Mobile Addiction, ಸಿಸ್ಟಮ್ ಮುಂದೆ ಗಂಟೆಗಟ್ಟಲೆ ಕೂತರೆ ಈ ಸಮಸ್ಯೆ ಕಾಡೋದು ಗ್ಯಾರಂಟಿ
ಇಂದು ಮೊಬೈಲ್ ಫೋನ್ ಬಳಸದದಿರುವವರು ಯಾರಿದ್ದಾರೆ ಹೇಳಿ? ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ಮೊಬೈಲ್ ಫೋನ್ ಅತಿಯಾಗಿ ಬಳಸಿದರೆ ಜೀವಕ್ಕೆ ಕುತ್ತು. ಇದನ್ನು ಇಂಗ್ಲೀಷ್‌ನಲ್ಲಿ ಟೆಕ್ ನೆಕ್ ಅಥವಾ ಟೆಕ್ಸ್ಟ್ ನೆಕ್ ಎಂದೂ ಕರೆಯುತ್ತಾರೆ. ಇದರಿಂದಾಗುವ ಸಮಸ್ಯೆಯಿಂದ ಹೊರಬರಲು ಇಲ್ಲಿದೆ ಕೆಲ ಸಲಹೆಗಳು.
ಟೆಕ್ ನೆಕ್ ಸಮಸ್ಯೆಯನ್ನು ಟೆಕ್ಸ್ಟ್ ನೆಕ್ ಎಂದೂ ಕರೆಯುತ್ತಾರೆ. ಏಕೆಂದರೆ ಈ ದಿನಗಳಲ್ಲಿ ಮೊಬೈಲ್ ಫೋನ್‌ಗಳ ಅತಿಯಾದ ಬಳಕೆ ಮತ್ತು ವ್ಯಕ್ತಿಯು ಗಂಟೆಗಟ್ಟಲೆ ಕೆಲಸದಿಂದಾಗಿ ಸಿಸ್ಟಮ್ ಮುಂದೆ ಕುಳಿತುಕೊಳ್ಳಬೇಕಾಗುತ್ತದೆ. ಇದರಿಂದ ಕುತ್ತಿಗೆ ಪ್ರದೇಶ, ಭುಜ ಮತ್ತು ಬೆನ್ನಿನ ಸುತ್ತಲೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇರಿಯುವ ನೋವು, ತಲೆನೋವು, ಕುತ್ತಿಗೆ ಬಿಗಿತ, ದವಡೆ ನೋವು ಅಥವಾ ತೋಳುಗಳು ಮತ್ತು ಕೈಗಳಲ್ಲಿ ಮರಗಟ್ಟುವಿಕೆಗೆ ಕಾರಣವಾಗಬಹುದು.
ಟೆಕ್ ನೆಕ್ ಸಮಸ್ಯೆ
ಕುತ್ತಿಗೆಯ ಭಾಗದಲ್ಲಿ ಅತಿಯಾದ ನೋವಿನಿಂದಾಗಿ ವಿಚಿತ್ರವಾದ ಭಂಗಿಯಿAದಾಗಿ ಈ ಟೆಕ್‌ನೆಕ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಗರ್ಭಕಂಠದ ಬೆನ್ನುಮೂಳೆಯ ಮತ್ತು ಬೆಂಬಲ ಸ್ನಾಯುಗಳ ಮೇಲೆ ಒತ್ತಡಕ್ಕೆ ಕಾರಣವಾಗುತ್ತದೆ. ಮೊಬೈಲ್ ಅಥವಾ ಸಿಸ್ಟಮ್ ಅನ್ನು ದೀರ್ಘಕಾಲದವರೆಗೆ ನೋಡಲು ಕುತ್ತಿಗೆಯನ್ನು ಬಾಗಿಸಲೇಬೇಕು. ಗಂಟೆಗಟ್ಟಲೇ ಈ ರೀತಿ ತಲೆಬಾಗಿಸಿ ಕುಳಿತುಕೊಳ್ಳುವುದರಿಂದ ಒಂದು ರೀತಿಯ ನೋವು ಕಾಣಿಸಿಕೊಳ್ಳುತ್ತದೆ. ಪದೇ ಪದೇ ಈ ರೀತಿ ನೋವು ಕಾಣಿಸಿಕೊಂಡಾಗ ನಿರ್ಲಕ್ಷಿಸುವುದು ಸರಿಯಲ್ಲ. ನಿರ್ಲಕ್ಷಿಸಿದರೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಮೋಬೈಲ್ ನೋಡುವಾಗ ಅಥವಾ ಸಿಸ್ಟಮ್ ನೋಡುವಾಗ ಕುತ್ತಿಗೆಯನ್ನು 15 ಡಿಗ್ರಿಯಷ್ಟು ಮುಂದಕ್ಕೆ ಬಾಗಿಸುವುದರಿಂದ ಕುತ್ತಿಗೆಯ ಮೇಲೆ ಸುಮಾರು 12.5ಕೆಜಿ ಹೆಚ್ಚುವರಿ ತೂಕ ಬರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇದು 30 ಡಿಗ್ರಿಯಲ್ಲಿ 16ಕೆಜಿ ಮತ್ತು 30 ಡಿಗ್ರಿ ಕುತ್ತಿಗೆ ಬಾಗುವಿಕೆಯಲ್ಲಿ 27.2ಕೆಜಿಗೆ ಹೆಚ್ಚಾಗುತ್ತದೆ. ಇದು ಗರ್ಭಕಂಠದ ಬೆನ್ನುಮೂಳೆಯ ಮೇಲಿನ ಹೊರೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರಿಂದ ಸಣ್ಣ ಮತ್ತು ದೊಡ್ಡ ಸಮಸ್ಯೆಗೆ ಗುರಿಯಾಗುತ್ತದೆ.
ಡೆಸ್ಕ್ ಕೆಲಸದಿಂದ ಬೆನ್ನುನೋವು ಹೆಚ್ಚಾಗಿದ್ಯಾ ? Standing desk ಬಳಸಿ ನೋಡಿ
ಈ ರೀತಿಯ ಸಮಸ್ಯೆಗಳು ಶಾರ್ಟ್ ಟರ್ಮ್ನಲ್ಲಿದ್ದರೆ ತೊಂದರೆಯಿಲ್ಲ. ಆದರೆ ದೀರ್ಘಕಾಲದವರೆಗೆ ಈ ರೀತಿ ಕುತ್ತಿಗೆಯನ್ನು ಇರಿಸುವುದು ಕೀಲು ಮತ್ತು ಗರ್ಭಕಂಠದ ಬೆನ್ನುಮೂಳೆಯ ಮೇಲೆ ಶಾಶ್ವತವಾಗಿ ಪರಿಣಾಮ ಬೀರುತ್ತದೆ. ಗರ್ಭಕಂಠದ ಇಂಟರ್‌ವರ್ಟಿಬ್ರಲ್ ಡಿಸ್ಕ÷್ಗಳ ಮುತ್ತು ಮುಖದ ಕೀಲುಗಳು ನಿರಂತರ ಅಸಹಜ ಭಂಗಿ ಮತ್ತು ಹೆಚ್ಚಿನ ಲೋಡಿಂಗ್ ಕಾರಣ. ಆರಂಭಿಕ ಡಿಸ್ಕ್ ಅವನತಿ ಮತ್ತು ಸಂಧಿವಾತಕ್ಕೆ ಕಾರಣವಾಗುತ್ತದೆ. ಗರ್ಭಕಂಠದ ಸ್ಪಾಂಡಿಲೋಸಿಸ್ ಎಂದು ಕರೆಯಲ್ಪಡುವ ಮುಖದ ಕೀಲುಗಳು ಈ ಬದಲಾವಣೆಗಳನ್ನು ಬದಲಾಯಿಸಲಾಗುವುದಿಲ್ಲ ಮತ್ತು ಆಗಾಗ್ಗೆ ಪ್ರಗತಿಶೀಲವಾಗಿರುತ್ತವೆ" ಎಂದು ಸಲಹೆಗಾರರಾದ ಡಾ. ಹರ್ಷಲ್ ತಿಳಿಸಿದ್ದಾರೆ.
ಟೆಕ್ ನೆಕ್ ಸಮಸ್ಯೆಯಿಂದ ಹೊರಬರಲು ಕೆಲ ಚಟುವಟಿಕೆಗಳು ಅಗತ್ಯ. ಭಂಗಿಯನ್ನು ಸರಿಪಡಿಸಲು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಕಣ್ಣಿನ ಲೆವೆಲ್‌ವರೆಗೂ ಸಿಸ್ಟಮ್ ಅನ್ನು ಬಳಸುವುದು ಖಚಿತಪಡಿಸಿಕೊಳ್ಳಿ ಮತ್ತು ಕೆಲಸ ನಡುವೆ ವಿರಾಮ ತೆಗೆದುಕೊಳ್ಳಬೇಕು ಹಾಗೂ ಸ್ನಾಯುಗಳನ್ನು ಹಿಗ್ಗಿಸಬೇಕು. ಟೆಕ್ ನೆಕ್ ಅನ್ನು ತಡೆಯಲು ಕೆಲ ಸಲಹೆಗಳು ಇಲ್ಲಿವೆ.
ಟೆಕ್ ನೆಕ್ ಅನ್ನು ತಡೆಯುವುದು ಹೇಗೆ?
ಟೆಕ್ ನೆಕ್‌ಗೆ ಕೆಲವು ಸಲಹೆಗಳು ಇಲ್ಲಿವೆ:
ಡೆಸ್ಕ್ ಸ್ಕ್ರೀನ್ (Desk Screen) ಎತ್ತರದಲ್ಲಿರಲಿ: ಕುತ್ತಿಗೆ ಬಗ್ಗಿಸುವುದನ್ನು ತಪ್ಪಿಸಲು ಡೆಸ್ಕ್ನ ಸ್ಕಿçÃನ್ ಯಾವಾಗಲೂ ನಿಮ್ಮ ತಲೆಗಿಂತ ಎತ್ತರದಲ್ಲಿ ಇರಿಸಿಕೊಳ್ಳಿ. ಫೋನ್ ಅನ್ನು ಹೆಚ್ಚು ಗಂಟೆಗಳ ಕಾಲ ಬಳಸುತ್ತಿದ್ದರೆ, ಅದನ್ನು ಕಣ್ಣಿನ ಮಟ್ಟಕ್ಕೆ ಹತ್ತಿರದಲ್ಲಿ ಹಿಡಿದಿಟ್ಟುಕೊಳ್ಳಿ. ಪ್ರತೀ 30 ನಿಮಿಷಗಳಿಗೊಮ್ಮೆ ಮತ್ತು ನಿಮ್ಮ ಬೆನ್ನು ಮತ್ತು ಕಣ್ಣಿನ ಸ್ನಾಯುಗಳನ್ನು ವಿಶ್ರಾಂತಿ ನೀಡಲು ಸ್ವಲ್ಪ ನಡೆಯಿರಿ. ಇದು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸರಿಯಾಗಿ ಕುಳಿತುಕೊಳ್ಳಿ: ಕುಳಿತುಕೊಳ್ಳುವುದು ಹಾಗೂ ನಿಂತುಕೊಳ್ಳುವುದು ಪ್ರಮುಖವಾಗಿದ ಅಂಶ. ಇವೆರಡು ಸರಿ ಇಲ್ಲದಿದ್ದರೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕುತ್ತಿಗೆ ಹಾಗೂ ಬೆನ್ನು ನೇರವಾಗಿರುವಂತೆ ಹಾಗೂ ಕಾಲಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದರಿಂದ ತಪ್ಪಿಸಿ. ಹಾಗೆ ಕುಳಿತರೆ ಸೊಂಟದ ಭಾಗದಲ್ಲಿ ಹಾಗೂ ಬ್ಯಾಕ್‌ನಲ್ಲಿ ದೀರ್ಘಾವಧಿಯಲ್ಲಿ ಸಮಸ್ಯೆ ಎದುರಿಸಬೇಕಾಗಬಹುದು.
ಫೋನ್ (Phone) ಬಳಸುವಾಗ ತಲೆ ಓರೆಯಾಗಿಸಬೇಡಿ: ಅನೇಕ ಬಾರಿ ತಿಳಿಯದೆ ಫೋನ್ ಅನ್ನು ಸರಿಯಾಗಿ ನೋಡಲು ನಮ್ಮ ಗಲ್ಲವನ್ನು ಕೆಳಕ್ಕೆ ತಿರುಗಿಸುತ್ತೇವೆ. ಹೀಗೆ ಮಾಡುವುದರಿಂದ ಕುತ್ತಿಗೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ತಲೆಯನ್ನು ಬಗ್ಗಿಸದೆ ಫೋನ್ ಸ್ಕಿನ್ ಕಣ್ಣಿನ ಮಟ್ಟದಲ್ಲಿರಿಸಿದರೆ ಉತ್ತಮ.
