ಥೈರಾಯ್ಡ್ (Thyroid) ಸಮಸ್ಯೆ ಕಂಡುಬಂದ್ರೆ ಉಂಟಾಗುವ ತೊಂದರೆಗಳು ಒಂದೆರಡಲ್ಲ. ಈ ಸಂದರ್ಭದಲ್ಲಿ ಏನನ್ನು ತಿನ್ಬೇಕು, ಏನನ್ನು ತಿನ್ಬಾರ್ದು ಅನ್ನೋ ಬಗ್ಗೆ ಹಲವರು ಗೊಂದಲಕ್ಕೊಳಗಾಗುತ್ತಾರೆ. ಹಾಗಿದ್ರೆ ಥೈರಾಯ್ಡ್ ಆರೋಗ್ಯ (Health)ಕ್ಕಾಗಿ ಸೇವಿಸಬೇಕಾದ ಸೂಪರ್‌ಫುಡ್ (Superfood)ಗಳು ಯಾವುವು ?
ಥೈರಾಯ್ಡ್ (Thyroid) ಎಂಬುದು ಕುತ್ತಿಗೆಯಲ್ಲಿರುವ ಚಿಟ್ಟೆಯ ಆಕಾರದ ಗ್ರಂಥಿಯಾಗಿದೆ. ಇದು ನಮ್ಮ ದೇಹದ ಚಯಾಪಚಯ ಕ್ರಿಯೆಗಳಿಗೆ ಪ್ರಮುಖವಾಗಿದೆ. ದೇಹದ ಸಮರ್ಪಕ ಕಾರ್ಯ ನಿರ್ವಹಣೆಯಲ್ಲಿ ಥೈರಾಯ್ಡ್ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಉಸಿರಾಟ, ಹೃದಯಬಡಿತ, ಜೀರ್ಣ ಪ್ರಕ್ರಿಯೆ ಮೊದಲಾದ ಚಟುವಟಿಕೆಗಳು ಸರಿಯಾಗಿ ಆಗುವಂತೆ ನೋಡಿಕೊಳ್ಳುತ್ತದೆ. ಥೈರಾಯ್ಡ್ ಕಾರ್ಯ ನಿರ್ವಹಣೆ ಸರಿಯಾಗಿ ಆಗದಿದ್ದಲ್ಲಿ ಅಜೀರ್ಣ ಸಮಸ್ಯೆ, ಮಲಬದ್ಧತೆ, ಕೂದಲು ಉದುರುವುದು, ಸಣ್ಣಗಾಗುವುದು, ತೂಕ ಹೆಚ್ಚಳವಾಗುವುದು ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಥೈರಾಯ್ಡ್ ಆರೋಗ್ಯ (Health)ದ ಬಗ್ಗೆ ಹೆಚ್ಚು ಗಮನಹರಿಸಬೇಕಾದುದು ಅಗತ್ಯವಾಗಿದೆ.
ಅನೇಕ ಪುರುಷರು ಮತ್ತು ಮಹಿಳೆಯರು ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮುಖ್ಯವಾಗಿ ಒತ್ತಡದ ಜೀವನಶೈಲಿ (Lifestyle), ಆಹಾರದಲ್ಲಿ ಪೋಷಕಾಂಶಗಳ ಕೊರತೆ ಇದಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಥೈರಾಯ್ಡ್ ನಿಂದ ದೂರವಿರಲು ಉತ್ತಮ ಆರೋಗ್ಯವನ್ನು ಖಾತರಿಪಡಿಸಲು ನಿಮ್ಮ ನಿಯಮಿತ ಆಹಾರದಲ್ಲಿ ಥೈರಾಯ್ಡ್ ಕಾರ್ಯವನ್ನು ಹೆಚ್ಚಿಸಲು ಸಾಬೀತಾಗಿರುವ ಹಲವಾರು ಸೂಪರ್‌ಫುಡ್ (Superfood)ಗಳನ್ನು ಸೇರಿಸಬೇಕಾಗಿದೆ. ಅವು ಯಾವುವು ?
Thyroid in Men: ಧೂಮಪಾನ ಮಾಡಿದರೆ ಕಾಡುತ್ತೆ ರೋಗ, ಜೋಪಾನ!
ಥೈರಾಯ್ಡ್ ಸಮಸ್ಯೆಯನ್ನು ಕಡಿಮೆ ಮಾಡಲೆಂದೇ ಅನುಸರಿಲು ನಿರ್ಧಿಷ್ಟವಾಗಿ ಯಾವುದೇ ಆಹಾರಕ್ರಮವಿಲ್ಲ. ಹೀಗಿದ್ದರೂ ಉತ್ತಮ ಫೈಬರ್, ಸತು, ಸೆಲೆನಿಯಮ್, ವಿಟಮಿನ್ ಡಿ ಇರುವ ಆಹಾರಗಳ ಸೇವನೆ ಉತ್ತಮವಾಗಿದೆ. ಥೈರಾಯ್ಡ್ ಸಮಸ್ಯೆಗೆ ಸಂಬಂಧಿಸಿದ ಹಲವು ರೋಗಲಕ್ಷಣಗಳಿಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ನೆಲ್ಲಿಕಾಯಿ
ನೆಲ್ಲಿಕಾಯಿ ಅಥವಾ ಆಮ್ಲ ಎಂದು ಕರೆಯಲ್ಪಡುವ ಹಣ್ಣು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಮ್ಲ ಕಿತ್ತಳೆ ಹಣ್ಣಿನ ಎಂಟು ಪಟ್ಟು ವಿಟಮಿನ್ ಸಿ ಮತ್ತು ದಾಳಿಂಬೆಯ 17 ಪಟ್ಟು ವಿಟಮಿನ್ ಸಿ ನೀಡುತ್ತದೆ. ಮಾತ್ರವಲ್ಲ ಇದು ಕೂದಲ ಆರೋಗ್ಯಕ್ಕೆ ಅತ್ಯುತ್ತಮ ಟಾನಿಕ್. ಇದು ಕೂದಲು ಬೆಳವಣಿಗೆಯನ್ನು ಸುಧಾರಿಸುತ್ತದೆ. ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ. ತಲೆಹೊಟ್ಟು ಇಲ್ಲವಾಗಿಸುತ್ತದೆ. ಕೂದಲ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ನೆತ್ತಿಯ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದರಿಂದ ಸೊಂಪಾದ ಕೂದಲು ಬೆಳೆಯಲು ಸಾಧ್ಯವಾಗುತ್ತದೆ.
