Asianet Suvarna News Asianet Suvarna News

ನೀವು ಕುಡಿಯೋ ನೀರಿನ ಗುಣಮಟ್ಟ ಚೆನ್ನಾಗಿದ್ಯಾ ? ಈ ರೀತಿ ಮಾಡೋದ್ರಿಂದ ಸುಲಭವಾಗಿ ತಿಳ್ಕೋಬೋದು

ಮನೇಲಿ ವಾಟರ್ ಫ್ಯೂರಿಫೈಯರ್ (Water Purifier) ಯೂಸ್ ಮಾಡ್ತೀರಾ ? ಹಾಗಿದ್ರೆ ಆ ನೀರನ್ನು ಶುದ್ಧೀಕರಿಸುವ ವಿಧಾನ, ಆ ಯಂತ್ರದ ಬಗ್ಗೆ ನಿಮಗೆಷ್ಟು ಗೊತ್ತು. ಅದು ಬಿಡಿ, ನೀವು ಕುಡಿಯೋ ನೀರಿನ ಗುಣಮಟ್ಟ ಚೆನ್ನಾಗಿದ್ಯಾ ? ಈ ಬಗ್ಗೆ ಕೆಲವೊಂದು ವಿಚಾರವನ್ನು ತಿಳ್ಕೊಳ್ಳಿ. ಇಲ್ಲಾಂದ್ರೆ ಆರೋಗ್ಯ (Health)ಕ್ಕೆ ಅಪಾಯ ತಪ್ಪಿದ್ದಲ್ಲ.

The Best Ways to Test Your Water Quality Vin
Author
Bengaluru, First Published Jun 22, 2022, 1:04 PM IST

ನೀವು ನೀರು ಶುದ್ಧೀಕರಣ ಯಂತ್ರದ (Water Purifier) ಬಗ್ಗೆ ತಲೆ ಕೆಡಿಸಿಕೊಂಡಿದ್ದೀರಾ ? ನಿಮ್ಮ ಮನೆಯ ನೀರು ಶುದ್ಧೀಕರಣ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲವೇ ? ಹೌದು, ನೀವು ಕುಡಿಯುತ್ತಿರುವ  ನೀರಿನ ಬಗ್ಗೆ ನಿಮಗೆ ಗಮನವಿರಲಿ. ಯಾವ ನೀರನ್ನು ನೀವು ಕುಡಿಯುತ್ತಿದ್ದೀರಿ, ನಿಮ್ಮ ಮನೆಯ ನೀರು ಶುದ್ಧೀಕರಣ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯಾ ಅಥವಾ ನೀವು ಕಲುಷಿತ ನೀರನ್ನು ಕುಡಿಯುತ್ತಿದ್ದೀರಾ ಈ ಬಗ್ಗೆ ಗಮನಹರಿಸಿ. ಇಲ್ಲದಿದ್ದರೆ ನಿಮ್ಮ ಹಾಗೂ ಮನೆಮಂದಿಯ ಆರೋಗ್ಯ (Health) ನೀರಿನ ಗುಣಮಟ್ಟದಿಂದ ಹದಗೆಡಬಹುದು.

ಮೂಲಭೂತವಾಗಿ ತಿಳಿಯಬೇಕಾಗಿರುವುದು ಏನೆಂದರೆ ನೀರಿಗೆ ವಿವಿಧ ಮೂಲಗಳಿರುತ್ತವೆ. ನೀವು ಮತ್ತು ನಿಮ್ಮ ಗೆಳೆಯ ಒಂದೇ ನಗರದಲ್ಲಿ ಇದ್ದರೂ ಅವರು ಸೇವಿಸುವ ನೀರು ಮತ್ತು ನಿಮ್ಮ ನೀರಿಗೂ ವ್ಯತ್ಯಾಸವಿರುತ್ತದೆ. ಉದಾಹರಣೆಗೆ ನೀವು ಪ್ರಾಕೃತಿಕವಾಗಿ ಸಿಗುವ ಬೋರ್‌ವೆಲ್‌ ಗಡಸು ನೀರನ್ನು ಕುಡಿಯಬಹುದು. ಅದೇ ನಿಮ್ಮ ಪಕ್ಕದ ಮನೆಯ ಸ್ನೇಹಿತ ಕಲುಷಿತ ಮಿಶ್ರಿತ ಮೃದು ನೀರನ್ನು ಅಥವಾ ಮುನ್ಸಿಪಾಲಿಟಿ ನೀರನ್ನು ಕುಡಿಯಬಹುದು, ಇಲ್ಲವೇ ಕಲುಷಿತ ನೀರನ್ನು ಬಳಸಬಹುದು.

