ಸ್ಟ್ರೋಕ್ ಯಾವ ಕ್ಷಣದಲ್ಲಿ ಯಾರಿಗೆ ಆಗ ಬಹುದು?

ಅಕ್ಟೋಬರ್ 29 ವಿಶ್ವ ಸ್ಟ್ರೋಕ್ ದಿನ. ‘ಕಟ್ ಸ್ಟ್ರೋಕ್ ಇನ್ಸಿಡೆಂಟ್ಸ್ ಇನ್ ಹಾಫ್’ ಅನ್ನೋದು ಈ ಸಲ ಧ್ಯೇಯವಾಕ್ಯ. ಪಾರ್ಶ್ವವಾಯು ಸಮಸ್ಯೆಯನ್ನು ಅರ್ಧಕ್ಕರ್ಧ ಇಳಿಸುವ ಆಶಯ. ಹೃದಯಾಘಾತದಷ್ಟೇ ಗಂಭೀರವಾದ ಈ ಸಮಸ್ಯೆ ಬಗ್ಗೆ ಸಾಮಾನ್ಯರಿಗಿರುವ ಸಂದೇಹ ಮತ್ತು ಅದಕ್ಕೆ ತಜ್ಞ ವೈದ್ಯರ ಉತ್ತರ ಇಲ್ಲಿದೆ.

 

 

Symptoms Cause and treatment  to stroke by Neurologist Dr G T Subhas

ಡಾ. ಜಿ.ಟಿ ಸುಭಾಷ್

ಜಾಗತಿಕವಾಗಿ ಪ್ರತೀ ನಾಲ್ವರಲ್ಲಿ ಒಬ್ಬ ವ್ಯಕ್ತಿಗೆ ಸ್ಟ್ರೋಕ್ ಆಗ್ತಿದೆ ಅನ್ನುತ್ತೆ ಇತ್ತೀಚಿನ ಸಮೀಕ್ಷೆ. ಹಾಗೆ ಬ್ರೈನ್ ಅಟ್ಯಾಕ್ ಆದ ಒಂದು ತಿಂಗಳೊಳಗೆ ಶೇ.25 ಜನ ಮರಣಕ್ಕೀಡಾಗುತ್ತಾರೆ. 30 ಶೇ. ದಷ್ಟು ಜನ ಅಂಗವಿಕಲರಾಗುತ್ತಾರೆ. ಒಂದಿಷ್ಟು ಜನಕ್ಕೆ ಹುಟ್ಟಿನಿಂದಲೇ ಈ ಸಮಸ್ಯೆ ಬರುತ್ತೆ. ಮತ್ತೊಂದು ಅಚ್ಚರಿ ಅಂದರೆ ನೂರರಲ್ಲಿ 60 ಜನಕ್ಕೆ ತಮಗೆ ಸ್ಟ್ರೋಕ್ ಆಗಿದೆ ಅಂತ ಗೊತ್ತೇ ಆಗಲ್ಲ. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟೋದು, ಮಿದುಳಿನ ರಕ್ತಸ್ರಾವ, ಹುಟ್ಟಿದಾಗಲಿಂದ ಬರುವ ಸಮಸ್ಯೆಗಳಿಂದ ಸ್ಟ್ರೋಕ್ ಆಗಬಹುದು.

ಸ್ಟ್ರೋಕ್ ಹೊಡೆದಾಗ ಏನು ಮಾಡಬೇಕು?

- ಮಿದುಳಿನ ಯಾವ ಭಾಗದಲ್ಲಿ ಯಾವ ರಕ್ತನಾಳದಲ್ಲಿ ಸಮಸ್ಯೆಯಾಗಿದೆ ಅನ್ನೋದರ ಮೇಲೆ ಲಕ್ಷಣ ಕಂಡುಬರುತ್ತೆ. ಮುಖ ಸೊಟ್ಟಗಾಗೋದು, ನಕ್ಕರೆ ಆ ಭಾಗದಲ್ಲಿ ಚಲನೆಯೇ ಇರಲ್ಲ. ಇದನ್ನು ಫೇಶಿಯಲ್ ಏಸಿಮೆಟ್ರಿ ಅಂತಾರೆ. ಕಾಫಿ ಕುಡೀತಿದ್ರೆ ಸಡನ್ನಾಗಿ ಶಕ್ತಿಯೇ ಇಲ್ಲದಂತೆ ಕಾಫಿ ಚೆಲ್ಲಿಹೋಗುತ್ತದೆ. ತಲೆ ಬಾಚ್ಕೊಳಕ್ಕೆ ಹೋದರೆ ಕಂಟ್ರೋಲ್ ಸಿಗಲ್ಲ.

