Asianet Suvarna News Asianet Suvarna News

ನಿಮಗೇ ನೀವು ತುಂಬಾ ಸ್ಪೆಷಲ್ ಅನಿಸುತ್ತಿದ್ದರೆ ಈ ರೋಗ ಇರಬಹುದು!

ಕೆಲವರಿರುತ್ತಾರೆ. ಅವರಿಗೆ ಕೇವಲ ತಮ್ಮ ಬಗ್ಗೆಯಷ್ಟೇ ಯೋಚನೆ. ಸ್ವಾರ್ಥಿಗಳು ಎಂದು ಆಡು ಮಾತಿನಲ್ಲಿ ಹೇಳಬಹುದು. ಕೇವಲ ಸ್ವಾರ್ಥವಲ್ಲ, ಅವರಲ್ಲಿ ಇನ್ನೂ ಒಂದಿಷ್ಟು ಕೆಟ್ಟ ಗುಣಗಳು ಸೇರಿ ಅದೊಂದು ಮಾನಸಿಕ ಕಾಯಿಲೆಯೇ ಆಗಿರುತ್ತದೆ. 

Signs of narcissism we should know about skr
Author
First Published Jan 8, 2024, 3:07 PM IST

ನಾರ್ಸಿಸಸ್ ಎಂಬೊಬ್ಬ ಬೇಟೆಗಾರನಿದ್ದ. ಆತ ಚೆಲುವನೇನೋ ಹೌದು. ಆದರೆ, ತನ್ನ ಚೆಲುವನ್ನು ನೀರಿನ ಪ್ರತಿಬಿಂಬದಲ್ಲಿ ನೋಡಿಕೊಂಡ ಆತನಿಗೆ ತನ್ನ ಮೇಲೆಯೇ ಲವ್ ಆಗಿ ಹೋಯಿತಂತೆ. ಆತ ಮತ್ಯಾರನ್ನೂ ನೋಡುವ, ಅವರ ಚೆಲುವನ್ನು, ಗುಣವನ್ನು ಗುರುತಿಸುವ ಶಕ್ತಿಯನ್ನೇ ಕಳೆದುಕೊಂಡು ತನ್ನನ್ನಷ್ಟೇ ಆರಾಧಿಸಿಕೊಳ್ಳುತ್ತಾ ಕಾಲ ಕಳೆಯುತ್ತಿದ್ದನಂತೆ. ಈ ರೀತಿ ತನ್ನನ್ನು ಮಾತ್ರ ಪ್ರೀತಿಸಿಕೊಳ್ಳುವ, ತನ್ನ ಹೊರತಾಗಿ ಇನ್ಯಾರೂ ಪ್ರಮುಖವಲ್ಲ ಎಂದು ಭಾವಿಸುವ, ತನ್ನನ್ನು ಇರುವುದಕ್ಕಿಂತ ಹೆಚ್ಚಾಗಿ ಭಾವಿಸುವ ವ್ಯಕ್ತಿಗಳಿಗೆ ಈ ಕತೆ ಹಿನ್ನೆಲೆಯಲ್ಲಿ ನಾರ್ಸಿಸಿಸ್ಟ್ ಎನ್ನಲಾಗುತ್ತದೆ. ಸೈಕಾಲಜಿಯಲ್ಲಿ ಹೀಗೆ ಅತಿಯಾದ ಸ್ವಾರ್ಥ ಪ್ರದರ್ಶಿಸುವುದನ್ನು ಮಾನಸಿಕ ಕಾಯಿಲೆ ಎಂದು ಪರಿಗಣಿಸಿ ನಾರ್ಸಿಸಿಸಂ ಎನ್ನಲಾಗುತ್ತದೆ. ಇಂಥವರೊಂದಿಗಿನ ಬದುಕು ಅಸಹನೀಯ. 

ನಮ್ಮ ನಡುವೆ ಇಂಥ ನಾರ್ಸಿಸಿಸ್ಟ್‌ಗಳು ಅನೇಕರಿರಬಹುದು. ಅವರನ್ನು ಗುರುತಿಸುವುದು ಹೇಗೆ? 

ಡಕ್ಕನ್ನು ಡಕ್ ಅಂತ ಗುರುತಿಸೋಕೆ ಅದನ್ನು ನೋಡಿದರೂ ಸಾಕು, ಅದರ ಕ್ವಾಕ್ ಕ್ವಾಕ್ ಸ್ವರ ಕೇಳಿದರೂ ಸಾಕು. ಹಾಗೆಯೇ ನಾರ್ಸಿಸಿಸ್ಟ್ ವ್ಯಕ್ತಿಯನ್ನು ಗುರುತಿಸಲು ಅವನ ಸ್ವಭಾವ, ಮಾತುಗಳನ್ನು ಗಮನಿಸಿದರೂ ಸಾಕಾಗುತ್ತದೆ. ಹೌದು, ಈ ಮಾನಸಿಕ ಕಾಯಿಲೆ ಇದೆ ಎಂದು ತಿಳಿಯಲು ಈ ಸ್ವಭಾವಗಳನ್ನು ಗಮನಿಸಿ ನೋಡಿ..

