ಪ್ರೇಮಿಗಳ ದಿನಾಚರಣೆಗೆ ವಿಶ್ವ ಸಜ್ಜಾಗುತ್ತಿದೆ. ಇದಕ್ಕಾಗಿ ಸರ್ಕಾರ ಹೊಸ ನೀತಿ ಜಾರಿಗೆ ತರುತ್ತಿದೆ. ಪ್ರೇಮಿಗಳ ದಿನಾಚರಣೆ ಸಂಭ್ರಮದಲ್ಲಿ ಮೈಮರತು ಸಂಕಷ್ಟ ಅನುಭವಿಸುವುದಕ್ಕಿಂತ ಮೊದಲೇ ಎಚ್ಚೆತ್ತುಕೊಳ್ಳಲು ಉಚಿತ ಕಾಂಡೋಮ್ ವಿತರಣೆಗೆ ಚಾಲನೆ ನೀಡಲಾಗಿದೆ.

ಥಾಯ್‌ಲೆಂಡ್(ಫೆ.02) ಪ್ರೇಮಿಗಳ ದಿನಾಚರಣೆಯ ಸುರಕ್ಷಿತ ಲೈಂಗಿಕ ಸಂಪರ್ಕ, ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ರೋಗ, ಹದಿಹರೆಯದ ಗರ್ಭಧಾರಣೆಯಿಂದ ದೂರವಿರಲು ಥಾಯ್ಲೆಂಡ್ ಸರ್ಕಾರ ಇದೀಗ ಮಹತ್ವದ ಹೆಜ್ಜೆಇಟ್ಟಿದೆ. ಪ್ರೇಮಿಗಳ ದಿನಾಚರಣೆಗೆ ಇನ್ನು ಎರಡು ಬಾರಿ ಬಾಕಿ ಇರುವಾಗಲೇ ಉಚಿತ ಕಾಂಡೋಮ್ ವಿತರಣೆ ಮಾಡುತ್ತಿದೆ. ಈ ಮಹತ್ವದ ಯೋಜನೆಗೆ ಥಾಯ್ಲೆಂಡ್‌ನಲ್ಲಿ ಚಾಲನೆ ನೀಡಲಾಗಿದೆ. 

ಪ್ರೇಮಿಗಳ ದಿನಾಚರಣೆ ದಿನ ಆರೋಗ್ಯ ಸೇರಿದಂತೆ, ಗರ್ಭಧಾರಣೆ ಅಪಾಯ ಹೆಚ್ಚಾಗುತ್ತಿದೆ. ಇದಕ್ಕಾಗಿ ಥಾಯ್ಲೆಂಡ್ ಸರ್ಕಾರ ಉಚಿತ ಕಾಂಡೋಮ್ ವಿತರಿಸಿ ಸುರಕ್ಷಿತ ಲೈಂಗಿಕತೆ ಉತ್ತೇಜನ ನೀಡುತ್ತಿದೆ. ವಿಶೇಷ ಅಂದರೆ ಪ್ರೇಮಿಗಳ ದಿನಾಚರಣೆಗೂ ಮುನ್ನ ಉಚಿತ ಕಾಂಡೋಮ್ ವಿತರಣೆ ಆರಂಭಗೊಂಡಿದೆ. ಇದರ ಜೊತೆಗೆ ಥಾಯ್ಲೆಂಡ್ ಹೆಲ್ತ್‌ಕಾರ್ಡ್ ಹೊಂದಿದವರು ವಾರಕ್ಕೆ 10 ಕಾಂಡೋಮ್‌ನಂತೆ ಒಂದು ವರ್ಷ ಉಚಿತ ಕಾಂಡೋಮ್ ಪಡೆಯಲು ಅರ್ಹರು ಎಂದು ಥಾಯ್ಲೆಂಡ್ ಆರೋಗ್ಯ ಇಲಾಖೆ ಹೇಳಿದೆ.

