ಜಗತ್ತಿನಾದ್ಯಂತ ಮಂಕಿಪಾಕ್ಸ್‌ ಭೀತಿ, ಬೆಲ್ಜಿಯಂನಲ್ಲಿ 21 ದಿನ ಕ್ವಾರಂಟೈನ್ ಕಡ್ಡಾಯ

ಕೊರೋನಾ ವೈರಸ್‌ನ (Corona Virus) ಪ್ರಭಾವ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿರುವಾಗಲೇ ಒಂದೊಂದೇ ದೇಶಕ್ಕೆ ಮಂಕಿಪಾಕ್ಸ್ (Monkeypox) ಲಗ್ಗೆಯಿಡುತ್ತಿದೆ. ಇಲ್ಲಿಯವರೆಗೆ, 14 ದೇಶಗಳು ವೈರಲ್ ಕಾಯಿಲೆಯ (Disease) ಪ್ರಕರಣಗಳನ್ನು ವರದಿ ಮಾಡಿದೆ. ಈ ಮಧ್ಯೆ ಬೆಲ್ಜಿಯಂನಲ್ಲಿ (Belgium) ಮೂರು ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ 21 ದಿನಗಳ ಕ್ವಾರಂಟೈನ್ (Quarantine) ಅನ್ನು ಕಡ್ಡಾಯಗೊಳಿಸಲಾಗಿದೆ.

Belgium Become First Country To Introduce Compulsory Monkeypox Quarantine Vin

ಜಗತ್ತಿನ ಒಂದೊಂದೇ ದೇಶಗಳಲ್ಲಿ ಕಂಡುಬಂದಿರುವ ಹೊಸ ಕಾಯಿಲೆ ಮಂಕಿಪಾಕ್ಸ್‌  (Monkeypox)ತಡೆಯುವ ನಿಟ್ಟಿನಲ್ಲಿ ಬೆಲ್ಜಿಯಂ (Belgium) 21 ದಿನಗಳ ಕಡ್ಡಾಯ ಕ್ವಾರಂಟೈನ್‌ ಜಾರಿಗೊಳಿಸಿದೆ. ಇಂಥ ಕ್ರಮ ಕೈಗೊಂಡ ವಿಶ್ವದ ಮೊದಲ ದೇಶ ಬೆಲ್ಜಿಯಂ ಆಗಿದೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಮುಂದಿನ 2-3 ವಾರಗಳಲ್ಲಿ ಮಂಕಿಪಾಕ್ಸ್‌ ಪ್ರಮಾಣ ಹೆಚ್ಚಲಿದೆ ಎಂಬ ಆತಂಕದ ನಡುವೆಯೇ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಬೆಲ್ಜಿಯಂ ಸರ್ಕಾರದ ನಿರ್ದೇಶನ ಪ್ರಕಾರ, ಸೋಂಕು (Virus) ದೃಢಪಟ್ಟವರು ಸ್ವಯಂಪ್ರೇರಿತವಾಗಿ ಹಾಗೂ ಕಡ್ಡಾಯವಾಗಿ 3 ವಾರಗಳ ಕಾಲ ಕ್ವಾರಂಟೈನ್‌ನಲ್ಲಿ (Quarantine) ಇರಬೇಕು. ಸದ್ಯ ಆ ದೇಶದಲ್ಲಿ ಹೊಸ ಕಾಯಿಲೆಯ (Disease) ಮೂರು ಕೇಸುಗಳು ದೃಢಪಟ್ಟಿವೆ.

ಕಳೆದ ವಾರ ನಾಲ್ಕು ಪ್ರಕರಣಗಳು ವರದಿಯಾದ ನಂತರ ಮಂಕಿಪಾಕ್ಸ್ ರೋಗಿಗಳಿಗೆ 21 ದಿನಗಳ ಕ್ವಾರಂಟೈನ್ ಅನ್ನು ಕಡ್ಡಾಯಗೊಳಿಸಲಾಗಿದೆ. ಬೆಲ್ಜಿಯಂ ಆರೋಗ್ಯ ಅಧಿಕಾರಿಗಳು ಶುಕ್ರವಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸೌದಿ ಗೆಜೆಟ್ ಬೆಲ್ಜಿಯಂ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಮಾಡಿದೆ. ಬೆಲ್ಜಿಯಂನಲ್ಲಿ COVID-19 ಗಾಗಿ ನ್ಯಾಷನಲ್ ರೆಫರೆನ್ಸ್ ಲ್ಯಾಬ್‌ನ ಉಸ್ತುವಾರಿ ವಹಿಸಿರುವ ಮೈಕ್ರೋಬಯಾಲಜಿಸ್ಟ್ ಇಮ್ಯಾನುಯೆಲ್ ಆಂಡ್ರೆ ಅವರು ಟ್ವಿಟರ್‌ನಲ್ಲಿ, ದೇಶದಲ್ಲಿ ನಾಲ್ಕನೇ ಪ್ರಕರಣವನ್ನು ದೃಢಪಡಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.

ಒಂದೊಂದೇ ದೇಶಕ್ಕೆ ಲಗ್ಗೆ ಇಡುತ್ತಿದೆ ಮಂಕಿಪಾಕ್ಸ್ !

