Health Tips: ಮನುಷ್ಯನ ಅತ್ಯಂತ ಅಪಾಯಕಾರಿ ಆವಿಷ್ಕಾರ ಯಾವುದು ಗೊತ್ತಾ?
ಮನುಷ್ಯ ತನ್ನ ಅನುಕೂಲಕ್ಕಾಗಿ ಸಾಕಷ್ಟು ವಸ್ತುಗಳನ್ನು ತಯಾರಿಸಿಕೊಂಡಿದ್ದಾನೆ. ಆದ್ರೆ ಇದ್ರಲ್ಲಿ ಅನೇಕ ವಸ್ತುಗಳು ನಿಸರ್ಗಕ್ಕೆ ವಿರುದ್ಧವಾಗಿವೆ. ಹಾಗಾಗಿ ಅವು ನಮ್ಮ ಆರೋಗ್ಯದ ಮೇಲೂ ದೊಡ್ಡ ಪರಿಣಾಮ ಬೀರ್ತಿದೆ.
ಜಗತ್ತಿನ ಅತ್ಯಂತ ಅಪಾಯಕಾರಿ ಆವಿಷ್ಕಾರ ಯಾವುದು ಅಂತಾ ನಮ್ಮನ್ನು ಕೇಳಿದ್ರೆ ನಾವು ಪರಮಾಣು ಶಸ್ತ್ರಾಸ್ತ್ರ ಎನ್ನುತ್ತೇವೆ. ಇಲ್ಲವೇ ಆರೋಗ್ಯ ಹಾಳು ಮಾಡುವ ಸಿಗರೇಟು ಎನ್ನಬಹುದು. ಇಲ್ಲವೆ ಪರಿಸರವನ್ನು ಹಾಳು ಮಾಡಿರುವ ಪ್ಲಾಸ್ಟಿಕ್ ಎನ್ನಬಹುದು. ಆದ್ರೆ ಮಾನವ ಮಾಡಿರುವ ಅತ್ಯಂತ ಅಪಾಯಕಾರಿ ಆವಿಷ್ಕಾರವೆಂದ್ರೆ ಅದು ಶೂ ಎನ್ನುತ್ತದೆ ಕೆಲ ಅಧ್ಯಯನ. ಈಗಿನ ದಿನಗಳಲ್ಲಿ ಶಾಲೆ ಮಕ್ಕಳಿಂದ ಹಿಡಿದು ಮನೆಯಲ್ಲಿರುವ ವೃದ್ಧರವರೆಗೆ ಎಲ್ಲರೂ ಶೂ (shoe) ಧರಿಸುತ್ತಾರೆ. ಮನೆಯಿಂದ ಹೊರ ಬೀಳಿಬೇಕಿದ್ರೆ ಕಾಲಿಕೆ ಶೂ ಬೇಕು. ಆದ್ರೆ ಈ ಶೂ ಬಹಳ ಅಪಾಯಕಾರಿ ಎಂಬುದು ಗೊತ್ತಾಗಿದೆ. ಸದಾ ಬೂಟನ್ನು ಧರಿಸುವ ನಾವು, ನಮ್ಮನ್ನು ಭೂಮಿಯಿಂದ ಪ್ರತ್ಯೇಕಿಸುತ್ತೇವೆ. ಭೂಮಿ (Earth) ಯನ್ನು ನಾವು ಬರಿಕಾಲಿನಲ್ಲಿ ಸ್ಪರ್ಶಿಸೋದಿಲ್ಲ. ಇದ್ರಿಂದಾಗಿ ಅನಾರೋಗ್ಯ (Illness) ನಮ್ಮನ್ನು ಕಾಡುತ್ತದೆ. ಸದಾ ಬೂಟನ್ನು ಧರಿಸೋದ್ರಿಂದ ಉರಿಯೂತಕ್ಕೆ ಸಂಬಂಧಿಸಿದ ಆರೋಗ್ಯ ಅಸ್ವಸ್ಥತೆ ಉಂಟಾಗುತ್ತದೆ. ನ್ಯೂಟ್ರೋಫಿಲ್‌ಗಳಿಂದ ಉಂಟಾಗುವ ಉರಿಯೂತ ಇದಾಗಿದೆ. ನ್ಯೂಟ್ರೋಫಿಲ್ ಬಿಳಿ ರಕ್ತ ಕಣವಾಗಿದೆ. ನಿಮಗೆ ಗಾಯವಾಗಿದೆ ಎಂದಾಗ ಬಿಳಿ ರಕ್ತ ಕಣಗಳು ಮೇಲೆ ಬರುತ್ತವೆ. ಹಾನಿಗೊಳಗಾದ ಕೋಶವನ್ನು ಆವರಿಸುತ್ತವೆ. ಪ್ರತಿಕ್ರಿಯಾತ್ಮಕ ಆಮ್ಲಜನಕ ಬಿಡುಗಡೆ ಮಾಡುವುದಲ್ಲದೆ ಹಾನಿಗೊಳಗಾದ ಕೋಶದಿಂದ ಎಲೆಕ್ಟ್ರಾನ್ಗಳನ್ನುಉತ್ಪತ್ತಿ ಮಾಡಿ ಹಾನಿ ಕೋಶವನ್ನು ನಾಶಪಡಿಸುತ್ತದೆ. ನಮ್ಮ ದೇಹ ಭೂಮಿಗೆ ಸ್ಪರ್ಶ ಮಾಡಿದಾಗ ಎಲೆಕ್ಟ್ರಾನ್ ಗಳನ್ನು ಪಡೆಯುತ್ತದೆ.
ಅದೇ ನಮ್ಮ ದೇಹ ಭೂಮಿಗೆ ಸ್ಪರ್ಶ ಮಾಡದೆ ಹೋದಾಗ ನಮ್ಮ ದೇಹದ ಬೇರೆ ಅಂಗದಲ್ಲಿರುವ ಎಲೆಕ್ಟ್ರಾನ್ ಗಳನ್ನೇ ಅದು ಪಡೆದು ಗಾಯವನ್ನು ಗುಣಪಡಿಸುವ ಪ್ರಯತ್ನ ನಡೆಸುತ್ತದೆ. ಈ ಸಂದೇಶ ಪ್ರತಿರಕ್ಷಣಾ ವ್ಯವಸ್ಥೆಯನ್ನು ತಲುಪುತ್ತದೆ. ಇದೊಂದು ಚೈನ್ ಪ್ರತಿಕ್ರಿಯೆಯಾಗಿದ್ದು, ಇದು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗುತ್ತದೆ. ಇದ್ರಿಂದ ನಾನಾ ಸಮಸ್ಯೆ ಶುರುವಾಗುತ್ತದೆ.
ಬಾಡಿ ಬಿಲ್ಡ್ ಮಾಡ್ಕೊಳ್ಳೋಕೆ ನೆರವಾಗೋ ವೆಜ್ ಆಹಾರಗಳಿವು
ಭೂಮಿಯಿಂದ ಪ್ರಯೋಜನಕಾರಿ ಎಲೆಕ್ಟ್ರಾನ್‌ಗಳು ನಿಮ್ಮ ದೇಹದ ಮೂಲಕ ಹರಿಯುತ್ತದೆ ಮತ್ತು ಗಾಯಗಳನ್ನು ಗುಣಪಡಿಸುವಿಕೆ ಅಂಶವನ್ನು ಉತ್ಪಾದಿಸುತ್ತದೆ. ಭೂಮಿಯನ್ನು ನಾವು ಸ್ಪರ್ಶ ಮಾಡಿದಾಗ ಎಲೆಕ್ಟ್ರಾನ್‌ಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಭೂಮಿ ಉಚಿತ ಎಲೆಕ್ಟ್ರಾನ್‌ಗಳ ಅತ್ಯುತ್ತಮ ಮೂಲವಾಗಿದೆ. ಪ್ರಾಚೀನ ಜನರು ಬೂಟುಗಳನ್ನು ಧರಿಸುತ್ತಿರಲಿಲ್ಲ. ಬರಿಗಾಲಿನಲ್ಲಿ ಅವರು ನಡೆಯುತ್ತಿದ್ದರಲ್ಲದೆ, ನೆಲದ ಮೇಲೆ ಮಲಗುತ್ತಿದ್ದರು. ಹಾಗಾಗಿ ಅವರು ಇಂದಿನಷ್ಟು ಕಾಯಿಲೆಗಳಿಂದ ಬಳಲುತ್ತಿರಲಿಲ್ಲ.