ಕೊಳಕು ಟ್ಯಾಪ್ ನೀರು ಮೂತ್ರಕೋಶದ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ!

ಯಾವುದೇ ಮೂಲದ ನೀರು ಶುದ್ಧೀಕರಣವಾಗಿರುವುದಿಲ್ಲ ಎಲ್ಲವೂ ಕಲುಷಿತವೇ. ಹಾಗಾಗಿ ಎಲ್ಲಾ ನೀರಿಗೂ ಒಂದೇ ರೀತಿಯ ಶುದ್ಧೀಕರಣ ಯಂತ್ರವನ್ನು ಉಪಯೋಗಿಸುವುದು ಅವೈಜ್ಞಾನಿಕ. ಜನರು  ಶುದ್ಧೀಕರಣದ ಯಂತ್ರದಲ್ಲಿ ಸರಿಯಾಗಿ ನೀರು ಶುದ್ಧೀಕರಣವಾಗುತ್ತಿದೆಯೇ ಎಂದು ವಿಚಾರಣೆ ಮಾಡಬೇಕು. ಶುದ್ಧೀಕರಣವಾಗಲೆಂದು ಯಂತ್ರದ ಒಳಗೆ ಹೋದ ನೀರು ಮತ್ತು ಆಚೆ ಬರುವ ನೀರಿಗೂ  ವ್ಯತ್ಯಾಸವಿದೆಯೇ ಎಂಬುದನ್ನು ಪತ್ತೆಹಚ್ಚಬೇಕು. ಇಂದು ಬಹಳಷ್ಟು ಕಂಪನಿಗಳು ಎಲ್ಲಾ ರೀತಿಯ ನೀರಿಗೂ ಒಂದೇ ಮಾದರಿಯ ಶುದ್ಧೀಕರಣ ಯಂತ್ರವನ್ನು ಉಪಯೋಗಿಸುತ್ತಿದ್ದು, ಇದು  ಆರೋಗ್ಯಕ್ಕೆ ಹಾನಿಕರವಾಗಿ ಪರಿಣಮಿಸಬಹುದು.

ನೀರಿನ ಗುಣಮಟ್ಟದ ಪರಿಶೀಲನೆ ಮಾಡುವುದರ ಉದ್ದೇಶವೇನು ?
ನೀರನ್ನು ಪರಿಶೀಲಿಸುವುದು ಕೇವಲ ನೀರಿನ ಗುಣಮಟ್ಟದ ಬಗ್ಗೆ ನಿಮಗೆ ತಿಳಿಸುತ್ತದೆ. ಮಾತ್ರವಲ್ಲ ಯಾವ ರೀತಿಯಲ್ಲಿ ಪ್ರತಿದಿನವೂ ನೀರಿನ ಮಟ್ಟ ಭೌಗೋಳಿಕವಾಗಿ ಬದಲಾಗುತ್ತದೆ ಮತ್ತು ಈ ರೀತಿ ಬದಲಾಗುತ್ತಿರುವ ನೀರಿನ ಪರಿಸರಕ್ಕೆ ಯಾವ ರೀತಿಯಲ್ಲಿ  ನೂತನ ತಂತ್ರಗಳನ್ನು ಬಳಸಿ ನೀರನ್ನು ಶುದ್ಧೀಕರಣ ಮಾಡಬಹುದು ಎಂದು ನಿಮಗೆ ತಿಳಿಸುತ್ತದೆ.
 
