Work From Home: ಬೋರಿಂಗ್ ಅನಿಸ್ತಿದ್ಯಾ ? ಹ್ಯಾಪಿಯಾಗಿರಲು ಹೀಗೆ ಮಾಡಿ

ಎರಡು ವರ್ಷ ಆಯ್ತು. ವರ್ಕ್ ಫ್ರಂ ಹೋಮ್ (Work From Home) ಮಾಡಿ ಸಾಕಾಯ್ತು. ಟೇಬಲ್, ಲ್ಯಾಪ್ ಟಾಪ್ (Laptop) ದಿನವಿಡೀ ಕೆಲಸ. ಫುಲ್ ಬೋರಿಂಗ್ ಅನ್ನೋರ ಪೈಕಿ ನೀವು ಒಬ್ರಾ. ಹಾಗಿದ್ರೆ ಈ ವಿಷ್ಯ ತಿಳ್ಕೊಳ್ಳಿ.

Simple Habits That Will Boost Your Productivity At Work

ಕೊರೋನಾ ಸೋಂಕು (Corona Virus) ಆರಂಭವಾದಗಿನಿಂದಲೂ ಜನಜೀವನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಆನ್ ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್ (Work From Home) ಎಂಬುದು ಸಾಮಾನ್ಯವಾಗಿ ಬಿಟ್ಟಿದೆ. ಹೆಚ್ಚಿನ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆದರೆ ಮನೆಯಿಲ್ಲಿ ಆಫೀನ್ ವಾತಾವರಣವಿಲ್ಲ, ಕೊಲೀಗ್ಸ್ ಜತೆ ಮಾತನಾಡುವುದು, ಟೀಮ್ ಲಂಚ್ ಯಾವುದೇ ಇಲ್ಲದೆ ಯಾಂತ್ರಿಕವಾಗಿ ಕೆಲಸ ಮಾಡುವುದು ಕಷ್ಟ ಎಂಬುದು ಹಲವರ ಅಭಿಪ್ರಾಯ. ಮಾತ್ರವಲ್ಲ, ಮನೆಯಲ್ಲಿದ್ದರೆ ಗೆಸ್ಟ್, ಫ್ರೆಂಡ್ಸ್ ಬರ್ತಾ ಇರ್ತಾರೆ. ಮನೆಯ ಕೆಲಸಗಳ ಜತೆ ಆಫೀಸ್ ಕೆಲಸಕ್ಕೆ ಸರಿಯಾಗಿ ಗಮನ ಕೊಡಲಾಗುತ್ತಿಲ್ಲ ಎಂಬುದು ಹಲವರ ದೂರು. ಹಾಗಿದ್ರೆ ವರ್ಕ್ ಫ್ರಂ ಹೋಂನಲ್ಲೂ ಆಫೀಸ್ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡುವುದು ಹೇಗೆ ?

ಕೆಲಸದ ಮಧ್ಯೆ ಬಿಡುವಾದಾಗ ಎದ್ದು ಓಡಾಡಿ
ನಿಮ್ಮ ಕೆಲಸದ ಸಮಯದ ನಡುವೆ ಕನಿಷ್ಠ 5 ನಿಮಿಷಗಳ ಕಾಲ ನಡೆಯುವುದು (Walking) ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ನಿಮ್ಮ ಮನಸ್ಸನ್ನು ಸಿದ್ಧಗೊಳಿಸುತ್ತದೆ. ನಡಿಗೆ ನಿಮ್ಮ ಮೆದುಳನ್ನು ಎಲ್ಲಾ ಕೆಲಸದ ಅಸ್ತವ್ಯಸ್ತತೆಯಿಂದ ಮುಚ್ಚುತ್ತದೆ. ನಿಮ್ಮ ಕೆಲಸದ ಸಮಯದ ನಡುವೆ ನೀವು ಈ ನಡಿಗೆಗಳನ್ನು ಸ್ವಲ್ಪ ವಿರಾಮವಾಗಿ ಪರಿಗಣಿಸಿದರೆ, ನೀವು ಬಹಳಷ್ಟು ಕೆಲಸವನ್ನು ವೇಗವಾಗಿ ಮತ್ತು ಉತ್ತಮವಾಗಿ ಮಾಡುತ್ತೀರಿ.