ರಾಮ ಸೀತೆ ವಾಸಿಸಿದ್ದ ಕನಕ ಮಹಲ್‌ನಲ್ಲಿ ಡಾ ಬ್ರೋ! ಇನ್ನೂ ಇದೆ ದೇವರ ಕಾಲಿನ ಧೂಳಿನ ಘಮ

ಗ್ರಾಂಡಿಯೋಸಿಟಿ: ನಾರ್ಸಿಸಿಸ್ಟ್‌ಗಳು ತಮ್ಮ ಬಗ್ಗೆ ಉತ್ಪ್ರೇಕ್ಷಿತ ಕಲ್ಪನೆಗಳನ್ನು ಕಟ್ಟಿಕೊಂಡು ಅದನ್ನೇ ನಿಜವೆಂದು ಭಾವಿಸುತ್ತಾರೆ. ಮತ್ತು ನಿರಂತರವಾಗಿ ಇತರರನ್ನು ನಿಗ್ರಹಿಸಲು  ಪ್ರಯತ್ನಿಸುತ್ತಾರೆ. 

ಸಹಾನುಭೂತಿಯ ಕೊರತೆ: ಅವರು ಇತರರ ಬಗ್ಗೆ ಯಾವುದೇ ಸಹಾನುಭೂತಿ ಹೊಂದಿರುವುದಿಲ್ಲ ಮತ್ತು ಅವರು ಯಾವಾಗಲೂ ತಮ್ಮನ್ನು ಮೆಚ್ಚಬೇಕು ಎಂದು ಬಯಸುತ್ತಾರೆ.

ಶೋಷಣೆಯ ನಡವಳಿಕೆ: ಅವರು ಯಾವಾಗಲೂ ತಮ್ಮ ಸ್ವಂತ ಅಗತ್ಯಗಳು ಮತ್ತು ಅವುಗಳನ್ನು ಪೂರೈಸಿಕೊಳ್ಳುವ ವಿಧಾನಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಆಗಾಗ್ಗೆ ಕುಶಲತೆಯಿಂದ ಇತರರನ್ನು ಬಳಸಿಕೊಳ್ಳುತ್ತಾರೆ.

ಹೊಣೆಗಾರಿಕೆಯ ಕೊರತೆ: ಅವರು ಮಾಡಿದ ತಪ್ಪುಗಳಿಗೆ ಜವಾಬ್ದಾರರಾಗಲು ನಿರಾಕರಿಸುತ್ತಾರೆ ಮತ್ತು ನಿರಂತರವಾಗಿ ಇತರರನ್ನು ದೂಷಿಸುತ್ತಾರೆ.

ಟೀಕೆಗಳನ್ನು ತೆಗೆದುಕೊಳ್ಳುವುದಿಲ್ಲ: ಅವರ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಹಿಗ್ಗಾಮುಗ್ಗಾ ಸಿಟ್ಟಾಗುತ್ತಾರೆ ಮತ್ತು ದುಡುಕಿನ ಪ್ರತಿಕ್ರಿಯೆ ನೀಡುತ್ತಾರೆ. 

ಡ್ರಾಮಾ ಜೂನಿಯರ್ ಪರೀಕ್ಷಿತ್ ಹೇಳಿದ ಭಗವದ್ಗೀತೆ ಪಾಠ; ಪುಟ್ಟ ಪೋರನ ಸಂಸ್ಕಾರಕ್ಕೆ ಜನ ಜೈಕಾರ

ನಾರ್ಸಿಸಿಸಮ್ ನಡವಳಿಕೆಯ ವ್ಯಕ್ತಿಯು ತನ್ನ ಬಗ್ಗೆ ಹೆಚ್ಚು ಯೋಚಿಸುತ್ತಾನೆ ಮತ್ತು ಇತರರು ಕೀಳು ಎಂದು ನಂಬುತ್ತಾನೆ. ಅವನಿಗೆ ನಿರಂತರವಾಗಿ ಮೆಚ್ಚುಗೆಯ ಅಗತ್ಯವಿರುತ್ತದೆ.

Follow Us:
Download App:
  • android
  • ios