ಸ್ಟ್ರೋಕ್ ಹೊಡೆದಾಗ ಏನು ಮಾಡಬೇಕು?

life | Thursday, March 22nd, 2018
Suvarna Web Desk
Highlights

ಬಿ.ಪಿ, ಶುಗರ್ ಇರುವವರಿಗೆ, ಕೊಲೆಸ್ಟ್ರಾಲ್ ಜಾಸ್ತಿ ಇರುವವರಿಗೆ, ಹೃದಯ ಸಮಸ್ಯೆ, ವಯಸ್ಸಾದವರಿಗೆ ಸ್ಟ್ರೋಕ್ ರಿಸ್ಕ್ ಹೆಚ್ಚಿರುತ್ತೆ. ಹಾರ್ಟ್ ಪೇಶೆಂಟ್‌ಗಳಿಗಂತೂ  ಸೆಕೆಂಡ್ ಸಾಕು ಸ್ಟ್ರೋಕ್ ಆಗಲಿಕ್ಕೆ. ಇಂಥವರು ಬಿಪಿ, ಶುಗರ್ ಲೆವೆಲ್ ಕಂಟ್ರೋಲ್‌ನಲ್ಲಿಟ್ಟುಕೊಳ್ಳಬೇಕು.

ಡಾ. ಶಿವಕುಮಾರ್, ಅಪಸ್ಮಾರ ಹಾಗೂ ನರರೋಗ ತಜ್ಞ

ಸ್ಟ್ರೋಕ್ ಆಗೋ ಸಾಧ್ಯತೆ ಯಾರಿಗೆ ಹೆಚ್ಚು?
ಬಿ.ಪಿ, ಶುಗರ್ ಇರುವವರಿಗೆ, ಕೊಲೆಸ್ಟ್ರಾಲ್ ಜಾಸ್ತಿ ಇರುವವರಿಗೆ, ಹೃದಯ ಸಮಸ್ಯೆ, ವಯಸ್ಸಾದವರಿಗೆ ಸ್ಟ್ರೋಕ್ ರಿಸ್ಕ್ ಹೆಚ್ಚಿರುತ್ತೆ. ಹಾರ್ಟ್ ಪೇಶೆಂಟ್‌ಗಳಿಗಂತೂ  ಸೆಕೆಂಡ್ ಸಾಕು ಸ್ಟ್ರೋಕ್ ಆಗಲಿಕ್ಕೆ. ಇಂಥವರು ಬಿಪಿ, ಶುಗರ್ ಲೆವೆಲ್ ಕಂಟ್ರೋಲ್‌ನಲ್ಲಿಟ್ಟುಕೊಳ್ಳಬೇಕು. ಕೊಲೆಸ್ಟ್ರಾಲ್ ಲೆವೆಲ್ ಹತೋಟಿಯಲ್ಲಿಡಬೇಕು. ಕೆಲವರಿಗೆ ತನ್ನಷ್ಟಕ್ಕೇ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುತ್ತೆ. ಇವರಿಗೆ ಸ್ಟ್ರೋಕ್ ಆಗದಿದ್ದರೂ ಮುಂಜಾಗ್ರತಾ ಕ್ರಮವಾಗಿ ಲಕ್ವದ ಔಷಧಿ ಕೊಡ್ತೇವೆ.

ಉಳಿದವರಿಗೆ ಬರಲ್ವಾ?
ಹಾಗೆ ಹೇಳಲಿಕ್ಕಾಗಲ್ಲ. ನವಜಾತ ಶಿಶುವಿನಿಂದ ಹಿಡಿದು ಯುವಕರು, ವೃದ್ಧರವರೆಗೆ ಯಾರಿಗೆ ಬೇಕಾದರೂ ಸ್ಟ್ರೋಕ್ ಆಗಬಹುದು. ಮಗು ಹುಟ್ಟುವಾಗ ಹೊರಗೆ ತಲೆ ಕಂಪ್ರೆಸ್ ಆಗಿ, ಉಸಿರಾಟ ಸರಿಯಾಗದಿದ್ದಾಗ ಮಗುವಿಗೆ ಸ್ಟ್ರೋಕ್ ಆಗುತ್ತೆ. ಹುಟ್ಟಿದಾಗಲೇ ಕೈಕಾಲು ಚಲನೆ ಇರಲ್ಲ. ಹುಡುಗರಿಗೆ ಆ್ಯಕ್ಸಿಡೆಂಟ್ ಆದಾಗಲೂ ಹೀಗಾಗಬಹುದು.

ಇಂದಿನ ಲೈಫ್‌ಸ್ಟೈಲ್‌ನಿಂದ ಬರಲ್ವಾ?
ಖಂಡಿತಾ ಬರುತ್ತೆ. ನಮ್ಮ ಆಸ್ಪತ್ರೆಗೆ ಟೆಕ್ಕಿಗಳು ಸ್ಟ್ರೋಕ್ ಸಮಸ್ಯೆ ಅಂತ ಬಂದಾಗ ಆಶ್ಚರ್ಯ ಆಗುತ್ತೆ. ಅವರಿಗೆ ಬಿಪಿ, ಶುಗರ್, ಕೊಲೆಸ್ಟ್ರಾಲ್ ಏನಿರಲ್ಲ. ತೆಳ್ಳಗಿರುತ್ತಾರೆ. ಇವರಿಗೆ ಹೇಗಪ್ಪಾ ಸ್ಟ್ರೋಕ್ ಆಯ್ತು ಅನ್ಸುತ್ತೆ. ಮತ್ತೆ ನೋಡಿದ್ರೆ ಅವರು ದಿನಕ್ಕೆ 16 ಗಂಟೆ ಕೆಲಸ ಮಾಡ್ತಾರೆ. ಆಗಸ್ಟ್ರೆಸ್ ಹೆಚ್ಚಾಗಿ ರಕ್ತದೊತ್ತಡ ಸಮಸ್ಯೆ ಬಂದು ಸ್ಟ್ರೋಕ್  ಆಗಿರುತ್ತೆ. ಹಾಗಾಗಿ ಈಗ 40 ವಯಸ್ಸಿನ ಒಳಗಿನವರು 3  ವರ್ಷಕೊಮ್ಮೆ, ಮೇಲ್ಪಟ್ಟವರು ವರ್ಷಕ್ಕೊಮ್ಮೆ ಹೆಲ್ತ್ ಚೆಕಪ್ ಮಾಡಿಸೋದು ಅನಿವಾರ್ಯ.

ಅಷ್ಟಕ್ಕೂ ಈ ಸ್ಟ್ರೋಕ್ ಆಗೋದು ಹೇಗೆ?
ಕೊಲೆಸ್ಟ್ರಾಲ್ ಸೇರಿದಂತೆ ಹಲವು ಕಾರಣ ಸಡನ್ನಾಗಿ ರಕ್ತನಾಳಗಳಲ್ಲಿ ಬ್ಲಾಕ್ ಆಗುತ್ತೆ ಅಥವಾ ರಕ್ತನಾಳ ಒಡೆದುಹೋಗುತ್ತೆ. ಹೀಗಾದಾಗ ಬ್ರೈನ್‌ನ ಯಾವ ಭಾಗಕ್ಕೆ ರಕ್ತಚಲನೆ ನಿಂತುಹೋಗುತ್ತೋ ಆ ಭಾಗ ತನ್ನ ಕೆಲಸ ನಿಲ್ಲಿಸಿಬಿಡುತ್ತೆ. ಹೀಗಾದಾಗ ಮಾತು ನಿಂತೋಗೋದು, ಬಾಯಿ ಒಂದು ಬದಿ ವಾಲಿದಂತಾಗಿ ಮಾತು ತೊದಲೋದು, ಕಣ್ಣು ಕಾಣಿಸದೇ ಇರೋದು, ಕೈಕಾಲು, ದೇಹದ ಒಂದು ಭಾಗದ ಚಲನೆ ನಿಂತು ಹೋಗೋದು ಇತ್ಯಾದಿಗಳಾಗುತ್ತೆ.

ಇದಕ್ಕೆ ಚಿಕಿತ್ಸೆ ಹೇಗೆ?
ಸ್ಟ್ರೋಕ್ ಆದ 3ರಿಂದ 4 ಗಂಟೆ ಒಳಗೆ ನರರೋಗ ತಜ್ಞರಲ್ಲಿ ಕರೆದೊಯ್ಯಬೇಕು. ಹೆಪ್ಪುಗಟ್ಟಿದ ರಕ್ತವನ್ನು ಸರಾಗಗೊಳಿಸುವ ಔಷಧಿಯಿಂದ ಸಮಸ್ಯೆ ನಿವಾರಣೆಯಾಗುತ್ತೆ. 8 ಗಂಟೆಯ ಒಳಗೆ ವೈದ್ಯರಲ್ಲಿ ಹೋದರೆ ವಯರ್ ಹಾಕಿ ಬ್ಲಾಕ್ ಓಪನ್ ಮಾಡೋದು, ಸರ್ಜರಿ ಮೂಲಕ ಗುಣಪಡಿಸಲು ನೋಡುತ್ತಾರೆ. ಆದರೆ 8 ಗಂಟೆಯ ಬಳಿಕ ಏನೂ ಮಾಡಲಾಗದು. ಫಿಸಿಯೋಥೆರಪಿಗಷ್ಟೇ ಶಿಫಾರಸು ಮಾಡ್ತೀವಿ. 
 

Comments 0
Add Comment

  Related Posts

  Summer Tips

  video | Friday, April 13th, 2018

  Benifit Of Hibiscus

  video | Thursday, April 12th, 2018

  Health Benifit Of Hibiscus

  video | Thursday, April 12th, 2018

  Skin Care In Summer

  video | Saturday, April 7th, 2018

  Summer Tips

  video | Friday, April 13th, 2018
  Suvarna Web Desk