ಮೊದಲನೆಯದಾಗಿ ಕಲುಷಿತ  ನೀರನ್ನು ಪತ್ತೆಹಚ್ಚಲು ಸಹಾಯ ಮಾಡುವುದು. ಪ್ರಥಮವಾಗಿ ನೀರು ಕಲುಷಿತವಾಗಲು ಹತ್ತು ಹಲವು ಕಾರಣಗಳಿದ್ದು, ಮಾನವ, ಪ್ರಾಕೃತಿಕ ಕಾರಣಗಳಿರಬಹುದು, ಕಳಪೆ ಕೃಷಿ ಪದ್ಧತಿಗಳಿಂದ  ಹಾಗೂ ಕೊಳಚೆ ನೀರು ಸೇರಿಕೊಂಡು ನೀರು ಕಲುಷಿತವಾಗಬಹುದು. ಇದರಿಂದ ಮಾರುಕ ಕಾಯಿಲೆಗಳು ಬರುವ ಸಾಧ್ಯತೆಯೂ ಇದೆ. ನೀರನ್ನು ಪರಿಶೀಲಿಸಿ ಕಲುಷಿತ ನೀರನ್ನು ಪತ್ತೆಹಚ್ಚಿದಾಗ ಅಲ್ಲಿಗೆ ನೀರು ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ ನಾವು ಅರ್ಧ ಗೆದ್ದಂತೆ ಕಾರಣ ಇನ್ನು ನೀವು ನೀರನ್ನು ಯಾವ ರೀತಿಯಲ್ಲಿ ಶುದ್ಧೀಕರಣ ಮಾಡಬೇಕೆಂದು ವೈಜ್ಞಾನಿಕ ಚಿಂತನೆಯಲ್ಲಿ ತೊಡಗಿ ಫಲಿತಾಂಶ ಹೊರತರಬಹುದು. 

ಊಟದ ಮಧ್ಯೆ ಆಗಾಗ ನೀರು ಕುಡಿಯುವ ಅಭ್ಯಾಸ ಒಳ್ಳೆಯದಾ?

ನೀರಿನಲ್ಲಿ ಯಾವ ಪ್ರಮಾಣದ ವಸ್ತು ಎಷ್ಟರಮಟ್ಟಿಗೆ ಕರಗಿದೆ ಎಂದು ತಿಳಿಯುವ ಮೂಲಕ ನಾವು ಪರಿಸರ ಸಂರಕ್ಷಣೆಯನ್ನು ಮಾಡಬಹುದು. ಕಾರಣ ಒಂದು ದೇಶದಲ್ಲಿ ಅಥವಾ ಯಾವುದೇ ಪ್ರದೇಶದಲ್ಲಿ ಅಲ್ಲಿನ ಪರಿಸರ ಗುಣಮಟ್ಟವನ್ನು ನೀರಿನಿಂದ ಅಳತೆ ಮಾಡಲಾಗುತ್ತದೆ. ಹಾಗಾಗಿ ನೀರಿನ ಶುದ್ಧೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ.

