ಕಳೆದ ವರ್ಷ ಅನೇಕರ ಜೀವನದಲ್ಲಿ ಸಮಸ್ಯೆಗಳು ಬಂದು ಹೋಗಿವೆ. ಅನಾರೋಗ್ಯ ಕೆಲವರನ್ನು ಕಾಡಿದೆ. ಇದ್ರಲ್ಲಿ ನಟಿ ಸೋನಂ ಕಪೂರ್ ಪತಿ ಸೇರಿದ್ದಾರೆ. ಮೂರು ತಿಂಗಳು ಸಾಕಷ್ಟು ಕಷ್ಟಪಟ್ಟ ಈ ಜೋಡಿ ಈಗ ಸತ್ಯ ಬಾಯ್ಬಿಟ್ಟಿದೆ.  

2023 ಕಳೆದು 2024 ಶುರುವಾಗಿದೆ. ಹೊಸ ವರ್ಷದ ಆರಂಭದಲ್ಲಿ ಜನರು ಹಿಂದಿನ ವರ್ಷ ಹೇಗಿತ್ತು ಎಂಬುದನ್ನು ಮೆಲುಕು ಹಾಕಿದ್ದಾರೆ. ಅನೇಕ ಸೆಲೆಬ್ರಿಟಿಗಳು ಕಳೆದು ಹೋದ 2023ರನ್ನು ನೆನೆದು, ಅನೇಕ ಖುಷಿಯ ಹಾಗೂ ಬೇಸರದ ಸಂಗತಿಯನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ. ಇದ್ರಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ಹಿಂದೆ ಬಿದ್ದಿಲ್ಲ. 

Add Asianetnews Kannada as a Preferred SourcegooglePreferred

ಸೆಲೆಬ್ರಿಟಿ (Celebrity) ಗಳ ಜೀವನ ಸಾಮಾನ್ಯರಂತಲ್ಲ. ಅವರ ಬಳಿ ಹಣ ಇರುತ್ತೆ. ಯಾವುದೇ ಸಮಸ್ಯೆ ಬಂದ್ರೂ ಅದ್ರಿಂದ ಪರಿಹಾರ ಕಂಡುಕೊಳ್ಳಬಹುದು ಎಂಬ ನಂಬಿಕೆ ಅನೇಕರಿಗಿದೆ. ಆದ್ರೆ ಅನಾರೋಗ್ಯ (illness) , ಸಂಬಂಧದಲ್ಲಿ ಉಂಟಾಗುವ ಸಮಸ್ಯೆಗಳನ್ನು ಕೇವಲ ಹಣದಿಂದ ಬಗೆಹರಿಸಲು ಸಾಧ್ಯವಿಲ್ಲ. ಹಣದ ಜೊತೆ ಕುಟುಂಬದ ಪ್ರೀತಿ, ಬೆಂಬಲ ಇದ್ದಲ್ಲಿ ಮಾತ್ರ ದೊಡ್ಡ ಸಮಸ್ಯೆಯನ್ನೂ ಸುಲಭವಾಗಿ ಬಗೆಹರಿಸಬಹುದು. ಸೋನಂ ಕಪೂರ್ (Sonam Kapoor) 2023ರಲ್ಲಿ ತಾವು ಅನುಭವಿಸಿದ ಕಹಿ ಘಟನೆಗಳ ಬಗ್ಗೆ ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. 2023 ಸಾಕಷ್ಟು ಏರಿಳಿತಗಳಿಂದ ತುಂಬಿತ್ತು ಎಂದು ಸೋನಂ ಕಪೂರ್ ಹೇಳಿದ್ದಾರೆ. ಗಂಡನ ಅನಾರೋಗ್ಯದಿಂದ ಜೀವನ ಕಷ್ಟವಾಯಿತು. ಆದರೆ ಈಗ ಮತ್ತೊಮ್ಮೆ ತನ್ನ ಜೀವನವನ್ನು ಹಳಿಗೆ ತರಲು ಪ್ರಯತ್ನಿಸುತ್ತಿದ್ದೇನೆ ಎಂದು ಸೋನಂ ಕಪೂರ್ ಹೇಳಿದ್ದಾರೆ.

HEALTH TIPS: ಅತ್ತು ಅತ್ತು ಮಗು ಉಸಿರಾಡೋದ ನಿಲ್ಸಿದ್ರೆ ಏನು ಮಾಡ್ಬೇಕು?

ಸೋನಂ ಕಪೂರ್ ಪತಿ ಆನಂದ್ ಅಹುಜಾಗೆ ಅನಾರೋಗ್ಯ: ಸೋನಂ ಕಪೂರ್ ಪತಿ ಆನಂದ್ ಅಹುಜಾ ಮತ್ತು ಮಗ ವಾಯು ಅವರೊಂದಿಗೆ ಮಾಂಟೇಜ್ ವೀಡಿಯೊವನ್ನು ಇನ್ಸ್ಟಾಗ್ರಾಮ್ ನಲ್ಲಿ (Instagram) ಹಂಚಿಕೊಂಡಿದ್ದಾರೆ. ಪೋಸ್ಟ್‌ ಜೊತೆ ಶೀರ್ಷಿಕೆಯಲ್ಲಿ ನಟಿ 2023 ರಲ್ಲಿ ತನ್ನ ಪತಿ ಗಂಭೀರ ಅನಾರೋಗ್ಯವನ್ನು ಎದುರಿಸಿದ್ದರು ಎನ್ನುವ ಬಗ್ಗೆ ಬರೆದಿದ್ದಾರೆ. 