ರಾಜ್ಯದಲ್ಲಿ ಅಪ್ರಾಪ್ತರಿಗೆ ಕಾಂಡೋಮ್‌ ಮಾರಾಟದ ಮೇಲೆ ಯಾವುದೇ ನಿಷೇಧವಿಲ್ಲ, ಸರ್ಕಾರದಿಂದ ಸ್ಪಷ್ಟನೆ

ಥಾಯ್ಲೆಂಡ್‌ನಲ್ಲಿ ಉಚಿತ ಕಾಂಡೋಮ್ ಪಡೆಯಲು ಸ್ಮಾರ್ಟ್‌ಫೋನ್ ಮೂಲಕ ನೋಂದಣಿ ಮಾಡಬೇಕು. ಈ ವೇಳೆ ಹತ್ತಿರದ ಡ್ರಗ್ ಸ್ಟೋರ್, ಅಥವಾ ಸರ್ಕಾರಿ ಔಷಧಾಲಯವನ್ನೂ ಆಯ್ಕೆ ಮಾಡಿಕೊಳ್ಳಬೇಕು. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉಚಿತ ಕಾಂಡೋಮ್ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಫೋನ್ ಬಳಕೆ ಮಾಡದವರು, ಹತ್ತಿರದ ಕೇಂದ್ರಗಳಿಗೆ ತೆರಳಿ ಥಾಯ್‌ಲೆಂಡ್ ಐಡಿ ಕಾರ್ಡ್ ನೀಡಿ ಉಚಿತ ಕಾಂಡೋಮ್ ಪಡೆದುಕೊಳ್ಳಬಹುದು.

ನಾಲ್ಕು ಗಾತ್ರದ ಕಾಂಡೋಮ್‌ಗಳನ್ನು ಸರ್ಕಾರ ಉಚಿತವಾಗಿ ವಿತರಿಸಲಾಗುತ್ತಿದೆ. ಈ ಮೂಲಕ ದೇಶದಲ್ಲಿನ ಅಸುರಕ್ಷಿತ ಲೈಂಗಿಕತೆಗೆ ತಡೆಯೊಡ್ಡಿ ಆರೋಗ್ಯ ಕಾಪಾಡಿಕೊಳ್ಳುವ ಮಹತ್ತರ ಯೋಜನೆಗೆ ಚಾಲನೆ ನೀಡಿದೆ. ಥಾಯ್ಲೆಂಡ್ ಸರ್ಕಾರ ಪ್ರೇಮಿಗಳ ದಿನಾಚರಣೆಗೂ ಮುನ್ನ ಉಚಿತ ಕಾಂಡೋಮ್ ನೀಡಲು ಒಂದು ಮಹತ್ವದ ಕಾರಣವಿದೆ.

ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್‌ ಫ್ರೀ

ಪ್ರತಿ ವರ್ಷ ಥಾಯ್ಲೆಂಡ್‌ನಲ್ಲಿ ಪ್ರೇಮಿಗಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಫೆಬ್ರವರಿ ತಿಂಗಳ ಪೂರ್ತಿ ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿರುತ್ತದೆ. ಇದರಿಂದ ಇತ್ತೀಚನ ವರ್ಷಗಳಲ್ಲಿ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಥಾಯ್ಲೆಂಡ್‌ನಲ್ಲಿ ಹೆಚ್‌ಐವಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಹೆಚ್ಚಾಗಿದೆ. ಹದಿಹರೆಯದ ಗರ್ಭಧಾರಣೆ ಕೂಡ ಹೆಚ್ಚಾಗುತ್ತಿದೆ. ಥಾಯ್‌ಲೆಂಡ್ ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ಇದು ಸ್ಪಷ್ಟವಾಗಿದೆ. ಹೀಗಾಗಿ ಇದನ್ನು ತಡೆಯಲು ಉಚಿತ ಕಾಂಡೋಮ್ ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ.