Health
ಬಾಡಿ ಬಿಲ್ಡ್ ಮಾಡೋಕೆ ಹುಡುಗರು ನಾನಾ ರೀತಿಯ ಕಸರತ್ತು ಮಾಡ್ತಾನೆ ಇರ್ತಾರೆ. ಡಯೆಟ್, ವರ್ಕೌಟ್ ಅಂತೆಲ್ಲಾ ಕಷ್ಟಪಡ್ತಾರೆ. ಆದ್ರೆ ಈ ವೆಜ್ ಆಹಾರಗಳು ಬಿಲ್ಡಿಂಗ್‌ಗೆ ನೆರವಾಗುತ್ತೆ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಪನೀರ್ ಹೈ ಪ್ರೊಟೀನ್ ಡೈರಿ ಪ್ರಾಡಕ್ಟ್ ಆಗಿದೆ. ಭಾರತೀಯ ಅಡುಗೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಇದನ್ನು ಸಾಂಬಾರು, ಗ್ರಿಲ್, ಕಬಾಬ್ ಮಾಡಿ ತಿನ್ನಬಹುದು.
ಯೋಗರ್ಟ್ ಪ್ರೊಟೀನ್ ಪ್ಯಾಕ್‌ಡ್ ತಿನಿಸಾಗಿದೆ. ಹೀಗಾಗಿ ಇದನ್ನು ಸ್ಮೂತೀಸ್ ರೂಪದಲ್ಲಿ ಕುಡಿಯಬಹುದು. ಅಥವಾ ಯಾವುದೇ ಆಹಾರಕ್ಕೆ ಟಾಪಿಂಗ್ ಆಗಿ ಬಳಸಬಹುದು.
ಸೋಯಾ ಪ್ರಾಡಕ್ಟ್ ಬಾಡಿ ಬಿಲ್ಡಿಂಗ್ ಮಾಡುವವರಿಗೆ ಅತ್ಯುತ್ತಮವಾದ ಆಹಾರವಾಗಿದೆ. ಸೋಯಾ ಪಲ್ಯ, ಸೋಯಾ ಚಂಕ್ಸ್ ಮೊದಲಾದ ರೀತಿಯಲ್ಲಿ ತಯಾರಿಸಿ ಇದನ್ನು ತಿನ್ನಬಹುದು.
ಬ್ರೌನ್ ರೈಸ್‌ನಲ್ಲಿ ಹೇರಳವಾದ ಕಾರ್ಬೋಹೈಡ್ರೇಟ್ಸ್ ಇದೆ. ಇದು ವರ್ಕ್‌ಔಟ್ ಸಮಯದಲ್ಲಿ ಎನರ್ಜಿಟಿಕ್ ಆಗಿರಲು, ಮಸಲ್ಸ್ ಬೆಳೆಸಿಕೊಳ್ಳಲು ನೆರವಾಗುತ್ತದೆ.
ಸೊಪ್ಪು ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಪಾಲಕ್ ಸೊಪ್ಪು ಬಾಡಿ ಬಿಲ್ಡ್ ಮಾಡುವವರಿಗೆ ಹೇಳಿ ಮಾಡಿಸಿದಂತದ್ದು. ಇದು ಒಟ್ಟಾರೆ ಆರೋಗ್ಯಕ್ಕೆ ಬೇಕಾದ ಪೋಷಕಾಂಶವನ್ನು ಒದಗಿಸುತ್ತದೆ.