Weight Loss: ವರ್ಕ್ ಫ್ರಂ ಹೋಮ್‌ನಿಂದ ತೂಕ ಹೆಚ್ಚಾಗ್ತಾ ಇದ್ಯಾ? ಯೋಚಿಸ್ಬೇಡಿ

ಕೆಲಸ ಮಾಡದ ಸಮಯದಲ್ಲಿ ಇಮೇಲ್ ನೋಟಿಫಿಕೇಶನ್ ಆಫ್ ಮಾಡಿ
ಉದ್ಯೋಗಿಗಳು ಮಾಡುವ ದೊಡ್ಡ ತಪ್ಪುಗಳೆಂದರೆ ಅವರು ಕೆಲಸ ಮಾಡದ ಸಮಯದಲ್ಲಿ ಇಮೇಲ್‌ (Email)ಗಳಿಗೆ ಉತ್ತರಿಸುವುದು. ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ ಕುಳಿತಿರುವುದು. ಇದರಿಂದ ನೀವು ಕೆಲಸ ಮಾಡುವ ಸಮಯ ಮಾತ್ರವಲ್ಲ, ಬಿಡುವಿನ ಸಮಯ ಸಹ ಕೆಲಸದ ಪಾಲಾಗುತ್ತದೆ. ಬಿಡುವಿನ ಸಮಯವನ್ನು ಆನಂದಿಸಲು ಕಷ್ಟವಾಗುತ್ತದೆ. ಹೀಗಾಗಿ ಬಿಡುವಿನ ಸಮಯದಲ್ಲಿ ಕಂಪ್ಯೂಟರ್, ಮೊಬೈಲ್‌ಗಳಿಂದ ದೂರವಿರಿ. ಮನಸ್ಸಿಗೆ ಉಲ್ಲಾಸವೆನಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ವೇಳಾಪಟ್ಟಿಯನ್ನು ಸಿದ್ಧಗೊಳಿಸಿ
ನಿಮ್ಮ ಕೆಲಸದ ಅವಧಿಯ ಬಗ್ಗೆ ನಿಮಗೆ ಮೊದಲೇ ಮಾಹಿತಿಯಿರುತ್ತದೆ. ಹೀಗಾಗಿ ಇದನ್ನು ಅನುಸರಿಸಿ ಉಳಿದ ವಿಚಾರಗಳನ್ನು ಪ್ಲಾನ್ ಮಾಡಿಕೊಳ್ಳಿ. ಇದು ನಿಮ್ಮ ದಿನಚರಿಯನ್ನು ತುಂಬಾ ಸುಲಭವಾಗಿಸುತ್ತದೆ. ಬೆಳಗ್ಗೆದ್ದು ಯಾವ ಕೆಲಸಗಳನ್ನು ಮುಗಿಸಿಕೊಳ್ಳಬೇಕು, ಎಷ್ಟು ಗಂಟೆಗೆ ಕೆಲಸ ಆರಂಭ ಮತ್ತು ಮುಕ್ತಾಯ, ಕೆಲಸ ಮುಗಿಸಿದ ಮೇಲೆ ಯಾವ ಕೆಲಸಗಳನ್ನು ಮಾಡಬೇಕು ಎಂಬುದರ ಟೈಂ ಟೇಬಲ್ ಮೊದಲೇ ಸಿದ್ಧಪಡಿಸಿ. ಇದಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿ. ಇದರಿಂದ ನೀವು ಕೆಲಸದ ಮಧ್ಯೆ ಉಳಿದ ಕೆಲಸಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ತಪ್ಪುತ್ತದೆ.

