Health Tips: ಅತ್ತು ಅತ್ತು ಮಗು ಉಸಿರಾಡೋದ ನಿಲ್ಸಿದ್ರೆ ಏನು ಮಾಡ್ಬೇಕು?
ಮಗು ಹೆಚ್ಚು ಹೆಚ್ಚು ಅತ್ತಾಗ ಅದು ಕೆಲವೊಮ್ಮೆ ಉಸಿರನ್ನೆ ನಿಲ್ಲಿಸುತ್ತೆ, ಅದನ್ನು ಬ್ರೀತ್ ಹೋಲ್ಡಿಂಗ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಸಂಭವಿಸಿದರೆ, ಪೋಷಕರು ಭಯಭೀತರಾಗಬಾರದು ಎಂದು ತಜ್ಞರು ಹೇಳುತ್ತಾರೆ. ಯಾಕಂದ್ರೆ ಎರಡು ವರ್ಷದವರೆಗಿನ ಮಕ್ಕಳಲ್ಲಿ ಇದು ಸಾಮಾನ್ಯ ಸಮಸ್ಯೆ.
ಸಣ್ಣ ಮಕ್ಕಳು ತುಂಬಾ ದುರ್ಬಲರಾಗಿರುತ್ತಾರೆ. ಪೋಷಕರು ಪ್ರತಿ ಕ್ಷಣವೂ ಅವರನ್ನು ನೋಡಿಕೊಳ್ಳಬೇಕು. ಮಲಗುವಾಗ, ಹಾಲು ಕುಡಿಯುವಾಗ, ಆಟವಾಡುವಾಗ ಮತ್ತು ಅಳುವಾಗ (Crying baby ಸಹ ಅವರನ್ನು ನೋಡಿಕೊಳ್ಳಬೇಕು. ಯಾಕಂದ್ರೆ ಸ್ವಲ್ಪ ಹೆಚ್ಚು ಕಡಿಮೆ ಆದ್ರೂ ಮಗುವಿನ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.
ನೀವೂ ಸಹ ತಾಯಿಯಾಗಿದ್ದರೆ, ಯಾವುದೇ ತಾಯಿ ಮಗು ಅಳೋದನ್ನು ಇಷ್ಟಪಡುವುದಿಲ್ಲ ಅಲ್ವಾ. ಅಲ್ಲದೆ, ಅಳುವ ಮಗು ಅತ್ತು ಅತ್ತು ಉಸಿರಾಡುವುದನ್ನು ನಿಲ್ಲಿಸಿದರೆ, ಪೋಷಕರು ತಮ್ಮ ಉಸಿರು ನಿಂತಂತೆ ಮಾಡುತ್ತಾರೆ. ಅನೇಕ ಬಾರಿ ನವಜಾತ ಶಿಶುಗಳು (new born baby) ಅಳುವಾಗ ಉಸಿರಾಟವನ್ನು ನಿಲ್ಲಿಸುತ್ತವೆ, ನೀಲಿ ಬಣ್ಣಕ್ಕೆ ತಿರುಗುತ್ತವೆ ಮತ್ತು ನಂತರ ಸ್ಥಬ್ಧರಾಗುತ್ತಾರೆ. ಇದು ತಾಯಂದಿರನ್ನು ಭಯಭೀತರನ್ನಾಗಿ ಮಾಡುತ್ತದೆ.
ಮಕ್ಕಳ ತಜ್ಞರೊಬ್ಬರು ಹೇಳುವಂತೆ ಅಳುವ ಮಗು ಉಸಿರಾಟವನ್ನು ನಿಲ್ಲಿಸುವುದು ಸಾಮಾನ್ಯ. ಇದು ಸುಮಾರು 60 ಪ್ರತಿಶತದಷ್ಟು ಮಕ್ಕಳಲ್ಲಿ ಕಂಡುಬರುತ್ತದೆ ಎಂದು ಅವರು ಹೇಳಿದ್ದಾರೆ. ನಿಮ್ಮ ಮನೆಯಲ್ಲಿ ಸಣ್ಣ ಮಗುವಿದ್ದರೆ, ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ನೀವು ತಿಳಿದಿರಬೇಕು. ಇಲ್ಲಿ ಉಲ್ಲೇಖಿಸಲಾದ ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಮಗುವಿನ ಉಸಿರನ್ನು ಹಿಡಿದಿಡುವ ಸಮಸ್ಯೆಯನ್ನು ನಿವಾರಿಸಬಹುದು.
