ಜ್ವರ ಬಂದಾಗ ಹೇಗೆ ಥಟ್ಟನೆ ಹೋಗಿ ಡೋಲೋ, ಪ್ಯಾರಸಿಟಮಾಲ್ ನುಂಗುತ್ತೇವೋ ಹಾಗೆಯೇ ಸಾಮಾನ್ಯವಾಗಿ ನೋವು ಕಾಣಿಸಿಕೊಂಡಾಗ ಆಸ್ಪಿರಿನ್ ಟ್ಯಾಬ್ಲೆಟ್ ತೆಗೆದುಕೊಳ್ಳುವುದು ಸಾಮಾನ್ಯ. ನೀವು ಕೂಡಾ ಹೀಗೇ ಮಾಡ್ತಿದ್ರೆ ತಿಳ್ಕೊಳ್ಳಿ, ಆಗಾಗ ಆಸ್ಪಿರಿನ್ ತೆಗೆದುಕೊಳ್ಳೋ ಅಭ್ಯಾಸ ಆರೋಗ್ಯಕ್ಕೇ ಮಾರಕ.
ಆರೋಗ್ಯ ಹದಗೆಟ್ಟಾಗ ಸಾಮಾನ್ಯವಾಗಿ ಎಲ್ಲರೂ ಮೆಡಿಕಲ್‌ಗೆ ಹೋಗಿ ಸಂಬಂಧಪಟ್ಟ ಅನಾರೋಗ್ಯಕ್ಕೆ ಬೇಕಾದ ಟ್ಯಾಬ್ಲೆಟ್ ಖರೀದಿಸಿ ನುಂಗುತ್ತಾರೆ. ಹೀಗೇ ಜ್ವರ ಬಂದಾಗ ಪ್ಯಾರಾಸಿಟಮಾಲ್, ನೋವು ಕಾಣಿಸಿಕೊಂಡಾಗ ಆಸ್ಪಿರಿನ್ ತೆಗೆದುಕೊಳ್ಳೋದು ಸಾಮಾನ್ಯ. ಆದ್ರೆ ಸಣ್ಣಪುಟ್ಟ ನೋವಿಗೆಲ್ಲಾ ಆಸ್ಪಿರಿನ್ ನುಂಗಿದ್ರೆ ಆರೋಗ್ಯಕಾಗೋ ಅಪಾಯ ಒಂದೆರಡಲ್ಲ. ಆಸ್ಪಿರಿನ್ ಒಂದು ಜನಪ್ರಿಯ ಔಷಧಿಯಾಗಿದ್ದು, ಇದನ್ನು ಸಾಮಾನ್ಯವಾಗಿ ನೋವು ಮತ್ತು ಜ್ವರಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ತಲೆನೋವು ಅಥವಾ ಕಾಲುಗಳು, ಕೀಲುಗಳಲ್ಲಿ ಸೌಮ್ಯವಾದ ನೋವು ಮತ್ತು ಕೆಲವೊಮ್ಮೆ ಜ್ವರದಂತಹ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಔಷಧಿಯನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಇದನ್ನು ಸಾಮಾನ್ಯವಾಗಿ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲಾಗುವುದಿಲ್ಲ. ಕೆಲವೊಮ್ಮೆ, ಹೃದಯರಕ್ತನಾಳದ ಕಾಯಿಲೆಗಳ ಅಪಾಯಗಳನ್ನು ತಪ್ಪಿಸಲು ವೈದ್ಯರು ಆಸ್ಪಿರಿನ್ ಅನ್ನು ಶಿಫಾರಸು ಮಾಡುತ್ತಾರೆ.
ಹೀಗಿದ್ದೂ, ಆಸ್ಪಿರಿನ್ (Aspirin) ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಹುಣ್ಣುಗಳು ಅಥವಾ ಎದೆಯುರಿ ಅಥವಾ ಎದೆ ನೋವಿನಂತಹ ಸಮಸ್ಯೆ ಇರುವವರ ದೇಹಕ್ಕೆ ತೀವ್ರವಾದ ಹಾನಿಯನ್ನು ಉಂಟುಮಾಡಬಹುದು. ಆದ್ದರಿಂದ ನೀವು ಸೇವಿಸುವ ಆಸ್ಪಿರಿನ್ ಪ್ರಮಾಣವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಔಷಧಿಯ (Medicine) ಪ್ರಮಾಣ ನಿಮ್ಮ ದೇಹದ ಅಂಗಗಳ ಮೇಲೆ ಪರಿಣಾಮ ಬೀರಬಹುದು ಮತ್ತು ದೀರ್ಘಕಾಲದ ಕಾಯಿಲೆ (Disease)ಗಳಿಗೆ ಕಾರಣವಾಗಬಹುದು.