ಕೇವಲ ಕಡಲೆಯಲ್ಲ, ಈ ಆಹಾರಗಳನ್ನೂ ನೀರಲ್ಲ ನೆನೆಸಿ ತಿಂದ್ರೆ ಸಿಗುತ್ತೆ ಡಬಲ್ ಬೆನಿಫಿಟ್

ಸೋನಂ ಕಪೂರ್ ಪ್ರಕಾರ ಅವರ ಪತಿ ಆನಂದ್ ಅಹುಜಾಗೆ ಗಂಭೀರ ಅನಾರೋಗ್ಯ ಕಾಡಿತ್ತು. ಯಾವುದೇ ವೈದ್ಯರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗಿರಲಿಲ್ಲ. ರೋಗ ಯಾವುದು ಎಂಬುದನ್ನು ಪತ್ತೆ ಮಾಡೋದೇ ಕಷ್ಟವಾಗಿತ್ತು. ಆದರೆ ಕೊನೆಗೆ ರೋಗ ಪತ್ತೆ ಹಚ್ಚಲಾಯ್ತು. ಸೂಕ್ತ ಚಿಕಿತ್ಸೆ ನೀಡಲಾಯಿತು. ಈಗ ಆನಂದ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂದು ಸೋನಂ ಹೇಳಿದ್ದಾರೆ. ಆದ್ರೆ ಆನಂದ್ ಗೆ ಕಾಡಿದ ಕಾಯಿಲೆ ಯಾವುದು ಎಂಬುದನ್ನು ಸೋನಂ ಹೇಳಿಲ್ಲ. ಚಿಕಿತ್ಸೆ ನೀಡಿದ ಡಾಕ್ಟರ್ ಸರಿನ್ ಮತ್ತು ದೇವರಿಗೆ ಸೋನಂ ಧನ್ಯವಾದ ಹೇಳಿದ್ದಾರೆ. ಮೂರು ತಿಂಗಳು ನರಕ ಅನುಭವಿಸಿದೆವು ಎಂದೂ ಸೋನಂ ಹೇಳಿದ್ದಾರೆ. 

ಸಹಜ ಜೀವನಕ್ಕೆ ಮರಳುತ್ತಿರುವ ಜೋಡಿ : ಹಿಂದಿನ ವರ್ಷ ದೊಡ್ಡ ಸಮಸ್ಯೆಯನ್ನು ಜಯಿಸಿ ಬಂದ ಸೋನಂ ಹಾಗೂ ಆನಂದ್ ಅಹುಜಾ ಈಗ ನಾರ್ಮಲ್ ಜೀವನಕ್ಕೆ ಮರಳುತ್ತಿದ್ದಾರೆ. ಇಬ್ಬರೂ ತಮ್ಮ ಕೆಲಸ ಶುರು ಮಾಡುತ್ತಿದ್ದಾರೆ. ತನ್ನ ವೃತ್ತಿಜೀವನದಲ್ಲಿ ವೇಗವಾಗಿ ಮುನ್ನಡೆಯುತ್ತಿರುವ ನನ್ನ ಪತಿಗೆ ಮತ್ತೊಮ್ಮೆ ಬೆಂಬಲ ನೀಡುತ್ತಿರುವುದಾಗಿ ಸೋನಂ ಹೇಳಿದ್ದಾರೆ. ನಾನು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಸಾಕಷ್ಟು ಬದಲಾಗಿದ್ದೇನೆ. ನೋವು, ಸ್ವೀಕಾರ ಎಲ್ಲವನ್ನೂ ನೋಡಿ ಈಗ ಸಂತೋಷದಿಂದ ನಿಮ್ಮ ಮುಂದೆ ಬಂದಿದ್ದೇನೆ. ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಅಮೂಲ್ಯ ಸಮಯವನ್ನು ಕಳೆದಿದ್ದು, ಹಿಂದಿನ ವರ್ಷ ಅತ್ಯಂತ ಕಷ್ಟಕರ, ಅದ್ಭುತ, ಸಂತೋಷದ ವರ್ಷವಾಗಿತ್ತು ಎಂದು ಸೋನಂ ಹೇಳಿದ್ದಾರೆ. 

2024ರ ಕುರಿತು ಮಾತನಾಡಿದ ಸೋನಮ್, ಏರಿಳಿತಗಳ ಜೊತೆ ಅನೇಕ ಪಾಠವನ್ನು ಈ ವರ್ಷ ಕಲಿಸಲಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಯುದ್ಧವು ಏನನ್ನೂ ಸಾಧಿಸುವುದಿಲ್ಲ ಎಂದು ಜಗತ್ತು ಅರ್ಥಮಾಡಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಯುದ್ಧಗಳು ನಾಗರಿಕರು ಮತ್ತು ಮಕ್ಕಳ ಪ್ರಾಣ ತೆಗೆದಿದೆ. ಅಧಿಕಾರದಲ್ಲಿರುವವರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ ಎಂದು ಸೋನಂ ಹೇಳಿದ್ದಾರೆ.