ಬ್ಯಾಕ್‌ರೆಸ್ಟ್ ಕುರ್ಚಿ ಬಳಸಿ: ಆಗಲೇ ಹೇಳಿದಂತೆ ಕುಳಿತುಕೊಳ್ಳುವುದು ಬಹಳ ಮುಖ್ಯ. ಇದಕ್ಕೆ ನೀವು ಯಾವ ರೀತಿಯ ಕುರ್ಚಿ ಬಳಸುತ್ತೀರಿ ಎಂಬುದೂ ಅಷ್ಟೇ ಮುಖ್ಯವಾಗುತ್ತದೆ. ಡೆಸ್ಕಾಟಾಪಿನಲ್ಲಿ ಹೆಚ್ಚು ಕಾಲ ಕೆಲಸ ಮಾಡುವುದರಿಂದ ಹೆಚ್ಚು ಕುಳಿತಿರಬೇಕಾಗುತ್ತದೆ. ಹಾಗಾಗಿ ಸರಿಯಾದ ಕುರ್ಚಿ ಅದರಲ್ಲೂ ೩೬೦ ಡಿಗ್ರಿ ರೌಂಡ್ ಆಗುವ ಬ್ಯಾಕ್‌ರೆಸ್ಟ್ ಇರುವ ಕುರ್ಚಿ ಉತ್ತಮ. ಇದು ಅಡ್ಜೆಸ್ಟಬಲ್ ಸಹ ಆಗಿದ್ದು, ಸಿಸ್ಟಂನ ಸ್ಕ್ರೀನ್‌ಗೆ ತಕ್ಕಂತೆ ನೀವು ಹೈಟ್ ಮಾಡಿಕೊಳ್ಳಬಹುದು. ಇದರಲ್ಲಿ ಆರ್ಮರೆಸ್ಟ್ ಇರುವುದರಿಂದ ಕೈಗಳಿಗೂ ಒಳ್ಳೆಯ ಸಪೋರ್ಟ್ ಸಿಗುತ್ತದೆ.
ಸೀಟ್ ಬೆಲ್ಟ್ ಧರಿಸಿ, ಜೀವ ಉಳಿಸಿಕೊಳ್ಳಿ
ವ್ಯಾಯಾಮ (Exercise): ಇದು ಒಬ್ಬ ವ್ಯಕ್ತಿಗೆ ಬಹಳ ಮೂಖ್ಯ. ಆರೋಗ್ಯ ಚೆನ್ನಾಗಿರಬೇಕೆಂದಲ್ಲಿ ವ್ಯಾಯಾಮ ಅತ್ಯಗತ್ಯ. ಹೆಚ್ಚು ಕಾಲ ಸಿಸ್ಟಂ ಮುಂದೆ ಕುಳಿತುಕೊಳ್ಳುವುದರಿಂದ ದೇಹಕ್ಕೆ ಬೇಕಾದ ವ್ಯಾಯಾಮ ಸಿಗುವುದಿಲ್ಲ. ದೇಹ ಫಿಟ್ ಆಗಿರುವುದಿಲ್ಲ ಹಾಗೂ ಆಲಸ್ಯ ಹೆಚ್ಚಾಗುತ್ತದೆ. ದಿನಪೂರ್ತಿ ಕಾರ್ಯ ಚಟುವಟಿಕೆಯಿಂದ ಇರಬೇಕೆಂದರೆ ವ್ಯಾಯಾಮವನ್ನು ಆಗಾಗ್ಗೆ ಟೈ ಸಿಕ್ಕಾಗಲೆಲ್ಲ ಮಾಡುತ್ತಿರಬೇಕು. ಇಲ್ಲವೆ ದಿನದ ಕೆಲಸ ಮುಗಿದ ನಂತರ ಸ್ನಾಯುಗಳನ್ನು ಹಿಗ್ಗಿಸಲು ಮತ್ತು ಬಗ್ಗಿಸಲು ದೇಹಕ್ಕೆ ಸ್ವಲ್ಪ ದೈಹಿಕ ಚಟುವಟಿಕೆ ನೀಡಲು ವ್ಯಾಯಾಮ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಪ್ರತಿದಿನ ಕನಿಷ್ಠ 20-40 ನಿಮಿಷಗಳ ಕಾಲ ನಡಿಗೆ, ಈಜ, ಓಡುವುದು ಅಥವಾ ಸೈಕಲಿಂಗ್ ಮಾಡಬಹುದು. ಅಲ್ಲದೆ, ಕುತ್ತಿಗೆಯ ವ್ಯಾಯಾಮ ಮಾಡುವುದರಿಂದ ಕುತ್ತಿಗೆಗೂ ಸ್ವಲ್ಪ ರಿಲ್ಯಾಕ್ಸ್ ಸಿಗುತ್ತದೆ.