ಬ್ರೀತ್ ಹೋಲ್ಡಿಂಗ್ ಸಿಂಡ್ರೋಮ್-
ಈ ಸ್ಥಿತಿಯು 2 ತಿಂಗಳಿನಿಂದ 2 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಬ್ರೀತ್ ಹೋಲ್ಡಿಂಗ್ ಸಿಂಡ್ರೋಮ್ (breath holding syndrom) ಅಥವಾ ಬ್ರೀತ್ ಹೋಲ್ಡಿಂಗ್ ಸ್ಪೆಲ್ ಎಂದೂ ಕರೆಯಲಾಗುತ್ತದೆ. ಬ್ರೀತ್ ಹೋಲ್ಡಿಂಗ್ ಸಿಂಡ್ರೋಮ್ ಎಂದರೆ ಮಗು ಅಳುವಾಗ ಉಸಿರಾಡಲು ಮರೆಯುವ ಸ್ಥಿತಿ. ಇದು 1 ರಿಂದ 2 ನಿಮಿಷಗಳವರೆಗೆ ಸಂಭವಿಸಬಹುದು.
ಈ ಸ್ಥಿತಿಯಲ್ಲಿ ಮಗು ತನ್ನ ತುಟಿಗಳು ಮತ್ತು ಮುಖ ನೀಲಿ ಬಣ್ಣಕ್ಕೆ ತಿರುಗುವವರೆಗೆ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತದೆ. ಈ ಸಮಯದಲ್ಲಿ, ಮಗು ಅಳಲು ಹೊರಟಂತೆ ಬಾಯಿ ತೆರೆಯುತ್ತದೆ ಆದರೆ ಶಬ್ದ ಮಾಡುವುದಿಲ್ಲ. ಇದು ಪೋಷಕರಿಗೆ ಸಾಕಷ್ಟು ಭಯಾನಕವಾಗಿದೆ.
infant crying
ಎಚ್ಚರವಾಗಿರುವಾಗ ಇದು ಸಂಭವಿಸುತ್ತದೆ :
ಈ ಸ್ಥಿತಿಯಲ್ಲಿ, ಕೆಲವೊಮ್ಮೆ ಮಕ್ಕಳು ಪ್ರಜ್ಞೆ ತಪ್ಪುತ್ತಾರೆ. ಮಗು ಮತ್ತೆ ಎಚ್ಚರಗೊಳ್ಳಲು 2 ನಿಮಿಷಗಳು ಬೇಕಾಗುತ್ತದೆ. ಇದು ಮಗು ಎಚ್ಚರವಾಗಿರುವಾಗ ಮಾತ್ರ ಸಂಭವಿಸುತ್ತದೆ, ಮಲಗುವಾಗ ಎಂದಿಗೂ ಸಂಭವಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.
ಮಗು ಉಸಿರಾಡುವುದನ್ನು ನಿಲ್ಲಿಸಿದಾಗ ಏನು ಮಾಡಬೇಕು-
ತಿರುಗಿಸಿ
ಮಗು ಅಳುವಾಗ ಉಸಿರಾಟವನ್ನು ನಿಲ್ಲಿಸಿದರೆ ಅಥವಾ ಮರಗಟ್ಟಿದರೆ, ಕೂಡಲೇ ಮಗುವನ್ನು ಇನ್ನೊಂದು ಕಡೆಗೆ ತಿರುಗಿಸಿ. ಈ ಸಮಯದಲ್ಲಿ ಅವುಗಳನ್ನು ಎತ್ತಿಕೊಳ್ಳಬೇಡಿ.
ಭುಜದ ಮೇಲೆ ಮಲಗಿಸಿ-
ನೀವು ಬಯಸಿದರೆ, ತಕ್ಷಣ ಅವರನ್ನು ನಿಮ್ಮ ಭುಜಗಳ ಮೇಲೆ ಮಲಗಿಸಿ ತಟ್ಟಿ. ಇದರಿಂದ ಮಗು ಉಸಿರಾಡಲು ಪ್ರಾರಂಭಿಸುತ್ತದೆ. ಇದು ನೀಲಿ ಬಣ್ಣವನ್ನು ಸಹ ತೆಗೆದುಹಾಕುತ್ತದೆ.
ಐರನ್ ಔಷಧಿಯನ್ನು ನೀಡಬಹುದು-
ಕಬ್ಬಿಣದ ಕೊರತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದಕ್ಕಾಗಿ, ವೈದ್ಯರು ಅವರಿಗೆ ಐರನ್ ಔಷಧಿಯನ್ನು (Iran Medicine) ನೀಡುತ್ತಾರೆ.