ತೆಂಗಿನಕಾಯಿ
ತೆಂಗಿನಕಾಯಿ (Coconut) ಥೈರಾಯ್ಡ್ ಪೀಡಿತರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಹಸಿ ಅಥವಾ ಬೇಯಿಸಿದ ತೆಂಗಿನಕಾಯಿ ಯಾವುದಾದರೂ ಸರಿ ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಇದು ನಿಧಾನಗತಿಯ ಚಯಾಪಚಯ ಹೊಂದಿರುವ ಜನರಲ್ಲಿ ಚಯಾಪಚಯವನ್ನು ಹೆಚ್ಚಿಸುತ್ತದೆ. ತೆಂಗಿನಕಾಯಿಯಲ್ಲಿ ಮಧ್ಯಮ ಸರಪಳಿ ಕೊಬ್ಬಿನಾಮ್ಲಗಳಿದ್ದು, ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತವೆ.
Aerobics ಗರ್ಭಿಣಿಯರ ಹೈಪೋಥೈರಾಯ್ಜಿಸಮ್‌ಗೆ ಆಗುತ್ತೆ ಮದ್ದು
ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜ ( Pumpkin seed)ಗಳಲ್ಲಿ ಸತುವು ಅಧಿಕವಾಗಿದೆ, ಇದು ದೇಹದ ಇತರ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಮತ್ತು ಥೈರಾಯ್ಡ್ ಹಾರ್ಮೋನುಗಳ ಸಮತೋಲನಕ್ಕೆ ಅಗತ್ಯವಾಗಿರುತ್ತದೆ.
ಹೆಸರುಕಾಳುಗಳು
ಪ್ರೋಟೀನ್, ಉತ್ಕರ್ಷಣ ನಿರೋಧಕಗಳು, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಜೀವಸತ್ವಗಳು ಮತ್ತು ಖನಿಜಗಳು ಹೆಸರುಕಾಳಿನಲ್ಲಿ ಹೇರಳವಾಗಿವೆ. ಅವುಗಳು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ, ಇದು ಮಲಬದ್ಧತೆ ಇದ್ದಲ್ಲಿ ಸಹಾಯ ಮಾಡುತ್ತದೆ. ಮಲಬದ್ಧತೆ ಥೈರಾಯ್ಡ್ ಅಸಮತೋಲನದ ಸಾಮಾನ್ಯ ಅಡ್ಡ ಪರಿಣಾಮವಾಗಿದೆ. ಹೆಸರುಕಾಳು ಹೆಚ್ಚಿನ ಅಯೋಡಿನ್ ಅನ್ನು ಹೊಂದಿರುತ್ತದೆ ಹೀಗಾಗಿ ಇದು ಥೈರಾಯ್ಡ್ ಸ್ನೇಹಿ ಆಹಾರಕ್ಕೆ ಅತ್ಯುತ್ತಮವಾದ ಸೇರ್ಪಡೆಯಾಗಿದೆ. ಇದು ನಿಧಾನವಾದ ಚಯಾಪಚಯ ದರದ ಪರಿಣಾಮಗಳನ್ನು ತಗ್ಗಿಸುವ ಗುರಿಯನ್ನು ಹೊಂದಿದೆ. ಇವಿಷ್ಟು ಮಾತ್ರವಲ್ಲದೆ, ಹುರುಳಿ ಕಾಳು, ಕೇಸರಿ, ಬಾಳೆಹಣ್ಣು (Banana) ಮೊದಲಾದವುಗಳನ್ನು ಆಹಾರದಲ್ಲಿ ಸೇವಿಸುದುವು ಸಹ ಥೈರಾಯ್ಡ್ನ ಉತ್ತಮ ಕಾರ್ಯನಿರ್ವಹಣೆಗೆ ಒಳ್ಳೆಯದು.
ಥೈರಾಯ್ಡ್ ಇರುವವರು ಈ ಆಹಾರವನ್ನು ಸೇವಿಸಬೇಡಿ
ಥೈರಾಯ್ಡ್ ಇರುವವರು ಕೆಲವೊಂದು ಆಹಾರವನ್ನು ಸೇವಿಸದೇ ಇರುವುದು ಒಳ್ಳೆಯದು. ಸಂಸ್ಕರಿಸಿದ ಆಹಾರ, ಜಂಕ್ಫುಡ್, ಕೊಬ್ಬಿನಾಂಶವುಳ್ಳ ಆಹಾರ, ಮಸಾಲೆಯುಕ್ತ ಆಹಾರದ ಸೇವನೆ ಒಳ್ಳೆಯದಲ್ಲ. ಎಲೆಕೋಸು, ಹೂಕೋಸುಗಳನ್ನು ಸಹ ನಿಯಮಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