- ಮಾತಾಡುವಾಗ ತೊದಲೋದು, ಅವರೇನು ಮಾತಾಡ್ತಾರೆ ಅಂತನೇ ಗೊತ್ತಾಗಲ್ಲ. ವರ್ಣಮಾಲೆಯ ಕೆಲವು ಅಕ್ಷರಗಳನ್ನು ಉಚ್ಚರಿಸಲು ಕಷ್ಟಪಡುತ್ತಾರೆ. ಕೆಲವೊಮ್ಮೆ ಹೌದು, ಇಲ್ಲ ಅಂತಷ್ಟೇ ಕ್ಲುಪ್ತವಾಗಿ ಉತ್ತರಿಸಬಹುದು. ಯಾಕೋ ಡಲ್ ಆಗಿದ್ದಾರಲ್ಲಾ ಅಂತ ಉಳಿದವರಿಗೆ ಕಾಣುತ್ತೆ. ಕೆಲವೊಮ್ಮೆ ನಾವೇನಾದರೂ ಮಾತಾಡಿದ್ರೆ ಅವರೇನೋ ಉತ್ತರ ಕೊಡಬಹುದು. ಇದು ಗ್ರಹಿಕೆಯ ಭಾಗದಲ್ಲಿ ಸ್ಟ್ರೋಕ್ ಆದಾಗ ಆಗೋ ಸಮಸ್ಯೆ. ಒಂದು ವಸ್ತು ನೋಡಿದ್ರೆ ಎರಡೆರಡು ಕಾಣೋದು, ದೃಷ್ಟಿಯಲ್ಲಿ ಅರ್ಧ ಭಾಗ ಕಾಣೋದು, ಕುಡಿದವರ ಥರ ಜೋಲಿ ಹೊಡೆಯೋದು, ಸಡನ್ನಾಗಿ ತಲೆ ಸುತ್ತು ಬರೋದು ಇತ್ಯಾದಿ. ಇದೇ ಲಕ್ಷಣಗಳು ಬೇರೆ ಸಮಸ್ಯೆಯಲ್ಲೂ ಕಾಣಿಸೋ ಕಾರಣ ಹೆಚ್ಚಿನವರು ನೆಗ್ಲೆಕ್ಟ್ ಮಾಡ್ತಾರೆ. ಆಮೇಲೆ ಒದ್ದಾಡ್ತಾರೆ.

ಕ್ಯಾನ್ಸರ್ ಮಣಿಸಿದ ಪುಟ್ಟ ಕಂದ: ಅಪ್ಪ, ಮಗನ ಖುಷಿಗೆ ಮಿತಿಯೇ ಇಲ್ಲ!

- ಮೇಲಿನ ಯಾವುದೇ ಲಕ್ಷಣ ಕಂಡುಬಂದ ಕೂಡಲೇ ಎಷ್ಟು ಸಾಧ್ಯವೋ ಅಷ್ಟು ಬೇಗ ಆಸ್ಪತ್ರೆಗೆ ಬರಬೇಕು, ಚಿಕಿತ್ಸೆಗೆ ಒಳಗಾಗಬೇಕು. ದಯವಿಟ್ಟು ದೂರದ ಆಸ್ಪತ್ರೆಗಳಿಗೆ ಹೋಗಬೇಡಿ. ಹಾಗೆಂದು ಎಲ್ಲಾ ಆಸ್ಪತ್ರೆಗಳಲ್ಲೂ ಇದಕ್ಕೆ ಚಿಕಿತ್ಸೆ ಕೊಡುವ ಸೌಲಭ್ಯಗಳಿರಲ್ಲ. ದೊಡ್ಡ ಆಸ್ಪತ್ರೆಗಳಲ್ಲಿ ಮಾತ್ರ ಈ ಸೌಲಭ್ಯ ಇರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಿಕ್ಟೋರಿಯಾ ಹಾಗೂ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಾತ್ರ ಸ್ಟ್ರೋಕ್‌ಗೆ ಚಿಕಿತ್ಸೆ ಸಿಗುತ್ತೆ. ಈ ಬಗ್ಗೆ ಕರೆಕ್ಟಾಗಿ ತಿಳಿಯಿರಿ. ಮನೆಗೆ ಸಮೀಪ ಸ್ಟ್ರೋಕ್ ಟ್ರೀಟ್ ಮೆಂಟ್ ಮಾಡುವ ಯಾವ ಆಸ್ಪತ್ರೆ ಇದೆ ಅಂತ ಚೆಕ್ ಮಾಡಿ ಕೂಡಲೇ ಅಲ್ಲಿಗೆ ದಾಖಲಿಸಿ.