Posture and Health: ಹೇಗೇಗೋ ಕೂತು, ಎಲ್ಲಾ ಕಡೆ ನೋವು ಅಂತ ಗೋಳಾಡ್ತಿದ್ದಾರೆ!

ಸರಿಯಾಗಿ ನಿದ್ದೆ ಮಾಡಿ
ನಿದ್ದೆ (Sleep) ಆರೋಗ್ಯಕ್ಕೆ ಅತೀ ಮುಖ್ಯ. ನಿದ್ದೆ ಸರಿಯಾಗಿ ಆಗದಿದ್ದಾಗ ದಿನವಿಡೀ ಸೋಮಾರಿತನವಿರುತ್ತದೆ. ಮಾನಸಿಕವಾಗಿಯೂ ಒತ್ತಡದ ಅನುಭವವಾಗುತ್ತದೆ. ಹೀಗಾಗಿ ಎಷ್ಟೇ ಕೆಲಸವಿದ್ದರೂ ದಿನಕ್ಕೆ 7ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದನ್ನು ಮರೆಯಬೇಡಿ. ಮಾನಸಿಕವಾಗಿ ಜಾಗರೂಕರಾಗಿರಲು ನಿದ್ದೆ ಮುಖ್ಯವಾಗಿದೆ. ನಿದ್ದೆ ಮಾಡದೆ, ನಿಮ್ಮ ದೇಹ ಮತ್ತು ಮನಸ್ಸನ್ನು ಕಷ್ಟಪಟ್ಟು ಕೆಲಸ ಮಾಡಲು ಒತ್ತಾಯಿಸಬೇಡಿ.  ವಿಶೇಷವಾಗಿ ಅದೆಷ್ಟೇ ಕೆಲಸವಿದದ್ರೂ ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ಸಮರ್ಪಕವಾಗಿ ಅನುಸರಿಸಿ. ನಿದ್ದೆ ಸರಿಯಾಗಿ ಆಗದಿದ್ದಾಗ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ನೀವು ಗಮನಿಸಬಹುದು.

ಬೇರೆ ಕೆಲಸಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಿ
ಕೆಲಸದ ಮಧ್ಯೆ ಆಗಾಗ ಎದ್ದು ಬೇರೆ ಕೆಲಸಗಳನ್ನು ಮಾಡಬೇಡಿ. ಇಂಥಹಾ ಕೆಲಸಗಳಿಗೆಂದೇ ಪ್ರತ್ಯೇಕವಾಗಿ ಸಮಯವನ್ನು ಮೀಸಲಿಡಿ. ದಿನದ ಕೆಲವು ಪ್ರಮುಖ ಕೆಲಸಗಳಿಗೆ ಸ್ವಲ್ಪ ಸಮಯವನ್ನು ಮೀಸಲಿಡುವುದರಿಂದ ನೀವು ಕೆಲಸದ ಮೇಲೆ ಸರಿಯಾಗಿ ಗಮನಹರಿಸಲು ಸಾಧ್ಯವಾಗುತ್ತದೆ. ದಿನದ ಪ್ರಮುಖ ಕೆಲಸಗಳನ್ನು ಮಾಡಲು ಬೆಳಗ್ಗೆ ಅಥವಾ ಸಂಜೆಯ ಹೊತ್ತು ಸಮಯ ಮೀಸಲಿಡಿ. ಈ ಸಂದರ್ಭದಲ್ಲಿ ಕರೆ ಮಾಡುವುದು, ನಿಮ್ಮ ಹವ್ಯಾಸಗಳಿಗೆ ಸಮಯ ಮೀಸಲಿಡುವುದು ಮಾಡಿ. ಇದರಿಂದ ಕೆಲಸದ ಮೇಲೆ ಏಕಾಗ್ರತೆ  ಹೆಚ್ಚುತ್ತದೆ. ಕೆಲಸದ ಗುಣಮಟ್ಟವೂ ಹೆಚ್ಚಾಗುತ್ತದೆ. 

Latest Videos
Follow Us:
Download App:
  • android
  • ios