ಊಟ ಆದ್ಮೇಲೆ ಹಿಂಗೆಲ್ಲ ಮಾಡಿದರೆ ಆರೋಗ್ಯಕ್ಕೆ ಕಂಟಕ

ಊಟ ಆದ್ಮೇಲೆ ಸ್ನಾನ ಮಾಡಬಾರದು ಎಂಬ ನೀತಿಯಿಂದ ಹಿಡಿದು, ಹಲವು ರೂಲ್ಸ್ ಆ್ಯಂಡ್ ರೆಗ್ಯೂಲೇಷನ್ಸ್ ಅನ್ನು ನಮ್ಮ ಹಿರಿಯರು ಮಾಡಿದ್ದಾರೆ. ಆದರೆ, ಇದಕ್ಕೆ ಹಲವು ಕಾರಣಗಳಿವೆ. ಊಟ ಆದ್ಮೇಲೆ ಕೆಲಸ ಮಾಡೋದ್ರಿಂದ ಅನಾರೋಗ್ಯ ಗ್ಯಾರಂಟಿ ಅಂತಾರೆ. ಅಷ್ಟಕ್ಕೂ ಯಾವ ಕೆಲಸ ಮಾಡಿದರೆ ಆರೋಗ್ಯಕ್ಕೆ ಕುತ್ತು? 

Taking bath having nap and sleeping soon after having food affect health

ಹೊಟ್ಟೆ ತುಂಬಿದಾಗ ಟೀ ಕುಡೀಬಾರ್ದು, ಹೊರಗೆ ಸುತ್ತಬಾರದು, ಸ್ನಾನ ಮಾಡ್ಬಾರ್ದು, ಇತ್ಯಾದಿ ಇತ್ಯಾದಿ ನಿಷೇಧಗಳನ್ನು ಪೋಷಕರು ಬಾಲ್ಯದಿಂದಲೂ ಮಕ್ಕಳ ಮೇಲೆ ಹೇರಿಕೊಂಡು ಬಂದಿರುತ್ತಾರೆ. ಆದರೆ, ಯಾಕೆ ಹಾಗೆ ಮಾಡಬಾರದು ಕೇಳಿದರೆ ಹಿರಿಯರು ಸ್ಪಷ್ಟವಾಗಿ ಉತ್ತರ ಕೊಡೋದಿಲ್ಲ. ಅಷ್ಟಕ್ಕೂ ಊಟವಾದ ಮೇಲೆ ಏನೇನು ಮಾಡಬಾರದು? 

ಸಿಗರೇಟ್ ಸೇದುತ್ತೀರಾ? 
ಸಿಗರೇಟ್ ಚಟ ಇರೋರು ಅದನ್ನು ಸೇದುವಾಗ ಸ್ವಲ್ಪವೂ ಯೋಚಿಸೋಲ್ಲ. ಹೊತ್ತಿಲ್ಲ, ಗೊತ್ತಿಲ್ಲ. ಸೇದುತ್ತಾರೆ. ಊಟವಾದ ಕೂಡಲೇ ಬತ್ತಿ ಎಳೆಯುತ್ತಾರೆ. ಟಾಯ್ಲೆಟ್‌ನಲ್ಲಿಯೂ ಇದ್ದಾಗಲೂ ಬಿಡೋಲ್ಲ. ಆದರೆ, ತುಂಬಿದ ಹೊಟ್ಟೆಯಲ್ಲಿ ಸಿಗರೇಟ್ (Cigarette) ಸೇದೋದೂ ಆರೋಗ್ಯಕ್ಕೆ ಕೆಟ್ಟಿದ್ದು. ಈ ಸಿಗರೇಟಿನಲ್ಲಿ ಏನಿಲ್ಲವೆಂದರೂ 60 ರೀತಿಯ ಕ್ಯಾನ್ಸರ್‌ಕಾರಕ ವಸ್ತುಗಳಿರುತ್ತವೆ. ಆದರಲ್ಲೂ ಊಟವಾದ ಮೇಲೆ ಸೇದಿದರೆ, ಬಹುಬೇಕ ಕೆಟ್ಟ ಅಂಶಗಳು ರಕ್ತದೊಂದಿಗೆ ಸೇರಿ ಬಿಡುತ್ತದೆ. ಸಿಗರೇಟಿನ ನಿಕೋಟಿನ್ (Nicotin) ರಕ್ತದಲ್ಲಿರುವ ಆಮ್ಲಜನಕದ ಜೊತೆ ಸೇರಿಕೊಳ್ಳುತ್ತದೆ. ಊಟ ಜೀರ್ಣವಾಗುವಾಗ ಈ ನಿಕೋಟಿನ್ ಹೀರಿಕೊಂಡು, ಬೊವೆಲ್ ಕ್ಯಾನ್ಸರ್ (Bowel Cancer) ಹಾಗೂ ಶ್ವಾಸಕೋಶದ ಕ್ಯಾನ್ಸರ್ (Lung cancer) ಅಪಾಯ ಹೆಚ್ಚು. ಆಗ, ಈಗ ಅಂತ ಬೇಡ. ಕೆಟ್ಟದ್ದನ್ನು ದೂರವಿಟ್ಟರೆ ಒಳ್ಳೆಯದು. 

