅಪಾಯ.  ಬಿಪಿ ಮತ್ತು ನಾಡಿಮಿಡಿತದ ವೇಗವನ್ನು ಹೆಚ್ಚಿಸುವ ಕೆಲಸವನ್ನು ಕಾಫಿ ಮಾಡುತ್ತದೆ. ಇದ್ರಿಂದ ಹೃದಯದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೃದಯ ಸಂಬಂಧಿ ಸಮಸ್ಯೆ ಕಾಡುವ ಅಪಾಯವಿರುತ್ತದೆ. 

ಶುಗರ್ (Sugar) ರೋಗಿಗಳಿಗೆ ಬೇಡ ಕಾಫಿ : ಕಾಫಿ ಘಮ ಮೂಗಿಗೆ ಬಡಿಯುತ್ತಿದ್ದಂತೆ ಕುಡಿಯುವ ಆಸೆಯಾಗುತ್ತದೆ. ಅದ್ರಲ್ಲೂ ತಣ್ಣನೆಯ ವಾತಾವರಣದಲ್ಲಿ ಕಾಫಿ ಎಲ್ಲರನ್ನು ಸೆಳೆಯುತ್ತದೆ. ಆದ್ರೆ ಮಧುಮೇಹ ರೋಗಿಗಳು ಕಾಫಿ ಮೇಲೆ ನಿಯಂತ್ರಣ ಸಾಧಿಸಬೇಕು. ಅವರು ಕಾಫಿ ಕುಡಿಯುವುದು ಒಳ್ಳೆಯದಲ್ಲ. ಒಂದ್ವೇಳೆ ಕಾಫಿ ಬೇಕೇಬೇಕು ಎನ್ನುವವರು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು.  

ಅತಿಸಾರ (Diarrhea) ಸಮಸ್ಯೆಗೆ ಕಾಫಿ ಬೇಡ : ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳು ಕೂಡ ಹೆಚ್ಚು ಕಾಫಿ ಸೇವನೆ ಮಾಡಬಾರದು. ಇದ್ರಿಂದ ಅತಿಸಾರ ಹೆಚ್ಚಾಗುವ ಸಂಭವವಿರುತ್ತದೆ. 

ಜೀರ್ಣಕ್ರಿಯೆ (Digestion) ಸಮಸ್ಯೆಯಿರುವವರು ಕಾಫಿಯಿಂದ ದೂರವಿರಿ :  ಜೀರ್ಣಾಂಗ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಯಿದ್ದರೆ ಕಾಫಿ ಸೇವನೆ ಮಾಡದಿರುವುದು ಒಳ್ಳೆಯದು. ಇದು ಜೀರ್ಣಕ್ರಿಯೆಯನ್ನು ಹದಗೆಡಿಸುತ್ತದೆ. ಕೆಲವರಿಗೆ ಕಾಫಿ ಸೇವನೆ ಮಾಡಿದ ನಂತ್ರ ಮಲಬದ್ಧತೆ ಕಾಡಿದ್ರೆ ಮತ್ತೆ ಕೆಲವರಿಗೆ ಅತಿಸಾರದ ಸಮಸ್ಯೆಯಾಗುತ್ತದೆ. 

ಶೀತ ತಪ್ಪಿಸಲು, ಪದೇ ಪದೇ ಚಹಾ ಕುಡಿತೀರಾ? ಹುಷಾರ್!

ಕಾಫಿ ಸೇವನೆ ಮಾಡುವ ಮೊದಲು ಇದನ್ನು ನೆನಪಿನಲ್ಲಿಡಿ : ಪ್ರತಿ ದಿನ ಕಾಫಿ ಸೇವನೆ ಮಾಡುವವರು ನೀವಾಗಿದ್ದರೆ ಅದನ್ನು ಮಿತಗೊಳಿಸಿ. ದಿನದಲ್ಲಿ ಏಳೆಂಟು ಬಾರಿ ಕಾಫಿ ಸೇವನೆ ಮಾಡಬೇಡಿ. ದಿನಕ್ಕೆ ಒಂದರಿಂದ ಎರಡು ಸಲ ಮಾತ್ರ ಕಾಫಿ ಕುಡಿಯಿರಿ. ಹಾಗೆಯೇ ಧೂಮಪಾನ ಮಾಡುವ ವೇಳೆ ಕಾಫಿ ಕುಡಿಯಬೇಡಿ. ರಾತ್ರಿ ಮಲಗುವ ಮುನ್ನ ಕೂಡ ಕಾಫಿ ಸೇವನೆ ಮಾಡಬೇಡಿ. ನೀವು ರಾತ್ರಿ ಮಲಗಲು 3 ಗಂಟೆ ಮೊದಲು ಕಾಫಿ ಕುಡಿಯಿರಿ. ಕಾಫಿಯಲ್ಲಿರುವ ಕೆಫೀನ್ ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ.   
 

Latest Videos
Follow Us:
Download App:
  • android
  • ios