Asianet Suvarna News Asianet Suvarna News

ದಿನವೂ ಮೊಳಕೆ ಬರಿಸಿದ ಹೆಸರುಕಾಳು ತಿಂದರೆ ರಕ್ತಹೀನತೆ, ಕ್ಯಾನ್ಸರ್ ಸೇರಿ ಈ ಹತ್ತು ಕಾಯಿಲೆಗಳು ಹತ್ತಿರ ಸುಳಿಯಲ್ಲ

ಮೊಳಕೆ ಬರಿಸಿದ ಹೆಸರು ಕಾಳಿನ ಉಪಯೋಗಗಳು ಒಂದೆರಡಲ್ಲ, ಹಲವು ಪೋಷಕಾಂಶಗಳನ್ನು ಹೇರಳವಾಗಿ ಹೊಂದಿರುವ ಈ ಕಾಳುಗಳಿಗೆ ಹಲವು ರೋಗಗಳನ್ನು ಬರದಂತೆ ತಡೆಯುವ ಸಾಮರ್ಥ್ಯವಿದೆ ಎಂಬ ವಿಚಾರ ನಿಮಗೆ ಗೊತ್ತಾ? 

Sprouted Moong: The Superfood That Prevent Heart Disease, Diabetes & Cancer
Author
First Published Sep 25, 2024, 6:04 PM IST | Last Updated Sep 25, 2024, 6:04 PM IST

ಮೊಳಕೆ ಬರಿಸಿದ ಹೆಸರು ಕಾಳಿನ ಉಪಯೋಗಗಳು ಒಂದೆರಡಲ್ಲ, ಹಲವು ಪೋಷಕಾಂಶಗಳನ್ನು ಹೇರಳವಾಗಿ ಹೊಂದಿರುವ ಈ ಕಾಳುಗಳಿಗೆ ಹಲವು ರೋಗಗಳನ್ನು ಬರದಂತೆ ತಡೆಯುವ ಸಾಮರ್ಥ್ಯವಿದೆ ಎಂಬ ವಿಚಾರ ನಿಮಗೆ ಗೊತ್ತಾ? ಮೊಳಕೆ ಬರಿಸಿದ ಮೂಂಗ್ ದಾಲ್ ಅಥವಾ ಹೆಸರು ಕಾಳು ಪೋಷಕಾಂಶಗಳಾದ ಪ್ರೊಟಿನ್, ಫೈಬರ್, ಮ್ಯಾಗ್ನೇಷಿಯಂ, ಫಾಸ್ಪರಸ್‌, ಪೊಟ್ಯಾಷಿಯಂ, ಝಿಂಕ್, ಕಬ್ಬಿಣ, ತಾಮ್ರ, ವಿಟಾಮಿನ್ ಎ, ಬಿ, ಸಿ,ಇ ಅಂಶಗಳನ್ನು ಹೇರಳವಾಗಿ ಹೊಂದಿದೆ. 

ಆರೋಗ್ಯದ ಬಗ್ಗೆ ಕಾಳಜಿ ಇರುವ ಬಹುತೇಕರು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತಿನ್ನುವ ಅಭ್ಯಾಸವನ್ನು  ಇತ್ತೀಚೆಗೆ ಹೆಚ್ಚಾಗಿ ರೂಢಿಸಿಕೊಂಡಿದ್ದಾರೆ. ಈ ಮೊಳಕೆ ಕಾಳಿನಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಹಲವು ರೋಗಗಳನ್ನು ಬರದಂತೆ ತಡೆಯುತ್ತವೆ. ಇಲ್ಲಿ ಮೊಳಕೆ ಕಾಳು ತಿನ್ನುವುದರಿಂದ ನಿಮ್ಮ ಹತ್ತಿರವೂ ಸುಳಿಯದ 10 ರೋಗಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಚರ್ಮದ ಸಮಸ್ಯೆ: ಈ ಮೊಳಕೆ ಬರಿಸಿದ ಹೆಸರು ಕಾಳಿನಲ್ಲಿರುವ ಆಂಟಿಯೊಕ್ಸಿಂಡೆಂಟ್‌ಗಳು ಹಾಗೂ ವಿಟಾಮಿನ್‌ಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ. ಇದರಿಂದ ಚರ್ಮದ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ,

ಮೂಳೆಯ ಆರೋಗ್ಯ: ಈ ಮೊಳಕೆ ಕಾಳಿನಲ್ಲಿರುವ ಕ್ಯಾಲ್ಸಿಯಂ ಹಾಗೂ ಮ್ಯಾಗ್ನೇಷಿಯಂ ಅಂಶಗಳು ನಿಮ್ಮ ಮೂಳೆಯನ್ನು ಬಲಗೊಳಿಸುತ್ತವೆ. 
ಕ್ಯಾನ್ಸರ್‌: ಮೊಳಕೆಯೊಡೆದ ಹೆಸರು ಕಾಳಿನಲ್ಲಿರುವ ಫೈಟೊಕೆಮಿಕಲ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ರಕ್ತಹೀನತೆ ಅಥವಾ ಅನೀಮಿಯಾ: ಹೆಸರು ಕಾಳಿನ ಮೊಳಕೆ ಕಾಳುಗಳು ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲವನ್ನು ಹೇರಳವಾಗಿ ಹೊಂದಿದೆ. ಇದು ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿ: ಈ ಮೊಳಕೆಕಾಳುಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಅಥವಾ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ:

ಒತ್ತಡ ಮತ್ತು ಆತಂಕ: ಹಾಗೆಯೇ ಈ ಕಾಳುಗಳು ಇದು ನರಮಂಡಲವನ್ನು ಶಮನಗೊಳಿಸುವ ಪೋಷಕಾಂಶಗಳನ್ನು ಹೊಂದಿದ್ದು, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹೃದ್ರೋಗ: ಹೆಚ್ಚಿನ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ, ಮೊಳಕೆಯೊಡೆದ ಹೆಸರು ಕಾಳುಗಳು  ಹೃದಯದ ಆರೋಗ್ಯವನ್ನು ಚೆನ್ನಾಗಿರಿಸುತ್ತದೆ. ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಮಧುಮೇಹ: ಕಾಳಿನಲ್ಲಿರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಜೀರ್ಣಕಾರಿ ಸಮಸ್ಯೆಗಳು: ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ, ಜೀರ್ಣಾಂಗವನ್ನು ಸ್ವಚ್ಛವಾಗಿರಿಸುತ್ತದೆ.

ತೂಕ ನಿರ್ವಹಣೆ: ಈ ಕಾಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ಪ್ರೊಟೀನ್‌ಗಳನ್ನು ಹೊಂದಿದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ, ಇದನ್ನು ನಿಮ್ಮ ಆಹಾರದಲ್ಲಿ ದಿನವೂ ಬಳಕೆ ಮಾಡಿ.

Latest Videos
Follow Us:
Download App:
  • android
  • ios