ಹಣ್ಣು ತಿನ್ನುತ್ತೀರಾ?
ಊಟ ಆದ್ಮೇಲೆ ಹಣ್ಣು ತಿನ್ನೋದು, ಹಾಲು (Milk) ಕುಡಿಯೋದು ಮುಂಚಿನಿಂದಲೂ ಅನುಸರಿಸುವ ಪದ್ಧತಿ. ಆದರೆ, ಇದು ಒಳ್ಳೆಯ ಅಭ್ಯಾಸವಲ್ಲ. ಅದರಲ್ಲಿಯೂ ಮಜ್ಜಿಗೆ ಅಥವಾ ಮೊಸರನ್ನ (Curd Rice) ತಿಂದು ಕೆಲವು ಹಣ್ಣುಗಳನ್ನು ಅಪ್ಪಿತಪ್ಪಿಯೂ ಸೇವಿಸಲೇ ಬಾರದು. ಹಣ್ಣು ಸುಲಭವಾಗಿ ಜೀರ್ಣವಾಗುತ್ತದೆ. ಕರುಳಿಗೆ ಸೇರಿ ಕೊಳ್ಳಲು ಕೇವಲ 20 ನಿಮಿಷ ಸಾಕು. ಆದರೆ, ಊಟದೊಟ್ಟಿಗೆ ಹೋಗೋದು ತಡವಾಗುತ್ತದೆ. ತಡವಾದ ಹಾಗೆ ಅದರ ಪೌಷ್ಟಿಕಾಂಶಗಳು (Vitamins) ಕಡಿಮೆಯಾಗುತ್ತದೆ. ತಿನ್ನೋದೂ ವೇಸ್ಟ್ ಆಗುತ್ತದೆ. 

ತಿನ್ನಲು ಹಿತವೆನಿಸುವ ಕುಲ್ಚಾದ ಇತಿಹಾಸವಿದು!

ತಕ್ಷಣ ಟೀ, ಕಾಫಿ ಕುಡಿಯುತ್ತೀರಾ?
ಮಲೆನಾಡಲ್ಲಂತೂ ಇನ್ನು ಊಟವಾಗಿ ಕೈ ತೊಳೆದು ಒಳ ಬರುವುದರಲ್ಲಿ ಕಾಫಿ ಬಿಸಿಯಾಗಿರುತ್ತೆ. ಅದೊಂಥರಾ ಚಟ. ಊಟವಾದ ಮೇಲೆ ಕಾಫಿ ಕುಡಿಯೋದು ಕಾಮನ್. ಕಾಫಿಯಾಗಲಿ, ಟೀಯಾಗಲಿ ಕುಡಿಯೋದು ಒಳ್ಳೆಯ ಅಭ್ಯಾಸವಲ್ಲ. ಗಂಟೆನಾದರೂ ಗ್ಯಾಪ್ ಕೊಡಿ. ಟೀ (Tea) ಮತ್ತು ಕಾಫಿಯಲ್ಲಿರುವ ಟ್ಯಾನಿನ್ ಎಂಬ ರಾಸಾಯನಿಕ ಅಂಶ ಊಟದಲ್ಲಿದ್ದ ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳದಂತೆ ತಡೆಯುತ್ತದೆ. 