- ಚಿಕಿತ್ಸೆ ದುಬಾರಿ ಇರುತ್ತೆ. ಸರ್ಕಾರ ಈ ನಿಟ್ಟಿನಲ್ಲಿ ಸ್ಕೀಮ್ ಮಾಡಿದ್ರೆ ಒಳ್ಳೆಯದು. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ಸಿಗೋ ಹಾಗಾದ್ರೆ ಎಷ್ಟೋ ರೋಗಿಗಳ ಜೀವ ಉಳಿಯುತ್ತೆ.

- ಸ್ಟ್ರೋಕ್ ಲಕ್ಷಣಗಳನ್ನು ಮೂರರಿಂದ ನಾಲ್ಕೂವರೆ ಗಂಟೆಯೊಳಗೆ ಪತ್ತೆ ಮಾಡಿದರೆ ಹೆಪ್ಪುಗಟ್ಟಿದ ರಕ್ತ ಕರಗಿಸುವ ಔಷಧ ಹಾಕಿ ಗುಣಪಡಿಸಬಹುದು. ರಿಸಲ್ಟ್ ಚೆನ್ನಾಗಿರುತ್ತೆ. 8 ಗಂಟೆಯಾದರೂ ನಳಿಕೆ ಮೂಲಕ ಸ್ಟಂಟ್ ರಿಟ್ರೀವರ್ ಮೂಲಕ ಹೆಪ್ಪುಗಟ್ಟಿದ ರಕ್ತ ತೆಗಿಯಬಹುದು. ಇನ್ನೂ ವಿಳಂಬವಾದರೆ ಅಂಗ ವಿಕಲತೆ ಅಥವಾ ಮರಣ  ಸಂಭವಿಸಬಹುದು.

ಸ್ತನದ ಮೇಲೆ ಕಾಣಿಸುವ ಅಸಹಜ ಮಚ್ಚೆಗೂ, ಕ್ಯಾನ್ಸರ್ ಗೂ ಇದೆ ಸಂಬಂಧ; ಇರಲಿ ಎಚ್ಚರ!

- ವಿವಿಧ ಬಗೆಯ ಸ್ಟ್ರೋಕ್‌ಗೆ ಒಳಗಾಗಿರುವವರಿಗೆ ರಿಹ್ಯಾಬಿಲಿಟೇಶನ್ ಅಂತಿರುತ್ತೆ. ಏಕೆಂದರೆ ಸ್ಟ್ರೋಕ್‌ಗೆ ಒಳಗಾದವರು ಚೇತರಿಸಿಕೊಳ್ಳಲು ಎರಡು ವರ್ಷದವರೆಗೂ ಸಮಯ ಇರುತ್ತೆ. ಆ ಹೊತ್ತಿನ ಚಿಕಿತ್ಸೆಗಳೆಲ್ಲ ರಿಹ್ಯಾಬಿಲಿಟೇಶನ್ ಕಾರ್ಯಕ್ರಮಗಳಲ್ಲಿ ಸಿಗುತ್ತೆ. ಅವರ ಕೆಲಸ ಅವರೇ ಮಾಡಿಕೊಳ್ಳಲು ಇಲ್ಲಿ ಕಲಿಸುತ್ತಾರೆ. ಸ್ಟ್ರೋಕ್‌ಗೆ ಒಳಗಾದವರಲ್ಲಿ ಬಹಳ ಮಂದಿಗೆ ಖಿನ್ನತೆ ಉಂಟಾಗಿರುತ್ತೆ.