Health News : ಪ್ಯಾರಾಸಿಟಮಾಲ್ ಸೇರಿ 15 ಮಾತ್ರೆ ಖರೀದಿಗೆ ಬೇಕಾಗಿಲ್ಲ ವೈದ್ಯರ ಚೀಟಿ
ಆಸ್ಪಿರಿನ್ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ?
ಆಸ್ಪಿರಿನ್ ಹೃದಯ ಕಾಯಿಲೆಗಳು ಮತ್ತು ಪಾರ್ಶ್ವವಾಯುಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಮೊದಲೇ ಹೃದಯಾಘಾತ (Heartattack)ದಿಂದ ಬಳಲುತ್ತಿದ್ದರೆ, ರಕ್ತ ಹೆಪ್ಪುಗಟ್ಟುವಿಕೆಯ ಸಾಧ್ಯತೆಯನ್ನು ತಡೆಯುವುದರಿಂದ ಆಸ್ಪಿರಿನ್‌ನ ಸೌಮ್ಯ ಪ್ರಮಾಣವನ್ನು ವೈದ್ಯರು ಶಿಫಾರಸು ಮಾಡುವ ಸಾಧ್ಯತೆಗಳಿವೆ. ಆಸ್ಪಿರಿನ್ ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಆಸ್ಪಿರಿನ್ ಅನ್ನು NSAID (ಸ್ಟಿರಾಯ್ಡ್ ಅಲ್ಲದ ಉರಿಯೂತದ ಔಷಧ) ಎಂದೂ ಕರೆಯುತ್ತಾರೆ. ಇದು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಲೆನೋವು ಮತ್ತು ಜ್ವರಗಳ ಜೊತೆಗೆ ಕೀಲು ಮತ್ತು ಸ್ನಾಯು ನೋವುಗಳನ್ನು ಕಡಿಮೆ ಮಾಡಲು NSAIDಗಳು ನೋವು ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಆದರೆ ಇನ್ನು ಕೆಲವೊಮ್ಮೆ ಆಸ್ಪಿರಿನ್ ರಕ್ತಸ್ರಾವಕ್ಕೆ ಕಾರಣವಾಗಬಹುದು. ಈ ರಕ್ತಸ್ರಾವಗಳು ಸಾಮಾನ್ಯವಾಗಿ ಹೊಟ್ಟೆ ಅಥವಾ ಮೆದುಳು (Brain) ಅಥವಾ ಕರುಳಿನಲ್ಲಿ ಸಂಭವಿಸಬಹುದಾದ ಆಂತರಿಕ ರಕ್ತಸ್ರಾವಗಳಾಗಿವೆ. ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದಾದರೂ, ಪ್ರತಿದಿನ ಆಸ್ಪಿರಿನ್ ಸೇವನೆಯು ರಕ್ತಸ್ರಾವಕ್ಕೆ ಕಾರಣವಾಗಬಹುದು. ಮಾತ್ರವಲ್ಲ, ಹೊಟ್ಟೆಯ ಹುಣ್ಣುಗಳಿಗೆ ಕಾರಣವಾಗಬಹುದು. ಆಸ್ಪಿರಿನ್‌ನಂತಹ ನೋವು ನಿವಾರಕಗಳು ಹೊಟ್ಟೆಯ ಒಳಪದರಕ್ಕೆ ಸಮಸ್ಯೆಗಳನ್ನು ಉಂಟುಮಾಡುತ್ತವೆ, ಏಕೆಂದರೆ ಅವು ಹೊಟ್ಟೆಯ ಒಳಪದರವನ್ನು ಕೆರಳಿಸಬಹುದು, ಇದು ರಕ್ತಸ್ರಾವ ಮತ್ತು ಹುಣ್ಣುಗಳಿಗೆ ಕಾರಣವಾಗಬಹುದು. ವ್ಯಕ್ತಿಯು ಆಗಾಗ ಮದ್ಯಪಾನ ಮಾಡುತ್ತಿದ್ದರೆ ಈ ಪರಿಸ್ಥಿತಿಗಳು ಉಲ್ಬಣಗೊಳ್ಳಬಹುದು. ಹೀಗಾಗಿ ಸಣ್ಣಪುಟ್ಟ ನೋವಿಗೆಲ್ಲಾ ಆಸ್ಪಿರಿನ್ ತೆಗೆದುಕೊಳ್ಳುವ ಮೊದಲು ಅವುಗಳ ಸೇವನೆಯಿಂದಾಗುವ ತೊಂದರೆಯ ಬಗ್ಗೆಯೂ ತಿಳಿದುಕೊಂಡಿರುವುದು ಉತ್ತಮ.