ನೀರಿನ ಶುದ್ಧೀಕರಣ ಗುಣಮಟ್ಟ ಪರಿಶೀಲಿಸದೆ ಇದ್ದರೆ  ಆಗುವ ಅಪಾಯಗಳು
ಮನೆಯಲ್ಲಿ ಅಥವಾ ನಗರದಲ್ಲಿ ನೀರು ಶುದ್ಧೀಕರಣ  ಘಟಕವಿದ್ದು, ನೀವು ಈ ಘಟಕವು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು  ಪರಿಶೀಲನೆ ಮಾಡದೆ ಇದ್ದರೆ  ದೈಹಿಕವಾಗಿ, ರಾಸಾಯನಿಕವಾಗಿ, ಜೈವಿಕವಾಗಿ ನೀರು ಕಲುಷಿತವಾಗಬಹುದು. ಇದರಿಂದ ಟೈಫಾಯಿಡ್, ಅತಿಸಾರ, ಡಿಎನ್ಎ ರೂಪಾಂತರ, ಮತ್ತು ಕೆಲವು ಸಂದರ್ಭಗಳಲ್ಲಿ, ಕ್ಯಾನ್ಸರ್‌ನಂತಹ ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಈ ರೀತಿಯ ಕಾಯಿಲೆಗಳು ಮೊದಲಿಗೆ ರೋಗಲಕ್ಷಣವನ್ನು ತೋರಿಸುತ್ತವೆ. ಹೀಗಾದಾಗ ಮೊದಲಿಗೆ ಕುಡಿಯುವ ನೀರನ್ನು ಪರಿಶೀಲಿಸಿ, ಈ ಕಾಯಿಲೆಗಳು  ಜೀವನ್ಮರಣದ  ರೂಪುರೇಷಗಳನ್ನು ಹೊಂದಿದ್ದು ನಿರ್ಲಕ್ಷ ಮಾಡದೆ, ನೀರಿನ ಗುಣಮಟ್ಟವನ್ನು ಪರಿಶೀಲಿಸುವುದು ಅಗತ್ಯ.

ಯಾವ ರೀತಿ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ ?
ಭಾರತದಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ವಿವಿಧ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು, ವಿವಿಧ ರೀತಿಯ ನೀರನ್ನು ಪರಿಶೀಲಿಸುತ್ತವೆ. ವಾಸ್ತವವಾಗಿ, ಈ ರಾಷ್ಟ್ರೀಯ ಸಂಪರ್ಕವು 27 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳಲ್ಲಿ 1245 ನೀರಿನ ಗುಣಮಟ್ಟ ಪರೀಕ್ಷಾ ಕೇಂದ್ರಗಳನ್ನು ಒಳಗೊಂಡಿದೆ.  ಈ ವಿಸ್ತಾರವಾದ ಜಾಲವು ಸರಿಸುಮಾರು 250 ನದಿಗಳು, 79 ಸರೋವರಗಳು, 6 ಟ್ಯಾಂಕ್‌ಗಳು, 26 ಕೊಳಗಳು, 8 ತೊರೆಗಳು, 19 ಕಾಲುವೆಗಳು, 18 ಚರಂಡಿಗಳು ಮತ್ತು 382 ಬಾವಿಗಳನ್ನು ಒಳಗೊಂಡಿದೆ.

1245 ನಿಲ್ದಾಣಗಳಲ್ಲಿ, 695 ನದಿಗಳ ಮೇಲೆ, 87 ಸರೋವರಗಳ ಮೇಲೆ, 18 ಚರಂಡಿಗಳ ಮೇಲೆ, 19 ಕಾಲುವೆಗಳ ಮೇಲೆ, 6 ಟ್ಯಾಂಕ್‌ಗಳ ಮೇಲೆ, 12 ತೊರೆಗಳು/ಸಮುದ್ರದ ಮೇಲೆ, 26 ಕೊಳಗಳ ಮೇಲೆ ಮತ್ತು 382 ಅಂತರ್ಜಲ ಕೇಂದ್ರಗಳಾಗಿವೆ.
ಮೇಲ್ಮೈ ನೀರನ್ನು ತಿಂಗಳು ಮತ್ತು ಮೂರು ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತಿದ್ದು, ಅರ್ಧ ವರ್ಷದ ಅವಧಿಯಲ್ಲಿ  ಅಂತರ್ಜಲವನ್ನು ಪರೀಕ್ಷಿಸಲಿದ್ದು ನೀರು ಶುದ್ಧೀಕರಣ ಘಟಕಗಳ ಮೇಲೆ ಅವಲಂಬಿತವಾಗಿರುತ್ತದೆ. ನೀರಿನ ಮಾದರಿಗಳನ್ನು ಮೊದಲನೆ ಹಂತದ  ದತ್ತಾಂಶ ಶೇಖರಣ ವಿಧಿ ವಿಧಾನದ ಮೂಲಕ ಶೇಖರಿಸಿ, ಲ್ಯಾಬೊರೇಟರಿಗಳಿಗೆ ಕಳಿಸಲಾಗುತ್ತದೆ. ಇವುಗಳನ್ನು ವಿವಿಧ ನಿಯತಾಂಕಗಳ ಮೂಲಕ ಪರಿಶೀಲಿಸಲಾಗುತ್ತದೆ. 