ಪ್ರತಿಯೊಂದು ವಸ್ತುವಿನಲ್ಲೀ ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್ ಅಂಶವಿರುತ್ತದೆ. ಬೂಟುಗಳನ್ನು ಧರಿಸಿದ್ರೆ ವಿದ್ಯುತ್ ಶಾಕ್ ಹೊಡೆಯೋದಿಲ್ಲ ಎನ್ನುವ ಭಾವನೆ ಇದೆ. ಆದ್ರೆ ವಿದ್ಯುತ್ ಶಾಕ್ ಹೊಡೆಯದಂತೆ ಕಾಳಜಿವಹಿಸಿ ತಯಾರಿಸಲಾದ ಬೂಟ್ ಧರಿಸಿಯೂ ಶಾಕ್ ಗೆ ಒಳಗಾಗಿ ಸಾವನ್ನಪ್ಪಿದವರಿದ್ದಾರೆ.
ಇಡೀ ದಿನ ಬೂಟ್ ಧರಿಸುವ ಬದಲು ನೀವು ಬರಿಗಾಲಿನಲ್ಲಿ ನಡೆಯೋದ್ರಿಂದ ಸಾಕಷ್ಟು ಪ್ರಯೋಜನವಿದೆ. ನಿಮ್ಮ ದೇಹ ಭೂಮಿಯ ಸ್ಪರ್ಶಕ್ಕೆ ಬಂದ್ರೆ ನಿಮ್ಮ ಮನಸ್ಥಿತಿ ಸುಧಾರಿಸುತ್ತದೆ. ನಿದ್ರೆಯ ಗುಣಮಟ್ಟ ಉತ್ತಮಗೊಳ್ಳುತ್ತದೆ. ಪ್ರತಿರಕ್ಷಣಾ ಕಾರ್ಯ ಸುಧಾರಿಸುತ್ತದೆ. ಒತ್ತಡ ಕಡಿಮೆ ಆಗುತ್ತದೆ. ಇತರ ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ.
Personality Tips: ಸ್ಟ್ರಾಂಗ್ ಲೇಡೀಸ್ ಇಂತಹ ವಿಚಾರಗಳಿಗೆ ಎಂದಿಗೂ ರಾಜಿ ಮಾಡ್ಕೊಳೋದಿಲ್ಲ
ಸೂರ್ಯನು ನಮಗೆ ಉಷ್ಣತೆ ಮತ್ತು ವಿಟಮಿನ್ ಡಿ ನೀಡುವಂತೆ, ಭೂಮಿಯು ನಮಗೆ ಆಹಾರ ಮತ್ತು ನೀರನ್ನು ನೀಡುತ್ತದೆ. ನಡೆಯಲು, ಕುಳಿತುಕೊಳ್ಳಲು, ನಿಲ್ಲಲು, ಆಟವಾಡಲು ತನ್ನ ಮೇಲ್ಮೈಯನ್ನು ನೀಡುತ್ತದೆ. ಇದು ಶಾಶ್ವತ, ನೈಸರ್ಗಿಕ ಮತ್ತು ಶಾಂತ ಶಕ್ತಿಯಾಗಿದೆ. ಅದನ್ನು ನಾವು ಬಳಕೆ ಮಾಡಿಕೊಳ್ಳಬೇಕಿದೆ. ರತ್ನಗಂಬಳಿ ಹಾಸಿದ ನೆಲದ ಮೇಲೆ ನೀವು ಕುಳಿತುಕೊಂಡಾಗ ಇಲ್ಲವೇ ಬೂಟ್ ಧರಿಸಿ ನಡೆದಾಡಿದಾಗ ಹಲವಾರು ಶತಕೋಟಿ ಎಲೆಕ್ಟ್ರಾನ್‌ಗಳನ್ನು ಕಳೆದುಕೊಳ್ಳುತ್ತೀರಿ. ಅದೇ ಬರಿಗಾಲಿನಲ್ಲಿ ನಡೆದಾಗ ನೀವು ಸಾಕಷ್ಟು ಎಲೆಕ್ಟ್ರಾನ್ ಗಳನ್ನು ಪಡೆಯುತ್ತೀರಿ.