- ಬೆಂಗಳೂರು ಪಾರ್ಶ್ವವಾಯು ಸಂಘದಲ್ಲಿ ಆರುವಾರಕ್ಕೊಮ್ಮೆ ಆಸಕ್ತರಿಗೆ ಎಲ್ಲ ಆಸ್ಪತ್ರೆಯ ಎಲ್ಲಾ ತಜ್ಞರೂ ಉಚಿತ ಟ್ರೈನಿಂಗ್ ಕೊಡುತ್ತಾರೆ. ಸ್ಟ್ರೋಕ್‌ಗೆ ಒಳಗಾದವರಲ್ಲಿ ಬಹಳ ಮಂದಿಗೆ ಖಿನ್ನತೆ ಉಂಟಾಗಿರುತ್ತೆ. ಅವರಿಗೂ ಇಲ್ಲಿ ಚಿಕಿತ್ಸೆ ಇದೆ. ರೋಗಿ ಹಾಗೂ ಅವರ ಪೋಷಕರಿಗೂ ಕೌನ್ಸಿಲಿಂಗ್, ಗುಂಪು ಚರ್ಚೆಗೆ ಅವಕಾಶ ಇರುತ್ತೆ.

- ಉಳಿದಂತೆ ಡಯಾಬಿಟಿಸ್ ಇರುವವರಿಗೆ ಸ್ಟ್ರೋಕ್ ಆಗುವ ಸಾಧ್ಯತೆ ಹೆಚ್ಚು. ಜೊತೆಗೆ ಹೃದಯ ಸಂಬಂಧಿ ಸಮಸ್ಯೆಯ ರಿಸ್ಕ್ ಇರುವವರಿಗೆ ಬ್ರೈನ್ ಅಟ್ಯಾಕ್ ರಿಸ್ಕ್ ಇರುತ್ತೆ. ಹೃದಯ ರೋಗ ನಿಯಂತ್ರಣದಲ್ಲಿರಲಿ. ಲೈಫ್‌ಸ್ಟೈಲ್ ನೋಡ್ಕೊಳ್ಳಿ, ಕೊಬ್ಬಿನ ಅಂಶ ಕಡಿಮೆ ಮಾಡಿ. ಧೂಮಪಾನದಿಂದ, ಆಲ್ಕೋಹಾಲ್ ಸೇವನೆಯಿಂದಲೂ ಸ್ಟ್ರೋಕ್ ಆಗಬಹುದು.

-ವ್ಯಾಯಾಮ, ಆಹಾರ, ನಿದ್ದೆಯಲ್ಲಿ ವ್ಯತ್ಯಯವಾದರೂ ಸ್ಟ್ರೋಕ್ ಆಗಬಹುದು.

ಖಾಕಿಯೊಳಗಿನ ತಾಯಿಕರುಳು: ಕ್ಯಾನ್ಸರ್ ರೋಗಿಗಳ ವಿಗ್‌ಗಾಗಿ ತಲೆ ಬೋಳಿಸಿದಳು!

- ಗೊರಕೆ ಹೊಡೆಯೋರು ಸ್ಟ್ರೋಕ್ ಬಗ್ಗೆ ಎಚ್ಚರವಾಗಿರಿ. ಯಾಕೆ ಗೊರಕೆ ಬರುತ್ತೆ ಅಂತ ಪರೀಕ್ಷಿಸಿ. ಗೊರಕೆ ಹೊಡೆಯುವಾಗ ಒಳಹೋಗುವ ಆಮ್ಲಜನಕ ಕಡಿಮೆಯಾಗಿ, ಕಾರ್ಬನ್ ಡೈ
ಆಕ್ಸೈಡ್ ಪ್ರಮಾಣ ಹೆಚ್ಚಾಗಿ ಮಿದುಳಿಗೆ ಸಮಸ್ಯೆಯಾಗಬಹುದು.

- ಜೆನಿಟಿಕಲೀ ನಮಗೆ ಸ್ಟ್ರೋಕ್ ಬರುವ ಸಾಧ್ಯತೆ ಇದೆ.

- ಮುಂಚೆ ಸ್ಟ್ರೋಕ್ ಅಂದರೆ 50ರ ನಂತರ ಅನ್ನುವ ಮಾತಿತ್ತು. ಆದರೆ ಇವತ್ತು ೨೫ನೇ ವಯಸ್ಸಲ್ಲೇ ಸ್ಟ್ರೋಕ್ ಅಟ್ಯಾಕ್ ಆದವರು ಬಹಳಷ್ಟಿದ್ದಾರೆ. ಮುಂಚೆ ಮಕ್ಕಳು ಸ್ಟ್ರೋಕ್ ಗೊಳಗಾದ ತಂದೆ ತಾಯಿಯರನ್ನು ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿಯೇ ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಸ್ಥಿತಿ ನಿರ್ಮಾಣವಾಗಿದೆ.

Latest Videos
Follow Us:
Download App:
  • android
  • ios