ನೀರಿನ ಗುಣಮಟ್ಟವನ್ನು ಪರೀಕ್ಷಿಸಲು ವಿಧಾನಗಳು
ನೀರಿನ ಗುಣಮಟ್ಟವನ್ನು ಪರಿಶೀಲಿಸುವುದರಲ್ಲಿ ಮೂರು ವಿಧವಿದೆ. ಮೊದಲನೆಯದಾಗಿ ನೀವೆ ಸ್ವಯಂ ಪ್ರೇರಿತರಾಗಿ  ನಿಮ್ಮ ಮನೆಯ ಹತ್ತಿರದ ಹಾರ್ಡ್‌ವೇರ್ ಶಾಪ್‌ಗೆ ಹೋಗಿ ನೀರಿನ ಗುಣಮಟ್ಟವನ್ನು  ಪರಿಶೀಲಿಸುವ  ಯಂತ್ರವನ್ನು ತಂದು  ನಿಮ್ಮ ಮನೆಯ ನೀರನ್ನು  ನೀವೇ ಶುದ್ಧವೋ  ಅಥವಾ ಕಲುಷಿತವೋ ಎಂದು ಪರೀಕ್ಷಿಸಿ. ಇದು ಕ್ಷಣಕ್ಕೆ ಫಲಿತಾಂಶ ಕೊಟ್ಟರೂ, ದೀರ್ಘಕಾಲದಲ್ಲಿ ಈ ಮಾಪಕಗಳು ಕಾರ್ಯನಿರ್ವಹಿಸುವಲ್ಲಿ ಸೋಲುತ್ತವೆ.

ಎರಡನೆಯದಾಗಿ  ನಿಮ್ಮ ಮನೆಯ ನೀರನ್ನು  ಶೇಖರಿಸಿ ಲ್ಯಾಬ್ ಗಳಿಗೆ ಕೊಟ್ಟು ಪರೀಕ್ಷೆ ಮಾಡಿಸಬಹುದು ಇದು ಅತ್ಯಂತ ಪರಿಣಾಮಕಾರಿ ಉಪಾಯವಾದರೂ, ದುಬಾರಿಯಾದ ಲ್ಯಾಬ್ ಗಳು ಕೊಡುವ ಮಾಹಿತಿಗಳನ್ನು ಸಂಗ್ರಹಿಸಿ  ನೀವು ಮುಂದಿನ ನಿರ್ಧಾರಗಳನ್ನು ಕೈಗೊಳ್ಳಬಹುದು. ಕೊನೆಯದಾಗಿ ನೀವು ನಿಮ್ಮ ಕೈಗೆಟುಕುವ ವೆಚ್ಚದಲ್ಲಿ  ನೀರಿನ ಪರಿಶೀಲನೆ ಮತ್ತು ಶುದ್ಧ ನೀರಿನ ಯಂತ್ರ ಎರಡು ಬೇಕೆನ್ನುವುದಾದರೆ  ಈ ಕೂಡಲೇ ಸರಿಯಾದ ನೀರಿನ ಶುದ್ಧೀಕರಣ ಕಂಪನಿಗಗಳನ್ನು ಸಂಪರ್ಕಿಸಿ.

ವಿಜೇಂದರ್ ರೆಡ್ಡಿ ಮುತ್ಯಾಳ, ಡ್ರಿಂಕ್ ಪ್ರೈಮ್ನ ಸಹ-ಸಂಸ್ಥಾಪಕರು ಮತ್ತು ಸಿಇಒ

Follow Us:
Download App:
  • android
  • ios