Health Tips : ಗರ್ಭಾವಸ್ಥೆಯಲ್ಲಿ ಬೇಕಾಬಿಟ್ಟಿ ಮಾತ್ರೆ ಸೇವನೆ ತಪ್ಪು
ಜ್ವರ ಬಂದಾಗಲ್ಲೆಲ್ಲಾ ಪ್ಯಾರಸಿಟಮಾಲ್ ತಗೊಂಡ್ರೆ ಆರೋಗ್ಯಕ್ಕೆ ಅಪಾಯ
ಪ್ಯಾರಸಿಟಮಾಲ್ (Paracetamol) ಎಂದರೆ ಎಲ್ಲರಿಗೆ ಗೊತ್ತಿರುವ ಹಾಗೇ ಜ್ವರಕ್ಕೆ ತೆಗೆದುಕೊಳ್ಳುವ ಮಾತ್ರೆ. ಇದನ್ನು ಅಸಿಟಮಿನೋಫಿನ್ ಎಂದು ಸಹ ಕರೆಯಲಾಗುತ್ತದೆ. ಜ್ವರವನ್ನು ಗುಣಪಡಿಸಲು, ನೋವು ಕಡಿಮೆಯಾಗಲು ಪ್ಯಾರಸಿಟಮಾಲ್ ಟ್ಯಾಬ್ಲೆಟ್ ಅನ್ನು ಬಳಸಲಾಗುತ್ತದೆ. ತಲೆನೋವು, ಹಲ್ಲುನೋವು, ನೆಗಡಿ ಜ್ವರಕ್ಕೂ ಈ ಮಾತ್ರೆಯ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕೊರೋನಾ (Corona) ಸೋಂಕು ಆರಂಭವಾದಗಿನಿಂದಲೂ ಜ್ವರವನ್ನು ಕಡಿಮೆ ಮಾಡಲು ಪ್ಯಾರಸಿಟಮಾಲ್ ಬಳಕೆಯು ಇನ್ನೂ ಹೆಚ್ಚಾಗಿದೆ. ಜ್ವರ, ಶೀತ ಮೊದಲಾದ ಸಮಸ್ಯೆಗೆ ಪ್ಯಾರಸಿಟಮಾಲ್ ತ್ವರಿತವಾಗಿ ಚಿಕಿತ್ಸೆ ನೀಡಿದರೂ, ಇದರ ಮಿತಿ ಮೀರಿದ ಸೇವನೆ ಅಪಾಯಕಾರಿಯಾಗಿದೆ.
ದೈನಂದಿನ ಪ್ಯಾರಸಿಟಮಾಲ್ ಹೃದಯಾಘಾತ, ಪಾರ್ಶ್ವವಾಯು ಮತ್ತು ಆರಂಭಿಕ ಸಾವಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಹಿಂದಿನ ವೀಕ್ಷಣಾ ಅಧ್ಯಯನಗಳ ಹೊಸ ವಿಮರ್ಶೆಯು ಪ್ಯಾರೆಸಿಟಮಾಲ್‌ನ ದೀರ್ಘಾವಧಿಯ ಬಳಕೆಯು ಹೃದಯಾಘಾತಗಳು, ಜಠರಗರುಳಿನ ರಕ್ತಸ್ರಾವಗಳು ಮತ್ತು ದುರ್ಬಲಗೊಂಡ ಮೂತ್ರಪಿಂಡದ ಕಾರ್ಯಚಟುವಟಿಕೆಗಳಂತಹ ಪ್ರತಿಕೂಲ ಘಟನೆಗಳ ಸಣ್ಣ ಹೆಚ್ಚಿದ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ತಿಳಿದುಬಂದಿದೆ.