ಸ್ನಾನ ಮಾಡಿದ್ರೇನಾಗುತ್ತೆ? 
ಜೀವನದಲ್ಲಿ ಒಂದು ಶಿಸ್ತು ಇರಬೇಕು. ಸ್ನಾನ ಆದ್ಮೇಲೆ ಊಟ ಮಾಡೋದು ಒಂದು ಸಿಸ್ಟಮ್ಯಾಟಿಕ್ ಪದ್ಧತಿ. ಆದರೆ, ಉಲ್ಟಾ ಆದರೆ ಅದು ಆರೋಗ್ಯದ (Health) ಮೇಲೂ ಪರಿಣಾಮ ಬೀರುತ್ತೆ. ಹೇಗೆ? ಆಹಾರ ಕರಗಲು ದೇಹದ ಬಹಳಷ್ಟು ಎನರ್ಜಿ ಹಾಗೂ ರಕ್ತಚಲನೆಯ (Blood Circulation) ಅಗತ್ಯವಿರುತ್ತದೆ. ಊಟವಾದ ಕೂಡಲೇ ಸ್ನಾನ ಮಾಡಿದರೆ ದೇಹ ಉಷ್ಣಾಂಶವನ್ನು ಹೊರ ಹಾಕಲು ಚರ್ಮದ ಕಡೆ ರಕ್ತ ನುಗ್ಗುತ್ತದೆ. ಇದರಿಂದ ಜೀರ್ಣಕ್ರಿಯೆ ಕಷ್ಟ. 

ಹೊಟ್ಟೆ ಬಿಗಿಯುತ್ತೆ ಅಂತ ಬೆಲ್ಟ್ ಲೂಸ್ ಮಾಡ್ತೀರಾ?
ಪೆಟಿಕೋಟ್ ಅಥವಾ ಬೆಲ್ಟ್ ಕಟ್ಟಿದರೆ ಲೂಸ್ ಮಾಡಿಕೊಳ್ಳಬೇಕು ಎನಿಸೋದು ಸಹಜ. ಆದರೆ, ಹಾಗೆ ಅನಿಸುವಷ್ಟು ತಿನ್ನೋದು ಆರೋಗ್ಯಕ್ಕೆ ಒಳ್ಳೇಯದಲ್ಲಿ. ಅಗತ್ಯಕ್ಕಿಂತ ಹೆಚ್ಚು ತಿಂದರೆ ಮಾತ್ರ ಹೀಗೆ ಮಾಡಬೇಕು ಅನಿಸೋದು. ಹಾಗಾಗಿ ಎಷ್ಟು ಅಗತ್ಯವೋ ಅಷ್ಟು ಮಾತ್ರ ತಿಂದರೆ ಒಳ್ಳೆಯದು. 

ತಕ್ಷಣ ವಾಕ್ ಹೊರಟ್ರಾ? 
ದೇಹದ ತೂಕ ಕಡಿಮೆಯಾಗಬೇಕು (Weight Loose) ಅಂದರೆ ಊಟ ಆದ ಕೂಡಲೇ ವಾಕಿಂಗ್ (Walking) ಹೋಗಬೇಕು ಅನ್ನೋದು ಕೆಲವರ ತಲೆಯಲ್ಲಿ ತುಂಬಿರುತ್ತೆ. ಆದರಿದು ಕೆಟ್ಟ ಅಭ್ಯಾಸ. ಈ ರೀತಿ ಮಾಡಿದರೆ ಅಜೀರ್ಣ (Indegestion), ಆ್ಯಸಿಡ್ ರಿಫ್ಲೆಕ್ಸ್ ಆಗಿ ಎದೆ ಒತ್ತಿ ಬಂದಂತಾಗುತ್ತದೆ. 30 ನಿಮಿಷಗಳ ಕಾಲ ಗ್ಯಾಪ್ ಕೊಟ್ಟು, ವಾಕ್ ಮಾಡಿದರೆ ಅಡ್ಡಿ ಇಲ್ಲ. 

ರಾತ್ರಿ ಹಸಿವಾದ್ರೆ ಏನೇನೋ ಮುಕ್ಕಬೇಡಿ, ಈ Snacks ಓಕೆ!

ತಕ್ಷಣ ಮಲಗುತ್ತೀರಾ? 
ಊಟ ಆದ ಕೂಡಲೇ ಹೆವಿ ಕೆಲಸವನ್ನೂ ಮಾಡಬಾರದು. ತಕ್ಷಣವೇ ಮಲಗೋದು ಸಹ ಹಲವು ರೋಗಗಳನ್ನು ಆಹ್ವಾನಿಸಿದಂತೆ. ಜೀರ್ಣಕಾರಿ ರಸಗಳು ಅನ್ನನಾಳದೊಳಗೆ ವಾಪಸು ಹರಿಯಲು ಶುರುವಾಗಿ, ಎದೆಯುರಿಯಂಥ ಸಮಸ್ಯೆಗೆ ಕಾರಣವಾಗಬಹುದು. ಆ್ಯಟ್ ಲೀಸ್ಟ್ 45 ನಿಮಿಷದ ನಂತರ ಮಲಗಿದರೆ ಒಳ್ಳೆಯದು. 

 

Taking bath having nap and sleeping soon after having food affect health

 

Latest Videos
Follow Us:
Download App:
  • android
  • ios