ಮಂಕಿಪಾಕ್ಸ್‌ನ (Monkeypox) ಮೊದಲ ಪ್ರಕರಣವನ್ನು ಯುಕೆ ದೃಢಪಡಿಸಿತ್ತು.  ಇತ್ತೀಚೆಗಷ್ಟೇ ನೈಜೀರಿಯಾಕ್ಕೆ ತೆರಳಿದ್ದ ವ್ಯಕ್ತಿಯಲ್ಲಿ ಈ ವೈರಸ್ ಪತ್ತೆಯಾಗಿತ್ತು. ರೋಗಿಯನ್ನು ಪ್ರಸ್ತುತ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕದಲ್ಲಿ ಚಿಕಿತ್ಸೆ (Treatment) ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ತಿಂಗಳು ಹಲವಾರು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಮೇ 6ರಿಂದ ಯುಕೆ ಅಪರೂಪದ ವೈರಸ್‌ನ 20 ಪ್ರಕರಣಗಳನ್ನು ದೃಢಪಡಿಸಿದೆ. ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಕೂಡ ಇಂದು ತಮ್ಮ ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ವರದಿ ಮಾಡಿದೆ. ಯುರೋಪ್‌ನ ಸ್ಲೇನ್‌ ಮತ್ತು ಪೋರ್ಚುಗಲ್‌ನಲ್ಲಿ 40ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಂಡಿದೆ. ಜೊತೆಗೆ ಬ್ರಿಟನ್, ಅಮೆರಿಕಾ, ಕೆನಡಾದಲ್ಲೂ ಪ್ರಕರಣಗಳು ದಾಖಲಾಗಿವೆ. 

ಶನಿವಾರ, ವಿಶ್ವ ಆರೋಗ್ಯ ಸಂಸ್ಥೆಯು (WHO) 12 ವಿವಿಧ ದೇಶಗಳಲ್ಲಿ ಒಟ್ಟು 92 ದೃಢಪಡಿಸಿದ ಪ್ರಕರಣಗಳಿವೆ ಎಂದು ವರದಿ ಮಾಡಿದೆ, 28 ಶಂಕಿತ ಪ್ರಕರಣಗಳು ತನಿಖೆಯಲ್ಲಿವೆ. ಸೌದಿ ಗೆಜೆಟ್ ವರದಿ ಮಾಡಿದಂತೆ ಯುಕೆ, ಪೋರ್ಚುಗಲ್, ಸ್ವೀಡನ್, ಇಟಲಿ, ಸ್ಪೇನ್, ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಯುಎಸ್, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಮಂಕಿಪಾಕ್ಸ್ ಪ್ರಕರಣಗಳು ದೃಢಪಟ್ಟಿವೆ.

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

ಭಾರತದಲ್ಲಿಯೂ ಕಟ್ಟೆಚ್ಚರ
ಭಾರತ (India)ದಲ್ಲಿಯೂ ಮಂಕಿಪಾಕ್ಸ್‌ ಬಗ್ಗೆ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ಅಂತಾರಾಷ್ಟ್ರೀಯ ಗಡಿ ಭೂ, ಜಲ ಗಡಿ ಪ್ರದೇಶ, ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಕೇಂದ್ರ ಸರ್ಕಾರ ಸೂಚಿಸಿದೆ. ವಿಶೇಷವಾಗಿ ಆಫ್ರಿಕಾ ಖಂಡದ ದೇಶಗಳಿಂದ ಆಗಮಿಸುವವರ ಮಾದರಿಯನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಲು ನಿರ್ದೇಶನ ನೀಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಸದ್ಯ ನೀಡಿದ ಮಾಹಿತಿ ಪ್ರಕಾರ ಜಗತ್ತಿನ 12 ದೇಶಗಳಲ್ಲಿ 92 ಮಂಕಿಪಾಕ್ಸ್‌ ಕೇಸುಗಳು ದೃಢಪಟ್ಟಿವೆ. 28 ಪ್ರಕರಣಗಳ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ ಎಂದು ಡಬ್ಲೂéಎಚ್‌ಒ ಸ್ಪಷ್ಟಪಡಿಸಿದೆ.

ಮಂಕಿಪಾಕ್ಸ್ ವಿಶಿಷ್ಟವಾಗಿ ಜ್ವರ, ಶೀತ, ದದ್ದು ಮತ್ತು ಮುಖ ಅಥವಾ ಜನನಾಂಗಗಳ ಮೇಲೆ ಸಿಡುಬಿನಿಂದ ಉಂಟಾದ ಗಾಯಗಳನ್ನು ಹೋಲುತ್ತದೆ. ಸಿಡುಬಿನ ವಿರುದ್ಧ ಅಭಿವೃದ್ಧಿಪಡಿಸಲಾದ ಲಸಿಕೆಯನ್ನು ಮಂಕಿಪಾಕ್ಸ್‌ಗೆ ಅನುಮೋದಿಸಲಾಗಿದೆ ಮತ್ತು ಹಲವಾರು ಆಂಟಿ-ವೈರಲ್‌ಗಳು ಸಹ ಪರಿಣಾಮಕಾರಿಯಾಗಿ ಕಂಡುಬರುತ್ತವೆ.

Latest Videos
Follow Us:
Download App:
  • android
  • ios